ನಟ ದರ್ಶನ್ 10 ತಿಂಗಳ ನಂತರ 'ಡೆವಿಲ್' ಚಿತ್ರದ ಮುಂದುವರೆದ ಭಾಗದ ಚಿತ್ರೀಕರಣವನ್ನು ಮೈಸೂರಿನಲ್ಲಿ ಆರಂಭಿಸಲಿದ್ದಾರೆ. ಈ ನಡುವೆ, ಅಕ್ಕನ ಮಗ ಚಂದು ಸಿನಿಮಾದಿಂದ ದೂರ ಉಳಿದಿದ್ದಾರೆ. ಅಭಿಮಾನಿಯೊಬ್ಬರು ಚಂದುಗೆ ನಮಸ್ಕರಿಸಿದ ವಿಡಿಯೋದಿಂದ ಬೇಸರಗೊಂಡು, ಸ್ವಂತ ಸಾಧನೆಯಿಂದ ಗೌರವ ಪಡೆಯಬೇಕೆಂದು ದರ್ಶನ್ ಹೇಳಿದ್ದಾರೆ. ಚಂದು 'ಡೆವಿಲ್' ಸಿನಿಮಾದ ಅವಕಾಶ ಕಳೆದುಕೊಂಡಿದ್ದು, ದಿನಕರ್ ನಿರ್ದೇಶನದ ಹೊಸ ಚಿತ್ರದಲ್ಲಿ ನಟಿಸುವ ಸಾಧ್ಯತೆ ಇದೆ.

ನಟ ದರ್ಶನ್ ಸುಮಾರು 10 ತಿಂಗಳ ನಂತರ ಸಿನಿಮಾ ಶೂಟಿಂಗ್ ಶುರು ಮಾಡಲು ರೆಡಿಯಾಗಿದ್ದಾರೆ. ಅರ್ಧಕ್ಕೆ ನಿಂತಿದ್ದ ಡೆವಿಲ್ ಸಿನಿಮಾದ ಮುಂದುವರೆದ ಭಾಗ ಚಿತ್ರೀಕರಣವನ್ನು ಮೈಸೂರಿನಲ್ಲಿ ಮಾಡುತ್ತಿದ್ದಾರೆ. ಹೀಗಾಗಿ ತಾಯಿ ಚಾಮುಂಡೇಶ್ವರಿ ದರ್ಶನ ಪಡೆದು ಚಿತ್ರೀಕರಣ ಆರಂಭಿಸಲು ಮೈಸೂರು ಅಥಿತಿ ಗೃಹಕ್ಕೆ ಭೇಟಿ ನೀಡಲಿದ್ದಾರೆ. ಮಾರ್ಚ್ 15ರವರೆಗೂ ಚಿತ್ರೀಕರಣ ಮಾಡಲಾಗುತ್ತದೆ. ಎಲ್ಲವೂ ಪಾಸಿಟಿವ್ ಆಗಿ ನಡೆಯುತ್ತಿರುವ ಸಮಯಲ್ಲಿ ಚಂದುನ ಸಿನಿಮಾದಿಂದ ಹೊರ ಹಾಕಿದ್ದಾರೆ. 

ಹೌದು! ದರ್ಶನ್ ಅಕ್ಕನ ಮಗ ಚಂದು ಸಿನಿಮಾ ಇಂಡಸ್ಟ್ರಿಗೆ ಬರಲು ಎಲ್ಲಾ ತರಯಾರಿ ಮಾಡಿಕೊಳ್ಳುತ್ತಿದ್ದಾರೆ. ಮಾವ ದರ್ಶನ್ ಡೆವಿಲ್ ಸಿನಿಮಾದಲ್ಲಿ ಚಂದು ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾನೆ ಅನ್ನೋ ಸುದ್ದಿ ಇತ್ತು ಇದಕ್ಕೆ ಒಂದೆರಡು ಫೋಟೋಶೂಟ್ ಕೂಡ ಮಾಡಿಸಿದ್ದರು. ಆದರೆ ಈಗ ದರ್ಶನ್ ಇನ್‌ಸ್ಟಾಗ್ರಾಂನಲ್ಲಿ ಒಂದು ವಿಡಿಯೋ ಹಂಚಿಕೊಂಡು ಚಂದುನ ಸಿನಿಮಾದಿಂದ ದೂರ ಇಟ್ಟಿರುವುದು ತಿಳಿಸಿದ್ದಾರೆ. ಈ ಹಿಂದೆ ದರ್ಶನ್ ಅಭಿಮಾನಿಗಳು ಕಾರ್ಯಕ್ರಮ ಹಮ್ಮಿಕೊಂಡಿದ್ದರು ಅದಕ್ಕೆ ಚಂದು ವಿಶೇಷ ಅತಿಥಿಯಾಗಿ ಆಗಮಿಸಿದ್ದಾರೆ. ಜೀಪ್‌ನಿಂದ ಇಳಿಯುತ್ತಿದ್ದಂತೆ ದರ್ಶನ್ ಅಭಿಮಾನಿ ಹೋಗಿ ಚಂದು ಕಾಲಿಗೆ ನಮಸ್ಕಾರ ಮಾಡಿಕೊಳ್ಳುತ್ತಾರೆ. ವಿಡಿಯೋ ನೋಡಿ ಸಖತ್ ಬೇಸರ ಆಗಿದೆ ಎಂದು ದರ್ಶನ್ ಹಂಚಿಕೊಂಡಿದ್ದಾರೆ. ನನ್ನ ಮಗ ವಿನೀಶ್ ಅಥವಾ ಅಕ್ಕನ ಮಗ ಚಂದುಗೆ ಹತ್ತಿರವಾಗುವುದರಿಂದ ಅಥವಾ ಅತಿಯಾ ಪ್ರೀತಿಕೊಡುವುದರಿಂದ ನನಗೆ ಹತ್ತಿರವಾಗುತ್ತೀರಿ ಅನ್ನೋದನ್ನು ತಲೆಯಿಂದ ತೆಗೆಯಬೇಕು ಎಂದಿದ್ದಾರೆ. ಅವರೇ ಸ್ವಂತ ಸಾಧನೆ ಮಾಡಿದಾಗ ಈ ಗೌರವ ಕೊಡಿ ಎಂದು ಹೇಳಿದ್ದಾರೆ.

ನನ್ನ ಮೇಲಿನ ಅಭಿಮಾನಕ್ಕೆ ಅಕ್ಕನ ಮಗನ ಕಾಲಿಗೆ ಬೀಳುವುದು ನೋಡಿ ನೋವಾಗಿದೆ; ನಟ ದರ್ಶನ್ ಬೇಸರ

ಚಂದು ಸಿನಿಮಾ ಕಥೆ ಏನು?

ಚಂದು ಕೈಯಾರೆ ಮಾಡಿಕೊಂಡಿರುವ ಎಡವಟ್ಟಿನಿಂದ ಬಿಗ್ ಓಪನಿಂಗ್ ಸಿಗಬೇಕಿದ್ದ ಸಿನಿಮಾ ಮಿಸ್ ಆಗಿದೆ. ಡೆವಿಲ್ ಸಿನಿಮಾದಲ್ಲಿ ಅವಕಾಶ ಮಿಸ್ ಮಾಡಿಕೊಂಡರೂ ಸಮಸ್ಯೆ ಇಲ್ಲ ಏಕೆಂದರೆ ದಿನಕರ್ ಕಥೆ ರೆಡಿ ಮಾಡಿದ್ದಾರೆ. ದರ್ಶನ್ ತಮ್ಮ ದಿನಕರ್ ಸಿನಿಮಾದ ಸ್ಕ್ರಿಪ್ಟ್‌ ವರ್ಕ್‌ ಶುರು ಮಾಡಿದ್ದಾರೆ, ಜೂನ್‌ನಿಂದ ಶೂಟಿಂಗ್ ಶುರು ಮಾಡುವ ಪ್ಲ್ಯಾನ್ ಮಾಡಿದ್ದಾರೆ. ಈ ಸಿನಿಮಾ ದರ್ಶನ್ ಹೋಮ್ ಬ್ಯಾನರ್‌ನಿಂದ ಬರಲಿದು ಇದಕ್ಕೂ ಫ್ಯಾಮಿಲಿ ಸಪೋರ್ಟ್ ಇರಲಿದೆ. ದರ್ಶನ್ ಚಂದು ಬಗ್ಗೆ ಪೋಸ್ಟ್‌ ಮಾಡುತ್ತಿದ್ದಂತೆ ಇನ್‌ಸ್ಟಾಗ್ರಾಂ ಖಾತೆಯನ್ನು ಡೀ-ಆಕ್ಟಿವೇಟ್ ಮಾಡಿದ್ದಾರೆ. ಈ ವಿಚಾರದ ಬಗ್ಗೆ ಚಂದು ಕ್ಲಾರಿಟಿ ನೀಡಿಲ್ಲ. 

ಮಮ್ಮಿ ಸುಮಲತಾ ಮಾತ್ರವಲ್ಲ ಪುತ್ರ ವಿನೀಶ್‌ನೂ ಅನ್‌ಫಾಲೋ ಮಾಡಿದ ದರ್ಶನ್; ಯಾಕೆ ಈ ಗೇಟ್‌ಪಾಸ್‌?