Asianet Suvarna News Asianet Suvarna News

ವೀರಗಾಸೆಗೆ ಅವಮಾನ ಮಾಡಿದವರಿಗೆ ಜಯರಾಜ್‌ ಹೊಡೆದಿದ್ದಾರೆ: ಧನಂಜಯ್ ಸ್ಪಷ್ಟನೆ

ವೀರಗಾಸೆ ಕಲಾವಿದರಿಗೆ ಅವಮಾನ. ದೃಶ್ಯ ತೆಗೆಯುವಂತೆ ಒತ್ತಾಯ ಮಾಡುತ್ತಿರುವ  ಸುವರ್ಣ ಕರ್ನಾಟಕ ವೀರಶೈವ ಲಿಂಗಾಯತ ಮಹಾಸಭಾಗೆ ಸ್ಪಷ್ಟನೆ ಕೊಟ್ಟ ನಟ..

Dhananjay clarifies about Veeragase scene in headbush film vcs
Author
First Published Oct 26, 2022, 10:40 AM IST

ಕನ್ನಡ ಚಿತ್ರರಂಗದ ನಟ ರಾಕ್ಷಸ ಡಾಲಿ ಧನಂಜಯ್ ನಟಿಸಿ ನಿರ್ಮಾಣ ಮಾಡಿರುವ ಹೆಡ್‌ಬುಷ್‌ ಸಿನಿಮಾ ಅಕ್ಟೋಬರ್ 21ರಂದು ರಾಜ್ಯಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗಿದೆ. ಅಗ್ನಿಶ್ರೀಧರ್ ಬರೆದಿರುವ 'ದಾದಾಗಿರಿಯ ದಿನಗಳು' ಪುಸ್ತಕ ಆಧಾರಿತ ಸಿನಿಮಾ ಇದಾಗಿದ್ದು ಶೋನ್ಯ ನಿರ್ದೇಶನ ಮಾಡಿದ್ದಾರೆ. ಚರಣ್ ರಾಜ್‌ ಸಂಗೀತ ಸಿನಿ ರಸಿಕರ ಗಮನ ಸೆಳೆದಿದೆ. ಮೂರು ದಿನಗಳಲ್ಲಿ 9 ಕೋಟಿ ಕಲೆಕ್ಷನ್ ಮಾಡಿರುವ ಸಿನಿಮಾ ಇದಾಗಿದ್ದು ಈಗ ಸಂಕಷ್ಟದಲ್ಲಿ ಸಿಲುಕಿಕೊಂಡಿದೆ. ಅದುವೇ ವೀರಗಾಸೆ ಕಲಾವಿದರಿಗೆ ಅವಮಾನ.

ವೀರಗಾಸೆಗೆ ಅವಮಾನ:

ಹೆಡ್‌ಬುಷ್‌ ಸಿನಿಮಾದ ಒಂದು ದೃಶ್ಯದಲ್ಲಿ ಡಾನ್ ಜಯರಾಜ್‌ ವೀರಗಾಸೆ ಹಾಕಿಕೊಂಡವರ ಮೇಲೆ ಹಲ್ಲೆ ಮಾಡಿದಂತೆ ತೋರಿಸಲಾಗಿದೆ ಇದರಿಂದ ವೀರಗಾಸೆಗೆ ಅವಮಾನ ಆಗಿದೆ ಈ ದೃಶ್ಯವನ್ನು ತೆಗೆಸಬೇಕು ಎಂದು ಸುವರ್ಣ ಕರ್ನಾಟಕ ವೀರಶೈವ ಲಿಂಗಾಯತ ಮಹಾಸಭಾಗೆ ಹೇಳಿದೆ.

Dhananjay clarifies about Veeragase scene in headbush film vcs

'ಕಾಂತಾರ ಸಿನಿಮಾವನ್ನು ಅದ್ಭುತವಾಗಿ ಚಿತ್ರೀಕರಣ ಮಾಡಿದ್ದಾರೆ. ದೈವ ದೈವಿಕ ಕಲೆ ದೇವರ ಬಗ್ಗೆ  ತುಂಬಾ ಭಯ ಭಕ್ತಿ ಬರುವ ಹಾಗೆ ತೋರಿಸಿದ್ದಾರೆ. ವಿಶ್ವಾದ್ಯಂತ ಒಳ್ಳೆಯ ಹೆಸರು ಬರುವಂತೆ ಮಾಡಿದ್ದಾರೆ. ಆದರೆ ಹೆಡ್‌ಬುಷ್‌ ಸಿನಿಮಾದಲ್ಲಿ ನಮ್ಮ ದೈವಿಕ ಕಲೆ ಆದಂತ, ಸಾವಿರಾರು ವರ್ಷ ಇತಿಹಾಸ ಉಳ್ಳಂತಹ ವೀರಗಾಸೆ ಕಲೆಗೆ ಅವಮಾನ ಮಾಡಿದ್ದಾರೆ. ಏನು ವಿಲನ್‌ಗಳಿಗೆ ಫೈಟ್‌ ಸೀನ್‌ಗಳಲ್ಲಿ ವೀರಗಾಸೆ ವೇಷ ಭೂಷಣ ಧರಿಸಿ  ಅವರಿಗೆ ಮನಬಂದಂತೆ ತಳ್ಳಿಸುವ ಕೆಲಸ ಮಾಡಿದ್ದಾರೆ. ಶೋ ಧರಿಸಿ ಹೊದೆಯುವುದು ಹೆಂಗಂದ್ರೆ ಹಂಗೆ ಎಸೆಯೋದು ಮೇಲಾಕೊಂಡು  ಹೊಡೆಯುವುದು. ಇದರಿಂದ ವೀರಭದ್ರೇಶ್ವರನಿಗೆ ಅವಮಾನ ಮಾಡಿದ್ದಾರೆ. ವೀರಭದ್ರ ಸಾಮಿಗೆ ಸಾವಿರಾರೂ ವರ್ಷ ಹಿನ್ನಲೆ ಇದೆ. ಯಾವುದೇ ಹಿನ್ನಲೆ ತಿಳಿಯದ ಚಿತ್ರೀಕರಣ ಮಾಡಿದ್ದಾರೆ. ವೀರಗಾಸೆ ಕಲೆ ಸಂಸ್ಕೃತಿ ಬಗ್ಗೆ ತಿಳಿದುಕೊಳ್ಳದೆ ಈ ರೀತಿ ಕೆಲಸ ಮಾಡಿದ್ದಾರೆ. ಚಿತ್ರತಂಡಕ್ಕೆ ನನ್ನ ದಿಕ್ಕಾರವಿದೆ. ವೀರಗಾಸೆ ಕಲಾವಿದರಿಗೆ ತುಂಬಾ ಬೇಸರ ಆಗುತ್ತಿದೆ ಇದರ ಬಗ್ಗೆ ಎಲ್ಲರೂ ಧ್ವನಿ ಕೊಡಬೇಕು. ಈ ವಿಚಾರ ಸಂಬಂಧ ಪಟ್ಟವರಿಗೆ ತಿಳಿಯುವಂತೆ ಈ ವಿಡಿಯೋ ತಲುಪಿಸಿ. ಈ ಸಿನಿಮಾವನ್ನು ಬ್ಯಾನ್ ಮಾಡಬೇಕು. ನಮ್ಮ ವೀರಗಾಸೆ ಕಲೆಗೆ ನಮ್ಮ ವೀರಭದ್ರ ಸ್ವಾಮಿಗೆ ಅವಮಾನ ಮಾಡಿದ್ದಾರೆ' ಎಂದ ಹೇಳಿದ್ದಾರೆ.

ಹೆಡ್‌ ಬುಷ್ ನೈಜ ಘಟನೆಯೇ?: ಡಾಲಿ ಧನಂಜಯ್‌ಗೆ ಬಂದಿತ್ತಾ ಜೀವ ಬೆದರಿಕೆ?

ಧನಂಜಯ್ ಸ್ಪಷ್ಟನೆ:

'ನಾನು ಸ್ವತಃ ವೀರಭದ್ರಸ್ವಾಮಿಯ ಭಕ್ತನಾಗಿದ್ದು, ವೀರಗಾಸೆಗೆ ಅವಮಾನಿಸುವ ಯಾವ ಅಂಶವು ಇಲ್ಲದಂತೆ ನೋಡಿಕೊಂಡಿದ್ದೇನೆ. ದೂಷಿಸುವವರರು ದಯವಿಟ್ಟು ಸಿನಿಮಾ ನೋಡಿ ಕೂಲಂಕುಷವಾಗಿ ವಿಮರ್ಶಿಸಬೇಕಾಗಿ ಕೇಳಿಕೊಳ್ಳುತ್ತೇನೆ.' ಎಂದು ಧನಂಜಯ್ ಟ್ವೀಟ್ ಮಾಡಿದ್ದಾರೆ.

'ನಾನು ಚಿಕ್ಕ ಹುಡುಗನಿಂದ ನೋಡುತ್ತಿರುವ ಕೆಲ ವೀರಗಾಸೆ. ನನ್ನ ಸಿನಿಮಾ ರಿಲೀಸ್ ಸಮಯದಲ್ಲೂ ವೀರಗಾಸೆ ಅವರನ್ನು ಕರೆಸುತ್ತಿದ್ದೆ ಅದು ನಮ್ಮ ಕಲೆ ಅದಕ್ಕೆ ನಾನು ಅವಮಾನ ಮಾಡುವಂತವನು ಆಗಿದ್ದರೆ ನನ್ನ ಅವರನ್ನು ಕರೆಸುತ್ತಿರಲಿಲ್ಲ. ಆ ಫೈಟ್‌ ಸೀನ್‌ನ ನೀವು ಗಮನಿಸಿದ್ದರೆ ವೀರಗಾಸೆ ವೇಷದಲ್ಲಿ ಜಯರಾಜ್‌ನ ಅಟ್ಯಾಕ್ ಮಾಡುತ್ತಾರೆ ಆದರೆ ನಿಜವಾದ ವೀರಗಾಸೆ ಅವರು ಬೇರೆ ಇರುತ್ತಾರೆ. ವೇಷ ಧರಿಸಿರುವ ವೀರಗಾಸೆ ಅವರು ಅಟ್ಯಾಕ್ ಮಾಡಿದಾಗ ನಿಜವಾದ ವೀರಗಾಸೆ ಅವರ ಹಿಂದೆ ಹೋಗುತ್ತಾರೆ. ವೀರಗಾಸೆಯಲ್ಲಿ ಶೋ ಮತ್ತು ಚಪ್ಪಲಿ ಹಾಕುವಂತಿಲ್ಲ, ಜಯರಾಜ್‌ಗೆ ಏಟು ಬಿದ್ದಾಗ ಜಯರಾಜ್‌ ಗಮನಿಸಿದ್ದಾಗ ವೀರಗಾಸೆ ಅವರು ಶೋ ಹಾಕಿರುವುದು ಕಾಣಿಸುತ್ತದೆ ಆಗ ಗೊತ್ತಾಗುತ್ತಿದೆ ಇವರು ವೀಗಾಸೆ ಅವರು ಅಲ್ಲ ಬೇರೆ ಅವರು ಅಟ್ಯಾಕ್ ಮಾಡುತ್ತಿದ್ದಾರೆ. ವೀರಗಾಸೆಗೆ ಅವಮಾನ ಮಾಡುತ್ತಿರುವವರಿಗೆ ಜಯರಾಜ್ ಹೊಡೆಯುತ್ತಿರುವುದು. ಜಯರಾಜ್ ವೀರಗಾಸೆಗೆ ಅವಮಾನ ಮಾಡುತ್ತಿಲ್ಲ. ನಮ್ಮ ಕಲೆಗಳನ್ನು ಇಟ್ಕೊಂಡು ತುಂಬಾ ಸ್ಟುಪಿಡ್ ಆಗಿ ಸಿನಿಮಾ ಮಾಡ್ಕೊಂಡು ಅವಮಾನ ಮಾಡಲು ಆಗುವುದಿಲ್ಲ' ಎಂದು ಧನಂಜಯ್ ವಾಹಿನಿಯೊಂದಕ್ಕೆ ಸ್ಪಷ್ಟನೆ ಕೊಟ್ಟಿದ್ದಾರೆ.

Follow Us:
Download App:
  • android
  • ios