ಸುದೀಪ್ ಮ್ಯಾಕ್ಸ್ ಸಿನಿಮಾ ಹೊಗಳಿ 'ಜೈ ಕಿಚ್ಚ ಬಾಸ್' ಎಂದ ಯಶ್ ಫ್ಯಾನ್ಸ್!
ಇವತ್ತು ಕ್ರಿಸ್‌ಮಸ್ ಅಂತ ನಾವು ಮ್ಯಾಕ್ಸ್ ಮೂವಿ ನೋಡೋಕೆ. ಆದ್ರೆ ಇದು ಕ್ರಿಸ್‌ಮಸ್ ಅಲ್ಲ ಕ್ರಿಸ್ ಮ್ಯಾಕ್ಸ್ ಅಂತ.. ಕ್ರಿಸ್ ಮ್ಯಾಕ್ಸ್ ಅಂತ ಏನಕ್ಕೆ ಅಂದ್ರೆ, ಕಿಚ್ಚ ಸುದೀಪ್ ಅವರದ್ದು ಹೀರೋಯಿನ್ ಇಲ್ಲದೇನೇ, ಈ ತರ ನಮ್ಗೆ ಹಳೇ ಸುದೀಪ್ ಅವ್ರು ಕಾಣಿಸ್ಬಿಟ್ರು..
ಕನ್ನಡ ಚಿತ್ರರಂಗದಲ್ಲಿ ಒಗ್ಗಟ್ಟು ಮೂಡುತ್ತಿದೆಯೇ? ಹೌದು ಎನ್ನಬಹುದೇನೋ! ಏಕಂದರೆ, 5 ವರ್ಷಗಳ ಹಿಂದೆ ಕಿಚ್ಚ ಸುದೀಪ್ (Kichcha Sudeep) ಅವರ ವಿರುದ್ಧ ತಿರುಗಿಬಿದ್ದಿದ್ದ ಯರ್ಶ ಫ್ಯಾನ್ಸ್‌ಗಳು ಈಗ 'ಮ್ಯಾಕ್ಸ್' ಸಿನಿಮಾ ನೋಡಿ ಹೊಗಳಿಕೆ ಸುರಿಮಳೆ ಸುರಿಸಿದ್ದಾರೆ. 'ನಾವು ಯಶ್ (Rocking Star Yash) ಫ್ಯಾನ್ಸ್ ಆಗಿದ್ದರೂ ಸುದೀಪ್ ಅಣ್ಣನ ಸಿನಿಮಾ ನೋಡ್ತೀವಿ, ಅವ್ರನ್ನ ಇಷ್ಟಪಡ್ತೀವಿ' ಎಂದಿದ್ದಾರೆ. ಸುದೀಪ್ ಅವರು ಎಲ್ಲಾ ನಟರನ್ನೂ ಒಗ್ಗೂಡಿಸಲು ನೋಡ್ತಾರೆ, ಅದಕ್ಕೇ ಅವ್ರು ಅಂದ್ರೆ ನಮಗೆ ಇಷ್ಟ. ಕನ್ನಡ ಸಿನಿಮಾರಂಗ ಒಗ್ಗಟ್ಟಿನಿಂದ ಇರಬೇಕು' ಎಂದಿದ್ದಾರೆ. 'ಮ್ಯಾಕ್ಸ್' ನೋಡಿ ಯಶ್ ಫ್ಯಾನ್ಸ್ ಏನಂದಿದ್ದಾರೆ ಅಂತ ಮುಂದೆ ನೋಡಿ...
'ನಮ್ಮ ಕನ್ನಡದ ಬ್ಲಾಕ್ ಬಸ್ಟರ್ ಲಿಸ್ಟ್‌ನಲ್ಲಿ ಈ ಮ್ಯಾಕ್ಸ್ ಕೂಡ ಸೇರಿಕೊಳ್ಳುತ್ತೆ ಅಂತ ಹೇಳೋಕೆ ಇಷ್ಟಪಡ್ತೀನಿ.. ಏನಕ್ಕೆ ಅಂತ ಅಂದ್ರೆ, ಫಿಲಂ ಅಷ್ಟು ಸಕತ್ತಾಗಿದೆ. ನಾನು ಟ್ರೇಲರ್ ನೋಡಿದಾಗ, ಹಳೆಯ ತಮಿಳು ಫಿಲಂ 'ಖೈದಿ' ಜಾನರ್ ಇರುತ್ತೆ ಅಂತ ಅಂದ್ಕೊಂಡಿದ್ದೆ.. ಬಟ್, ಇದು ಡಿಫ್ರೆಂಟ್ ಆಗಿದೆ. ಸುದೀಪ್ ಅವ್ರಿಗೆ ಈ ಸಿನಿಮಾಗೆ ನೂರಕ್ಕೆ ನೂರರಷ್ಟು ಅಂಕ ಕೊಡ್ಬೇಕು ಆ ತರ ಆಕ್ಟಿಂಗ್ ಮಾಡಿದಾರೆ. ಇಡೀ ಸಿನಿಮಾನ ಅವರೇ ತಿಂದು ಹಾಕಿದಾರೆ.
ಕಂಗಾಲಾಗಿ ಉಪ್ಪಿ ಕಾಲಿಗೆ ಬಿದ್ದ ಅಕುಲ್ ಬಾಲಾಜಿ; ವಿಡಿಯೋ ನೋಡಿದ್ರೆ ಶಾಕ್ ಆಗ್ತೀರಾ!
ಯಾವತ್ತೂ ಅವ್ರ ಸಿನಿಮಾದಲ್ಲಿ ಹೇಗೆ ನಟನೆ ಮಾಡ್ತಾರೋ ಹಾಗೆ, ಇದ್ರಲ್ಲಿ ಇನ್ನೂ ಸಕತ್ತಾಗಿ ಆಕ್ಟಿಂಗ್ ಮಾಡಿದಾರೆ. ಅವ್ರೇ ಪೂರಾ ಫಿಲಂ ತಿಂದು ಹಾಕ್ಬಿಟ್ಟಿದಾರೆ. ಪೊಲೀಸ್ ಕ್ಯಾರೆಕ್ಟರ್‌ಗೆ ಇಡೀ ಕನ್ನಡ ಇಂಡಸ್ಟ್ರಿನಲ್ಲಿ ಸ್ಯೂಟ್ ಆಗೋದು ಸುದೀಪ್ ಒಬ್ಬರೇ. ಈ ಮೊದಲು ಇದ್ದ ಎಲ್ಲಾ ರೆಕಾರ್ಡ್‌ಗಳೂ ಈ ಸಿನಿಮಾ ಮೂಲಕ ಬ್ರೇಕ್ ಆಗುತ್ತೆ.. ಇದ್ರಲ್ಲಿ ಯಾವ್ದೇ ಸೀನನ್ನೂ ಎಲ್ಲಾ ತುರುಕಿಲ್ಲ. ತುಂಬಾ ಚೆಂದಾಗಿ ಕತೆ ತಗೊಂಡು ಹೋಗಿದಾರೆ ಡೈರೆಕ್ಟರ್'
ಇವತ್ತು ಕ್ರಿಸ್‌ಮಸ್ ಅಂತ ಬಂದ್ಬಿ ಇವತ್ತು ನಾವು ಮ್ಯಾಕ್ಸ್ ಮೂವಿ ನೋಡೋಕೆ. ಆದ್ರೆ ಇದು ಕ್ರಿಸ್‌ಮಸ್ ಅಲ್ಲ ಕ್ರಿಸ್ ಮ್ಯಾಕ್ಸ್ ಅಂತ.. ಕ್ರಿಸ್ ಮ್ಯಾಕ್ಸ್ ಅಂತ ಏನಕ್ಕೆ ಅಂದ್ರೆ, ಕಿಚ್ಚ ಸುದೀಪ್ ಅವರದ್ದು ಒಂದು ಹೀರೋಯಿನ್ ಇಲ್ಲದೇನೇ, ಈ ತರ ನಮ್ಗೆ ಹಳೇ ಸುದೀಪ್ ಅವ್ರು ಕಾಣಿಸ್ಬಿಟ್ರು.. ಔಟ್ ಅಂಡ್ ಔಟ್ ಮಾಸ್ ಸಿನಿಮಾ. ಅದೂ ಕೂಡ ಸುದೀಪ್ ಅವರನ್ನ ನೋಡಿ ಸಖತ್ ಖುಷಿ ಆಯ್ತು.. ತಮಿಳು ಡೈರೆಕ್ಷನ್ ಟೀಮ್ ಆದ್ರೂ ಕನ್ನಡ ನೇಟಿವಿಟಿಗೆ ತಕ್ಕಂತೆ ಸಿನಿಮಾ ಮಾಡಿದಾರೆ.
ಯಶ್ ನಡತೆ ಬಗ್ಗೆ ಆಕ್ಷೇಪ ಎತ್ತಿದ ಸುದೀಪ್ ಫ್ಯಾನ್ಸ್, ರಾಕಿಂಗ್ ಸ್ಟಾರ್‌ಗೆ ಬುದ್ಧಿ ಹೇಳಿದ್ದ ಕನ್ನಡದ ಕಿಚ್ಚ!
ಸುದೀಪ್ ಅವ್ರ ವಿಷ್ಯದಲ್ಲಿ ನಂಗೆ ಒಂದು ಇಷ್ಟ ಆಗೋದು ಅಂದ್ರೆ, ಎಲ್ಲಾ ನಟರನ್ನೂ ಒಗ್ಗೂಡಿಸೋಕೆ ನೋಡ್ತಾರೆ. ನಾನು ಯಶ್ ಫ್ಯಾನ್ ಆದ್ರೂ ಕೂಡ ನಾನು ಸುದೀಪ್ ಅವ್ರನ್ನ ಇಷ್ಟಪಟ್ಟು ಬಂದಿದೀನಿ.. ಏನಕ್ಕೆ ಅಂದ್ರೆ, ಮೊನ್ನೆ ಯಶ್ ಅವ್ರು ಯುಐ ಪ್ರಮೋಶನ್‌ಗೆ ಬಂದಿದ್ರು. ನಾವು ಯಶ್ ಫ್ಯಾನ್ ಆದ್ರು ಸುದೀಪ್ ಅವ್ರಿಗೆ ಸಪೋರ್ಟ್ ಮಾಡೋಕೆ ಬಂದಿದೀವಿ.. ನಾವೆಲ್ಲಾ ಸುದೀಪ್ ಅವ್ರಿಗೆ ಸಪೋರ್ಟ್ ಮಾಡ್ಬೇಕು, ಜೈ ಸುದೀಪ್ ಅಣ್ಣ..
ಕಿಚ್ಚ ಸುದೀಪ್ ಅವ್ರಲ್ಲಿ ಒಂದು ರಿಕ್ವೆಸ್ಟ್, ಎರಡು ವರ್ಷಕ್ಕೆ ಒಂದು ಸಿನಿಮಾ ಮಾಡ್ಬೇಡಿ, ವರ್ಷಕ್ಕೆ ಎರಡು ಸಿನಿಮಾ ಮಾಡಿ.. ಯಾಕೆ ಅಂದ್ರೆ, ಬೆಳಿಗ್ಗೆ 6 ಗಂಟೆ ಶೋಗೇ ಬಂದು ಕಾದು ಸಿನಿಮಾ ನೋಡೋಕೆ ಬಂದಿದಾರೆ, ಥಿಯೇಟರ್ ಹೌಸ್‌ಫುಲ್ ಆಗಿದೆ ಅಂದ್ರೆ ತಮಾಷೆ ಅಲ್ಲ. ಅಷ್ಟು ಕ್ರೇಜ್ ಇದೆ ಕಿಚ್ಚ ಸುದೀಪ್ ಅವ್ರ ಬಗ್ಗೆ ಜನಕ್ಕೆ...
ಸೀನಿಯರ್ಸ್ ಯಾವತ್ತಿಗೂ ಸೀನಿಯರ್ಸೇ, ಜೂನಿಯರ್ ಯಶ್‌ಗೆ ಬುದ್ಧಿ ಹೇಳಿದ್ದ ಸೀನಿಯರ್ ಸುದೀಪ್!
ಟಿವಿ ಶೋಗಳನ್ನು ಮಾಡೋದು ಕಮ್ಮಿ ಮಾಡಿ ಸಿನಿಮಾ ಮಾಡೋದನ್ನ ಸ್ವಲ್ಪ ಜಾಸ್ತಿ ಮಾಡಿದ್ರೆ ಇನ್ನೂ ಅವ್ರ ಕ್ರೇಜ್ ಜಾಸ್ತಿ ಆಗುತ್ತೆ & ನಮ್ಮ ಕನ್ನಡ ಸಿನಿಮಾಗಳು ಇನ್ನೂ ಚೆನ್ನಾಗಿ ಬೆಳೆಯುತ್ತೆ ಅಂತ ಅವ್ರಲ್ಲಿ ಕೇಳ್ಕೊಳ್ಳೋಕೆ ಇಷ್ಟಪಡ್ತೀನಿ.. ವರ್ಷಕ್ಕೆ ಎರಡು ಸಿನಿಮಾ ಮಾಡ್ಲಿ, ನಾವು ನೋಡ್ತೀವಿ.. ಜೈ ಕಿಚ್ಚಾ ಬಾಸ್' ಎಂದಿದ್ದಾರೆ ಯಶ್ ಅಭಿಮಾನಿಗಳು. ಒಟ್ಟಿನಲ್ಲಿ, ಯಶ್ ಹಾಗೂ ಕಿಚ್ಚ ಸುದೀಪ್ ಅಭಿಮಾನಿಗಳ ಮಧ್ಯೆ ಸದ್ಯಕ್ಕೆ ಸಾಮರಸ್ಯ ಇದೆ, ಯಾವುದೇ ಜಟಾಪಟಿ ಇಲ್ಲ ಎನ್ನಬಹುದು.