ತಂದೆ ಮತ್ತು ಸಹೋದರನ ಜೊತೆ ಸಿದ್ಧೇಶ್ವರ ಸ್ವಾಮಿತೆ ವಿಶೇಷ ಪೂಜೆ ಸಲ್ಲಿಸಿದ ನಟ ರಾಕ್ಷಸ. 

ಕನ್ನಡ ಚಿತ್ರರಂಗದ ನಟ ರಾಕ್ಷಸ ಡಾಲಿ ಧನಂಜಯ್ ಚಿತ್ರೀಕರಣದ ಬಿಡುವಿನಲ್ಲಿ ತಮ್ಮ ಹುಟ್ಟೂರಿನ ಕಡೆ ಪ್ರಯಾಣ ಮಾಡಿದ್ದಾರೆ. ತಂದೆ ಅಡವಿಸ್ವಾಮಿ ಮತ್ತು ಸಹೋದರನ ಜೊತೆ ಅರಸಿಕೆರೆ ಶ್ರೀ ಜೇನುಕಲ್ ಸಿದ್ಧೇಶ್ವರ ಸ್ವಾಮಿ ದರ್ಶನ ಪಪಡೆದಿದ್ದಾರೆ. ಬೆಟ್ಟದ ಮೇಲೆ ಕುಳಿತುಕೊಂಡು ಜಪ ಮಾಡುತ್ತಿರುವ ಫೋಟೋ ವೈರಲ್‌ ಅಗಿದೆ. 

ಹೌದು! ಅರಸಿಕೆರೆಯ ಯಾದಾಪುರದ ಶ್ರೀ ಜೇನುಕಲ್ ಸಿದ್ಧೇಶ್ವರ ಸ್ವಾಮಿ ಬೆಟ್ಟವನ್ನು ಕಾಲ್ನಡಿಗೆಯಲ್ಲಿ ಹತ್ತಿ ದರ್ಶನ ಪಡೆದಿದ್ದಾರೆ. ಬೆಟ್ಟ ಮೇಲೆ ಕುಳಿತುಕೊಂಡು ಜಪ ಮಾಡುತ್ತಿರುವ ಡಾಲಿ ತಮ್ಮ ಬಾಲ್ಯದ ನೆನಪಿಗೆ ಜಾರಿದ್ದಾರೆ. ಸದ್ಯ ಮೈಸೂರಿನಲ್ಲಿ ಪರಮೇಶ್ವರ ಗುಂಡ್ಕಲ್ ನಿರ್ದೇಶನ ಮಾಡುತ್ತಿರವ ಚಿತ್ರದಲ್ಲಿ ನಟಿಸುತ್ತಿದ್ದು, ಶೀಘ್ರದಲ್ಲಿ ಟೈಟಲ್‌ ಮತ್ತು ಲುಕ್ ರಿವೀಲ್ ಮಾಡಲಿದ್ದಾರೆ.

ತೋತಾಪುರಿ 2 ಚಿತ್ರದಲ್ಲಿ ಡಾಲಿ ಧನಂಜಯ ಹವಾ

ಜಗ್ಗೇಶ್‌, ಡಾಲಿ ಧನಂಜಯ ಪ್ರಮುಖ ಪಾತ್ರದಲ್ಲಿ ನಟಿಸಿರುವ ‘ತೋತಾಪುರಿ 2’ ಬಿಡುಗಡೆಗೆ ಸಜ್ಜಾಗಿದೆ. ‘ತೋತಾಪುರಿ’ ಭಾಗ 1ರ ಅಂತ್ಯ ಭಾಗದಲ್ಲಿ ಧನಂಜಯ ಪಾತ್ರದ ಪ್ರವೇಶ ಆಗಿತ್ತು. ಈಗ ‘ತೋತಾಪುರಿ’ ಭಾಗ 2ರಲ್ಲಿ ಧನಂಜಯ ಅವರ ಪಾತ್ರ ಬಹುಭಾಗವನ್ನು ಆವರಿಸಿದೆ.

'ಡಾಲಿ ಉತ್ಸವಕ್ಕೆ' ಸಜ್ಜಾಗ್ತಿದೆ ವೇದಿಕೆ; ನಾಲ್ಕು ವರ್ಷದ ಬಳಿಕ ಧನಂಜಯ್ ಅದ್ದೂರಿ ಬರ್ತಡೇ ಸಂಭ್ರಮ

ಜಗ್ಗೇಶ್ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರೂ ಈ ಭಾಗದಲ್ಲಿ ಡಾಲಿ ಧನಂಜಯ್ ಮತ್ತು ಸುಮನ್‌ ರಂಗನಾಥ್‌ ಜೋಡಿ ಮೋಡಿ ಮಾಡಲಿದೆ ಎಂದು ಚಿತ್ರತಂಡ ತಿಳಿಸಿದೆ. ಈ ಜೋಡಿ ಅಭಿನಯಿಸಿರುವ ‘ಮೊದಲ ಮಳೆ’ ಹಾಡು ಈಗಾಗಲೇ ಬಿಡುಗಡೆಯಾಗಿದ್ದು, ಶೀಘ್ರದಲ್ಲೇ ‘ಲಾಂಗ್ ಡ್ರೈವ್ ಹೋಗೋಣ’ ಎಂಬ ಮತ್ತೊಂದು ಹಾಡು ಬಿಡುಗಡೆ ಆಗಲಿದೆ.

ಚಿತ್ರದಲ್ಲಿ ಧನಂಜಯ್ ಅವರು ನಾರಾಯಣ ಪಿಳ್ಳೈ ಎಂಬ ಉದ್ಯಮಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಪಾತ್ರ ಮೂರು-ನಾಲ್ಕು ಗೆಟಪ್‌ಗಳಲ್ಲಿ ಕಾಣಿಸಿಕೊಳ್ಳಲಿದೆ. ಆ ಪಾತ್ರದ ಜೀವನ ಕತೆ ಮತ್ತು ಪ್ರೇಮ ಕತೆಯೇ ಈ ಭಾಗದ ಹೈಲೈಟ್‌ ಆಗಿರಲಿದೆ. ಡಾಲಿ ಧನಂಜಯ್‌ ಅವರು ಇಲ್ಲಿ ವಿಭಿನ್ನವಾಗಿ ಕಾಣಿಸಿಕೊಂಡಿದ್ದು, ಹೊಸ ರೀತಿಯ ಮಾತಿನ ಶೈಲಿ, ವಿಶಿಷ್ಟವಾದ ಸ್ಟೈಲ್‌ ಹೊಂದಿದ್ದಾರೆ ಎಂದು ಚಿತ್ರತಂಡ ಮಾಹಿತಿ ನೀಡಿದೆ. ಧನಂಜಯ್‌ ಮತ್ತು ಸುಮನ್‌ ರಂಗನಾಥ್‌ ಅಭಿನಯಿಸಿರುವ ದೃಶ್ಯಗಳನ್ನು ಮೈಸೂರು, ಕೂರ್ಗ್, ಕೇರಳದ ಮನಮೋಹಕ ದೃಶ್ಯಗಳಲ್ಲಿ ಚಿತ್ರೀಕರಿಸಲಾಗಿದೆ.

ಡಾಲಿ @ 10; ಧನಂಜಯ್ ಹೀರೋ ಡಾಲಿ ಪಕ್ಕಾ ವಿಲನ್: ಧನಂಜಯ್ Exclusive

ಈ ಜೋಡಿಯ ಕತೆಯ ಜೊತೆಗೆ ‘ತೋತಾಪುರಿ’ ಭಾಗ 1ರಲ್ಲಿ ಉಳಿದ ಎಲ್ಲಾ ಪ್ರಶ್ನೆಗಳಿಗೆ ಈ ಭಾಗದಲ್ಲಿ ಉತ್ತರ ಸಿಗಲಿದೆ. ಜಗ್ಗೇಶ್, ಅದಿತಿ ಪ್ರಭುದೇವ, ದತ್ತಣ್ಣ, ವೀಣಾ ಸುಂದರ್, ಹೇಮಾದತ್ ಸೇರಿದಂತೆ ಚಿತ್ರದ ತಾರಾಬಳ‍ಗ ಬಹುದೊಡ್ಡದಿದೆ. ವಿಜಯಪ್ರಸಾದ್ ಈ ಚಿತ್ರವನ್ನು ಬರೆದು, ನಿರ್ದೇಶನ ಮಾಡಿದ್ದಾರೆ. ಕೆ.ಎ.ಸುರೇಶ್ ನಿರ್ಮಿಸಿದ್ದಾರೆ.

ಚಿತ್ರತಂಡ ಶೀಘ್ರವೇ ಸಿನಿಮಾ ಬಿಡುಗಡೆ ದಿನಾಂಕವನ್ನು ಅಧಿಕೃತವಾಗಿ ಘೋಷಿಸಲಿದೆ.