ಹೆಂಡತಿ ಲಕ್ ತಂದುಕೊಡ್ತಾಳೆ; ಧನಂಜಯ್ ಮದುವೆ ಬಗ್ಗೆ ಶಿವಣ್ಣ ಹೇಳಿಕೆ ವೈರಲ್

ಹೆಂಡತಿ ಲಕ್ ತಂದುಕೊಡ್ತಾಳೆ ಬೇಗ ಮದುವೆ ಆಗಿ ಎಂದು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಧನಂಜಯ್‌ಗೆ ಶಿವಣ್ಣ ಹೇಳಿದ್ದಾರೆ. 

actor shivarajkumar about dhananjay marriage in weekend with ramesh sgk

ಸ್ಯಾಂಡಲ್ ವುಡ್ ಡಾಲಿ ಧನಂಜಯ್ ಮದುವೆ ವಿಚಾರ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಧನಂಜಯ್‌ಗೆ ಮದುವೆ ಯಾವಾಗ ಎಂದು ಹೋದಲ್ಲಿ ಬಂದಲ್ಲಿ ಪ್ರಶ್ನೆ ಎದುರಾಗುತ್ತಿದೆ. ಇತ್ತೀಚೆಗಷ್ಟೆ ವೀಕೆಂಡ್ ಕುರ್ಚಿಯಲ್ಲಿ ಕುಳಿತಿದ್ದಾಗಲೂ ಅದೇ ಪ್ರಶ್ನೆ ಎದುರಾಗಿದೆ. ಹೌದು ನಟ ಧನಂಜಯ್ ಕಿರುತೆರೆಯ ಜನಪ್ರಿಯ ಶೋ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಸಾಧಕರ ಕುರ್ಚಿಯಲ್ಲಿ ಕಾಣಿಸಿಕೊಂಡರು. ಧನಂಜಯ್ ಸಾಕಷ್ಟು ವಿಚಾರಗಳನ್ನು ಬಹಿರಂಗ ಪಡಿಸಿದರು. ಬಾಲ್ಯ, ಸಿನಿಮಾರಂಗದಲ್ಲಿ ಪಟ್ಟ ಕಷ್ಟ, ಸ್ಟಾರ್ ಆಗಿದ್ದು ಸೇರಿದ್ದಂತೆ ಅನೇಕ ವಿಚಾರಗಳ ಮಾತನಾಡಿದರು. ವೀಕೆಂಡ್ ಟೆಂಟ್‌ನಲ್ಲಿ ಹೆಚ್ಚು ಸದ್ದು ಮಾಡಿದ ವಿಚಾರ ಧನಂಜಯ್  ಮದುವೆ ವಿಚಾರ. 

ಧನಂಜಯ್ ಮದುವೆ ಯಾವಾಗ ಎಂದು ಅನೇಕರು ಪ್ರಶ್ನೆ ಮಾಡಿದ್ದಾರೆ. ಕುಟುಂಬದವರು ಮಾತ್ರವಲ್ಲದೇ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕೂಡ ಪ್ರಶ್ನೆ ಮಾಡಿದ್ದಾರೆ. ಧನಂಜಯ್ ಅವರ ಅಜ್ಜಿ ಕೂಡ ಮದುವೆ ಆಗು ಬೇಗ ಎಂದು ಹೇಳಿದ್ದಾರೆ. ವೇದಿಕೆಗೆ ಬಂದ ಧನಂಜಯ್ ಅವರ ಅಜ್ಜಿ ಮಲ್ಲಮ್ಮ ,‘ಧನಂಜಯ್​ಗೆ ಮದುವೆ ಮಾಡಬೇಕು. ನಾನು ಇದ್ದಾಗಲೇ ಮದುವೆ ಮಾಡಬೇಕು ಎಂದು ಹೇಳಿದ್ದಾರೆ. ಕುಟುಂಬದವರ ಮಾನಿಗೆ ಧನಂಜಯ್ ‘ಆಗೋಣ ತಗೋಳಜ್ಜಿ’ ಎಂದು ಹೇಳಿದರು. 'ಎಲ್ಲರ ಮದುವೆಯನ್ನೂ ಮಾಡಿದ್ದೇನೆ. ನಾವು ಹುಡುಕಿದ ಹುಡುಗಿಯನ್ನು ಅವನು ಒಪ್ಪಿಕೊಳ್ಳಬೇಕಲ್ಲ. ಅವನು ಒಪ್ಪಿಕೊಂಡು ಬಂದ್ರೆ ನಾನೇ ಮದುವೆ ಮಾಡ್ತೀನಿ’ ಅಜ್ಜಿ ಹೇಳಿದರು. ‘ನನ್ನ ಅಜ್ಜಿಗೆ 95 ವರ್ಷ. ಇನ್ನಷ್ಟು ವರ್ಷ ಅವರು ಇರ್ತಾರೆ. ಹಾಗಾಗಿ, ಆರಮಾಗಿ ಆಗ್ತೀನಿ’ ಎಂದರು ಡಾಲಿ.

ಬಳಿಕ ಧನಂಜಯ್ ಸಹೋದರಿ ಕೂಡ ಮದುವೆ ಬಗ್ಗೆ ಪ್ರಶ್ನೆ ಮಾಡಿದರು. ಬಳಿಕ ವಿಶೇಷ ಬೈಟ್ ನೀಡಿದ ಶಿವರಾಜ್ ಕುಮಾರ್ ಸಹ  ಧನಂಜಯ್‌ಗೆ ಮದುವೆ ಆಗುವಂತೆ ಹೇಳಿದರು. ಶಿವಣ್ಣ ಜೊತೆ ಧನಂಜಯ್ ಅವರಿಗೆ ಉತ್ತಮ ಬಾಂಧವ್ಯವಿದೆ. ಅಣ್ಣ ಎಂದೇ ಕರೆಯುವ ಧನಂಜಯ್‌ಗೆ ಶಿವಣ್ಣ ಮೇಲೆ ಅಪಾರ ಗೌರವ. ಅನೇಕ ಸಿನಿಮಾಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ. ಧನಂಜಯ್ ಬಗ್ಗೆ ಪ್ರೀತಿಯ ಮಾತುಗಳನ್ನು ಹೇಳಿರುವ ಧನಂಜಯ್ ಸದಾ ಜೊತೆಯಲ್ಲಿ ಇರುವುದಾಗಿ ಹೇಳಿದ್ದಾರೆ. 

'ಧನಂಜಯ್ ಮುಗ್ಧ ಅಲ್ಲ ಸಿಕ್ಕಾಪಟ್ಟೆ ಪೋಲಿ' ಎಂದ ಕಾಂತಾರ ನಟಿ ಸಪ್ತಮಿ ಗೌಡ

ಬಳಿಕ ಧನಂಜಯ್ ಅವರಿಗೆ ಎರಡು ಪ್ರಶ್ನೆಗಳನ್ನು ಕೇಳಿದ್ದಾರೆ. ಒಂದು ಡಾಲಿ ಪಿಚ್ಚರ್‌ನಲ್ಲಿ ಮುಂದಿನ ಸಿನಿಮಾ ಯಾವುದು ಹಾಗೂ ಮದುವೆ ಯಾವಾಗ?  ಎಂದು ಕೇಳಿದ್ದಾರೆ. ಧನಂಜಯ್ ಜೊತೆ ಕೆಲಸ ಮಾಡುವುದು ತುಂಬಾ ಖುಷಿ ಎಂದಿರುವ ಶಿವಣ್ಣ ಮುಂದಿನ ಸಿನಿಮಾಗಾಗಿ ಕಾಯ್ತಿದ್ದೀನಿ ಎಂದು ಹೇಳಿದರು. ಹಾಗೂ 'ಬೇಗ ಮದುವೆ ಆಗಿ ಧನಂಜಯ್. ಹೆಂಡತಿ ಲಕ್ ತಂದು ಕೊಡ್ತಾಳೆ' ಎಂದು ಶಿವಣ್ಣ ಹೇಳಿದರು. 'ಶಿವಣ್ಣ ಮಾತಿಗೆ ಯಾವತ್ತು ಇಲ್ಲ ಅಂದಿಲ್ಲ ಆದಷ್ಟು ಬೇಗ ನನಗೆ ಯಾವ ಹುಡುಗಿ ಇಷ್ಟ ಆಗ್ತಾಳೋ ಆಗ ತಕ್ಷಣ ಆಗ್ತಿನಿ' ಎಂದು ಧನಂಜಯ್ ಹೇಳಿದರು. 

ಆಕೆಯನ್ನು ಜಗತ್ತಿಗೆ ತೋರಿಸಲು ಇಷ್ಟ ಇರ್ಲಿಲ್ಲ; ಅಕ್ಕನನ್ನು ನೋಡಿ ಕಣ್ಣೀರಿಟ್ಟ ಧನಂಜಯ್

ಟಗರು ಮತ್ತು ಭೈರಾಗಿ ಸಿನಿಮಾಗಳಲ್ಲಿ ಶಿವಣ್ಣ ಮತ್ತು ಧನಂಜಯ್ ಒಟ್ಟಿಗೆ ನಟಿಸಿದ್ದಾರೆ. ಟಗರು ಸಿನಿಮಾ ದೊಡ್ಡ ಮಟ್ಟದಲ್ಲಿ ಹಿಟ್ ಆಗಿದ್ದಲ್ಲದೇ ಧನಂಜಯ್ ಅವರಿಗೆ ಸ್ಟಾರ್ ಗಿರಿ ತಂದುಕೊಟ್ಟಿತು. ಡಾಲಿ ಆಗಿ ಖ್ಯಾತಿಗಳಿಸಿದರು. ಸದ್ಯ ಧನಂಜಯ್ ನಿರ್ಮಾಣದ ಡಾಲಿ ಪಿಚ್ಚರ್ಸ್ನಲ್ಲಿ ಮೂಡಿಬರುತ್ತಿರುವ ಉತ್ತರಕಾಂಡ ಸಿನಿಮಾದಲ್ಲಿ ಮತ್ತೆ ಶಿವಣ್ಣ ಮತ್ತು ಧನಂಜಯ್ ಒಟ್ಟಿಗೆ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ರಮ್ಯಾ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಅನೇಕ ವರ್ಷಗಳ ಬಳಿಕ ರಮ್ಯಾ ಸಿನಿಮಾರಂಗಕ್ಕೆ ವಾಪಾಸ್ ಆಗಿದ್ದು ಧನಂಜಯ್ ಜೊತೆ ಉತ್ತರಕಾಂಡ ಮೂಲಕ ಅಭಿಮಾನಿಗಳ ಮುಂದೆ ಬರ್ತಿದ್ದಾರೆ. ಎಲ್ಲರ ಆಸೆಯಂತೆ ಧನಂಜಯ್ ಯಾವಾಗ ಮದುವೆ ಆಗ್ತಾರೆ ಎಂದು ಕಾದುನೋಡಬೇಕಿದೆ. 

Latest Videos
Follow Us:
Download App:
  • android
  • ios