ನ್ಯೂಸ್ ಚಾನೆಲ್‌ನಲ್ಲಿ ಜಗಳ ಮಾಡ್ಕೊಂಡು ಅಲ್ಲೇ ಬಟ್ಟೆ ಬಿಟ್ಟು ಬಂದುಬಿಟ್ಟೆ: ಆಂಕರ್‌ ಜಾಹ್ನವಿ

ಯಾಕೆ ಜಾಹ್ನವಿನ್ಯೂಸ್‌ ಚಾನೆಲ್‌ಗಳಲ್ಲಿ ಕಾಣಿಸಿಕೊಳ್ಳುತ್ತಿಲ್ಲ? ಸವಿ ರುಚಿ ಕಾರ್ಯಕ್ರಮ ಮಾಡ್ಕೊಂಡು ಸಿನಿಮಾ ಶೂಟಿಂಗ್ ಮಾಡ್ತಿದ್ದಾರಾ? ಇಲ್ಲಿದೆ ಉತ್ತರ.... 

Gicchi giligili jhanvi about quitting news channel and career growth vcs

ಕನ್ನಡ ಪ್ರತಿಷ್ಠಿತ ನ್ಯೂಸ್ ಚಾನೆಲ್‌ನಲ್ಲಿ ಜಾಹ್ನವಿ ಕೆಲಸ ಮಾಡುತ್ತಿದ್ದರು. ಜಾಹ್ನವಿ ಬರ್ತಿದ್ದಾರೆ ಅಂದ್ರೆ ಆ ಎಪಿಸೋಡ್‌ ಅಥವಾ ಕಾರ್ಯಕ್ರಮದ ಟಿಆರ್‌ಪಿ ಟಾಪ್ ಅಂತ ವೀಕ್ಷಕರು ಮಾತನಾಡುತ್ತಿದ್ದರು. ಧ್ವನಿ ಚೆನ್ನಾಗಿ ಹುಡುಗಿ ನೋಡಲು ಚೆನ್ನಾಗಿದ್ದಾರೆ ಎಂದು ವೀಕ್ಷಕರು ಕಾಮೆಂಟ್ ಮಾಡುತ್ತಿದ್ದರು. ಆದರೆ ಇದ್ದಕ್ಕಿದ್ದಂತೆ ನ್ಯೂಸ್ ಚಾನೆಲ್‌ನಿಂದ ಹೊರ ಬಂದು ಸಂಪೂರ್ಣವಾಗಿ ಟಿವಿ ರಿಯಾಲಿಟಿ ಶೋಗಳು, ಅಡುಗೆ ಕಾರ್ಯಕ್ರಮಗಳು ಮತ್ತು ಸಿನಿಮಾಗಳಲ್ಲಿ ಬ್ಯುಸಿಯಾಗಿಬಿಟ್ಟರು. ಆದರೆ ಆಫೀಸ್‌ನಲ್ಲಿ ಜಗಳ ಮಾಡಿಕೊಂಡು ಬಂದಿರುವ ಕಾರಣ ಏನು ಎಂದು ಈಗಲೂ ಫ್ಯಾನ್ಸ್ ಪ್ರಶ್ನಿಸುತ್ತಾರೆ. ಅದಕ್ಕೆ ಸಿಕ್ಕಿರುವ ಉತ್ತರ ಇಲ್ಲಿದೆ...

'ನನಗೆ ಸಿನಿಮಾ ಮತ್ತು ಸೀರಿಯಲ್ ಜರ್ನಿಯಲ್ಲಿ ಯಾವುದೇ ಕೆಟ್ಟ ಅನುಭವ ಆಗಿಲ್ಲ. ಆರಂಭದಲ್ಲಿ ನಾನು ತುಂಬಾ ರಿಯಾಕ್ಟ್ ಮಾಡುತ್ತಿದ್ದೆ ಏಕೆಂದರೆ ಬಿಸಿ ರಕ್ತ. ಒಂದು ಚಾನೆಲ್‌ನಲ್ಲಿ ನಾನು ಜಗಳ ಮಾಡಿಕೊಂಡು ಬಟ್ಟೆ ಬಿಟ್ಟು ಬಂದಿದ್ದೆ ಆದರೆ ಖಂಡಿತಾ ಕೆಲಸ ಸಿಗುತ್ತದೆ ಅನ್ನೋ ಭರವಸೆ ಇತ್ತು ಏಕೆಂದರೆ ಕನ್ನಡ ಚೆನ್ನಾಗಿದೆ ಹಾಗೂ ವಾಯ್ಸ್‌ ಚೆನ್ನಾಗಿದೆ ಅಂತ.  ಹುಡುಗರಿಂದ ಯಾವ ಸಮಸ್ಯೆ  ಆಗಿಲ್ಲ ಆದರೆ ಹುಡುಗಿಯರಿಂದ ಟಾಂಟ್‌ಗಳು ಹೆಚ್ಚಾಗುತ್ತಿತ್ತು. ನಾನು ಸ್ವಲ್ಪ ಇದ್ದ ಕಾರಣ ಮೈ ಕೈ ತುಂಬಿಕೊಂಡಿರುವವರು ಎಂದು ಕಾಲೆಳೆಯುತ್ತಿದ್ದರು. ಎಲ್ಲರಿಗೂ ರಿಯಾಕ್ಟ್ ಮಾಡಿದ್ದರೆ ನಮ್ಮ ಎನರ್ಜಿ ವೇಸ್ಟ್‌ ಅಗುತ್ತೆ ಅಂತ ಈಗ ಸೈಲೆಂಟ್ ಆಗಿರುವೆ. ಒಂದು ಚಾನೆಲ್‌ಗೆ ಹೋದ್ರೆ ರಿಜೆಕ್ಟ್‌ ಪೀಸ್‌ ಅಂತಿದ್ರು ಮತ್ತೊಂದು ಕಡೆ ಹೋದ್ರೆ ಜಗಳಗಂಟೆ ಅನ್ನುತ್ತಿದ್ದರು' ಎಂದ ಖಾಸಗಿ ಟಿವಿ ಸಂದರ್ಸನದಲ್ಲಿ ಜಾಹ್ನವಿ ಮಾತನಾಡಿದ್ದಾರೆ. 

ಜನರ ಸಂಪರ್ಕದಿಂದ ದೂರ ಉಳಿದ ಬಿಗ್ ಬಾಸ್ ಸ್ನೇಹಿತ್; ಆ ಕಾರಣ ಕೇಳಿ ನೆಟ್ಟಿಗರು ಶಾಕ್

ಕಳೆದ ಒಂದು ವರ್ಷದಿಂದ ಜಾಹ್ನವಿ ಡಿವೋರ್ಸ್ ವಿಚಾರ ಕೂಡ ದೊಡ್ಡ ಸುದ್ದಿ ಆಗಿತ್ತು. ನನ್ನಮ್ಮ ಸೂಪರ್ ಸ್ಟಾರ್ ರಿಯಾಲಿಟಿ ಶೋನಲ್ಲಿ ಜಾಹ್ನವಿ ಜನರ ಗಮನ ಸೆಳೆದರು. ಹೀಗಾಗಿ ಗಿಚ್ಚಿ ಗಿಲಿಗಿಲಿಯಲ್ಲಿ ಸ್ಪರ್ಧಿಸಲು ಅವಕಾಶ ಪಡೆದರು. ಈ ನಡುವೆ ರಾಜಾ ರಾಣಿ ರಿಯಾಲಿಟಿ ಶೋಗೂ ಅವಕಾಶ ಪಡೆದರಂತೆ ಆದರೆ ಮನೆಯಲ್ಲಿ ಒಪ್ಪದ ಕಾರಣ ರಿಜೆಕ್ಟ್ ಮಾಡಿದ್ದಾರೆ. ಈಗ ಜಾಹ್ನವಿ ಡಿವೋರ್ಸ್ ಪಡೆದ ನಂತರ ಸಖತ್ ನೆಗೆಟಿವ್ ಟ್ರೋಲ್‌ಗಳು ವೈರಲ್ ಆಗಲು ಶುರುವಾಗಿತ್ತು. ರಿಯಾಲಿಟಿ ಶೋಗೋಸ್ಕರ ಡಿವೋರ್ಸ್‌ ಕೊಟ್ಟಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತದೆ. ಆದರೆ ಫ್ಯಾಮಿಲಿಯಲ್ಲಿ ಏನ್ ಆಗುತ್ತಿತ್ತು? ಎಷ್ಟು ಕಷ್ಟ ಅನುಭವಿಸಿದ್ದಾರೆ ಎಂದು ಜಾಹ್ನವಿ ಉತ್ತರಿಸಿದ್ದಾರೆ. ಆದರೂ ಜಾಹ್ನವಿ ಪದೇ ಪದೇ ಟ್ರೋಲ್ ಆಗುತ್ತಿರುವುದಕ್ಕೆ ಬೇಸರ ವ್ಯಕ್ತ ಪಡಿಸಿದ್ದರು. 'ಅಕ್ಕ ನೀವು ತೆಗೆದುಕೊಂಡ ನಿರ್ಧಾರ ನಿಮ್ಮ ಜೀವನ ಬದಲಾಯಿಸಿದೆ ಅಂದ ಮೇಲೆ ನೀವು ನಮಗೆ ಸ್ಫೂರ್ತಿ ನಾನು ಕೂಡ ಜೀವನ ನನ್ನ ಕನಸು ಆಯ್ಕೆ ಮಾಡಿಕೊಳ್ಳಲು ನಿರ್ಧರಿಸಿದ್ದೀನಿ' ಎಂದು ಮಹಿಳಾ ಅಭಿಮಾನಿಗಳು ಜಾಹ್ನವಿ ಸಂದರ್ಶನಗಳಲ್ಲಿ ಕಾಮೆಂಟ್ ಮಾಡಿದ್ದಾರೆ.

ಪಾಪ ಅಮ್ಮ ತಪ್ಪು ಮಾಡದೆ ನೋವು ತಿಂತಿದ್ದಾಳೆ, ಆಕೆ ಬಗ್ಗೆ ನಿಮ್ಗೆ ಏನ್ ಗೊತ್ತು ಅಂತ?; ಪವಿತ್ರಾ ಗೌಡ ಪುತ್ರಿ ಗರಂ

Latest Videos
Follow Us:
Download App:
  • android
  • ios