ವೆಡ್ಡಿಂಗ್ ಗಿಫ್ಟ್ ನಲ್ಲಿ ಸಾಮಾಜಿಕ ಸಂದೇಶ ಕೊಡಲಿದ್ದಾರೆ ವಿಕ್ರಂ ಪ್ರಭು

ಬಣ್ಣದ ಲೋಕವೇ ಹಾಗೆ. ಇದು ರಂಗು ರಂಗಿನ ಪ್ರಪಂಚ. ಈ ರಂಗಿನ್ ದುನಿಯಾಕೆ ಕಲಾದೇವಿ ಎಲ್ಲರನ್ನ ಕೈ ಬೀಸಿ ಕರೀತಾಳೆ. ಆದ್ರೆ ಕೆಲವರನ್ನ ಮಾತ್ರ ಇಲ್ಲಿ ಗಟ್ಟಿಯಾಗಿ ನೆಲೆ ನಿಲ್ಲುವಂತೆ ಮಾಡ್ತಾಳೆ. ನೆಲೆಯೂರಿ ನಿಲ್ಲಬೇಕು ಅಂದ್ರೆ ಇಲ್ಲಿ ನಮ್ಮ ಶ್ರದ್ದೆಯ ತಪಸ್ಸು ಬಹುಮುಖ್ಯಪಾತ್ರ ವಹಿಸುತ್ತದೆ. ಈಗ್ಯಾಕೆ ಈ ಮಾತು ಅಂದ್ರೆ ಚಿತ್ರ ರಿಲೀಸ್ ಆದ್ಮೆಲೆ ಸುದ್ದಿಯಾಗೋದು ಒಂದು ಗೆಲುವಾದ್ರೆ, ರಿಲೀಸ್ ಗೂ ಮೊದಲೇ ಭರವಸೆ, ಕುತೂಹಲ ಹುಟ್ಟುಹಾಕೋದು ಆ ಚಿತ್ರದ ಗೆಲುವು ಅಥವಾ ನಿರ್ದೇಶಕರ ತಪಸ್ಸಿನ ಫಲವೆಂದರೆ ತಪ್ಪಾದೀತೆ?

ಅದರಲ್ಲಿಯೂ ನೋಡುಗರ ಮನಸಿನಾಳಕ್ಕಿಳಿದು ಪ್ರಭಾವ ಬೀರುವ ಮಾಧ್ಯಮಗಳಲ್ಲಿ ಸಿನೆಮಾ ಮಾಧ್ಯಮ ಪ್ರಮುಖವಾದದ್ದು. ಅದ್ರಲ್ಲೂ ಸಿನೆಮಾ ಬರೀ ಮನರಂಜನೆ ಅಥವಾ ಕಲ್ಪನಾ ಕಥೆಗಳಲ್ಲಿ ಮೂಡಿ ಬರುವುದಕ್ಕಿಂತಲೂ ಈ ಸಮಾಜದಲ್ಲಿ ಘಟಿಸುವ ಪಲ್ಲಟಗಳಿಗೆ ಸೂಕ್ಷ್ಮವಾಗಿ ಕಣ್ಣಾದರೆ, ಖಂಡಿತವಾಗಿಯೂ ಇದು ನಮ್ಮದೇ, ನಮ್ಮ ನಡುವಿನ ಕಥೆಗಳೇ ಅನ್ನಿಸುವಂಥಾ ಸಿನಿಮಾಗಳು ಜೀವ ಪಡೆಯಲು ಸಾಧ್ಯವಾಗುತ್ತಿರಲಿಲ್ಲ. ಈಗ ಇಂಥದ್ದೇ ಒಂದು ಸಾಹಸಕ್ಕೆ ನಿರ್ದೇಶಕ ವಿಕ್ರಂ ಪ್ರಭು ಹೊರಟಿದ್ದು, ವೆಡ್ಡಿಂಗ್ ಗಿಫ್ಟ್ ಎಂಬ ಚಿತ್ರದ ಮೂಲಕ ಸಖತ್ ಸುದ್ದಿಯಾಗ್ತಿರೋದು ಗೊತ್ತಿರೋ ವಿಚಾರ.

ಈಗಾಗಲೇ ರಿಲೀಸ್ ಆಗಿರುವ ಟ್ರೈಲರ್, ಟೀಸರ್, ಹಾಡುಗಳು, ಹಾಗೂ ಚಿತ್ರದ ಪ್ರಚಾರ ಪ್ರೆಸ್ ಮೀಟ್ ಗಳಲ್ಲಿ ಹೊರಬಂದ ವಿಚಾರಗಳಿಂದ ವೆಡ್ಡಿಂಗ್ ಗಿಫ್ಟ್ ಚಿತ್ರದಲ್ಲಿ ಸೆಕ್ಷನ್ 498A ಹೇಗೆಲ್ಲ ದುರ್ಬಳಕೆ ಆಗ್ತಾಯಿದೆ? ಮತ್ತು ಇದರಿಂದ ಸಮಾಜಕ್ಕೊಂದು ಸಂದೇಶವನ್ನೂ ಸಾರಹೊರಟಿದೆ. ಹೀಗೆ ಎಲ್ಲ ಪ್ರೇಕ್ಷಕರಲ್ಲಿ ನಾನಾ ಭಗೆಯ ನಿರೀಕ್ಷೆ ಹುಟ್ಟುಹಾಕಿರುವ ವೆಡ್ಡಿಂಗ್ ಗಿಫ್ಟ್ ಇದೇ ಜುಲೈ 8ರಂದು ರಾಜ್ಯಾದ್ಯಂತ ತೆರೆಗೆ ಬರಲಿದೆ.

Wedding Gift Trailer: ಪುರುಷರ ಮೇಲಾಗೋ ದೌರ್ಜನ್ಯಕ್ಕೆ ಕೈಗನ್ನಡಿ!

ನಿರ್ದೇಶಕನ ಕ್ಯಾಪ್ ತೊಟ್ಟು ಗಾಂಧಿ ನಗರದಲ್ಲಿ ನೆಲೆನಿಲ್ಲಬೇಕು, ತನ್ನ ಸಿನೆಮಾಗಳ ಮೂಲಕ ಸಮಾಜಕ್ಕೊಂದು ಸಂದೇಶ, ಅರಿವು, ಜಾಗೃತಿ ಮೂಡಿಸಬೇಕೆಂಬ ಹಂಬಲ ಹೊತ್ತು ಬಂದವರು ನಿರ್ದೇಶಕ ವಿಕ್ರಂ ಪ್ರಭು. ಹಾಗಂತ ಇವರೇನು ಚಿತ್ರರಂಗಕ್ಕೆ ಹೊಸಬರಲ್ಲ. ಈ ಮೊದಲೇ ಎಸ್‌ವಿ ರಾಜೇಂದ್ರ ಸಿಂಗ್ ಬಾಬು ಗರಡಿ ಸೇರಿ ಹಲವು ವರ್ಷಗಳ ಕಾಲ ಚಿತ್ರರಂಗದಲ್ಲಿ ನಿರ್ದೇಶನ ವಿಭಾಗದಲ್ಲಿ ಅನುಭವ ಹೊಂದಿದವರು. ತದನಂತರ ವೈಯುಕ್ತಿಕ ಕಾರಣದಿಂದ ಚಿತ್ರರಂಗದಿಂದ ದೂರ ಉಳಿದಿದ್ದರು. ಆದ್ರೆ ಮತ್ತದೇ ಸಿನೆಮಾ ಗುಂಗು ಬಿಟ್ಟು ಬಿಡದೇ ಕಾಡಿದಾಗ, ಮನರಂಜನೆ ಜೊತೆಗೆ ಕಮರ್ಷಿಯಲ್ ಎಳೆಯನ್ನೂ ಬಿಡದೇ ಸಾಮಾಜಿಕ ಸಂದೇಶ ಹೊತ್ತ ವೆಡ್ಡಿಂಗ್ ಗಿಫ್ಟ್ ಕಥೆ ರೂಪುಗೊಂಡಿದ್ದು ಎಂದು ಅವರೇ ಹೇಳುತ್ತಾರೆ. ನೈಜ ಘಟನಾವಳಿಗಳನ್ನು ಆಧರಿಸಿ, ಒಂದಷ್ಟು ಫೀಲ್ಡ್ ವರ್ಕ್ ಮಾಡಿ ಅವರು ಕಥೆಯೊಂದನ್ನು ಸಿದ್ಧಪಡಿಸಿಕೊಂಡಿದ್ದರು. ನಂತರ ತಾವೇ ನಿರ್ಮಾಣದ ಹೊಣೆಯನ್ನೂ ಹೊತ್ತುಕೊಂಡು ನಿರ್ದೇಶಕನಾಗೋ ಸಾಹಸಕ್ಕೆ ಕೈ ಹಾಕಿದ್ದರು.

Wedding Gift: ಡಿವೋರ್ಸ್‌ನ ಮಾನಸಿಕ ಒತ್ತಡ ನಾನೂ ಅನುಭವಿಸಿದ್ದೀನಿ: ಸೋನು ಗೌಡ

ಹೆಣ್ಣಿನ ರಕ್ಷಣೆಗಾಗಿ ಇರುವ ಕಾನೂನುಗಳೇ ಅವಳ ಅಸ್ತ್ರವಾಗಿ ಚಂದದ ಮದುವೆ ಮುರಿಯುವ ಮತ್ತು ಮುಗ್ಧ ಗಂಡನ ಮೇಲೆ ಜಿದ್ದಿಗೆ ಬೀಳುವ ಹೆಣ್ಣುಮಗಳೊಬ್ಬಳ ಕಥೆಯೇ ವೆಡ್ಡಿಂಗ್ ಗಿಫ್ಟ್ ನ ಜೀವಾಳ.ಚಿತ್ರದ ಕಥೆ ಗಂಭೀರವಾಗಿದ್ದರೂ ಕೂಡಾ ಈ ಚಿತ್ರದಲ್ಲಿ ಮನೋರಂಜನಾತ್ಮಕ ಗುಣಗಳು ಯಥೇಚ್ಛವಾಗಿವೆಯಂತೆ. ವಿಕ್ರಂ ಪ್ರಭು ಫಿಲಂಸ್ ಲಾಂಛನದಲ್ಲಿ ನಿರ್ಮಾಣಗೊಂಡಿರುವ ಈ ಚಿತ್ರಕ್ಕೆ ಉದಯ್‌ಲೀಲಾ ಛಾಯಾಗ್ರಹಣ, ಬಾಲಚಂದ್ರ ಪ್ರಭು ಸಂಗೀತ, ವಿಜೇತ್ ಚಂದ್ರ ಸಂಕಲನವಿದೆ. ಸೋನುಗೌಡ ನಾಯಕಿಯಾಗಿ, ನಿಶಾನ್ ನಾಯಕನಾಗಿ ನಟಿಸಿದರೆ, ಪ್ರೇಮಾ ಲಾಯರ್ ಆಗಿ ಕಮ್ ಬ್ಯಾಕ್ ಮಾಡಿದ್ದಾರೆ. ಅಚ್ಯುತ ಕುಮಾರ್, ಪವಿತ್ರಾ ಲೋಕೇಶ್ ಸೇರಿದಂತೆ ಒಂದೊಳ್ಳೆ ತಾರಾಬಳಗ ಈ ಚಿತ್ರಕ್ಕಿದ್ದು, ಸದ್ಯ ಭಾರಿ ಕುತೂಹಲ ಮತ್ತು ಸಂಚಲನ ಸೃಷ್ಟಿಸಿರುವ ವಿಕ್ರಂ ಪ್ರಭು ರವರ ಕನಸಿನ ಕೂಸು ವೆಡ್ಡಿಂಗ್ ಗಿಫ್ಟ್ ಚಿತ್ರ ಜುಲೈ 8 ರಂದು ತೆರೆಕಾಣೋದೊಂದೇ ಬ್ಯಾಲೆನ್ಸ್ ಇದೆ.

YouTube video player