ಸ್ಯಾಂಡಲ್‌ವುಡ್‌ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮಡದಿ ಪ್ರೇರಣ ಬೆಂಗಳೂರಿನ ದಯಾನಂದ್ ಸಾಗರ್ ಕಾಲೇಜಿನಲ್ಲಿ ಅಧ್ಯಾಪಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಸರ್ಕಾರದ ನಿಯಮಗಳ ಪ್ರಕಾರ ಕಾಲೇಜುಗಳು ಪ್ರಾರಂಭವಾಗಿದ್ದು ಪ್ರೇರಣ ಕೂಡ ಮುಜಾಗೃತಾ ಕ್ರಮಗಳನ್ನು ಕೈಗೊಂಡು ಕಾಲೇಜಿಗೆ ಹಾಜರಾಗಿದ್ದಾರೆ. 

ಕೊರೋನಾ ಪಾಸಿಟಿವ್‌: ನಟ ಧ್ರುವ ಸರ್ಜಾ, ಪತ್ನಿ ಪ್ರೇರಣಾ ಡಿಸ್ಚಾರ್ಜ್! 

ಸೋಷಿಯಲ್ ಮೀಡಿಯಾದಲ್ಲಿ ಕೊಂಚ ಆಕ್ಟೀವ್ ಆಗಿರುವ ಪ್ರೇರಣ ಈ ಫೋಟೋವನ್ನು ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಮಾಸ್ಕ್, ಗ್ಲೌಸ್ ಹಾಗೂ ಫೇಸ್‌ ಶೀಲ್ಡ್‌ ಧರಿಸಿ ತಮ್ಮ ಕ್ಯಾಬಿನ್‌ನಲ್ಲಿ ಕುಳಿತಿದ್ದಾರೆ. ಧ್ರುವ ಸರ್ಜಾ ಅಭಿಮಾನಿಗಳ ಪೇಜ್‌ಗಳು ಈ ಫೋಟೋವನ್ನು ಎಲ್ಲೆಡೆ ಶೇರ್ ಮಾಡಿಕೊಂಡಿದ್ದಾರೆ.

ಜುಲೈ 15ರಂದು ಧ್ರುವ ಸರ್ಜಾ ಹಾಗೂ ಪ್ರೇರಣಗೆ ಕೊರೋನಾ ಸೋಂಕು ಇರುವುದಾಗಿ ತಿಳಿದು ಬಂದಿದ್ದು ಇಬ್ಬರು ಚಿಕಿತ್ಸೆ ಪಡೆದು ಮನೆಯಲ್ಲಿಯೇ ಕ್ವಾರಂಟೈನ್‌ಗೆ ಒಳಗಾಗಿದ್ದರು. ಈ ಕಾರಣಕ್ಕಾಗಿ ಪ್ರೇರಣ ಮುಂಜಾಗೃತಾ ಕ್ರಮಗಳನ್ನು ಕೈಗೊಂಡು ಪಾಠ ಹೇಳಿಕೊಡಲು ಕಾಲೇಜಿಗೆ ಹಾಜರಾಗಿದ್ದಾರೆ. 

ಸರ್ಜಾ ಮನೆಯಲ್ಲಿ ಮತ್ಯಾರಿಗೂ ಇಲ್ಲ ಕೊರೋನಾ ಗುಣಲಕ್ಷಣ! 

ಇತ್ತೀಚಿಗೆ ಧ್ರುವ ಸರ್ಜಾ ತಮ್ಮ ಮುಂದಿನ ಚಿತ್ರಕ್ಕಾಗಿ ಹೇರ್‌ ಸ್ಟೈಲ್ ಬದಲಾಯಿಸಿದ್ದಾರೆ. ಮೂರೂವರೆ ವರ್ಷಗಳ ಕಾಲ ಬೆಳೆಸಿದ ಕೂದಲನ್ನು ಕ್ಯಾನ್ಸರ್ ರೋಗಿಗಳಿಗೆ ದಾನ ಮಾಡಿದ್ದಾರೆ. ಅಭಿಮಾನಿಗಳಿಂದ ಮೆಚ್ಚುಗೆ ಪಡೆದಿದ್ದಾರೆ.