ಮೈಸೂರಿನಲ್ಲಿ ಫೆಬ್ರವರಿ 16 ರಂದು ನಟ ಧನಂಜಯ್ ಮತ್ತು ಧನ್ಯತಾ ವಿವಾಹವಾದರು. ಸುಮಾರು 75,000 ಜನರು ಭಾಗವಹಿಸಿದ್ದ ಈ ಸಮಾರಂಭ ಸುಸೂತ್ರವಾಗಿ ನೆರವೇರಿತು. ಧನಂಜಯ್ ಅಭಿಮಾನಿಗಳಿಗೆ ವಂದನೆ ಸಲ್ಲಿಸಿದ್ದಾರೆ. ಕುಟುಂಬ, ಸ್ನೇಹಿತರು, ಮಾಧ್ಯಮ, ಪೊಲೀಸ್ ಇಲಾಖೆ ಹಾಗೂ ಚಿತ್ರರಂಗದ ಗೆಳೆಯರಿಗೆ ಕೃತಜ್ಞತೆ ಅರ್ಪಿಸಿದ್ದಾರೆ.

ಕನ್ನಡ ಚಿತ್ರರಂಗದ ನಟ ರಾಕ್ಷಸ ಡಾಲಿ ಧನಂಜಯ್ ಮತ್ತು ಡಾಕ್ಟರ್ ಧನ್ಯತಾ ಫೆಬ್ರವರಿ 16ರಂದು ಮೈಸೂರಿನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಮೂರ್ನಾಲ್ಕು ದಿನ ನಡೆದಿರುವ ಕಾರ್ಯಕ್ರಮದಲ್ಲಿ ಎರಡು ದಿನ ಸೆಲೆಬ್ರಿಟಿಗಳಂತೆ ಜನ ಸಾಮಾನ್ಯರಿಗೂ ಭಾಗಿಯಾಗಲು ಅವಕಾಶವಿತ್ತು. ಸುಮಾರು 75 ಸಾವಿರ ಜನರು ಆಗಮಿಸಿರುವ ಈ ಸಮಾರಂಭದಲ್ಲಿ ಯಾವುದೇ ಅಡೆತಡೆ ಇಲ್ಲ ಸುಸೂತ್ರವಾಗಿ ನಡೆದಿದೆ. ಹೀಗಾಗಿ ಇನ್‌ಸ್ಟಾಗ್ರಾಂನಲ್ಲಿ ಧನು ವಂದನೆ ಪೋಸ್ಟ್ ಹಂಚಿಕೊಂಡಿದ್ದಾರೆ.

ಮದುವೆ ಮುಗಿದ ಮೇಲೆ ಧನಂಜಯ್ ತಮ್ಮ ಪತ್ನಿ ಧನ್ಯತಾರನ್ನು ಕರೆದುಕೊಂಡು ಅಭಿಮಾನಿಗಳಿಗೆ ಎಂದು ಮಾಡಿರುವ ವಿದ್ಯಾಪತಿ ದ್ವಾರದಲ್ಲಿ ವಂದನೆ ತಿಳಿಸಿದ್ದರು. ಮಂಡಿಯೂರಿ ಧನ್ಯವಾದಗಳನ್ನು ಹೇಳಿದ್ದಾರೆ. ಇದೇ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾರೆ.

ಬಾಯ್ಸ್‌ vs ಗರ್ಲ್ಸ್‌ ಶೋನಲ್ಲಿ 2 ವಾರದಿಂದ ಹನುಮಂತು ಮಿಸ್ಸಿಂಗ್; ಗುಡ್‌ ಬೈ ಸುಳಿವು ಕೊಟ್ರಾ?

ಧನಂಜಯ್ ಪೋಸ್ಟ್‌ ಹೀಗಿದೆ: 

ಎಲ್ಲರಿಗೂ ನಮಸ್ಕಾರ,

ಮದುವೆಗೆ ಬಂದು ಹರಸಿದ, ಬರಲಾಗದೆ ಇದ್ದರು ಶುಭಾಶಯಗಳನ್ನು ತಿಳಿಸಿದ ಎಲ್ಲರಿಗೂ ಹೃದಯಪೂರ್ವಕ ನಮನಗಳು.

ಯಾವುದೇ ತೊಂದರೆ ಆಗದೆ ಸಮಾರಂಭ ಚೆನ್ನಾಗಿ ಆಗುವಲ್ಲಿ ಕುಟುಂಬದ ಜೊತೆ ಸ್ನೇಹಿತರು, ನೆಂಟರು, ಇಷ್ಟರು, ಮಾಧ್ಯಮ, ಪೊಲೀಸ್ ಇಲಾಖೆ, ಕಾರ್ಮಿಕರು, ಅಭಿಮಾನಿಗಳಾದಿಯಾಗಿ ಸಾಕಷ್ಟು ಜನರ ಶ್ರಮವಿದೆ. ಎಲ್ಲರಿಗೂ ತುಂಬು ಅಭಿಮಾನದ ಕೃತಜ್ಞತೆಗಳು.

ನಾನು ಬೆಂಗಳೂರಿನವಳೆಂದ್ರೆ ಯಾರೂ ನಂಬಲ್ಲ, ತುಳುವಿನಲ್ಲಿ ಮಾತನಾಡಿಸ್ತಾರೆ: ಸಪ್ತಮಿ ಗೌಡ

ತುಂಬ ಜನ ಸೇರಿದ್ದರಿಂದ, ಕೆಲವರಿಗೆ ನಮ್ಮನ್ನು ತಲುಪಲು ತೊಂದರೆಯುಂಟಾಗಿದ್ದಲ್ಲಿ, ತಲುಪಲು ಸಾಧ್ಯವಾಗಿರದಿದ್ದಲ್ಲಿ ದಯವಿಟ್ಟು ಕ್ಷಮೆಯಿರಲಿ, ಖಂಡಿತವಾಗಿಯೂ ಇನ್ನಷ್ಟು ಒಳ್ಳೆ ವಿಷಯಗಳೊಂದಿಗೆ ಮತ್ತೆ ಸಿಗುತ್ತೇವೆ. ಆಶೀರ್ವಾದವಿರಲಿ.
ಇಷ್ಟೆಲ್ಲದರ ಮಧ್ಯೆ ಬಂದು ಹರಸಿದ ನನ್ನ ಚಿತ್ರರಂಗದ ಗೆಳೆಯರು , ತಾರೆಯರು, ಕಾರ್ಮಿಕರು, ಹಾಗೂ ನಮಗಾಗಿ ಕೆಲಸಕ್ಕೆ ನಿಂತ ಪ್ರೊಡಕ್ಷನ್ ಮ್ಯಾನೇಜರ್ಸ್ ತಂಡಕ್ಕೆ, ಒಟ್ಟಾಗಿ ನನ್ನ ಚಿತ್ರರಂಗದ ಕುಟುಂಬಕ್ಕೆ ಹೃಯಪೂರ್ವಕ ನಮನಗಳು.

ಮದುವೆಯ ಮೆರಗು ಹೆಚ್ಚಿಸಿದ ಪ್ರೀತಿಯ ಅಭಿಮಾನಿಗಳಿಗೆ special thanks.
ತಾಯಿ ಚಾಮುಂಡೇಶ್ವರಿಗೆ ಭಕ್ತಿಪೂರ್ವಕ ನಮನಗಳು.

ಎಲ್ಲೋದ್ರು ಅಮೃತಾ ಅಯ್ಯಂಗಾರ್ ಎಂದು ಹುಡುಕಬೇಡಿ, ರಮ್ಯಾ ಜೊತೆನೇ ಇದ್ದಾರೆ; ಫೋಟೋ ವೈರಲ್

View post on Instagram