ನಟ ಡಾರ್ಲಿಂಗ್‌ ಕೃಷ್ಣ ಅವರು ಸಿಸಿಎಲ್‌ನಲ್ಲಿ ಬ್ಯುಸಿ ಇದ್ದರೆ, ಇತ್ತ ಮನೆಯಲ್ಲಿರೋ ಮಗಳು ಅಪ್ಪನ ಸಿಕ್ಸರ್‌ ನೋಡಿ ಕೇಕೆ ಹಾಕಿ ಕುಣಿದಿದ್ದಾಳೆ. ವಿಡಿಯೋ ನೋಡಿ..

ನಟ ಡಾರ್ಲಿಂಗ್‌ ಕೃಷ್ಣ ಅವರು ಸಿಸಿಎಲ್‌ ಮ್ಯಾಚ್‌ನಲ್ಲಿ ಸಿಕ್ಸರ್‌, ಫೋರ್‌ ಬಾರಿಸುತ್ತಿದ್ದರೆ, ಇತ್ತ ಮನೆಯಲ್ಲಿ ಕೂತ ಮಗಳು ಪರಿ ಕೇಕೆ ಹಾಕುತ್ತಿದ್ದಾಳೆ. ಈ ವಿಡಿಯೋವನ್ನು ಮಿಲನಾ ನಾಗರಾಜ್‌ ಅವರೇ ಹಂಚಿಕೊಂಡಿದ್ದಾರೆ.

ಸಿಸಿಎಲ್‌ನಲ್ಲಿ ಡಾರ್ಲಿಂಗ್‌ ಬ್ಯುಸಿ! 
ಸಿಸಿಎಲ್‌ ಆಟ ಆಡೋದರಲ್ಲಿ ಡಾರ್ಲಿಂಗ್‌ ಕೃಷ್ಣ ಬ್ಯುಸಿ ಇದ್ದಾರೆ. ಕೃಷ್ಣ ಅವರು ಸಿಕ್ಸರ್‌ ಬಾರಿಸುತ್ತಿರೋದನ್ನು ನೋಡಿ ಅಲ್ಲಿದ್ದವರೆಲ್ಲ ಕೇಕೆ ಹಾಕುತ್ತಾರೆ. ಅದನ್ನು ಟಿವಿಯಲ್ಲಿ ನೋಡಿದ ಮಗಳು ಪರಿ ಕುಣಿದಿದ್ದಾಳೆ. ಈ ವಿಡಿಯೋವನ್ನು ಮಿಲನಾ ನಾಗರಾಜ್‌ ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 

ಮಗಳ ಜೊತೆ ಮೊದಲ ದೀಪಾವಳಿ ಆಚರಿಸುತ್ತಿರುವ 'ಲವ್ ಮಾಕ್ಟೇಲ್' ಜೋಡಿ; ಫೋಟೋ ವೈರಲ್!

ಕುಣಿದ ಮಗಳು ಪರಿ! 
“ನನ್ನ ಹೃದಯವನ್ನು ಗೆದ್ದ, ಎಲ್ಲ ಪಾಯಿಂಟ್ಸ್‌ಗಳಲ್ಲಿಯೂ ಸ್ಕೋರ್‌ ಮಾಡಿದ ವ್ಯಕ್ತಿಗೆ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು. ನೀವು ಫೀಲ್ಡ್‌ನಲ್ಲೂ, ನಿಜ ಜೀವನದಲ್ಲಿಯೂ ಚಾಂಪಿಯನ್.‌ ತಂದೆಯ ಬಗ್ಗೆ ಪರಿಗೆ ಹೆಮ್ಮೆಯಿದೆ. ನನ್ನ ಮಗಳಿಗೆ ಅವಳ ರಿಯಲ್‌ ಹೀರೋ ಯಾರು ಎಂದು ಗೊತ್ತಿದೆ” ಎಂದು ಮಿಲನಾ ನಾಗರಾಜ್‌ ಅವರು ಸೋಶಿಯಲ್‌ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ಯಶಸ್ಸಿನಲ್ಲಿ ಇದ್ದಾಗ ಬಂದು ಹೋಗೋ ಫ್ರೆಂಡ್ಸ್‌ ನಂಗೆ ಬೇಡ, ಕಷ್ಟದಲ್ಲಿದ್ದಾಗ ನಿಂತಿದ್ದು ಇವರೇ: ಅಮೃತಾ ಅಯ್ಯಂಗಾರ್

ಕಿಚ್ಚ ಸುದೀಪ್‌ ಟೀಂ! 
ಈ ವರ್ಷದ ಸಿಸಿಎಲ್‌ ಮ್ಯಾಚ್‌ ನಡೆಯುತ್ತಿದೆ. ನಟ ಕಿಚ್ಚ ಸುದೀಪ್‌ ಅವರು ಕರ್ನಾಟಕ ಬುಲ್ಡೋಜರ್ಸ್‌ ತಂಡದ ಕ್ಯಾಪ್ಟನ್‌ ಆಗಿದ್ದಾರೆ. ಈ ತಂಡದಲ್ಲಿ ಈ ಹಿಂದಿನಿಂದಲೂ ಡಾರ್ಲಿಂಗ್‌ ಕೃಷ್ಣ ಅವರು ಉತ್ತಮ ಆಟ ಆಡಿಕೊಂಡು ಬರುತ್ತಿದ್ದಾರೆ. 

ಸ್ನೇಹ-ಪ್ರೀತಿ ಮದುವೆ! 
‘ನಮ್‌ ದುನಿಯಾ ನಮ್‌ ಸ್ಟೈಲ್’ ಸಿನಿಮಾದಲ್ಲಿ ಮಿಲನಾ ನಾಗರಾಜ್‌, ಡಾರ್ಲಿಂಗ್‌ ಕೃಷ್ಣ ಕೆಲಸ ಮಾಡಿದ್ದರು. ಅಲ್ಲಿಂದ ಅವರಿಬ್ಬರ ಮಧ್ಯೆ ಸ್ನೇಹ ಬೆಳೆದು, ಪ್ರೀತಿಗೆ ತಿರುಗಿತ್ತು. ಇದಾದ ಬಳಿಕ ಇವರಿಬ್ಬರು ಸೇರಿ ʼಲವ್‌ ಮಾಕ್ಟೇಲ್ʼ‌ ಸಿನಿಮಾ ನಿರ್ಮಾಣ ಮಾಡಿದ್ದರು. ಛಾಯಾಗ್ರಹಣ, ಸಂಗೀತ ಬಿಟ್ಟು ಉಳಿದ ಎಲ್ಲ ಕೆಲಸಗಳನ್ನು ಇವರೇ ಹಂಚಿಕೊಂಡು ನಿಭಾಯಿಸಿದರು. ಈ ಸಿನಿಮಾ ಸೂಪರ್‌ ಡೂಪರ್‌ ಹಿಟ್‌ ಆಯ್ತು. ಇದಾದ ಬಳಿಕ ಈ ಜೋಡಿ 2021ರಲ್ಲಿ ಮದುವೆಯಾಯ್ತು. ಸೆಪ್ಟೆಂಬರ್‌ 5ಕ್ಕೆ ಈ ಜೋಡಿ ಹೆಣ್ಣು ಮಗುವಿನ ಪಾಲಕರಾಗಿ ಬಡ್ತಿ ಪಡೆದಿದ್ದಾರೆ. ಮಗಳಿಗೆ ಪರಿ ಎಂದು ಹೆಸರಿಟ್ಟಿದ್ದಾರೆ. ಈಗಾಗಲೇ ಮಗಳ ಜೊತೆ ಈ ಜೋಡಿ ವಿವಿಧ ರೀತಿಯಲ್ಲಿ ಫೋಟೋಶೂಟ್‌ ಮಾಡಿಸಿಕೊಂಡಿದೆ. ಇನ್ನು ಡಾರ್ಲಿಂಗ್‌ ಕೃಷ್ಣ ಅವರು ಸೋಶಿಯಲ್‌ ಮೀಡಿಯಾದಲ್ಲಿ ಮಗಳ ಫೋಟೋವನ್ನು ಹಂಚಿಕೊಳ್ಳುತ್ತಿರುತ್ತಾರೆ. 

6 ತಿಂಗಳಾದ್ರೂ ಬ್ಯಾಗ್‌ನಲ್ಲಿ ಚಾಕೊಲೇಟ್ ಹಾಗೆ ಇರುತ್ತೆ; ಮಿಲನಾ ಹ್ಯಾಂಡ್‌ಬ್ಯಾಗ್‌ ಸೀಕ್ರೆಟ್‌ ರಿವೀಲ್ ಮಾಡಿದ ಅನುಶ್ರೀ!
ಹೊಸ ಮನೆಗೆ ಕಾಲಿಟ್ಟರು! 
ಇನ್ನು ಮಿಲನಾ ನಾಗರಾಜ್‌ ಹಾಗೂ ಡಾರ್ಲಿಂಗ್‌ ಕೃಷ್ಣ ಅವರು ಸಾಕಷ್ಟು ಸಿನಿಮಾಗಳಲ್ಲಿ ಬ್ಯುಸಿಯಿದ್ದರು. ಚಿತ್ರರಂಗದಲ್ಲಿ ಆಕ್ಟಿವ್‌ ಆಗಿರುವ ಇವರು ಸಾಲ ಮಾಡಿ, ಸಿನಿಮಾ ನಿರ್ಮಾಣ ಮಾಡಿ, ಗೆದ್ದು ಆನಂತರದಲ್ಲಿ ಹೊಸ ಮನೆಗೆ ಕಾಲಿಟ್ಟಿದ್ದಾರೆ. ಇನ್ನು ಇವರ ಹಣದಲ್ಲಿ ಅದ್ದೂರಿಯಾಗಿ ಮದುವೆಯಾಗಿದ್ದಾರೆ. ಒಟ್ಟಿನಲ್ಲಿ ಇದು ಯಶಸ್ವಿ ಜೋಡಿ ಎನ್ನಬಹುದು. ಈ ಮೂಲಕ ಈ ಜೋಡಿ ಅನೇಕರಿಗೆ ಸ್ಪೂರ್ತಿ ಎನ್ನಬಹುದು. 

View post on Instagram

ಸಿನಿಮಾದಲ್ಲಿ ಮತ್ತೆ ಆಕ್ಟಿವ್!‌ 
ಮಿಲನಾ ನಾಗರಾಜ್‌ ಅವರು ʼಆರಾಮ್‌ ಅರವಿಂದ ಸ್ವಾಮಿʼ ಸಿನಿಮಾ ಕೆಲಸ ನಡೆಯುವಾಗ ಗರ್ಭಿಣಿಯಾಗಿದ್ದರು. ಆ ಟೈಮ್‌ನಲ್ಲಿಯೂ ಅವರು ಕೆಲಸದ ವಿಚಾರದಲ್ಲಿ ರಾಜಿ ಆಗಿರಲಿಲ್ಲ. ಮನೆಯಲ್ಲಿ ಪುಟ್ಟ ಮಗು ಇದ್ದರೂ ಕೂಡ, ಅವರು ಈ ಸಿನಿಮಾ ಪ್ರಚಾರದಲ್ಲಿ ಭಾಗಿಯಾಗಿದ್ದರು.