ಕೊನೆಗೂ ಮಿಲನಾ ನಾಗರಾಜ್‌ ಬ್ಯಾಗ್‌ನಲ್ಲಿರುವ ಸಣ್ಣ ಸೀಕ್ರೆಟ್‌ಗಳನ್ನು ರಿವೀಲ್ ಮಾಡಿದ ಅನುಶ್ರೀ. ಆರಾಮ್ ಅರವಿಂದ ಸ್ವಾಮಿ ಸಿನಿಮಾ ನೋಡಲು ರೆಡಿನಾ?

ಮಿಲನಾ ನಾಗರಾಜ್‌ ಮತ್ತು ಅನೀಶ್ ಅಭಿನಯದ ಆರಾಮ್ ಅರವಿಂದ್ ಸ್ವಾಮಿ ಸಿನಿಮಾ ಇದೇ ನವೆಂಬರ್ 22ರಂದು ರಾಜ್ಯಾದ್ಯಂತ ಬಿಡುಗಡೆ ಕಾಣುತ್ತಿದೆ. ಭರ್ಜರಿಯಾಗಿ ಸಿನಿಮಾ ಪ್ರಚಾರ ಮಾಡುತ್ತಿರುವ ತಂಡ ಅನುಶ್ರೀ ಅಂಕರ್ ಯೂಟ್ಯೂಬ್ ಚಾನೆಲ್‌ನಲ್ಲೂ ಕಾಣಿಸಿಕೊಂಡಿದ್ದಾರೆ. ಈ ವೇಳೆ ಮದರ್‌ಹುಡ್‌ ಎಂಜಾಯ್ ಮಾಡುತ್ತಿರುವ ಮಿಲನಾ ಬ್ಯಾಗ್‌ನಲ್ಲಿ ಏನಿದೆ ಎಂದು ಸಣ್ಣ ವಿಡಿಯೋ ರಿವೀಲ್ ಮಾಡಿದ್ದಾರೆ. 

'ನಾನು ಬ್ಯಾಗ್ ಬಳಸುವುದನ್ನು ಬಿಟ್ಟುಬಿಟ್ಟಿದ್ದೆ...' ಎಂದ ಮಿಲನಾ ಬ್ಯಾಗ್‌ನಿಂದ ಮೊದಲು ಫೋನ್ ಹೊರ ತೆಗೆಯುತ್ತಾರೆ. ಅಲ್ಲದೆ ಬ್ಯಾಗ್‌ನಿಂದ ಸಣ್ಣ ಪೌಚ್‌ ಹೊರ ತೆಗೆಯುತ್ತಾರೆ ಅದರಿಂದ ಎರಡು ಲಿಪ್‌ಬಾಮ್‌ ತೋರಿಸಿ ನನಗೆ ಲಿಪ್‌ಬಾಮ್‌ ಇರಲೇ ಬೇಕು ಇದಿಲ್ಲದೆ ನಾನು ಎಲ್ಲೂ ಹೋಗಲ್ಲ ಎರಡೂ ಬೇಕೇ ಬೇಕು ಎನ್ನುತ್ತಾರೆ. ಸ್ವಲ್ಪ ಲಿಪ್‌ಸ್ಟಿಕ್‌ಗಳನ್ನು ಕ್ಯಾರಿ ಮಾಡುತ್ತಾರೆ ಆದರೆ ಬ್ರ್ಯಾಂಡ್‌ ಮತ್ತು ಬಣ್ಣವನ್ನು ಅವಾಗ ಅವಾಗ ಬದಲಾಯಿಸಿಕೊಳ್ಳುತ್ತಾರಂತೆ. ಒಂದು ಹೇರ್‌ಬ್ಯಾಂಡ್ ಮತ್ತು ಎರಡು ಚಿಕ್ಕ ಪರ್ಫ್ಯೂಮ್‌ಗಳು ಇರುತ್ತದೆ....ಪರ್ಫ್ಯೂಮ್‌ಗಳು ಸೀಸನ್‌ಗೆ ತಕ್ಕ ಹಾಗೆ ಬದಲಾಗುತ್ತದೆ. ಬ್ಯಾಗ್‌ನಲ್ಲಿ ಸದಾ ಒಂದು ಚಾಕೊಲೇಟ್ ಇರುತ್ತದೆ ಯಾವುದಾದರೂ ಒಂದು ಆದರೆ ನಾನು ಅದನ್ನು ತಿನ್ನುವುದಿಲ್ಲ 6 ತಿಂಗಳಾದರೂ ಹಾಗೆ ಇರುತ್ತದೆ ಎಂದು ಮಿಲನಾ ಶಾಕಿಂಗ್ ಹೇಳಿಕೆ ಕೊಟ್ಟರು. ಒಂದು ಗ್ರೀನ್- ಟೀ ಪ್ಯಾಕೆಟ್‌ ಇಟ್ಟುಕೊಂಡಿದ್ದಾರೆ...ಇದು ಕೂಡ ಬ್ಯಾಗ್‌ನಲ್ಲಿ ಇಟ್ಟುಕೊಂಡು ಸುಮಾರು 2 ತಿಂಗಳು ಆಗಿದೆ ಯಾವತ್ತಿಗಾದರೂ ಬಳಕೆಗೆ ಬರಲಿದೆ ಎಂದು ಆದರೆ ಇನ್ನೂ ಬಳಸಿಲ್ಲವಂತೆ. ಫುಲ್ ಚಾರ್ಚ್ ಇರುವ ಏರ್‌ಪಾಡ್‌ ಮತ್ತು ಸ್ವಲ್ಪ ಹಣ ಇಟ್ಟುಕೊಂಡಿದ್ದಾರೆ....ಇಷ್ಟೆಲ್ಲಾ ಐಟಿಂಗಳ ಜೊತೆ ತಮ್ಮ ಚಿತ್ರದ ಟಿಕೆಟ್‌ ಇಟ್ಕೊಂಡು ಓಡಾಡುತ್ತಿದ್ದಾರೆ.

ಒಬ್ಬನಿಂದ ನಂಬಿಕೆ ದ್ರೋಹ ಮತ್ತೊಬ್ಬನಿಗೆ ಜಾತಿ ಮತಾಂತ; ಹಳೆ ಲವರ್‌ಗಳ ಅಸಲಿ ಸತ್ಯ

ಸೆಪ್ಟೆಂಬರ್‌ ತಿಂಗಳಿನಲ್ಲಿ ಮಿಲನಾ ನಾಗರಾಜ್‌ ಹೆಣ್ಣು ಮಗುವಿಗೆ ಜನ್ಮ ನೀಡುತ್ತಾರೆ. ಆರಾಮ್ ಅರವಿಂದ್ ಸ್ವಾಮಿ ಚಿತ್ರದ ರಿಲೀಸ್ ಡೇಟ್ ಆಗಲೇ ಅನೌನ್ಸ್ ಆಗಿದ್ದ ಕಾರಣ ಉಳಿದಿದ್ದ ಡಬ್ಬಿಂಗ್ ಕೆಲಸಗಳನ್ನು ಗರ್ಭಿಣಿ ಇದ್ದಾಗಲೇ ಮಾಡಿದ್ದಾರೆ. ಮಗಳು ಹುಟ್ಟಿ ಎರಡು ತಿಂಗಳು ಆಗಲಿಲ್ಲ ಆಗಲೇ ಸಿನಿಮಾ ಪ್ರಚಾರದಲ್ಲಿ ಮಿಲನಾ ಭಾಗಿಯಾಗುತ್ತಿರುವುದಕ್ಕೆ ನೆಟ್ಟಿಗರು ಆಶ್ಚರ್ಯವಾಗಿದ್ದಾರೆ. ಬಾಣಂತನ ಸರಿಯಾಗಿ ಮಾಡಿಸಿಕೊಳ್ಳಿ ಆರೋಗ್ಯ ಮುಖ್ಯ ಸಿನಿಮಾ ಆಮೇಲೆ ಎಂದು ಸಖತ್ ಪಾಸಿಟಿವ್ ಕಾಮೆಂಟ್ಸ್ ಮಾಡುತ್ತಿದ್ದಾರೆ. ಸಿನಿಮಾ ಕೆಲಸಗಳು ಮತ್ತು ಮಗಳು ಹಾಗೂ ಮನೆಯನ್ನು ಮಿಲನಾ ನಾಗರಾಜ್‌ ಅದ್ಭುತವಾಗಿ ಮ್ಯಾನೇಜ್ ಮಾಡುತ್ತಿದ್ದಾರೆ. 

View post on Instagram