ವಿನಾ ಕಾರಣ ಜಿದ್ದಿಗೆ ಬಿದ್ದ ಹೆಣ್ಣೊಬ್ಬಳು ತನ್ನ ಗಂಡನನ್ನು ಕಾನೂನಿನ ಮೂಲಕ ಹೇಗೆಲ್ಲ ಹಿಂಸಿಸುತ್ತಾಳೆಂಬುದರ ಸೂಕ್ಷ್ಮ ನೋಟಗಳು ಈ ಟ್ರೈಲರ್‌ನಲ್ಲಿ ಜಲಕ್ ತೋರಿಸುವ ಮೂಲಕ ಸಿನೆಮಾ ನೋಡುವ ಕಾತುರತೆಯನ್ನ ಹೆಚ್ಚಿಸೋದಂತೂ ನಿಜ. 

ವೆಡ್ಡಿಂಗ್ ಗಿಫ್ಟ್.. ಸಧ್ಯ ಸ್ಯಾಂಡಲ್‌ವುಡ್‌ನಲ್ಲಿ ಹೊಸ ಅಲೆಯನ್ನ ಎಬ್ಬಿಸುತ್ತಿರುವ ಚಿತ್ರ. ನವ ನಿರ್ದೇಶಕ ವಿಕ್ರಂ ಪ್ರಭು ಸಾರಥ್ಯದ ಬಹುನಿರೀಕ್ಷಿತ ಚಿತ್ರ ವೆಡ್ಡಿಂಗ್ ಗಿಫ್ಟ್ ಚಿತ್ರದಿಂದ ಇತ್ತೀಚೆಗಷ್ಟೇ ಪರಿಣಾಮಕಾರಿಯಾದ ಟೀಸರ್ ಒಂದು ಲಾಂಚ್ ಆಗಿತ್ತು. ಟೀಸರ್ ನೋಡಿದ್ಮೇಲಂತೂ ಸಿನೆಮಾ ಮೇಲಿನ ಭರವಸೆ ಹೆಚ್ಚಾಗಿತ್ತು, ಇದೀಗ ಚಿತ್ರತಂಡ ಈ ಕ್ಯೂರಿಯಾಸಿಟಿಯನ್ನ ದುಪ್ಪಟ್ಟಾಗಿಸಿದೆ. 

ಹೌದು ಟೀಸರ್ ಗುಂಗಲ್ಲೇ ಇದ್ದ ಸಿನಿಪ್ರಿಯರಿಗೆ ವೆಡ್ಡಿಂಗ್ ಗಿಫ್ಟ್ನ ಟ್ರೈಲರನ್ನು ರಿಲೀಸ್ ಮಾಡಿದ್ದಾರೆ. ಇದು , ಕಥಾ ಹಂದರದ ಹೈಲೇಟ್‌ಗಳ ಮೇಲೆ ಬೆಳಕು ಚೆಲ್ಲಿದ್ದು, ಸಸ್ಪೇನ್ಸ್‌ಗಳನ್ನ ಕಾದಿಟ್ಟು ಕೊಂಡೇ ನೋಡುಗರ ತಲೆಗೆ ಹುಳ ಬಿಟ್ಟಂತಿದ್ದು, ಸಖತ್ ಹರಿತವಾಗಿದೆ.

ನೈಜ ಘಟನೆ ಆಧಾರಿತ ಕಥೆಗಳನ್ನ ತೆರೆಯ ಮೇಲೆ ತಂದು ಪರಿಣಾಮಕಾರಿಯಾಗಿ ಗೆದ್ದ ಸಿನೆಮಾಗಳು ಸಾಕಷ್ಟಿವೆ. ಹಾಗಿರುವಾಗ ನಿಜ ಜೀವನದ ಕಥೆಗಳನ್ನೇ ಸ್ಪೂರ್ತಿಯಾಗಿಟ್ಟುಕೊಂಡು ಸಮಾಜಕ್ಕೊಂದು ಸಂದೇಶ ಅಥವಾ ಸುಧಾರಣೆಗಾಗಿ ಇರುವ ಕಾನೂನು ವ್ಯವಸ್ಥೆಗಳ ದುರ್ಬಳಕೆ ಬಗ್ಗೆ ಗಮನ ಹರಿಸಿರೋ ಸಿನೆಮಾವಾದ್ರೆ ಸಹಜವಾಗಿಯೇ ಅದರತ್ತ ಗಮನ ಹೋಗಿಯೇ ಹೋಗತ್ತೆ. ಈ ನಿಟ್ಟಿನಲ್ಲಿ ನಿರ್ದೇಶಕರು ಆಗಲೇ ಗೆದ್ದಂತಿದೆ. 

ವಿಕ್ರಂ ಪ್ರಭು ಫಿಲಂಸ್ ಲಾಂಛನದಲ್ಲಿ ವಿಕ್ರಂ ಪ್ರಭು ಅವರೇ ನಿರ್ಮಾಣ ಮಾಡಿ, ನಿರ್ದೇಶನದ ಜವಾಬ್ದಾರಿಯನ್ನೂ ಹೊತ್ತಿರುವ ವೆಡ್ಡಿಂಗ್ ಗಿಫ್ಟ್ ಟ್ರೈಲರ್ ಮೂಲಕ ಗೆಲುವಿನ ಮೊದಲ ಮೆಟ್ಟಿಲೇರಿ ನಿಂತಿದೆ. ಯಾಕಂದ್ರೆ ಈಗ ರಿಲೀಸ್ ಆಗಿರುವ ಟ್ರೈಲರ್‌ನಲ್ಲಿ ಒಟ್ಟು ಕಥೆಯನ್ನ ಗೌಪ್ಯವಾಗಿಟ್ಟುಕೊಂಡೇ, ಪ್ರಸ್ತುತ ವಾತಾವರಣದ ದಾಂಪತ್ಯದ ಆಲೋಚನೆಗಳು, ಅದರೊಳಗಿನ ದೃಷ್ಯಾವಳಿಗಳು ಕೌಟುಂಬಿಕ ದೌರ್ಜನ್ಯ , ಹೆಣ್ಣಿನ ರಕ್ಷಣೆಗಾಗಿ ಇರುವ ಕಾನೂನುಗಳನ್ನ ಹೆಣ್ಣು ಮಕ್ಕಳು ದುರ್ಬಳಕೆ ಮಾಡಿಕೊಳ್ಳುವುದರಿಂದ ಮುಗ್ದ ಗಂಡಸರ ಮೇಲಾಗೋ ದೌರ್ಜನ್ಯದಂತ ಸೂಕ್ಷ್ಮ ಪಲ್ಲಟದತ್ತ ಫೋಕಸ್ ಮಾಡಿದ್ದಾರೆ. 

ವಿನಾ ಕಾರಣ ಜಿದ್ದಿಗೆ ಬಿದ್ದ ಹೆಣ್ಣೊಬ್ಬಳು ತನ್ನ ಗಂಡನನ್ನು ಕಾನೂನಿನ ಮೂಲಕ ಹೇಗೆಲ್ಲ ಹಿಂಸಿಸುತ್ತಾಳೆಂಬುದರ ಸೂಕ್ಷ್ಮ ನೋಟಗಳು ಈ ಟ್ರೈಲರ್‌ನಲ್ಲಿ ಜಲಕ್ ತೋರಿಸುವ ಮೂಲಕ ಸಿನೆಮಾ ನೋಡುವ ಕಾತುರತೆಯನ್ನ ಹೆಚ್ಚಿಸೋದಂತೂ ನಿಜ. 

ಹಲವು ವರ್ಷಗಳ ನಂತರ ಮತ್ತೆ ಬಣ್ಣ ಹಚ್ಚಿರುವ ನಟಿ ಪ್ರೇಮಾರದ್ದು ಈ ಚಿತ್ರದಲ್ಲಿ ವಕೀಲೆ ಪಾತ್ರ. ಲಾಯರ್ ಆಗಿ ಅಭಿನಯಿಸಿರುವ ಪ್ರೇಮಾ ಮತ್ತು ಅಚ್ಯುತ್ ಕುಮಾರ್ ಪಾತ್ರಗಳು ಮೊದಲ ನೋಟದಲ್ಲಿಯೇ ಗಮನಸೆಳೆಯುವಂತೆ ಚಿತ್ರಿಸಲಾಗಿದೆ. 

ಈ ಚಿತ್ರಕ್ಕೆ ಉದಯ್ ಲೀಲಾ ಛಾಯಾಗ್ರಹಣ, ಬಾಲಚಂದ್ರ ಪ್ರಭು ಸಂಗೀತ ನಿರ್ದೇಶನ, ವಿಜೇತ್ ಚಂದ್ರ ಸಂಕಲನವಿದೆ. ಪ್ರೇಮಾ, ನಿಶಾನ್, ಸೋನು ಗೌಡ, ಪವಿತ್ರ ಲೋಕೇಶ್, ಅಚ್ಯುತ್ಕು ಮಾರ್ ಮುಂತಾದವರ ತಾರಾಗಣವಿದ್ದು ಇದೇ ಜುಲೈ 8ಕ್ಕೆ ರಾಜ್ಯಾದ್ಯಂತ ಚಿತ್ರಮಂದಿರಕ್ಕೆ ಪ್ರವೇಶಿಸಲಿದೆ.

YouTube video player