- Home
- Entertainment
- Sandalwood
- ನಾನು ಬೆಂಗಳೂರಿನವಳೆಂದ್ರೆ ಯಾರೂ ನಂಬಲ್ಲ, ತುಳುವಿನಲ್ಲಿ ಮಾತನಾಡಿಸ್ತಾರೆ: ಸಪ್ತಮಿ ಗೌಡ
ನಾನು ಬೆಂಗಳೂರಿನವಳೆಂದ್ರೆ ಯಾರೂ ನಂಬಲ್ಲ, ತುಳುವಿನಲ್ಲಿ ಮಾತನಾಡಿಸ್ತಾರೆ: ಸಪ್ತಮಿ ಗೌಡ
ಕಂಬಳ ಮತ್ತು ಕೋಲ ನೋಡಲು ಕರಾವಳಿಗೆ ಪ್ರಯಾಣ ಮಾಡಿದ ಸಪ್ತಮಿ ಗೌಡ. ಈಗ ಸಂಸ್ಕೃತಿ ಮತ್ತು ಸಂಪ್ರದಾಯ ಪಾಲಿಸುತ್ತಿದ್ದೀನಿ ಎಂದ ಸುಂದರಿ.

ಕನ್ನಡ ಚಿತ್ರರಂಗದ ಸುಂದರಿ ಸಪ್ತಮಿ ಗೌಡ ಇದೀಗ ಕೋಲ ಮತ್ತು ಕಂಬಳ ನೋಡಲು ಕರಾವಳಿ ಕಡೆ ಪ್ರಯಾಣ ಮಾಡಿದ್ದಾರೆ. ತಮ್ಮ ಅನುಭವ ಹೇಗಿತ್ತು ಎಂದು ಹಂಚಿಕೊಂಡಿದ್ದಾರೆ.
'ನಾನು ಕರಾವಳಿಯವಳು ಅಂದುಕೊಂಡು ಹಲವು ನನ್ನೊಟ್ಟಿಗೆ ತುಳು ಭಾಷೆಯಲ್ಲಿ ಮಾತನಾಡುತ್ತಾರೆ. ಇದು ಕಾಂತಾರ ಸಿನಿಮಾದ ಎಫೆಕ್ಟ್ ಎನ್ನಬಹುದು' ಎಂದು ಟೈಮ್ಸ್ ಆಫ್ ಇಂಡಿಯಾ ಸಂದರ್ಶನದಲ್ಲಿ ಸಪ್ತಮಿ ಮಾತನಾಡಿದ್ದಾರೆ.
'ನಾನು ಮೂಲತಃ ಬೆಂಗಳೂರಿನವಳು ಎಂದು ಹೇಳಿದರೂ ನಂಬುವುದು ಕಷ್ಟ. ಅವರ ಮುಖದಲ್ಲಿ ಬೇಸರ ಕಾಣಬಹುದು. ಕೆಲವೊಮ್ಮೆ ಕರಾವಳಿಯನ್ನು ನನ್ನ ಎರಡನೇ ಮನೆಯಾಗಿ ನೋಡುತ್ತೀನಿ'
'ಮೂರು ವರ್ಷ ಕಳೆದರೂ ಕೂಡ ಜನರು ನನ್ನನ್ನು ಕಾಂತಾರ ಚಿತ್ರದ ನಾಯಕಿ ಎಂದೇ ಮಾತನಾಡಿಸುತ್ತಾರೆ. ಆದರೆ ಕಂಬಳ ಸೀಸನ್ ಚಿತ್ರೀಕರಣ ಮಾಡುವಾಗ ಸಮಯದಲ್ಲಿ ನಾನು ಸೆಟ್‌ನಲ್ಲಿ ಇರಲಿಲ್ಲ'
'ಆದರೆ ಕೋಲ ಸೆರ್ಮನಿ ಸೀನ್ ಮಾಡುವಾಗ ನಾನು ಇದ್ದೆ. ಈಗ ಕುಂಬಳ ಮತ್ತು ಕೋಲ ಎರಡನ್ನೂ ನೇರವಾಗಿ ನೋಡಿರುವುದು ನಿಜಕ್ಕೂ ಖುಷಿ ಇದೆ. ಇದು ಜಸ್ಟ್ ಕಾರ್ಯಕ್ರಮಗಳು ಆಗಿರಲಿಲ್ಲ'
'ನಮ್ಮ ಮನಸ್ಸಿನಲ್ಲಿ ಹಾಗೆ ಉಳಿಯುತ್ತದೆ. ಜನರಿಗೆ ಯಾಕೆ ಅಷ್ಟು ಹತ್ತಿರವಾಗಿ ಭಾವನಾತ್ಮಕವಾಗಿ ಕನೆಕ್ಟ್ ಆಗಿದ್ದಾರೆ ಎಂದು ಈಗ ಅರ್ಥವಾಗುತ್ತಿದೆ. ಇದು ನಿಜಕ್ಕೂ ಸೆಂಟಿಮೆಂಟ್' ಎಂದು ಸಪ್ತಮಿ ಹೇಳಿದ್ದಾರೆ.
'ಕಾಂತಾರ ಸಿನಿಮಾದ ನಂತರ ನಾನು ಸಂಸ್ಕೃತಿ ಮತ್ತು ಸಂಪ್ರದಾಯಗಳ ಬಗ್ಗೆ ಹೆಚ್ಚಿಗೆ ತಿಳಿದುಕೊಂಡು ಪ್ರಮುಖ್ಯತೆ ನಿಡುತ್ತಿದ್ದೀನಿ. ನಮ್ಮ ಮನೆಯಲ್ಲಿ ದೇವರು ಅಂತ ಪೂಜೆ ಮಾಡುವುದು ಅಮ್ಮ ಒಬ್ಬರೇ. ಈಗ ಆ ಗಾಳಿ ನನಗೂ ಬರುತ್ತಿದೆ'