ಸ್ಯಾಂಡಲ್‌ವುಡ್‌ 'ಪೊಗರು' ಹುಡುಗ, ಆಕ್ಷನ್ ಪ್ರಿನ್ಸ್‌ ಧ್ರುವ ಸರ್ಜಾ ಮತ್ತು ಪತ್ನಿ ಪ್ರೇರಣಾ ಅವರಿಗೆ ಕೊರೋನಾ ಸೋಂಕು ಇರುವುದು ದೃಢವಾಗಿದ್ದು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. 

ವೈದ್ಯರ ಸಲಹೆ ಮೇರೆಗೆ ಧ್ರುವ ಸರ್ಜಾ ಮತ್ತು ಪತ್ನಿ ಪ್ರೇರಣಾ ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆಗಿ, ಈಗ ಮನೆಯಲ್ಲಿಯೇ ಕ್ವಾರಂಟೈನ್‌ ಆಗಲಿದ್ದಾರೆ. ಬೇಕಾದ ಚಿಕಿತ್ಸೆಗಳನ್ನು ಮನೆಯಲ್ಲಿಯೇ ವೈದ್ಯರ ಮುತುವರ್ಜಿಯಲ್ಲಿ ಪಡಯಲಿದ್ದಾರಂತೆ. ಧ್ರುವ ಮತ್ತು ಪ್ರೇರಣಾ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದ ಕಾರಣ ಕೆ.ಆರ್‌ ರಸ್ತೆಯಲ್ಲಿರುವ ನಿವಾಸದಲ್ಲಿ ಚಿಕಿತ್ಸೆ ಮಂದುವರಿಸಲಿದ್ದಾರೆ, ಎನ್ನಲಾಗಿದೆ.

ಸೋಂಕು ತಾಗಲು ಕಾರಣವೇನು:
ಅಷ್ಟಕ್ಕೂ ಈ ಜೋಡಿಗೆ ಸೋಂಕು ಎಲ್ಲಿಂದ ತಗುಲಿತು ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಎಲ್ಲಿಯೂ ಇಲ್ಲವಾದರೂ, ಕೆಲವು ಮೂಲಗಳ ಪ್ರಕಾರ ಧ್ರುವ ಸರ್ಜಾ ಕೆಲವು ದಿನಗಳ ಹಿಂದೆ ಲೋ ಬಿಪಿ ಮತ್ತು ಖಿನ್ನತೆಯಿಂದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಈ ಓಡಾಟದ ಸಂದರ್ಭದಲ್ಲಿ ಸೋಂಕು ತಗುಲಿರಬಹುದೆಂದು ಶಂಕಿಸಲಾಗುತ್ತಿದೆ.

ಸ್ಯಾಂಡಲ್‌ವುಡ್‌ಗೆ ಕೊರೋನಾಘಾತ; ನಟ ಧ್ರುವ ಸರ್ಜಾ, ಪತ್ನಿ ಪ್ರೇರಣಾಗೆ ಸೋಂಕು 

ಧ್ರುವ ಮತ್ತು ಪ್ರೇರಣಾ ಕುಟುಂಬಸ್ಥರೂ ಕೂಡ ಕೊರೋನಾ ಪರೀಕ್ಷೆ ಮಾಡಿಸಿಕೊಂಡಿದ್ದಾರೆ.

ಚಿರು ನೆನಪು:
ಹೃದಯಘಾತದಿಂದ ಅಗಲಿದ ಚಿರಂಜೀವಿ ಸರ್ಜಾ ನೆನಪಿನಲ್ಲಿ ದಿನ ಕಳೆಯುತ್ತಿರುವ ಸರ್ಜಾ ಫ್ಯಾಮಿಲಿಗೆ ಇದೊಂದು ಆಘಾತಕಾರಿ ಸುದ್ದಿಯಾಗಿತ್ತು. ಆಂಜನೇಯನ ಪರಮ ಭಕ್ತನಾಗಿರುವ ಧ್ರುವ ಮತ್ತು ಕುಟುಂಬಕ್ಕೆ ಇನ್ಯಾವುದೇ ತೊಂದರೆಗಳು ತಾಗಬಾರದು ಎಂದು ನಟ ಅರ್ಜುನ್ ಸರ್ಜಾ ತಮ್ಮ ನಿವಾದಲ್ಲಿ ಚಂಡಿಕಾ ಹೋಮ ಮಾಡಿಸಿದ್ದರು ಇತ್ತೀಚೆಗೆ.

ಚಿರಂಜೀವಿ ಸಮಾಧಿಗೆ ಪೂಜಿಸುತ್ತಾ ಕಣ್ಣೀರಿಟ್ಟ ಧ್ರುವ ಸರ್ಜಾ!