Asianet Suvarna News Asianet Suvarna News

ದುಡ್ಡು ಆಮೇಲೆ ಕೊಡು ಎಂದು ಕಾರು ಕೊಟ್ಟ- ಆಮೇಲೆ ನೋಡಿದ್ರೆ ಅವನ ಆಸೆ... ತನಿಷಾ ಶಾಕಿಂಗ್​ ವಿಷ್ಯ ರಿವೀಲ್​

ಬಹು ವರ್ಷಗಳ ಕನಸಾಗಿರುವ ಕಾರನ್ನು ಖರೀದಿ ಮಾಡಿದ್ದು, ನನ್ನ ಜೀವನದಲ್ಲಿ ತಂದ ದೊಡ್ಡ ಆಘಾತವಾಯಿತು ಎಂದಿರುವ ಬಿಗ್​ಬಾಸ್ ತನಿಷಾ, ​ಅದರ ವಿಷಯವನ್ನು ಹೇಳಿದ್ದಾರೆ. 
 

Bigg Boss Tanisha Kuppanda about sad story about purchasing of car from her friend suc
Author
First Published Sep 13, 2024, 3:01 PM IST | Last Updated Sep 13, 2024, 3:01 PM IST

ತನಿಷಾ ಕುಪ್ಪಂಡ ಬಿಗ್​ಬಾಸ್​ ಮೂಲಕ ಸಾಕಷ್ಟು ಫೇಮಸ್​ ಆದವರು. ಇವರು ಈಗ ಸ್ಯಾಂಡಲ್​ವುಡ್​ನಲ್ಲಿ ಬಿಜಿಯಾಗಿದ್ದಾರೆ. ಇದೀಗ ಅವರು ತಮ್ಮ ಜೀವನದ ನೋವು-ನಲಿವುಗಳ ಬಗ್ಗೆ ಮಾತನಾಡಿದ್ದಾರೆ. ರಾಜೇಶ್​ ಗೌಡ ಅವರ ಯೂಟ್ಯೂಬ್​ ಚಾನೆಲ್​ಗೆ ನೀಡಿದ ಸಂದರ್ಶನದಲ್ಲಿ ತನಿಷಾ ಅವರು ಇಷ್ಟಪಟ್ಟು ತೆಗೆದುಕೊಂಡ ಕಾರಿನ ನೋವಿನ ಕಥೆಯನ್ನು ಹೇಳಿಕೊಂಡಿದ್ದಾರೆ. ನಾನು ಒಂದು  ಕಾರು ತೆಗೆದುಕೊಳ್ಳಲು 11 ವರ್ಷ ದುಡಿದಿದ್ದೇನೆ. ಅದು ಯಾರಪ್ಪನ ದುಡ್ಡು ಅಲ್ಲ. ಅದರ ಹೊರತಾಗಿಯೂ ಕಾರಿನ ಖರೀದಿ ಬಗ್ಗೆ ತುಂಬಾ ದೊಡ್ಡ ಕಥೆಯೇ ನಡೆದೋಯ್ತು ಎಂದಿದ್ದಾರೆ. ಸ್ನೇಹಿತ ಎಂದು ಹೇಳಿಕೊಂಡವನೊಬ್ಬನಿಂದ ತಮಗೆ  ಆಗಿರುವ ಅನ್ಯಾಯದ ಕುರಿತು ಅವರು ಮಾತನಾಡಿದ್ದಾರೆ.

ನಾನು ಕಾರು ತೆಗೆದುಕೊಳ್ಳುವ ಯೋಚನೆ ಮಾಡಿದೆ. ಈ ಬಗ್ಗೆ ನನ್ನ ಸೋ ಕಾಲ್ಡ್​ ಸ್ನೇಹಿತನಿಗೆ ಗೊತ್ತಾಯ್ತು. ಹಣವನ್ನು ಆಮೇಲೆ ಇಎಂಐ ಮೂಲಕ ಕೊಡು, ಈಗ ನಾನು ದುಡ್ಡು ಕೊಟ್ಟಿರುತ್ತೇನೆ ಎಂದ. ನಾನೂ ಒಪ್ಪಿದೆ. ಸಾಮಾನ್ಯವಾಗಿ ಆಭರಣಗಳನ್ನು ಇದೇ ರೀತಿ ತೆಗೆದುಕೊಳ್ಳುವುದು. ಅದಕ್ಕಾಗಿಯೇ ಇದನ್ನು ಒಪ್ಪಿಕೊಂಡುಬಿಟ್ಟೆ. ಆದರೆ ಆಮೇಲೆ ಆದದ್ದೇ ಬೇರೆ. ಅವನು ಮೊದಲು ನನ್ನ ಕಂಪೆನಿಯ ಹೆಸರಿನಲ್ಲಿ ತೆಗೆದುಕೋ ಎಂದ. ಅದನ್ನು ಒಪ್ಪಿಕೊಂಡಿದ್ದೆ. ಆದರೆ ಆತ ಮೇಲಿಂದ ಮೇಲೆ ಡೇಲಿ ಕಾಲ್​ ಮಾಡೋಕೆ ಶುರು ಮಾಡಿದ. ಅವನ ಉದ್ದೇಶ ತಿಳಿದಿರಲಿಲ್ಲ.

ಇಂಥ ಹುಡುಗ ಸಿಕ್ರೆ ಮಾತ್ರ ಮದ್ವೆಯಾಗಿ, ಇಲ್ಲದಿದ್ರೆ ಮತ್ತೊಬ್ರನ್ನ ಹುಡುಕಿ ಅಷ್ಟೇ- ಯುವತಿಯರಿಗೆ ತನಿಷಾ ಕಿವಿಮಾತೇನು?

ಆದರೆ ಅದೊಮ್ಮೆ ನಾನು ತುಂಬಾ ಬಿಜಿಯಾಗಿ ಒಂದು ವಾರ ಕಾಲ್​​ ಮಾಡಲಿಲ್ಲ. ಆಮೇಲೆ ಅವನೇ ಕಾಲ್​ ಮಾಡಿ ಯಾಕೆ ಕಾಲ್​ ಮಾಡ್ತಾ ಇಲ್ಲ ಎಂದು ಬೇರೆಯದ್ದೇ ರೀತಿಯಲ್ಲಿ ಕೇಳಿದ. ನನಗೆ ಆಶ್ಚರ್ಯವಾಯ್ತು. ಇಬ್ಬರ ನಡುವೆ ಜೋರಾದ ಗಲಾಟೆನೇ ನಡೆಯಿತು. ಕೊನೆಗೆ ಜಗಳ ಯಾವ ಮಟ್ಟಿಗೆ ಹೋಯ್ತು ಎಂದರೆ, ಇವತ್ತೇ ಅಷ್ಟೂ ದುಡ್ಡು ಬೇಕು ಎಂದು ಕೇಳಿದ. 16 ಲಕ್ಷ ರೂಪಾಯಿ ಕಾರು. ನಾನು ಆಗಲೇ ಮೂರೂವರೆ ಲಕ್ಷ ರೂಪಾಯಿ ಕೊಟ್ಟಾಗಿತ್ತು. ನನಗೆ ಒಂದೇ ಬಾರಿಗೆ ಅಷ್ಟೂ ದುಡ್ಡು ಕೊಡಲು ಆಗಲ್ಲ ಎಂದೆ. ಇದಾದ ಸ್ವಲ್ಪ ದಿನದಲ್ಲಿಯೇ ಯಲಹಂಕ ಪೊಲೀಸ್​ ಸ್ಟೇಷನ್​ನಿಂದ ಕಾಲ್​ ಬಂತು. ಕಾರು ನಿಮ್ಮ ಹೆಸರಿನಲ್ಲಿ ಇಲ್ಲ, ಆದ್ದರಿಂದ ಈಗಲೇ ಕಾರನ್ನು ಪೊಲೀಸ್​ ಸ್ಟೇಷನ್​ಗೆ ತನ್ನಿ ಎಂದರು ಎಂದು ಅಂದು ನಡೆದ ಘಟನೆಯನ್ನು ವಿವರಿಸಿದ್ದಾರೆ ತನಿಷಾ.

ಅಂದು ನಾನು ಪ್ಯಾಲೇಸ್​ ಗ್ರೌಂಡ್​ನಲ್ಲಿ ಆ್ಯಂಕರಿಂಗ್​ ಹೋಗ್ತಾ ಇದ್ದೆ. ಪೊಲೀಸರಿಗೆ ಈ ಬಗ್ಗೆ ಹೇಳಿ, ಕಾರನ್ನು ಅಲ್ಲಿಂದಲೇ ತೆಗೆದುಕೊಂಡು ಹೋಗಿ ಎಂದೆ. ನನಗೆ ಜೋರಾಗಿ ಅಳು ಬರುತ್ತಿತ್ತು. ಆದರೆ ಆ್ಯಂಕರಿಂಗ್​ ಇತ್ತು. ಏನು ಮಾಡಬೇಕು ಗೊತ್ತಾಗಲಿಲ್ಲ. ಆಮೇಲೆ ನನ್ನನ್ನು ಅಲ್ಲಿದ್ದ ನನ್ನ ಪರಿಚಯದವರಾದ  ಜಿಗ್ನೇಶ್​ ಅವರು ಏನಾಯ್ತು ಎಂದು ಕೇಳಿದರು. ಎಲ್ಲಾ ಅವರಿಗೆ ವಿಷಯ ತಿಳಿಸಿದೆ. ಅವರು ಮುಂದಾಗಿದ್ದರಿಂದ ಸಮಸ್ಯೆ ಅಂತೂ ಬಗೆಹರಿಯಿತು ಎಂದು  ಕಾರಿನ ಕಥೆಯನ್ನು ಹೇಳಿದ್ದಾರೆ. 

100ಕ್ಕೆ 90 ಗಂಡಸರು ಕೆಟ್ಟದೃಷ್ಟಿಯಿಂದ ನೋಡ್ತಾರೆ: ಬಿಗ್​ಬಾಸ್​ ತನಿಷಾ ಕುಪ್ಪಂಡ ನೋವಿನ ನುಡಿ

Latest Videos
Follow Us:
Download App:
  • android
  • ios