ಧರ್ಮಪತ್ನಿ ಪಾರ್ವತಮ್ಮ ಬಗ್ಗೆ ಅಣ್ಣಾವ್ರು ಹೀಗೆಲ್ಲಾ ಹೇಳ್ಬಿಟ್ರು, ತಮಾಷೆಗೆ ಇರ್ಬಹುದಾ ಅಂತ...?
ನಮ್ಮಪ್ಪಾಜಿ, 'ಹೋಗಿ ಅವ್ಳನ್ನ ಕರ್ಕೊಂಡು ಬಾ ಕಂದಾ..' ಅಂತ ಅಂದ್ರು.. ನಂಗೆ ಸೈಕಲ್ ಸವಾರಿ ಅಂದ್ರೆ ಬಹಳ ಶೋಕಿ, ಬಹಳ ಹುಚ್ಚು ನಂಗೆ.. ಏನ್ ಮಾಡ್ಲಿ, ಸೈಕಲ್ ಇರ್ಲಿಲ್ಲ ಆಗ.. ಬಾಡಿಗೆ ಸೈಕಲ್ ತಗೊಂಡು, ಯಡಿಯೂರಿಗೆ .. (ಏನೇನೆಲ್ಲಾ ಹೇಳ್ಬಿಟಿದಾರೆ ನೋಡಿ.. )

ಕನ್ನಡದ ವರನಟ ಡಾ ರಾಜ್‌ಕುಮಾರ್ (Dr Rajkumar) ಅವರು ತಮ್ಮ ಧರ್ಮಪತ್ನಿ ಪಾರ್ವತಮ್ಮ (Parvathamma Rajkumar) ಅವರ ಬಗ್ಗೆ ಯಾವುದೋ ಒಂದು ಸಂದರ್ಶನದಲ್ಲಿ ಮಾತನ್ನಾಡಿದ್ದಾರೆ. ಅಣ್ಣಾವ್ರು ಅಲ್ಲಿ ತಮ್ಮ ಮದುವೆಗಿಂತ ಮೊದಲು, ಚಿಕ್ಕ ವಯಸ್ಸಿನ ಘಟನೆ ಬಗ್ಗೆ ಹೇಳಿಕೊಂಡಿದ್ದಾರೆ. ಪಾರ್ವತಮ್ಮನವರಿಗೆ ಆಗ ಬರೀ 7 ವರ್ಷ ಆಗಿತ್ತಂತೆ. ಡಾ ರಾಜ್‌ಕುಮಾರ್ ಅವರಿಗೆ ಆಗ . ಮೊದಲೇ ಅವರಿಬ್ಬರ ಮದುವೆ ನಿಶ್ಚಯ ಆಗಿಬಿಟ್ಟಿತ್ತು. ಈ ಬಗ್ಗೆ ಡಾ ರಾಜ್‌ಕುಮಾರ್ ಅವರು ಅದೇನು ಹೇಳಿದ್ದಾರೆ ನೋಡಿ..
ಹೌದು, ಡಾ ರಾಜ್‌ಕುಮಾರ್ ಹುಟ್ಟಿದ್ದು ತಮಿಳುನಾಡಿನ ಗಾಜನೂರಿನಲ್ಲಿ. ಆದರೆ ಅದು ಕರ್ನಾಟಕದ ಬಾರ್ಡರ್ ಜಿಲ್ಲೆ ಚಾಮರಾಜನಗರದ ಸಮೀಪ ಇದೆ. ಹೀಗೆ ಡಾ ರಾಜ್‌ಕುಮಾರ್ ಅವರಿಗೆ ಕನ್ನಡ ಹಾಗೂ ತಮಿಳು ಎರಡೂ ಭಾಷೆ ಬರುತ್ತೆ. ಜೊತೆಗೆ, ಅವರ ಒಡನಾಟ ಮೈಸೂರು ಕಡೆಗೆ ಜಾಸ್ತಿ ಇತ್ತಾದ್ದರಿಂದ ಅವರು ಕನ್ನಡದ ನಾಟಕರಂಗದಲ್ಲಿ ತೊಡಗಿಸಿಕೊಂಡು, ಬಳಿಕ ಕನ್ನಡ ಚಿತ್ರರಂಗಕ್ಕೆ ಬಂದರು.
Dr Rajkumar in Georgia: ಜಾರ್ಜಿಯಾದಲ್ಲಿ ಸೇಮ್ ಟು ಸೇಮ್ ಡಾ ರಾಜ್‌ಕುಮಾರ್, ಜಗತ್ತೇ ಶಾಕ್!
ಅದೆಲ್ಲಾ ಗೊತ್ತಿರುವ ಸಂಗತಿಯೇ ಬಿಡಿ, ಆದ್ರೆ ಡಾ ರಾಜ್ (1929) ಅವರು ತಮ್ಮ ಧರ್ಮಪತ್ನಿ ಪಾರ್ವತಮ್ಮ ಬಗ್ಗೆ ಅದೇನು ಹೇಳಿದ್ದಾರೆ ನೋಡಿ.. 'ಅದು.. ನಮ್ಮಪ್ಪಾಜಿ ವಂಶದವ್ಳು ಪಾರ್ವತಿ.. ಅವ್ಳು ಹುಟ್ಟಿದಾಗ, ಹೆಸರು ಇಡೋಕೆ ಹೋದವ್ರೇ ನಮ್ಮಪ್ಪಾಜಿ 'ಇವ್ಳು ನಮ್ಮ ಮಗ ಮುತ್ತುರಾಜ್ ಹೆಂಡತಿ' ಅಂತ ಹೇಳ್ಬಿಟ್ರಂತೆ.. ನಾನು ನೋಡಿದಾಗ ಅವ್ಳಿಗೆ ಏಳು ವರ್ಷ (1939).. ಆಟಪಾಠ ಆಡ್ಕೊಂಡು, ಲಂಗಪಂಗ ಹಾಕ್ಕೊಂಡು ಅಲ್ಲಿ ಬೀದಿಲಿ ಒದ್ದಾಡಕೊಂಡು, ಆ ಧೂಳಿನ ಜೊತೆಲ್ಲಿ ಆಟ ಅಡ್ಕೊಂಡು ಇದ್ದೋಳು..
ನಮ್ಮಪ್ಪಾಜಿ, 'ಹೋಗಿ ಅವ್ಳನ್ನ ಕರ್ಕೊಂಡು ಬಾ ಕಂದಾ..' ಅಂತ ಅಂದ್ರು.. ನಂಗೆ ಸೈಕಲ್ ಸವಾರಿ ಅಂದ್ರೆ ಬಹಳ ಶೋಕಿ, ಬಹಳ ಹುಚ್ಚು ನಂಗೆ.. ಏನ್ ಮಾಡ್ಲಿ, ಸೈಕಲ್ ಇರ್ಲಿಲ್ಲ ಆಗ.. ಬಾಡಿಗೆ ಸೈಕಲ್ ತಗೊಂಡು, ಯಡಿಯೂರಿಗೆ ಹೋದೆ.. ಸೈಕಲ್ ತಗೊಂಡು ಯಡಿಯೂರಿಗೆ ಹೋದೆ, ಅಲ್ಲಿಗೆ ಹೋದಾಗ ಹೋದ ತಕ್ಷಣ ಇವ್ಳೇ ಸಿಗ್ಬೇಕಾ ಬೀದೀಲಿ.. ?! ಒದ್ದಾಡ್ತಾ ಇದಾಳೆ..
ಅಣ್ಣಾವ್ರ ಮಗ್ಳು ಪೂರ್ಣಿಮಾ-ರಾಮ್‌ಕುಮಾರ್ 'ಲವ್ ಕಹಾನಿ' ಬಲು ರೋಚಕ, ಮಿಸ್ ಮಾಡ್ದೇ ನೋಡಿ..!
ಆವಾಗ ನೋಡಿ, ಏನಪ್ಪಾ ಇದೂ.. ನಮ್ಮಪ್ಪಾಜಿ ಹೋಗಿ ಹೋಗಿ ಇವ್ಳ ಮ್ಯಾಲೆ ಯಾಕೆ ದೃಷ್ಟಿ ಇಟ್ಕೊಂಡು, ನನ್ ಮಗನಿಗೆ ಕಟ್ಬೇಕು ಅಂತ.. ಒಳ್ಳೇ ಹೆಗ್ಗಣ ಇದ್ದಾಂಗೆ ಇದೆ.. ಅವ್ಳ ಬಣ್ಣಪಣ್ಣ ನೋಡಿದ್ರೆ ಫಜೀತಿ ಆಗಿದೆ ಅಂತ ನನಗೆ...' ಎಂದು ತಮಗೆ ಸತ್ಯವಾದ ಸಂಗತಿಯನ್ನು ತಮಾಷೆಯಾಗಿ ಹೇಳಿದ್ದಾರೆ. ಅವರು ತಮ್ಮ ಹೆಂಡತಿಗೆ ಏನಾದ್ರೂ ಹೇಳಬಹುದು. ಏಕೆಂದರೆ, ಅದು ಗಂಡ-ಹೆಂಡತಿ ವಿಷಯ. ಅಂದಹಾಗೆ, ಅವರಿಬ್ಬರ ಮಧ್ಯೆ ಹತ್ತು ವರ್ಷಗಳ ಗ್ಯಾಪ್ ಇತ್ತು.
ಜೊತೆಗೆ, ತಮ್ಮ ಅಪ್ಪಾಜಿ ನೋಡಿ ಮಾಡಿದ ಮದುವೆಗೆ ಒಪ್ಪಿ ಡಾ ರಾಜ್‌ಕುಮಾರ್ ಅವರು ಕೊನೆಯವರೆಗೂ ಚೆನ್ನಾಗಿ ಸಂಸಾರ ಮಾಡಿದ್ದಾರೆ. ಅವರು ಅದನ್ನು ಎಲ್ಲೋ ನಾಲ್ಕು ಗೋಡೆಯ ಮಧ್ಯೆ ಹೇಳಿದ್ದಲ್ಲ, ಸ್ವತಃ ಅವರೇ ಸಂದರ್ಶನಲ್ಲಿ ಬಾಯ್ಬಿಟ್ಟು ಹೇಳಿದ್ದು. ಆದರೆ, ಅಣ್ಣಾವ್ರು ತಮಾಷೆಗೆ ಹೀಗೆ ಹೇಳಿದ್ರಾ ಅಥವಾ ತಮ್ಮಮ ಅನಿಸಿಕೆಯನ್ನು ತಮಾಷೆಯಾಗಿ ಹೇಳಿದ್ರಾ ಅನ್ನೋದು ಅವರಿಗೇ ಗೊತ್ತು! ಈ ಬಗ್ಗೆ ಬೇರೆಯವರು ಚರ್ಚೆ ಮಾಡಿದರೆ ಅದು ಅವರ ಯೋಚನೆ ಅಥವಾ ಕಲ್ಪನೆ ಆಗಿರುತ್ತದೆ ಅಷ್ಟೇ..!
ಆ ಸಿನಿಮಾ ಬಳಿಕ ಅಣ್ಣಾವ್ರು ನಟನೆಯನ್ನು ನಿಲ್ಲಿಸಲು ಬಯಸಿದ್ದರು, ವಯಸ್ಸಾಯ್ತು ಅಂದಿದ್ರು!