Asianet Suvarna News Asianet Suvarna News

Puneeth Rajkumar: ಅಪ್ಪು ಹುಟ್ಟುಹಬ್ಬಕ್ಕೆ ಸಂತೋಷ್ ಆನಂದ್‌ರಾಮ್ ಕಡೆಯಿಂದ ಸ್ಪೆಷಲ್ ಗಿಫ್ಟ್!

ಕನ್ನಡ ಚಿತ್ರರಂಗದ ರಾಜರ ರಾಜ ಪವರ್‌ ಸ್ಟಾರ್ ಪುನೀತ್ ರಾಜ್ ಕುಮಾರ್ ಹುಟ್ಟು ಹಬ್ಬವನ್ನು ನಾನಾ ರೀತಿಯಲ್ಲಿ ಆಚರಿಸಲು ಸ್ಯಾಂಡಲ್‌ವುಡ್‌ ಸಿದ್ಧತೆ ಮಾಡಿಕೊಂಡಿದ್ದು, ನಿರ್ದೇಶಕ ಸಂತೋಷ್ ಆನಂದ್ ರಾಮ್ ವಿಶೇಷವಾದ ಕೊಡುಗೆಯನ್ನು ನೀಡಲು ಸಜ್ಜಾಗಿದ್ದಾರೆ.

Director Santhosh Ananddram will Release Tribute Song to Puneeth Rajkumar on March 17th gvd
Author
Bangalore, First Published Mar 12, 2022, 6:55 PM IST

ಕನ್ನಡ ಚಿತ್ರರಂಗದ ರಾಜರ ರಾಜ ಪವರ್‌ ಸ್ಟಾರ್ ಪುನೀತ್ ರಾಜ್‌ಕುಮಾರ್ (Puneeth Rajkumar) ಹುಟ್ಟುಹಬ್ಬವನ್ನು ನಾನಾ ರೀತಿಯಲ್ಲಿ ಆಚರಿಸಲು ಸ್ಯಾಂಡಲ್‌ವುಡ್‌ (Sandalwood) ಸಿದ್ಧತೆ ಮಾಡಿಕೊಂಡಿದೆ. ಅಪ್ಪು ಇಲ್ಲವಾದರು, ಅವರು ನಮ್ಮೊಂದಿಗೆ ಇದ್ದಾರೆ ಎನ್ನುವ ಭಾವದಿಂದ ಅಭಿಮಾನಿಗಳು (Fans) ಜಾತ್ರೆ ಮಾಡಲು ಶುರು ಮಾಡಿದ್ದಾರೆ. ವಿಶೇಷವಾಗಿ ಅಂದೇ ಅವರ ನಟನೆಯ 'ಜೇಮ್ಸ್' (James) ಸಿನಿಮಾ ಬಿಡುಗಡೆ ಆಗುತ್ತಿರುವುದರಿಂದ ಈಗಾಗಲೇ ಥಿಯೇಟರ್‌ಗಳು ಸಿಂಗಾರಗೊಂಡಿವೆ. ಕೆಲವು ಕಡೆ ಪುನೀತ್ ಹೆಸರಿನಲ್ಲಿ ರಕ್ತದಾನ, ಅಂಗಾಂಗ ದಾನ, ಅನ್ನ ಸಂತರ್ಪಣೆ ಹೀಗೆ ಅನೇಕ ಕೆಲಸಗಳು ನಡೆಯುತ್ತಿವೆ. ಕೇವಲ ಅಭಿಮಾಗಳು ಮಾತ್ರ ಅಲ್ಲ. ಸಿನಿಮಾದವರಿಗೂ ಪುನೀತ್ ರಾಜ್‌ಕುಮಾರ್ ಅವರ ಹುಟ್ಟುಹಬ್ಬ ವಿಶೇಷ. 

ಹಾಗಾಗಿ ನಿರ್ದೇಶಕ ಸಂತೋಷ್ ಆನಂದ್‌ರಾಮ್ (Santhosh Ananddram) ವಿಶೇಷವಾದ ಕೊಡುಗೆಯನ್ನು ನೀಡಲು ಸಜ್ಜಾಗಿದ್ದಾರೆ. ಹೌದು! ಪುನೀತ್ ರಾಜ್‌ಕುಮಾರ್ ಅವರ ಹುಟ್ಟುಹಬ್ಬಕ್ಕೆ ವಿಶೇಷ ಹಾಡನ್ನು ಮಾಡಿದ್ದಾರೆ ಸಂತೋಷ್ ಆನಂದ್ ರಾಮ್. ಈ ಹಾಡು ಪುನೀತ್ ವ್ಯಕ್ತಿತ್ವವನ್ನು ಸಾರುವಂತಹ ಗೀತೆಯಂತೆ. ಈ ಗೀತೆಯನ್ನು ಖ್ಯಾತ ಗಾಯಕ ವಿಜಯ್ ಪ್ರಕಾಶ್ (Vijay Prakash) ಹಾಡಿದ್ದು, ಎಸ್ ತಮನ್ (S Thaman) ಅವರ ಸಂಗೀತ ಸಂಯೋಜನೆಯಲ್ಲಿ ಮೂಡಿ ಬರಲಿದೆ. ವಿಜಯ್ ಪ್ರಕಾಶ್ ಮತ್ತು ಸಂತೋಷ್ ಆನಂದ್ ರಾಮ್ ಕಾಂಬಿನೇಷನ್‌ನಲ್ಲಿ ಮೂಡಿ ಬಂದಿದ್ದ 'ಗೊಂಬೆ ಹೇಳತೈತೆ' ಹಾಡು ದಾಖಲೆ ರೀತಿಯಲ್ಲಿ ಕೇಳುಗರನ್ನು ತಲುಪಿತ್ತು. ಈ ಹಾಡು ಕೂಡ ಅದೇ ಮಾದರಿಯಲ್ಲಿಯೇ ಬರಲಿದೆಯಂತೆ.

James 2022: 'ಜೇಮ್ಸ್' ಪ್ರೀ-ರಿಲೀಸ್ ಹೊಸಪೇಟೆಯಲ್ಲಿ ಮಾಡಿ: ನಿರ್ಮಾಪಕರಿಗೆ ಅಭಿಮಾನಿಗಳ ಮನವಿ

ಈ ವಿಚಾರವನ್ನು ಸ್ವತಃ ಸಂತೋಷ್ ಆನಂದ್ ರಾಮ್ ಅವರೇ ತಮ್ಮ ಸಾಮಾಜಿಕ ಜಾಲತಾಣ (Social Media) ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಸಂತೋಷ್ ಆನಂದ್ ರಾಮ್ ಮತ್ತು ಪುನೀತ್ ರಾಜ್‌ಕುಮಾರ್ ಕಾಂಬಿನೇಷನ್‌ನಲ್ಲಿ 'ರಾಜಕುಮಾರ' (Rajakumara) ಹಾಗೂ 'ಯುವರತ್ನ' (Yuvarathnaa) ಸಿನಿಮಾಗಳು ಬಂದಿದ್ದು, ಎರಡೂ ಚಿತ್ರಗಳು ಸೂಪರ್ ಹಿಟ್ ಆಗಿತ್ತು. ಮಾತ್ರವಲ್ಲದೇ, ಹಾಡು ಮತ್ತು ಡಾನ್ಸ್ ಮೂಲಕ ಅತೀ ಹೆಚ್ಚು ಸಿನಿರಸಿಕರನ್ನು ತಲುಪಿತ್ತು. ಇನ್ನೇನು ಮೂರನೇ ಸಿನಿಮಾ ಕೂಡ ಮೂಡಿ ಬರಬೇಕಿತ್ತು. ಅಷ್ಟರಲ್ಲಿ ಪುನೀತ್ ಅಗಲಿದರು. ಇದೀಗ ಹಾಡಿನ ಮೂಲಕ ಪುನೀತ್ ಅವರನ್ನು ನೆನಪಿಸಿಕೊಳ್ಳುವ ಪ್ರಯತ್ನವನ್ನು ಸಂತೋಷ್ ಆನಂದ್ ರಾಮ್ ಮಾಡಿದ್ದಾರೆ.

Director Santhosh Ananddram will Release Tribute Song to Puneeth Rajkumar on March 17th gvd

ಸದ್ಯ ಸಂತೋಷ್ ಆನಂದ್ ರಾಮ್ ಈ ನಿರ್ಧಾರಕ್ಕೆ ಅಭಿಮಾನಿಗಳು ಖುಷಿಯಾಗಿದ್ದು, ಜೊತೆಗೆ ಪ್ರತಿ ವರ್ಷ ಹೀಗೆ ಒಂದು ಹಾಡು ಮಾಡಿ, ಈ ಹಾಡು ನಮ್ಮ ಪಾಲಿನ ರಾಷ್ಟ್ರ ಗೀತೆ ಆಗಲಿದೆ ಅಂತೆಲ್ಲಾ ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ. ಇನ್ನು 'ಜೇಮ್ಸ್‌' ಚಿತ್ರ ಇದೇ ಮಾರ್ಚ್ 17ರಂದು ಏಕಕಾಲಕ್ಕೆ ಕನ್ನಡದ ಜತೆಗೆ ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿಯಲ್ಲಿ ಬಿಡುಗಡೆ ಆಗುತ್ತಿದ್ದು, ಹೊರ ದೇಶಗಳಲ್ಲೂ 'ಜೇಮ್ಸ್‌' ದರ್ಶನವಾಗಲಿದೆ. ಈಗಾಗಲೇ 'ಜೇಮ್ಸ್'  ಚಿತ್ರದ 'ಟ್ರೇಡ್‌ಮಾರ್ಕ್' ಮತ್ತು 'ಸಲಾಂ ಸೋಲ್ಜರ್' ಹಾಡುಗಳು ವೈರಲ್ ಆಗಿದ್ದು, ಪ್ರತಿಯೊಬ್ಬರು ಪುನೀತ್ ರಾಜ್‌ಕುಮಾರ್ ಕೊನೆಯ ಚಿತ್ರವನ್ನು ನೋಡಬೇಕೆಂದು ತುದಿಗಾಲಿನಲ್ಲಿ ಕಾಯುತ್ತಿದ್ದಾರೆ.

Shiva Rajkumar: 'ರಣರಂಗ' ಚಿತ್ರಕ್ಕೆ ಸಂತೋಷ್ ಆನಂದ್‌ರಾಮ್ ಆಕ್ಷನ್ ಕಟ್

ಇನ್ನು 'ಜೇಮ್ಸ್'​ ಚಿತ್ರಕ್ಕೆ ಸೆನ್ಸಾರ್​ನಲ್ಲಿ ಯಾವುದೇ ಕಟ್​ ಇಲ್ಲದೆ ಯು/ಎ ಪ್ರಮಾಣಪತ್ರ (UA Censor Certificate) ಸಿಕ್ಕಿದ್ದು, ಪುನೀತ್​ ಪಾತ್ರಕ್ಕೆ ಅವರ ಸಹೋದರ ಶಿವರಾಜ್​ಕುಮಾರ್ (Shivarajkumar) ಡಬ್​ ಮಾಡಿದ್ದಾರೆ. ಈಗಾಗಲೇ ಚಿತ್ರದ ಟಿಕೆಟ್​ ಬುಕಿಂಗ್​ ಓಪನ್​ ಆಗಿದ್ದು, ಟಿಕೆಟ್​ ಖರೀದಿಸಲು ಪುನೀತ್​ ರಾಜ್​ಕುಮಾರ್​ ಫ್ಯಾನ್ಸ್​ ಮುಗಿ ಬಿದ್ದಿದ್ದಾರೆ. 'ಜೇಮ್ಸ್' ಚಿತ್ರದಲ್ಲಿ ಪುನೀತ್ ರಾಜ್‌ಕುಮಾರ್ ಡಬಲ್‌ ಶೇಡ್‌ನಲ್ಲಿ ಕಾಣಿಸಿಕೊಂಡಿದ್ದು, ಈಗಾಗಲೇ ಪವರ್ ಆರ್ಮಿ ಆಫೀಸರ್ ಆಗಿ ಸಿನಿರಸಿಕರಿಗೆ ಕಿಕ್ ಕೊಟ್ಟಿದ್ದಾರೆ. ಪುನೀತ್‌ಗೆನಾಯಕಿಯಾಗಿ ಕಾಲಿವುಡ್‌ನ ಪ್ರಿಯಾ ಆನಂದ್ (Priya Anand) ಜೋಡಿಯಾಗಿದ್ದಾರೆ. ಇದರ ಜೊತೆಗೆ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್, ಶರತ್ ಕುಮಾರ್, ಶ್ರೀಕಾಂತ್,‌ ಅವಿನಾಶ್, ಸಾಧು ಕೋಕಿಲ, ರಂಗಾಯಣ ರಘು, ಚಿಕ್ಕಣ್ಣ, ಸೇರಿದಂತೆ ದೊಡ್ಡ ತಾರಬಳಗ ಈ ಚಿತ್ರಕ್ಕಿದೆ.
 

Follow Us:
Download App:
  • android
  • ios