'ಲವ್ ಮಾಕ್ಟೇಲ್' ಖ್ಯಾತಿಯ ಅಮೃತಾ ಅಯ್ಯಂಗಾರ್, "ಕನ್ನಡದ ಕರೀನಾ ಕಪೂರ್" ಎನಿಸಿಕೊಂಡಿದ್ದಾರೆ. ಸರಳ ಸುಂದರಿಯಾದ ಅವರು, ಮಿಲನಾ ನಾಗರಾಜ್ ಮತ್ತು ಕೃಷ್ಣ ಅವರ ಬೆಂಬಲವನ್ನು ಶ್ಲಾಘಿಸಿದ್ದಾರೆ. ನಿಜವಾದ ಸ್ನೇಹ ಮತ್ತು ಆತ್ಮವಿಶ್ವಾಸ ಮುಖ್ಯವೆಂದು ಅಭಿಪ್ರಾಯಪಟ್ಟಿದ್ದಾರೆ. ಹಣಕ್ಕಿಂತ ಮಾನಸಿಕ ಸ್ಥಿತಿ ಮುಖ್ಯ ಎಂದು ಒತ್ತಿ ಹೇಳಿದ್ದಾರೆ.

ಲವ್ ಮಾಕ್ಟೇಲ್ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಯವಾದ ಅಮೃತಾ ಅಯ್ಯಂಗಾರ್ ಕನ್ನಡದ ಕರೀನಾ ಕಪೂರ್ ಎಂದೇ ಹೆಸರು ಪಡೆದಿದ್ದಾರೆ. ಬ್ಯಾಕ್ ಟು ಬ್ಯಾಕ್ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ ಅಮೃತಾ ಪಕ್ಕಾ ಮಿಡಲ್ ಕ್ಲಾಸ್ ಹುಡುಗಿ. ಯಾವುದೇ ಅಹಂ ಇಲ್ಲದೆ ಸಿಂಪಲ್ ಸುಂದರಿಯಾಗಿ ಮಿಂಚುತ್ತಿದ್ದಾರೆ. ಸಿನಿಮಾ ಇಂಡಸ್ಟ್ರಿಯಲ್ಲಿ ಸಿಕ್ಕಾಪಟ್ಟೆ ಫ್ರೆಂಡ್ಸ್ ಹೊಂದಿರುವ ಅಮೃತಾ ಎಂದೆಂದಿಗೂ ಮಿಲನಾ ನಾಗರಾಜ್‌ನ ಮರೆಯುವುದಿಲ್ಲ ಎಂದಿದ್ದಾರೆ.

'ನನ್ನನ್ನು ನಾನಾಗಿ ಒಪ್ಪಿಕೊಳ್ಳುವ ಜನರು ಬೇಕು. ಸಿನಿಮಾ ಚೆನ್ನಾಗಿ ಆಗಿದೆ ಅಂತ ಕಾಲ್ ಮಾಡುವವರು ಬೇಡ, ಚೆನ್ನಾಗಿ ಆಗಿಲ್ಲ ಅಂದ್ರೂ ತಲೆ ಕೆಡಿಸಿಕೊಳ್ಳಬೇಡ ಆರಾಮ್ ಆಗಿ ಮಾಡಲು ಅಂತ ಧೈರ್ಯ ಹೇಳುವ ಫ್ರೆಂಡ್ಸ್ ಬೇಕು. ಯಶಸ್ಸಿನಲ್ಲಿ ಬರುವವರು ನಮ್ಮ ಜೊತೆ ಇರುವುದಿಲ್ಲ ಬರ್ತಾರೆ ಬಿಟ್ಟು ಹೋಗ್ತಾರೆ. ಆ ತರ ಫ್ರೆಂಡ್ಸ್‌ಗಳನ್ನು ನಾನು ಮುಟ್ಟೇ ಇಲ್ಲ. ನಾನು ಕಷ್ಟದಲ್ಲಿ ಇದ್ದಾಗ ಮಿಲನಾ ಮತ್ತು ಕೃಷ್ಣ ನನ್ನ ಪರ ತುಂಬಾ ನಿಂತುಕೊಂಡರು. ಎಷ್ಟು ಟ್ರೋಲ್‌ಗಳು ಬರುತ್ತಿತ್ತು....ಏನ್ ಅಮೃತಾ ಹಿಂಗ್ ಮಾಡ್ಕೊಂಡೆ ಕಾಮೆಂಟ್ ನೋಡಿದೆ ನಾನು ಇರ್ಲಿ ಪರ್ವಾಗಿಲ್ಲ ಬಿಟ್ಟಾಕು ಅಂತಾರೆ ಕೃಷ್ಣ. ಮಿಲನಾ ನಾಗರಾಜ್‌ ನನಗೆ ಸಹೋದರಿ ಆಗಿಬಿಟ್ಟಿದ್ದಾರೆ. 

ನನ್ನ ಲೈಫ್‌ ಕಂಟ್ರೋಲ್ ಮಾಡುವ ಹಕ್ಕು ಆ ವ್ಯಕ್ತಿಗೆ ಕೊಟ್ಟಿದ್ದೆ; ಡಿಪ್ರೆಶನ್‌ಗೆ ಜಾರಿದ ನಟಿ ಅಮೃತಾ ಅಯ್ಯಂಗಾರ್

ಫೈನ್ಯಾಶಿಯಲ್ ಸೆಕ್ಯೂರಿಟಿ ತಪ್ಪು ಮಾಡಿಕೊಂಡವರನ್ನು ನಾನು ತುಂಬಾ ಜನರನ್ನು ನೋಡಿಬಿಟ್ಟಿದ್ದೀನಿ. ಹಣ ಕಾನು ತುಂಬಾನೇ ಮುಖ್ಯ ಆದರೆ ನಮ್ಮ ಮನಸ್ಸು ಮತ್ತು ತಲೆಯಲ್ಲಿ ಏನಿದೆ? ತೋರಿಸಿಕೊಳ್ಳಬೇಕು ತೋರಿಸಿಕೊಳ್ಳಬೇಕು ಅಂತನೇ ಇದ್ರೆ ನಾವು ಹಾಗೆ ಹೋಗ್ಬಿಡುತ್ತೀವಿ. ಮದುವೆ ಹೋಗುತ್ತಿದ್ದೀನಿ ನಾನು ಮೈಸೂರು ಸಿಲ್ಕ್‌ ಹಾಕಿಕೊಳ್ಳಬೇಕು ಅಂದಕ್ಕೆ ಮ್ಯಾಚ್ ಆಗುವ ಡೈಮೆಂಡ್ ಸರ ಹಾಕಿಕೊಳ್ಳಬೇಕು ಅನ್ನೋ ಯೋಚನೆಯಲ್ಲಿ ಇದ್ರೆ ಏನೂ ಉಪಯೋಗ ಇಲ್ಲ ಯಾಕೆ ಅಂದ್ರೆ ಅವತ್ತು ನೋಡ್ಕೊಂಡು ಹೋಗ್ತಾರೆ ಅಷ್ಟೇ ಯಾರು ಕೇರೆ ಮಾಡುವುದಿಲ್ಲ ಎಲ್ಲರ ಜೀವನದಲ್ಲೂ ಒಂದೊಂದು ನಡೆಯುತ್ತಿರುತ್ತದೆ. 

ಹೊಟ್ಟೆಯಲ್ಲಿದ್ದ ಮಗು ಎದೆಬಡಿತ ನಿಂತೋಗಿತ್ತು; ಮಗಳನ್ನು ಕಳೆದುಕೊಂಡು ಮಗನನ್ನು ಪಡೆದ ಘಟನೆ ನೆನೆದು ಅಮೃತಾ ಕಣ್ಣೀರು

YouTube video player