Asianet Suvarna News Asianet Suvarna News

ಡಾ.ರಾಜ್ ಹುಟ್ಟುಹಬ್ಬಕ್ಕೆ ಅಭಿಮಾನಿಗಳ ತಲೆಗೆ ಹುಳಬಿಟ್ಟ ಡಾಲಿ; ಸಿನಿಮಾ ಯಾವ್ದು ಗೆಸ್ ಮಾಡಿ ಎಂದ ಧನಂಜಯ್

ಯಾವ ಸಿನಿಮಾ ಗೆಸ್ ಮಾಡಿ ಎಂದು ಪೋಸ್ಟ್ ಶೇರ್ ಮಾಡಿ ಡಾ.ರಾಜ್ ಕುಮಾರ್ ಹುಟ್ಟುಹಬ್ಬಕ್ಕೆ ಅಭಿಮಾನಿಗಳ ತಲೆಗೆ ಹುಳಬಿಟ್ಟಿದ್ದಾರೆ ಡಾಲಿ ಧನಂಜಯ್.

Dhananjay shares a new post on Dr rajkumar birthday and say guess the movie name sgk
Author
First Published Apr 24, 2023, 12:44 PM IST | Last Updated Apr 24, 2023, 12:44 PM IST

ಸ್ಯಾಂಡಲ್‌ವುಡ್ ಡಾಲಿ ಎಂದೇ ಖ್ಯಾತಿಗಳಿಸಿರುವ ನಟ ಧನಂಜಯ್ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ನಟನೆ ಜೊತೆಗೆ ಧನಂಜಯ್ ನಿರ್ಮಾಣದಲ್ಲೂ ತೊಡಗಿಕೊಂಡಿದ್ದಾರೆ. ಇತ್ತೀಚೆಗಷ್ಟೆ ಧನಂಜಯ್ ಹೊಯ್ಸಳ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು ಧನಂಜಯ್ ಈ ಸಿನಿಮಾಗೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕನ್ನಡದ ಜೊತೆಗೆ ಧನಂಜಯ್ ಪರಭಾಷೆಯ ಸಿನಿಮಾಗಳಲ್ಲೂ ಧನಂಜಯ್ ಬ್ಯುಸಿಯಾಗಿದ್ದಾರೆ. ಈ ನಡುವೆ ಧನಂಜಯ್ ಅಭಿಮಾನಿಗಳ ತಲೆಗೆ ಹುಳಬಿಟ್ಟಿದ್ದಾರೆ. 

ಇಂದು (ಏಪ್ರಿಲ್ 24) ಡಾ.ರಾಜ್ ಕುಮಾರ್ ಹುಟ್ಟುಹಬ್ಬ. ಅಣ್ಣಾವ್ರ ಹುಟ್ಟುಹಬ್ಬವನ್ನು ದೇಶ,ವಿದೇಶಗಲ್ಲಿ ಸಂಭ್ರಮಿಸಲಾಗುತ್ತಿದೆ. ಅಭಿಮಾನಿಗಳು ಕೇಕ್ ಕತ್ತರಿಸಿ ವಿಶೇಷವಾಗಿ ವರನಟನ ಹುಟ್ಟುಹಬ್ಬ ಆಚರಿಸುತ್ತಿದ್ದಾರೆ. ಅಣ್ಣಾವ್ರ ಹುಟ್ಟುಹಬ್ಬಕ್ಕೆ ಡಾಲಿ ಧನಂಜಯ್ ಅಭಿಮಾನಿಗಳ ತೆಲೆಗೆ ಹುಳ ಬಿಟ್ಟಿದ್ದಾರೆ. ಹೊಸ ಪೋಸ್ಟರ್ ಶೇರ್ ಮಾಡಿ, ಸಿನಿಮಾ ಹೆಸರು ಗೆಸ್ ಮಾಡಿ ಎಂದು ಹೇಳಿದ್ದಾರೆ. ಡಾಲಿ ನಿರ್ಮಾಣದಲ್ಲಿ ಅನೇಕ ಸಿನಿಮಾಗಳು ಬರ್ತಿವೆ. ಡಾಲಿ ಪಿಕ್ಚರ್ ನಿರ್ಮಾಣದ ಸಿನಿಮಾದ ರಿಲೀಸ್ ಡೇಟ್ ಬಹಿರಂಗ ಪಡಿಸುವುದಾಗಿ ಹೇಳಿದ್ದಾರೆ. ಆದರೆ ಯಾವ ಸಿನಿಮಾ ಎಂದು ಡಾಲಿ ಬಹಿರಂಗ ಪಡಿಸಿಲ್ಲ. ಅಭಿಮಾನಿಗಳಿಗೆ ಗೆಸ್ ಮಾಡಿ ಎಂದು ಬಿಟ್ಟಿದ್ದಾರೆ. 

ಹೆಂಡತಿ ಲಕ್ ತಂದುಕೊಡ್ತಾಳೆ; ಧನಂಜಯ್ ಮದುವೆ ಬಗ್ಗೆ ಶಿವಣ್ಣ ಹೇಳಿಕೆ ವೈರಲ್

ಪೋಸ್ಟ್ ಜೊತೆಗೆ ಧನಂಜಯ್, 'ಅಣ್ಣಾವ್ರು ಕೂಡ ಈ ಚಿತ್ರದ ಪ್ರಮುಖ ಭಾಗ ಎಂದರೆ ತಪ್ಪಾಗಲ್ಲ. ಅವರ ಆಶೀರ್ವಾದ ಈ ಚಿತ್ರದ ಮೇಲಿದೆ ಎಂದು ನಂಬಿದ್ದೇವೆ. ಅವರ ಹುಟ್ಟುಹಬ್ಬದ ಪ್ರಯುಕ್ತ ಈ ಸಂಜೆ ಚಿತ್ರದ ಬಿಡುಗಡೆ ದಿನಾಂಕ ಘೋಷಿಸಲಾಗುವುದು. ಯಾವ ಸಿನಿಮಾ ಗೆಸ್ ಮಾಡಿ' ಎಂದು ಬರೆದುಕೊಂಡಿದ್ದಾರೆ. ಈ ಪೋಸ್ಟ್ ಗೆ ಅಭಿಮಾನಿಗಳು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ. ಅನೇಕರು ಸಿನಿಮಾ ಹೆಸರನ್ನು ಗೆಸ್ ಮಾಡಿ ಕಾಮೆಂಟ್ ಮಾಡುತ್ತಿದ್ದಾರೆ.

'ಧನಂಜಯ್ ಮುಗ್ಧ ಅಲ್ಲ ಸಿಕ್ಕಾಪಟ್ಟೆ ಪೋಲಿ' ಎಂದ ಕಾಂತಾರ ನಟಿ ಸಪ್ತಮಿ ಗೌಡ

 

ಅಂದಹಾಗೆ ಡಾಲಿ ಪಿಕ್ಚರ್ ನಿಂದ ಸದ್ಯ ಟಗರು ಪಲ್ಯಾ ಸಿನಿಮಾ ರೆಡಿಯಾಗುತ್ತಿದೆ. ಅನೇಕರ ಪ್ರಕಾರ ಟಗರು ಪಲ್ಯಾ ಸಿನಿಮಾದೇ ಇರುಬಹುದು ಎಂದು ಹೇಳುತ್ತಿದ್ದಾರೆ. ಇನ್ನು ಕೆಲವರು ಡೇರ್ ಡೆವಿಲ್ ಮುಸ್ತಾಫ ಎಂದು ಹೇಳುತ್ತಿದ್ದಾರೆ. ಅಂದಹಾಗೆ ಡೇರ್ ಡೆವಿಲ್ ಮುಸ್ತಾಫ ಸಿನಿಮಾದಲ್ಲಿ ಧನಂಜಯ್ ನಟಿಸುತ್ತಿಲ್ಲ, ಅಲ್ಲದೇ ಆ ಸಿನಿಮಾ ನಿರ್ಮಾಣ ಕೂಡ ಮಾಡಿಲ್ಲ. ಆದರೆ ಧನಂಜಯ್ ಈ ಸಿನಿಮಾವನ್ನು ಅರ್ಪಿಸುತ್ತಿದ್ದಾರೆ. ಹಾಗಾಗಿ ಡೇರ್ ಡೆವಿಲ್ ಮುಸ್ತಾಫ ಸಿನಿಮಾದ ರಿಲೀಸ್ ಡೇಟ್ ಬಹಿರಂಗ ಪಡಿಸಿದರೂ ಅಚ್ಚರಿ ಇಲ್ಲ. ಅನೇಕ ಅಭಿಮಾನಿಗಳು ಈ ಎರಡು ಸಿನಿಮಾಗಳ ಹೆಸರನ್ನು ಕಾಮೆಂಟ್ ಮಾಡುತ್ತಿದ್ದಾರೆ. 


 

Latest Videos
Follow Us:
Download App:
  • android
  • ios