Shiva Rajkumar: 'ರಣರಂಗ' ಚಿತ್ರಕ್ಕೆ ಸಂತೋಷ್ ಆನಂದ್‌ರಾಮ್ ಆಕ್ಷನ್ ಕಟ್

ಶಿವರಾಜ್‌ಕುಮಾರ್ ಹಾಗೂ ಸಂತೋಷ್ ಆನಂದ್‌ರಾಮ್ ಜತೆಯಾಗುತ್ತಿದ್ದಾರೆ. ಇವರಿಬ್ಬರ ಕಾಂಬಿನೇಶನ್‌ನಲ್ಲಿ ಹೊಸದೊಂದು ಸಿನಿಮಾ ಸೆಟ್ಟೇರಲಿದೆ ಎನ್ನುವ ಸುದ್ದಿ ಈಗ ಗಾಂಧಿನಗರದಲ್ಲಿ ಜೋರಾಗಿಯೇ ಸದ್ದು ಮಾಡುತ್ತಿದೆ. 

Shivarajkumar Doing New Movie With Hombale Production and Santhosh Ananddram Directional gvd

ಶಿವರಾಜ್‌ಕುಮಾರ್ (Shivarajkumar) ಹಾಗೂ ಸಂತೋಷ್ ಆನಂದ್‌ರಾಮ್ (Santhosh Ananddram) ಜತೆಯಾಗುತ್ತಿದ್ದಾರೆ. ಇವರಿಬ್ಬರ ಕಾಂಬಿನೇಶನ್‌ನಲ್ಲಿ ಹೊಸದೊಂದು ಸಿನಿಮಾ ಸೆಟ್ಟೇರಲಿದೆ ಎನ್ನುವ ಸುದ್ದಿ ಈಗ ಗಾಂಧಿನಗರದಲ್ಲಿ ಜೋರಾಗಿಯೇ ಸದ್ದು ಮಾಡುತ್ತಿದೆ. ಶಿವಣ್ಣ ಅವರ ಜತೆಗೆ ಸಿನಿಮಾ ಮಾಡಬೇಕು ಎಂಬುದು ‘ರಾಜಕುಮಾರ’ (Rajakumara) ಸೂತ್ರಧಾರನ ಬಹು ದಿನಗಳ ಕನಸಂತೆ. ಅದು ಈಗ ಈಡೇರುವ ಹಂತಕ್ಕೆ ಬಂದಿದೆ ಎಂಬುದು ಸದ್ಯದ ಸುದ್ದಿ.

ಹಾಗಾದರೆ ಇವರಿಬ್ಬರ ಕಾಂಬಿನೇಶನ್ ಚಿತ್ರಕ್ಕೆ ನಿರ್ಮಾಪಕರು ಯಾರು ಎನ್ನುವ ಕುತೂಹಲಕ್ಕೆ ಈಗ ಕೇಳಿ ಬರುತ್ತಿರುವುದು ವಿಜಯ್ ಕಿರಗಂದೂರು ಅವರದ್ದು. ಹೊಂಬಾಳೆ ಫಿಲಮ್ಸ್ (Hombale Films) ಮೂಲಕ ಈ ಚಿತ್ರ ಸೆಟ್ಟೇರುತ್ತಿರುವುದಾಗಿ ಹೇಳಲಾಗುತ್ತಿದೆ. ಆ ಮೂಲಕ ಸೆಂಚುರಿ ಸ್ಟಾರ್ ಖಾತೆಗೆ ಮತ್ತೊಂದು ಹೊಸ ಸಿನಿಮಾ ಸೇರುತ್ತಿದೆ.ಹಾಗೆ ನೋಡಿದರೆ ‘ರಾಜಕುಮಾರ’ ಚಿತ್ರದ ನಂತರ ‘ರಣರಂಗ’ (Ranaranga) ಹೆಸರಿನ ಸಿನಿಮಾ ಸೆಟ್ಟೇರಬೇಕಿತ್ತು. ಆದರೆ, ಸಂತೋಷ್ ಆನಂದ್ ರಾಮ್ ಅವರು ‘ಯುವರತ್ನ’ ಚಿತ್ರವನ್ನು ಕೈಗೆತ್ತಿಕೊಂಡರು. ‘ರಣರಂಗ’ ಚಿತ್ರದ ಮಾತು ಹಾಗೆ ಉಳಿಯಿತು. 

ಈಗ ಮತ್ತೆ ಇವರಿಬ್ಬರು ಜತೆಯಾಗುತ್ತಿದ್ದಾರೆ ಎನ್ನುವ ಸುದ್ದಿಯ ಹಿಂದೆ ಅದೇ ‘ರಣರಂಗ’ ಚಿತ್ರದ ಹೆಸರು ಕೇಳಿ ಬರುತ್ತಿದೆ. ಹಾಗಾದರೆ ಇವರಿಬ್ಬರ ಜೋಡಿಯಲ್ಲಿ ‘ರಣರಂಗ’ ಹೆಸರಿನ ಸಿನಿಮಾ ಶುರುವಾಗಲಿದೆಯೇ ಎನ್ನುವ ಕುತೂಹಲಕ್ಕೆ ಉತ್ತರ ದೊರೆಯಬೇಕು ಎನ್ನುವುದಾದರೆ ಮತ್ತಷ್ಟು ದಿನ ಕಾಯಬೇಕಿದೆ. ಸದ್ಯಕ್ಕೆ ಸಂತೋಷ್ ಆನಂದ್‌ರಾಮ್ ಅವರು ಜಗ್ಗೇಶ್ ನಟನೆಯ ‘ರಾಘವೇಂದ್ರ ಸ್ಟೋರ್’ (Raghavendra Store) ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ‘ರಾಘವೇಂದ್ರ ಸ್ಟೋರ್’ನಿಂದ ಮುಂದೆ ಶಿವನ ಸಮುದ್ರದತ್ತ ಮುಖ ಮಾಡಲಿದ್ದಾರಂತೆ. ಅರ್ಥಾತ್ ಶಿವಣ್ಣ ಚಿತ್ರವನ್ನು ಕೈಗೆತ್ತಿಕೊಳ್ಳಲಿದ್ದಾರಂತೆ.

Shiva Rajkumar: ಸಂಕ್ರಾಂತಿ ಹಬ್ಬಕ್ಕೆ 'ಬೈರಾಗಿ' ಚಿತ್ರದ ಪೋಸ್ಟರ್ ರಿಲೀಸ್

ಇನ್ನು ಶಿವಣ್ಣ ಪ್ಯಾನ್ ಇಂಡಿಯಾ ಸ್ಟಾರ್ ಆಗಲು ಶಿವಣ್ಣ ಸಜ್ಜಾಗುತ್ತಿದ್ದು, ಸೆಂಚ್ಯೂರಿ ಸ್ಟಾರ್‌ಗಾಗಿ ಬಹುಕೋಟಿ ವೆಚ್ಚದಲ್ಲಿ ಕ್ರೈಂ ಥ್ರಿಲ್ಲರ್ (Crime Thriller) ಸಿನಿಮಾ ಸಿದ್ಧವಾಗುತ್ತಿದೆ. 1970ರ ಕಾಲಘಟ್ಟದ ರೆಟ್ರೋ ಸ್ಟೋರಿಯ ಸಿನಿಮಾ ಇದಾಗಿದ್ದು, 'ಓಂ' (OM) ಸಿನಿಮಾದ ಸತ್ಯನ ರೀತಿ ಮತ್ತೊಂದು ವಿಭಿನ್ನ ಅವತಾರದಲ್ಲಿ ಕಮಾಲ್ ಮಾಡಲು ಶಿವಣ್ಣ ಸಿದ್ಧರಾಗಿದ್ದಾರೆ. ಈ ಚಿತ್ರವನ್ನು 'ಬುದ್ಧಿವಂತ 2' ನಿರ್ದೇಶಕ ಜಯರಾಂ ಅಲಿಯಾಸ್ ಆರ್‌ಜೈ (RJai) ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರಕ್ಕೆ ಇನ್ನೂ ಹೆಸರಿಟ್ಟಿಲ್ಲ.

'ಇದೊಂದು ಹೊಸ ರೀತಿಯ ಕತೆ. ಶಿವಣ್ಣ ಜತೆಗೆ ಈ ಹಿಂದೆ ನಾನು ಕೆಲಸ ಮಾಡಿದ್ದೇನೆ. ಆದರೆ, ಮೊದಲ ಬಾರಿಗೆ ನಿರ್ದೇಶನ ಮಾಡುತ್ತಿದ್ದೇನೆ. 1970ರ ಕಾಲಘಟ್ಟದಲ್ಲಿ ನಡೆಯುವ ರೆಟ್ರೊ ಶೈಲಿಯ ಕತೆಯಾಗಿರುವುದರಿಂದ ಗೆಟಪ್‌ಗಳು ವಿಶೇಷವಾಗಿರುತ್ತವೆ. ಕನ್ನಡದ ಜತೆಗೆ ಬೇರೆ ಬೇರೆ ಭಾಷೆಗಳಲ್ಲೂ ಈ ಸಿನಿಮಾ ಬಿಡುಗಡೆ ಆಗುತ್ತಿದೆ. ಮುಂದಿನ ತಿಂಗಳು ಮೋಷನ್ ಪೋಸ್ಟರ್ ಜತೆಗೆ ಚಿತ್ರಕ್ಕೆ ಅದ್ದೂರಿಯಾಗಿ ಮುಹೂರ್ತ ಮಾಡುವ ಪ್ಲಾನ್ ಮಾಡಿಕೊಂಡಿದ್ದೇವೆ' ಎನ್ನುತ್ತಾರೆ ನಿರ್ದೇಶಕ ಆರ್ ಜೈ. ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸಿನಿಮಾ ಮಾಡಲು ಶಿವಣ್ಣನ ಜೊತೆ ಚಿತ್ರತಂಡ ಮಾತುಕತೆ ನಡೆಸಿ ಒಪ್ಪಿಗೆ ಪಡೆದುಕೊಂಡಿದೆ. ರೆಟ್ರೋ ಸ್ಟೈಲ್ ನ ಮಾಸ್ ಸಿನಿಮಾದಲ್ಲಿ ಶಿವಣ್ಣ ಕಾಣಿಸಿಕೊಳ್ಳಲಿದ್ದಾರೆ. 

ಕೆಲವರು ನನ್ನನ್ನ Unlucky ಅಂದ್ರೂ ಶಿವಣ್ಣ ಮಾತ್ರ ಲಕ್ಕಿ ಅಂತಾರೆ: ಡಾಲಿ ಧನಂಜಯ್

ಭೂಗತ ಲೋಕದ ಕಥೆಯಲ್ಲಿ ಶಿವರಾಜ್​​ಕುಮಾರ್ ನಟಿಸುತ್ತಿರುವ ವಿಚಾರ ಕೇಳಿ ಅವರ ಲಕ್ಷಾಂತರ ಅಭಿಮಾನಿಗಳು ಸಖತ್ ಥ್ರಿಲ್ ಆಗಿದ್ದಾರೆ. ಶಿವಮೊಗ್ಗ ಜಿಲ್ಲೆಯಲ್ಲಿ ನಿಜವಾಗಿ ನಡೆದ ರಕ್ತಸಿಕ್ತ ಕಥೆಯನ್ನಾಧರಿಸಿ ಹೊಸ ಸಿನಿಮಾದ ಸ್ಟೋರಿ ಸಿದ್ಧಗೊಂಡಿದೆ ಎಂದು ತಿಳಿದುಬಂದಿದೆ. ಇತ್ತೀಚೆಗೆ ಬಿಡುಗಡೆಯಾದ ಚಂದನ್ ಶೆಟ್ಟಿ ಹಾಗೂ ರಚಿತಾ ರಾಮ್ ಕಾಂಬಿನೇಶನ್​ 'ಲಕ ಲಕ ಲ್ಯಾಂಬೋರ್ಗಿನಿ' ಹಾಡು ನಿರ್ಮಾಣ ಮಾಡಿದ್ದ ಆರ್.ಕೇಶವ್ (R.Keshav) ಈ ಸಿನಿಮಾಗೆ ಬಂಡವಾಳ ಹೂಡುತ್ತಿದ್ದಾರೆ.  ಬಿಂದ್ಯಾ‌‌ ಮೂವೀಸ್ ಬ್ಯಾನರ್ ಅಡಿಯಲ್ಲಿ ಹೆಸರಿಡದ ಈ ಚಿತ್ರವನ್ನು ಬಹುಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡುತ್ತಿದ್ದಾರೆ. 

Latest Videos
Follow Us:
Download App:
  • android
  • ios