ಜನರ ಸಂಪರ್ಕದಿಂದ ದೂರ ಉಳಿದ ಬಿಗ್ ಬಾಸ್ ಸ್ನೇಹಿತ್; ಆ ಕಾರಣ ಕೇಳಿ ನೆಟ್ಟಿಗರು ಶಾಕ್
ಬಿಗ್ ಬಾಸ್ ನಂತರ ಯಾಕೆ ಸ್ನೇಹಿತ್ ಎಲ್ಲಿಯೂ ಕಾಣಿಸಿಕೊಂಡಿಲ್ಲ? ಯಾರ ಜೊತೆನೂ ಪಾರ್ಟಿ ಮಾಡುತ್ತಿಲ್ಲ? ಎಂದು ಪ್ರಶ್ನೆ ಮಾಡುತ್ತಿದ್ದ ಜನರಿಗೆ ಉತ್ತರಿಸಿದ್ದಾರೆ.
ರಂಗಭೂಮಿ ಕಲಾವಿದ, ಕನ್ನಡ ಕಿರುತೆರೆಯ ಅದ್ಭುತ ನಟ ಹಾಗೂ ಬಿಗ್ ಬಾಸ್ ಸ್ಪರ್ಧಿ ಸ್ನೇಹಿತ್ ಕೆಲವು ತಿಂಗಳುಗಳಿಂದ ಎಲ್ಲಿಯೂ ಕಾಣಿಸುತ್ತಿಲ್ಲ, ಯಾವ ಪೋಸ್ಟ್ ಹಾಕುತ್ತಿಲ್ಲ ಅಲ್ಲದೆ ತಮ್ಮ ಬ್ಯಾಚ್‌ನ ಸ್ಪರ್ಧಿಗಳ ಜೊತೆನೂ ಇಲ್ಲ. ಯಾಕೆ ಎಲ್ಲರಿಗೂ ಸ್ನೇಹಿತ್ ದೂರ ಉಳಿದಿದ್ದಾರೆ ಎಂದು ಪ್ರಶ್ನೆ ಮಾಡಿದಾಗ ಸಿಕ್ಕಿರುವ ಉತ್ತರವಿದು.
'Showbiz ಒಂದು ರೀತಿ ಎರಡು ತುದಿಗಳು ಇರುವ ಕತ್ತಿ. ಒಬ್ಬರಿಗೆ ನಿಮ್ಮ ಜೊತೆ ಫೋಟೋ ಕ್ಲಿಕ್ ಮಾಡಿಕೊಳ್ಳಬೇಕು ಅಂತ ಆಸೆ ಇರುತ್ತದೆ ಮತ್ತಿಬ್ಬರಿಗೆ ನಿಮ್ಮ ಜೊತೆ ಸಮಸ್ಯೆ ಇರುತ್ತೆ. ಕಳೆದ ಎರಡು ಮೂರು ತಿಂಗಳಿನಿಂದ ನಾನು ಸೋಷಿಯಲ್ ಮೀಡಿಯಾದಿಂದ ದೂರ ಉಳಿದಿದ್ದೀನಿ, ಜನರಿಗೆ ನನ್ನ ಪರ್ಸನಲ್ ಲೈಫ್‌ಗೆ ಆಕ್ಸಿಸ್ ಇಲ್ಲ. ಜನರು ನನ್ನ ಪಾತ್ರವನ್ನು ನೋಡಿ ಇಷ್ಟ ಪಡಬೇಕು. 2024ರಲ್ಲಿ ನನ್ನ ಮೇಲೆ ನಾನು ಹೆಚ್ಚಿಗೆ ಗಮನ ಕೊಟ್ಟಿರುವೆ ಹೀಗಾಗಿ 2025ರಲ್ಲಿ ಕೆಲಸ ಶುರು ಮಾಡಬೇಕು. ರಿಯಾಲಿಟಿ ಶೋ ಸ್ಪರ್ಧಿ ಅನ್ನೋದಕ್ಕಿಂತ ಹೆಚ್ಚಾಗಿ ಒಳ್ಳೆ ಆಕ್ಟರ್ ಎಂದು ಜನರು ನನ್ನನ್ನು ಗುರುತಿಸಬೇಕು' ಟೈಮ್ಸ್ ಆಫ್ ಇಂಡಿಯಾ ಸಂದರ್ಶನದಲ್ಲಿ ಸ್ನೇಹಿತ್ ಮಾತನಾಡಿದ್ದಾರೆ.
ಪಾಪ ಅಮ್ಮ ತಪ್ಪು ಮಾಡದೆ ನೋವು ತಿಂತಿದ್ದಾಳೆ, ಆಕೆ ಬಗ್ಗೆ ನಿಮ್ಗೆ ಏನ್ ಗೊತ್ತು ಅಂತ?; ಪವಿತ್ರಾ ಗೌಡ ಪುತ್ರಿ ಗರಂ
'ಟಿವಿಯಲ್ಲಿ ಕೆಲಸ ಮಾಡಿ ಒಳ್ಳೆ ಪಾಠ ಕಲಿತಿರುವೆ. ಎಂದಿಗೂ ಜನರಿಗೆ ನಮ್ಮ ವೈಯಕ್ತಿಕ ಜೀವನಕ್ಕೆ ಪ್ರವೇಶ ಮಾಡಿಸಬಾರದು. ನಿಜ ಜೀವನದಲ್ಲಿ ಸ್ನೇಹಿತ್ ಹೇಗಿದ್ದಾನೆ ಎಂದು ಜನರು ತಿಳಿದುಕೊಂಡು ಬಿಟ್ಟರೆ ಅವರು ನಾನು ಮಾಡುವ ಪಾತ್ರಕ್ಕೆ ಕನೆಕ್ಟ್ ಆಗುವುದಿಲ್ಲ. ಕಳೆದ ವರ್ಷ ನಾನು ಅತಿ ಹೆಚ್ಚಾಗಿ ಎಕ್ಸ್‌ಪೋಸ್ ಆಗಿಬಿಟ್ಟಿದೆ ಹೀಗಾಗಿ ಯಾರಿಗೂ ಕಾಣಿಸಿಕೊಂಡಿಲ್ಲ. ನಾನು ಆಕ್ಟರ್ ಆಗಬೇಕು ಅನ್ನೋದು ನನ್ನ 8ನೇ ತರಗತಿಯಿಂದ ಕಂಡ ಕನಸು. 2024ರಲ್ಲಿ ಜೀವನದ ಪಾಠ ಕಲಿಸಿದ್ದೀನಿ, ಜನರ ಜೊತೆ ಹೇಗಿರಬೇಕು ಹಾಗೂ ಸೋಷಿಯಲ್ ಮೀಡಿಯಾದಲ್ಲಿರುವ ಜನರ ಜೊತೆ ಹೇಗಿರಬೇಕು ಅಂತ. ರಿಯಾಲಿಟಿ ಶೋ ನಂತರ ಎದುರಾದ ಟ್ರೋಲ್‌ಗಳನ್ನು ಕಷ್ಟವಾಗಿತ್ತು. ಒಬ್ಬನೇ ಮಗನಾಗಿರುವ ಕಾರಣ ನನ್ನ ಪೋಷಕರಿಗೆ ಪ್ರತಿಯೊಂದನ್ನು ಅರ್ಥ ಮಾಡಿಸಬೇಕಿತ್ತು' ಎಂದು ಸ್ನೇಹಿತ್ ಹೇಳಿದ್ದಾರೆ.
ಸೀರೆಯಲ್ಲಿ ಮಿಂಚುತ್ತಿರುವ ವಿಜಯಲಕ್ಷ್ಮಿ ; ಗುಣದಲ್ಲಿ ಸತಿಸಾವಿತ್ರಿ ಎಂದ ಫ್ಯಾನ್ಸ್