Asianet Suvarna News Asianet Suvarna News

ಗರ್ಲ್​ಫ್ರೆಂಡ್​ಗೆ ತಿಂಡಿ ಆರ್ಡರ್​ ಮಾಡುವಾಗ ಎಚ್ಚರ! 'ಗಿಲ್ಲಿ' ನಟಿ ರಾಕುಲ್​ ಪ್ರೀತ್​ ಗತಿನೇ ನಿಮ್ಗೂ ಆಗ್ಬೋದು ಹುಷಾರ್​!

ಕನ್ನಡದ ಗಿಲ್ಲಿ ಚಿತ್ರದ ಮೂಲಕ ಫೇಮಸ್​ ಆಗಿರೋ ಬಹುಭಾಷಾ ನಟಿ ರಾಕುಲ್​ ಪ್ರೀತ್​ ಸಿಂಗ್​ ಒಬ್ಬಾತನ ಪ್ರೀತಿ ರಿಜೆಕ್ಟ್​ ಮಾಡಿದ ಕಾರಣ ತುಂಬಾ ಕುತೂಹಲ ಹಾಗೂ ವಿಚಿತ್ರವಾಗಿದೆ. ಈ ಕುರಿತು ನಟಿ ಹೇಳಿದ್ದೇನು? 
 

Gilli actress Rakul Preet Singh once rejected a guy who ordered fried foods says in an interview suc
Author
First Published Sep 14, 2024, 12:22 PM IST | Last Updated Sep 14, 2024, 12:23 PM IST

ಬಾಲಿವುಡ್​ ನಟಿ ರಾಕುಲ್​ ಪ್ರೀತ್​ ಸಿಂಗ್​ ತೆಲುಗು ಚಿತ್ರರಂಗದಲ್ಲಿ ಸಕ್ರಿಯವಾಗಿದ್ದಾರೆ.  ಬಾಲಿವುಡ್​ನ  `ಯಾರಿಯಾಂ' ಚಿತ್ರದಿಂದ  ಫೇಮಸ್​ ಆದ ರಾಕುಲ್​, ಕನ್ನಡದ ಗಿಲ್ಲಿ (Gilli) ಚಿತ್ರದಲ್ಲಿ ನಟಿಸಿದ್ದಾರೆ.  ಕಳೆದ ವರ್ಷ ಸದ್ದು ಮಾಡಿದ್ದ ಡ್ರಗ್ಸ್​ ಕೇಸ್​ನಲ್ಲಿಯೂ ಈಕೆಯ ಹೆಸರು ಥಳಕು ಹಾಕಿಕೊಂಡಿತ್ತು. ನೋಟಿಸ್​ ಕೂಡ ಜಾರಿಯಾಗಿತ್ತು.  ನಟಿ ರಾಕುಲ್ ಪ್ರೀತ್ ಸಿಂಗ್ ಕೊನೆಯದಾಗಿ ಅಜಯ್ ದೇವಗನ್ (Ajay Devagan) ಜೊತೆ ರನ್ ವೇ 34 ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಈ ಸಿನಿಮಾ ಹೇಳಿಕೊಳ್ಳುವಷ್ಟು ಯಶಸ್ಸು ಕಾಣಲಿಲ್ಲ. ಛತ್ರಿವಾಲಿ ಜೊತೆಗೆ ಆಯುಷ್ಮಾನ್ ಖುರಾನ ನಟನೆಯ ಡಾಕ್ಟರ್ ಜಿ, ಸಿದ್ಧಾರ್ಥ್ ಮಲ್ಹೋತ್ರಾ ಜೊತೆ ಥ್ಯಾಂಕ್ ಗಾಡ್, ಅಕ್ಷಯ್ ಕುಮಾರ್ ಜೊತೆ ಮಿಷನ್ ಸಿಂಡ್ರೆಲಾ ಸಿನಿಮಾಗಳಲ್ಲಿ ನಟಿಸಿದ್ದಾರೆ. 

ಇದೀಗ ನಟಿಯ ಲವ್​ ಬ್ರೇಕಪ್​ ಕುರಿತ ಸುದ್ದಿ ಸದ್ದು ಮಾಡುತ್ತಿದೆ. ಚಿತ್ರತಾರೆಯರ ಮಟ್ಟಿಗೆ ಹೇಳುವುದಾದರೆ ಸಂಬಂಧಗಳಿಗೆ ಅರ್ಥವೇ ಇಲ್ಲ ಎನ್ನುವವರೇ ಹೆಚ್ಚು. ಲವ್​ ಮಾಡುವುದು, ಬ್ರೇಕಪ್​ ಆಗುವುದು ದೊಡ್ಡ ವಿಷಯವೇ ಅಲ್ಲ. ಆದರೆ ರಾಕುಲ್​ ಅವರ ಲವ್​ ಬ್ರೇಕಪ್​ ಆಗಿರುವ ಹಿಂದೆ ಸಕತ್​ ಇಂಟರೆಸ್ಟಿಂಗ್​ ವಿಷ್ಯ ಇದೆ. ಅದೇನೆಂದರೆ, ಈಕೆ ಒಬ್ಬಾತನ ಜೊತೆ ಡೇಟಿಂಗ್​ನಲ್ಲಿ ಇದ್ದರು. ತನ್ನ ಪ್ರಿಯತಮೆಗಾಗಿ ಆ ಸ್ನೇಹಿತ ತಿಂಡಿ ತಿನಿಸು ಆರ್ಡರ್​ ಮಾಡಿದ್ದನಂತೆ. ಆತನ ಉದ್ದೇಶ ನಟಿಯನ್ನು ಮೆಚ್ಚಿಸುವುದೇ ಆಗಿತ್ತು. ಆದರೆ ಅಲ್ಲೇ ಆಗಿದ್ದು ಎಡವಟ್ಟು. ಆತ ರಾಕುಲ್​ಗೆ ಕರಿದ ತಿಂಡಿಗಳನ್ನು ಆರ್ಡರ್​ ಮಾಡಿದ್ನಂತೆ. ಇದನ್ನು ನೋಡಿ ನಟಿಗೆ ಸಿಕ್ಕಾಪಟ್ಟೆ ಸಿಟ್ಟುಬಂತಂತೆ. ಆ ಕ್ಷಣದಿಂದಲೇ ನಾನು ಆತನ ಪ್ರೀತಿಯನ್ನು ತಿರಸ್ಕರಿಸಿದೆ ಎಂದು ನಟಿ ಹೇಳಿಕೊಂಡಿದ್ದಾರೆ! 

ಒಂದೇ ಬಾರಿಗೆ ಹೆಚ್ಚು ಕಾಂಡೋಮ್​ ಬಳಸಿದ್ರೆ ಏನಾಗತ್ತೆ? 'ಗಿಲ್ಲಿ' ನಟಿ ರಾಕುಲ್​ ಉತ್ತರ ಕೇಳಿ...

ಹೋಸ್ಟ್ ರಣವೀರ್ ಅಲ್ಲಾಬಾಡಿಯಾ ಅವರ ಜೊತೆಗಿನ ಸಂದರ್ಶನದಲ್ಲಿ ನಟಿ ಈ ವಿಷಯವನ್ನು ತಿಳಿಸಿದ್ದಾರೆ. ಆತ ತುಂಬಾ  ಕರಿದ ಆಹಾರಗಳಿಗೆ ಆದ್ಯತೆ ನೀಡುತ್ತಿದ್ದ.  ಇದು ನಾನು  ಜಾಕಿ ಭಗ್ನಾನಿಯನ್ನು ಭೇಟಿಯಾಗುವ ಮೊದಲಿನ ವಿಷಯ. ಒಬ್ಬನ ಜೊತೆ ಡೇಟಿಂಗ್​ನಲ್ಲಿದ್ದೆ. ಒಮ್ಮೆ ಡೇಟಿಂಗ್​ಗೆ ಹೋದಾಗ  ಕರಿದ ಆಹಾರವನ್ನು ಆರ್ಡರ್ ಮಾಡಿದ್ದ ಎಂದಿರುವ ನಟಿ,  ಕರಿದ ಆಹಾರವನ್ನು ಆರ್ಡರ್ ಮಾಡುವ ಯಾರನ್ನೂ ನಾನು ಪ್ರೀತಿಸಲು ಸಾಧ್ಯವೇ ಇಲ್ಲ.  ಅದಕ್ಕಾಗಿಯೇ ನನಗೆ ಕೋಪ ಬಂದಿತು ಎಂದಿದ್ದಾರೆ. ಜನರು ತಮ್ಮದೇ ಆದ ಆಹಾರದ ಆಯ್ಕೆಗಳನ್ನು ಹೊಂದಿದ್ದಾರೆ, ಆದರೆ ನಾನು ಆರ್ಡರ್ ಮಾಡಿದ ಆಹಾರವನ್ನು ಆತ ಕೀಳಾಗಿ ನೋಡಿದ, ಜೊತೆಗೆ ಕರಿದ ಆಹಾರ ತಿನ್ನುವಂತೆ ಹೇಳಿದ.  ಸಂಬಂಧದಲ್ಲಿ ಇರುವವರು  ಊಟ ಮತ್ತು ಜೀವನಶೈಲಿಯನ್ನು ಹಂಚಿಕೊಳ್ಳಲು ಸಾಧ್ಯವಾಗದಿದ್ದರೆ, ಅದು ಅರ್ಥಹೀನವಾಗಿದೆ. ಭಾರತೀಯ ಮತ್ತು ಚೈನೀಸ್ ಆಹಾರಕ್ಕಾಗಿ ಸ್ನೇಹಿತರು ಜಗಳವಾಡುವುದನ್ನು ನಾನು ನೋಡಿದ್ದೇನೆ. ಇವೆಲ್ಲಾ ನನಗೆ ಇಷ್ಟವಾಗುವುದಿಲ್ಲ. ಅದಕ್ಕಾಗಿ ಆತನನ್ನು ತಿರಸ್ಕರಿಸಿದೆ ಎಂದಿದ್ದಾರೆ. 
 
ಈ ಹಿಂದೆ ನಟಿ,  ಸೆಕ್ಸ್​ ಎಜುಕೇಷನ್​ ಕುರಿತು ಮಾತನಾಡಿ ಸುದ್ದಿಯಾಗಿದ್ದರು.  ಶಾಲಾ ಮಟ್ಟದಲ್ಲಿಯೇ ಲೈಂಗಿಕತೆಯ ಅರಿವು ಮೂಡಿಸುವ ಶಿಕ್ಷಣ ಮಕ್ಕಳಿಗೆ ಬೇಕು ಎನ್ನುವುದು ಕೆಲವರ ವಾದವಾಗಿದ್ದರೆ, ಇನ್ನು ಕೆಲವರು ಇದನ್ನು ವಿರೋಧಿಸುವವರೂ ಇದ್ದಾರೆ. ಕೆಲವು ದೇಶಗಳಲ್ಲಿ ಸೆಕ್ಸ್​ ಎಜುಕೇಷನ್​ ಶಾಲಾ ಹಂತದಲ್ಲಿಯೇ ಕಲಿಸಲಾಗುತ್ತದೆ. ಆದರೆ ಭಾರತದಲ್ಲಿ ಇದರ ಬಗ್ಗೆ ಮಾತನಾಡುವುದಕ್ಕೂ ಮುಜುಗರ ಪಡುವ ಸ್ಥಿತಿ ಇದೆ. ಇದೇ ಕಾರಣಕ್ಕೆ ಹದಿಹರೆಯದವರಲ್ಲಿ ಸೆಕ್ಸ್​ ಕುರಿತು ತಪ್ಪು ತಿಳಿವಳಿಕೆಗಳಿಂದ ಎಡವಟ್ಟು ಆಗುತ್ತಿದೆ ಎನ್ನುವ ದೊಡ್ಡ ವರ್ಗವೇ ಇದೆ. ಇದೇ ಕಾರಣಕ್ಕೆ ಲೈಂಗಿಕತೆಯ (Sexual Intercource) ಬಗ್ಗೆ ಮುಕ್ತವಾಗಿ ಮಾತನಾಡಬೇಕು ಎನ್ನುವುದು ನಟಿಯ ಆಶಯವಾಗಿದೆ. 

ದುಡ್ಡು ಆಮೇಲೆ ಕೊಡು ಎಂದು ಕಾರು ಕೊಟ್ಟ- ಆಮೇಲೆ ನೋಡಿದ್ರೆ ಅವನ ಆಸೆ... ತನಿಷಾ ಶಾಕಿಂಗ್​ ವಿಷ್ಯ ರಿವೀಲ್​
 

Latest Videos
Follow Us:
Download App:
  • android
  • ios