Asianet Suvarna News Asianet Suvarna News

ವೀರ ಕಂಬಳ ಸಿನೆಮಾಕ್ಕಾಗಿ ಬಣ್ಣ ಹಚ್ಚಿದ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ, ಫೋಟೋ ವೈರಲ್

ತುಳುನಾಡಿನ ಕೋಣಗಳ ಓಟದ ಹೆಮ್ಮೆಯ ಕಂಬಳ ಸ್ಪರ್ಧೆಯನ್ನು ಕೇಂದ್ರ ಬಿಂದುವಾಗಿಟ್ಟುಕೊಂಡು ತಯಾರಾಗುತ್ತಿರುವ ವೀರ ಕಂಬಳ ಎಂಬ ಸಿನೆಮಾದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಬಣ್ಣ ಹಚ್ಚಿದ್ದು, ಅವರ ಫೋಟೋ ಸಖತ್ ವೈರಲ್ ಆಗಿದೆ.

Dr.D.Veerendra Heggade cast in Veera Kambala movie gow
Author
First Published Jan 2, 2023, 8:03 PM IST

ಬೆಂಗಳೂರು (ಜ.2): ತುಳುನಾಡಿನ ಕೋಣಗಳ ಓಟದ ಹೆಮ್ಮೆಯ ಕಂಬಳ ಸ್ಪರ್ಧೆಯನ್ನು ಕೇಂದ್ರ ಬಿಂದುವಾಗಿಟ್ಟುಕೊಂಡು ತಯಾರಾಗುತ್ತಿರುವ ವೀರ ಕಂಬಳ ಎಂಬ ಸಿನೆಮಾದ ಶೂಟಿಂಗ್ ಭರದಿಂದ ಸಾಗಿದೆ. ವಿಶೇಷವೆಂದರೆ ಈ ಚಿತ್ರದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಬಣ್ಣ ಹಚ್ಚಿದ್ದಾರೆ. ಎಸ್‌.ವಿ ರಾಜೇಂದ್ರ ಸಿಂಗ್ ಬಾಬು ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಚಿತ್ರಕ್ಕೆ ಬರೋಬ್ಬರಿ 7 ವರ್ಷಗಳ ಕಾಲ ಸಂಶೋಧನೆ ಮಾಡಿ ಕಥೆ ಬರೆಯಲಾಗಿದೆ. ಕನ್ನಡದ ಜೊತೆಗೆ ತೆಲುಗು, ತಮಿಳು, ಹಿಂದಿ ಹಾಗೂ ತುಳು ಭಾಷೆಯಲ್ಲಿ ಕೂಡ ವೀರ ಕಂಬಳ ಸಿನೆಮಾ ತೆರೆ ಕಾಣಲಿದೆ. ತುಳುವಿನಲ್ಲಿ ಈ ಚಿತ್ರಕ್ಕೆ 'ಬಿರ್ದ್‌ದ ಕಂಬಳ' ಎಂದು ಹೆಸರಿಡಲಾಗಿದೆ. 

ಈವರೆಗೆ ಹಲವು ಚಲನಚಿತ್ರಗಳಲ್ಲಿ ಕಂಬಳವನ್ನು ಚಿತ್ರದ ಭಾಗವಾಗಿ ನೋಡಿದ್ದೇವೆ ಹೊರತು ಸಂಪೂರ್ಣ ಕಂಬಳದ ಬಗ್ಗೆ ಚಿತ್ರ ಬಂದಿಲ್ಲ.  ವೀರ ಕಂಬಳ ಎಂಬ ಸಿನೆಮಾ ಕಂಬಳ ಎಂಬ ಜಾನಪದ ಕ್ರೀಡೆಯನ್ನು ಕೇಂದ್ರವಾಗಿ ಇಟ್ಟುಕೊಂಡು ಮೂಡಿಬಂದಿರುವ ಚಿತ್ರವಾಗಿದೆ. ಈ ಚಿತ್ರಕ್ಕೆ ಅರುಣ್ ರೈ ತೋಡಾರ್ ಎಂಬವರು ಬಂಡವಾಳ ಹೂಡಿದ್ದಾರೆ. 

'ವೀರ ಕಂಬಳ' ಚಿತ್ರದ ಕೊನೆ ಹಂತದ ಚಿತ್ರೀಕರಣ ಸದ್ಯ ನಡೆಯುತ್ತಿದ್ದು, ಈ ಚಿತ್ರಕ್ಕಾಗಿ ಧರ್ಮಸ್ಥಳ  ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಬಣ್ಣ ಹಚ್ಚುತ್ತಿರುವ ಫೋಟೋ ಸಖತ್ ವೈರಲ್ ಆಗಿದೆ. 

ಕಾಂತಾರ 2 ಮಾಡುವ ಮೊದಲು ವೀರೇಂದ್ರ ಹೆಗ್ಗಡೆಯವರ ಅನುಮತಿ ಕೇಳಲು ದೈವ ಹೇಳಿದೆ; ದೈವ ನರ್ತಕ

ತುಳುನಾಡಿನ ಪ್ರಸಿದ್ಧ ಕಲಾವಿದರು ಕೂಡ ಈ ಚಿತ್ರದಲ್ಲಿ ಬಣ್ಣ ಹಚ್ಚಿದ್ದು, ಇದರ ಜೊತೆಗೆ ಪ್ರಕಾಶ್ ರಾಜ್, ಆರ್ಮುಗ ರವಿಶಂಕರ್‌ ಮುಖ್ಯಭೂಮಿಕೆಯಲ್ಲಿ  ಕಾಣಿಸಿಕೊಂಡಿದ್ದಾರೆ. ಕಂಬಳದ ಕೋಣ ಓಡಿಸುವುದರಲ್ಲಿ ಪರಿಣಿತರಾಗಿರುವ ಶ್ರೀನಿವಾಸ್ ಗೌಡ ಹಾಗೂ ರಂಗಭೂಮಿ ಕಲಾವಿದ ಸ್ವರಾಜ್ ಶೆಟ್ಟಿ ಕಂಬಳದ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಮಿಕ್ಕಂತೆ ಆದಿತ್ಯಾ, ರಾಧಿಕಾ ಚೇತನ್, ಭೋಜರಾಜ್ ವಾಮಂಜೂರು, ನವೀನ್ ಡಿ ಪಡೀಲ್ ತಾರಾಗಣದಲ್ಲಿದ್ದಾರೆ.

'ಕಾಂತಾರ 2' ಮಾಡಲು ಧರ್ಮಸ್ಥಳ ಮಂಜುನಾಥೇಶ್ವರನ ಅನುಮತಿ ಬೇಕು; ಅಲೋಚಿಸಿ ಸಿನಿಮಾ ಮಾಡ್ಬೇಕಾ?

ಮಣಿಕಾಂತ್ ಕದ್ರಿ  ಅವರ ಸಂಗೀತ, ಗಿರಿ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ. ತುಳುನಾಡಿನ ಭಾಷೆ, ಸೊಗಡು ಸಂಸ್ಕೃತಿ, ಜಾನಪದ ಕ್ರೀಡೆ ಹಾಗೂ ಇನ್ನಿತರ ಅಂಶಗಳನ್ನು ಈ  ಸಿನಿಮಾ ಮೂಲಕ ಜಗತ್ತಿಗೆ ಪರಿಚಯಿಸಲಾಗುತ್ತಿದೆ.  ತುಳು ಚಿತ್ರರಂಗದಲ್ಲಿ ಪ್ರಸಿದ್ಧರಾಗಿರುವ ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ಈ ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ. ಶೀಘ್ರದಲ್ಲೇ ಚಿತ್ರ ತೆರೆ ಕಾಣಲಿದೆ.

Follow Us:
Download App:
  • android
  • ios