ಬಿಗ್‌ಬಾಸ್‌ 11 ವಿಜೇತ ಹನುಮಂತು ಈಗ 'ಬಾಯ್ಸ್‌ ವರ್ಸ್‌ ಗರ್ಲ್ಸ್‌' ರಿಯಾಲಿಟಿ ಶೋನಲ್ಲಿದ್ದಾರೆ. ಆದರೆ, ಎರಡು ವಾರಗಳಿಂದ ಕಾಣಿಸಿಕೊಂಡಿಲ್ಲ. ಹುಟ್ಟೂರಿನ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿರುವುದೇ ಕಾರಣ ಎನ್ನಲಾಗಿದೆ. ಶೋನಿಂದ ಹೊರ ನಡೆದಿದ್ದಾರೆ ಎಂಬ ವದಂತಿಗಳಿವೆ. ವೀಕ್ಷಕರು ಹನುಮಂತು ಮರಳುವಿಕೆಗಾಗಿ ಕಾಯುತ್ತಿದ್ದಾರೆ.

ಬಿಗ್ ಬಾಸ್ ಸೀಸನ್ 11ರ ವಿನ್ನರ್ ಹನುಮಂತು ಲಮಾಣಿ ಈಗ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. 5 ಕೋಟಿ ಕನ್ನಡಿಗರ ಪ್ರೀತಿ ಪಡೆದಿರುವ ಗಾಯಕ 'ಬಾಯ್ಸ್‌ ವರ್ಸ್‌ ಗರ್ಲ್ಸ್‌' ರಿಯಾಲಿಟಿ ಶೋನಲ್ಲಿ ಸ್ಪರ್ಧಿಸುತ್ತಿದ್ದರು. ಓಪನಿಂಗ್ ಎಪಿಸೋಡ್‌ನಲ್ಲಿ ದೋಸ್ತಾ ಧನರಾಜ್‌ ಆಚಾರ್ ಜೊತೆ ಮಸ್ತ ಮಾಡ್ಕೊಂಡು, ಹುಡುಗಿಯರ ಕಾಲು ಎಳೆಯುತ್ತಿದ್ದ ಹನುಮಂತು ಎರಡನೇ ವಾರದಿಂದಲೇ ಕಾಣಿಸುತ್ತಿಲ್ಲ. ಎಷ್ಟೇ ಆದ್ರೂ ವಿನ್ನರ್ ಅಲ್ವಾ ಬ್ಯುಸಿ ಇರಬೇಕು ಅಂದುಕೊಂಡರೆ ಮೂರನೇ ವಾರ ಕೂಡ ಬಂದಿಲ್ಲ. ಅಲ್ಲಿಗೆ ವೀಕ್ಷಕರಿಗೆ ಅನುಮಾನಗಳು ಹುಟ್ಟಿಕೊಂಡಿದೆ.....

ಹೌದು! ಎರಡು ವಾರ ಹನುಮಂತು ಕಾಣಿಸದ ಕಾರಣ ಶೋನಿಂದ ಹೊರ ನಡೆದಿದ್ದಾರೆ ಎನ್ನುವ ಸುದ್ದಿ ಹಬ್ಬಿದೆ. ಆದರೆ ಈ ವಿಚಾರದ ಬಗ್ಗೆ ಹನುಮಂತು ಯಾವುದೇ ಕ್ಲಾರಿಟಿ ನೀಡಿಲ್ಲ. ಹಾಗೆ ಶೋನಿಂದ ಹೊರ ಕೂಡ ನಡೆದಿಲ್ಲ. ಹನುಮಂತು ವಿನ್ನರ್ ಆಗಿರುವ ಕಾರಣ ತಮ್ಮ ಹುಟ್ಟೂರು ಹಾಗೂ ಉತ್ತರ ಕರ್ನಾಟಕದ ಮಂದಿ ಸಿಕ್ಕಾಪಟ್ಟೆ ಪ್ರೀತಿ ಕೊಟ್ಟಿದ್ದಾರೆ ಹೀಗಾಗಿ ಅಲ್ಲೆಲ್ಲಾ ಕಾರ್ಯಕ್ರಮಗಳು ನಡೆಯುತ್ತಿದೆ. ಹನುಮಂತು ವಿಶೇಷ ಅತಿಥಿಯಾಗಿ ಹೋಗುತ್ತಿದ್ದಾರೆ ಹಾಗೂ ಹಾಡುತ್ತಿದ್ದಾರೆ. ಈ ಕಾರಣಕ್ಕೆ ಎರಡನೇ ವಾರದ ಎಪಿಸೋಡ್‌ಗೆ ಬರುವುದಿಲ್ಲ ಎಂದು ತಿಳಿಸಿದ್ದರಂತೆ. ಆದರೆ ಮೂರನೇ ವಾರದ ಎಪಿಸೋಡ್?

ನನ್ನೆಲ್ಲಾ ಶಕ್ತಿ ನೀನೇ ಎಂದು ತಾಯಿಯನ್ನು ಮುದ್ದಾಡಿದ ಪವಿತ್ರಾ ಗೌಡ; ಫೋಟೋ ವೈರಲ್

ಒಂದು ವಾರ ಬಂದಿಲ್ಲ ಓಕೆ ಎರಡನೆ ವಾರನೂ ಬಂದಿಲ್ಲ ಅಂದ್ರೆ ಶೋಗೆ ಗುಡ್‌ ಬೈ ಹೇಳುವ ಸೂಚನೆ ಕೊಡುತ್ತಿದ್ದಾರೆ ಎನ್ನಬಹುದು. ಅಲ್ಲದೆ ಹನುಮಂತು ಇಲ್ಲದೆ ಶೋ ನೋಡಲು ಬೋರ್ ಆಗುತ್ತಿದೆ ಏನೂ ತಮಾಷೆ ಇಲ್ಲ ಹಾಗೆ ನಮ್ಮ ದೋಸ್ತನಿಗೆ ಜೋಡಿ ಇಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. ಈ ಹನುಮಂತು ಮತ್ತೆ ನಾಲ್ಕನೇ ವಾರದ ಎಪಿಸೋಡ್‌ಗೆ ಬರ್ತಾರಾ ಇಲ್ವಾ ಎಂದು ನೋಡಿದರೆ ಅವರ ಗುಡ್‌ ಬೈ ಗಾಸಿಪ್‌ ನಿಜ ಅಥವಾ ಸುಳ್ಳು ಎಂದು ತಿಳಿದುಬಿಡುತ್ತದೆ. ಇನ್ನು ಬಿಗ್ ಬಾಸ್ ಶೋನಿಂದ ಸುಮಾರು ಸ್ಪರ್ಧಿಗಳು ಈ ಶೋನಲ್ಲಿ ಇದ್ದಾರೆ. ಸ್ವತಃ ಆಂಕರ್‌ ಅನುಪಮಾ ಗೌಡ ಕೂಡ ಎರಡು ಸಲ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆಗೆ ಕಾಲಿಟ್ಟಿದ್ದಾರೆ ಹಾಗೂ ಒಂದು ಸಲ ವಿಶೇಷ ಅತಿಥಿಯಾಗಿ ಮಿಂಚಿದ್ದಾರೆ. 

ಬ್ಲೌಸ್‌ ಹಾಕದೆ ಸೀರೆ ಧರಿಸಿದ ಧನುಶ್ರೀ; ಬ್ರೇಕಪ್ ಆದ್ಮೇಲೆ ಶೋಕಿ ಶುರು ಎಂದು ಕಾಲೆಳೆದ ನೆಟ್ಟಿಗರು