ಪಾಪ ಅಮ್ಮ ತಪ್ಪು ಮಾಡದೆ ನೋವು ತಿಂತಿದ್ದಾಳೆ, ಆಕೆ ಬಗ್ಗೆ ನಿಮ್ಗೆ ಏನ್ ಗೊತ್ತು ಅಂತ?; ಪವಿತ್ರಾ ಗೌಡ ಪುತ್ರಿ ಗರಂ
ತಾಯಿ ವಿರುದ್ಧ ಕಾಮೆಂಟ್ ಮಾಡುತ್ತಿರುವವರಿಗೆ ಕ್ಲಾಸ್ ತೆಗೆದುಕೊಂಡ ಪವಿತ್ರಾ ಗೌಡ ಪುತ್ರಿ ಖುಷಿ. ನಾನು ಇನ್ನೂ ಟೀನೇಜರ್ ಅನ್ನೋದು ನಿಮಗೆ ಅರ್ಥ ಆಗಲ್ವಾ ಎಂದ ಮಗಳು....
ರೇಣುಕಾಸ್ವಾಮಿ ಪ್ರಕರಣದ ಮೇಲೆ ಏ1 ಆರೋಪಿಯಾಗಿ ಪವಿತ್ರಾ ಗೌಡ 5-6 ತಿಂಗಳುಗಳ ಕಾಲ ಪರಪ್ಪನ ಅಗ್ರಹಾರದಲ್ಲಿದ್ದರು. ಜಾಮೀನು ಪಡೆದು ಹೊರ ಬಂದು ಗೂಡು ಸೇರಿರುವ ಪವಿತ್ರಾ ಎಲ್ಲಿಯೂ ಕಾಣಿಸಿಕೊಳ್ಳುತ್ತಿಲ್ಲ. ಆದರೆ ತಾಯಿ ಬಗ್ಗೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಕಾಮೆಂಟ್ಸ್ ನೋಡಿ ಖುಷಿ ಆಕ್ರೋಶ ವ್ಯಕ್ತ ಪಡಿಸಿದ್ದಾಳೆ.
'ಸೋಷಿಯಲ್ ಮೀಡಿಯಾದಲ್ಲಿ ಇರುವ ಪ್ರತಿಯೊಬ್ಬರಿಗೂ, ನನ್ನ ಜೀವನದಲ್ಲಿ ಹೀಗೊಂದು ಬರೆಯುತ್ತೀನಿ ಅಂದುಕೊಂಡಿರಲಿಲ್ಲ. ಆದರೆ ನಿಮ್ಮ ಮಾತುಗಳು ನನ್ನ ಮನಸ್ಸಿನ ಮೇಲೆ ದೊಡ್ಡ ಗಾಯ ಮಾಡಿದೆ ಅದನ್ನು ನಿರ್ಲಕ್ಷ್ಯ ಮಾಡಲು ಆಗುತ್ತಿಲ್ಲ. ಸಂಬಂಧವೇ ಇಲ್ಲದ ಕಾಮೆಂಟ್ಸ್, ನಿಮ್ಮ ಊಹೆಗಳು,ನನ್ನ ತಾಯಿಗೆ ಬಳಸಿರುವ ಪದಗಳು ಪ್ರತಿಯಂದು ನೀವು ಕಲ್ಪನೆ ಮಾಡಿರದಷ್ಟು ನನ್ನ ಮನಸ್ಸಿನಲ್ಲಿ ದೊಡ್ಡ ನೋವು ಮಾಡಿದೆ. ನಿಮಗೆ ಅವಳ ಬಗ್ಗೆ ಏನೂ ಗೊತ್ತಿಲ್ಲ. ಆಕೆ ನೋಡಿರುವ ಕಷ್ಟಗಳು, ಅಕೆಯ ತ್ಯಾಗಗಳು ಅಥವಾ ಮತ್ತೊಬ್ಬರನ್ನು ಗೌರವ ಕೊಡುತ್ತಾರೆ ಅನ್ನೋದು ನಿಮಗೆ ಗೊತ್ತಿಲ್ಲ. ನಿಮಗೆ ಅರ್ಥವಾದ ಅನ್ನೋ ರೀತಿಯಲ್ಲಿ ಮಾತನಾಡುತ್ತೀರಿ, ನಿಮ್ಮ ಜಡ್ಜ್‌ಮೆಂಟ್‌ಗಳಿಗೆ ತೂಕವಿದೆ ಅನ್ನೋ ಅರ್ಥದಲ್ಲಿ ಆದರೆ ಇಲ್ಲ. ಸೈಲೆಂಟ್ ಆಗಿದ್ದು ಆಕೆ ಏನು ಎದುರಿಸುತ್ತಿದ್ದಾಳೆ ಅನ್ನೋದು ನನಗೆ ಗೊತ್ತಿದೆ. ದೇಶವೇ ಅವಳ ಬಗ್ಗೆ ಮಾತನಾಡುತ್ತಿದ್ದಾಗ ರಾತ್ರಿ ಇಡೀ ಆಕೆ ಗಟ್ಟಿಯಾಗಿ ನಿಂತಿದ್ದು ನಾನು ನೋಡಿದ್ದೀನಿ. ನನ್ನ ತಾಯಿ ನನ್ನ ಪ್ರಪಂಚ, ನನ್ನ ಶಕ್ತಿ, ನನ್ನ ಸ್ಪೂರ್ತಿ. ಆಕೆ ನನ್ನ ತಾಯಿ ಮಾತ್ರವಲ್ಲ ನನ್ನ ತಂದೆ ಕೂಡ' ಎಂದು ಖುಷಿ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾಳೆ.
ಪವಿತ್ರಾ ಗೌಡ ಪುತ್ರಿಯ ಹೊಸ ಫೋಟೋಶೂಟ್ ವೈರಲ್; ಪುಂಡರಿಂದ ದೂರ ಉಳಿಯಲು ಕಾಮೆಂಟ್ಸ್ ಆಫ್?
'ನನ್ನ ಜೀವನದಲ್ಲಿ ಆಕೆ ಪ್ರತಿಯೊಂದು ಪಾತ್ರವನ್ನು ಅದ್ಭುತವಾಗಿ ನಿಭಾಯಿಸಿದ್ದಾಳೆ ಅದು ಅತ್ಯಂತ ಪ್ರೀತಿ ಮತ್ತು ಕಾಳಜಿಯಿಂದ. ನನಗೆ ಆಕೆನೇ ಎಲ್ಲಾ. ಪ್ರೀತಿ ಮತ್ತು ತ್ಯಾಗ ಅಂದ್ರೆ ನನ್ನ ತಾಯಿ. ಅಕೆ ಮಾಡಿರುವುದನ್ನು ನಾನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ. ಹೀಗಾಗಿ ಆಕೆ ಬಗ್ಗೆ ಗೊತ್ತಿಲ್ಲದೆ ಆಕೆ ಬಗ್ಗೆ ಮಾತನಾಡುವುದು ಸರಿ ಅಲ್ಲ. ಈಗಾಗಲೆ ಆಕೆ ಎಷ್ಟು ಎದುರಿಸುತ್ತಿದ್ದಾಳೆ ಆದರೂ ನೀವು ಮತ್ತಷ್ಟು ಕಾಮೆಂಟ್ ಮಾಡುತ್ತಿರುವುದು ನೋಡಲು ಬೇಸರ ಆಗುತ್ತದೆ' ಎಂದು ಖುಷಿ ಹೇಳಿದ್ದಾಳೆ.
ದೇವರಿದ್ದಾನೆ ಅವನೇ ನೋಡಿಕೊಳ್ಳುತ್ತಾರೆ; ಪವಿತ್ರ ಗೌಡ ಜಾಮೀನು ಸಿಕ್ಕ ಬೆನ್ನಲ್ಲೇ ಮಗಳ ಪೋಸ್ಟ್
'ನಾನು ಇನ್ನೂ ಟೀನೇಜರ್ ಎಂದು ನಿಮಗೆ ಅರ್ಥ ಆಗಲ್ವಾ?ನಾನು ಇನ್ನೂ ಪುಟ್ಟವಳು ಈ ಪ್ರಪಂಚವನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತಿರುವವಳು. ನಿಮ್ಮ ಮಾತುಗಳನ್ನು ಎಷ್ಟು ನೋವಾಗುತ್ತದೆ ಎಂದು ಹೇಳೋಕೂ ಪದ ಇಲ್ಲ. ಈ ನೋವನ್ನು ಹೊತ್ತುಕೊಂಡು ಓಡಾಡುವುದು ತುಂಬಾ ಕಷ್ಟ, ನನ್ನ ತಾಯಿನ ಜಡ್ಜ್ ಮಾಡುತ್ತಿರುವುದನ್ನು ನೋಡಲು ಕಷ್ಟ ಆದರೆ ಇದನ್ನು ನಿಲ್ಲಿಸಲು ಪವರ್ ಇಲ್ಲ ಅನ್ನೋ ಬೇಸರ. ನನ್ನ ತಾಯಿ ಬೆಸ್ಟ್ ವ್ಯಕ್ತಿ...ಏನೇ ಎದುರಾಗಲಿ ನಾನು ಆಕೆ ಪರವಾಗಿ ನಿಂತುಕೊಳ್ಳುತ್ತೀನಿ. ಮಾತನಾಡುವ ಮುನ್ನ ನೀವು ಯೋಜಿಸಿ' ಎಂದಿದ್ದಾಳೆ ಖುಷಿ.