ನಟ ದರ್ಶನ್ ಇನ್‌ಸ್ಟಾಗ್ರಾಮ್‌ನಲ್ಲಿ ಆರು ಜನರನ್ನು ಅನ್‌ಫಾಲೋ ಮಾಡಿರುವುದು ಚರ್ಚೆಗೆ ಗ್ರಾಸವಾಗಿದೆ. ಸುಮಲತಾ, ಅಭಿಷೇಕ್ ಅಂಬರೀಶ್, ಅವಿವಾ ಬಿಡ್ಡಪ್ಪ, ವಿನೀಶ್, ದಿನಕರ್ ತೂಗುದೀಪ್ ಮತ್ತು ಡಿ ಕಂಪನಿ ಪೇಜ್ ಅನ್ನು ಅವರು ಅನ್‌ಫಾಲೋ ಮಾಡಿದ್ದಾರೆ. ರೇಣುಕಾಸ್ವಾಮಿ ಪ್ರಕರಣದ ನಂತರ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ದರ್ಶನ್, 'ಡೆವಿಲ್' ಸಿನಿಮಾದ ಚಿತ್ರೀಕರಣದಲ್ಲಿ ಭಾಗವಹಿಸಲಿದ್ದಾರೆ. ಮೈಸೂರಿನಲ್ಲಿ ಮಾರ್ಚ್ 12 ರಿಂದ 15 ರವರೆಗೆ ಚಿತ್ರೀಕರಣ ನಡೆಯಲಿದೆ.

ಕನ್ನಡ ಚಿತ್ರರಂಗದ ನಟ ದರ್ಶನ್ ಇನ್‌ಸ್ಟಾಗ್ರಾಂ, ಫೇಸ್‌ಬುಕ್‌ ಮತ್ತು ಯೂಟ್ಯೂಬ್‌ನಲ್ಲಿ ಸಖತ್ ಆಕ್ಟಿವ್. ಅಭಿಮಾನಿಗಳಿಗೇ ಏನೇ ಅಪ್ಡೇಟ್ ನೀಡಬೇಕು ಅಂದ್ರೂ ಈ ಮೂಲಕ ಹಂಚಿಕೊಳ್ಳುತ್ತಾರೆ. ಬರೊಬ್ಬರಿ 2.3 ಮಿಲಿಯನ್ ಫಾಲೋವರ್ಸ್ ಹೊಂದಿರುವ ದರ್ಶನ್‌ ಫಾಲೋ ಮಾಡುತ್ತಿದ್ದಿದ್ದು ಮಾತ್ರ 6 ಜನರನ್ನು ಮಾತ್ರ. ಈ ಲಿಸ್ಟ್‌ನಲ್ಲಿ ಪತ್ನಿ ವಿಜಯಲಕ್ಷ್ಮಿ ಮತ್ತು ಸ್ನೇಹಿತೆ ಪವಿತ್ರಾ ಗೌಡ ಕೂಡ ಇರಲಿಲ್ಲ. ಆದರೆ ಈಗ ಈ 6 ಮಂದಿ ಯಾರು? ಯಾಕೆ ಇವರನ್ನು ಅನ್‌ಫಾಲೋ ಮಾಡಿರುವುದು? ಏನಿದರ ಉದ್ದೇಶ...ಹೊಸ ಗೇಟ್‌ಪಾಸ್‌ ಕಥೆ ಮೇಲೆ ಜನರಿಗೆ ಹುಟ್ಟಿಕೊಂಡಿದೆ ಕ್ಯೂರಿಯಾಸಿಟಿ. 

ಹೌದು! ರೇಣುಕಾಸ್ವಾಮಿ ಪ್ರಕರಣದಿಂದ ಜಾಮೀನು ಪಡೆದು ಹೊರ ಬಂದಿರುವ ನಟ ದರ್ಶನ್ ಇಷ್ಟು ದಿನ ಅರೋಗ್ಯ ಅಂತ ಓಡಾಡುತ್ತಿದ್ದರು. ಈಗ ಸಿನಿಮಾ ಕೆಲಸಗಳು ಶುರು ಮಾಡಲು ಮುಂದಾಗಿದ್ದಾರೆ. ಆದರೆ ಇದ್ದಕ್ಕಿದ್ದಂತೆ 6 ಮಂದಿಯನ್ನು ಅನ್‌ಫಾಲೋ ಮಾಡಿದ್ದಾರೆ. ಮಮ್ಮಿ ಎಂದು ಕರೆಯುತ್ತಿದ್ದ ಸುಮಲತಾ, ಅಂಬಿ ಪುತ್ರಿ ಅಭಿಷೇಕ್, ಅಂಬಿ ಸೊಸೆ ಅವಿವಾ ಬಿಡ್ಡಪ್ಪ, ಪುತ್ರ ವಿನೀಶ್ ಹಾಗೂ ಸಹೋದರ ದಿನಕರ್ ತೂಗುದೀಪ್ ಮತ್ತು ತಮ್ಮದೇ ಡಿ ಕಂಪನಿ ಪೇಜ್‌. ದರ್ಶನ್ ಈ ನಿರ್ಧಾರದ ಬಗ್ಗೆ ಭಾರಿ ಚರ್ಚೆ ಶುರುವಾಗಿದೆ. ಫ್ಯಾಮಿಲಿಯನ್ನು ದೂರವಿಟ್ಟಾಗ ದರ್ಶನ್ ಜೊತೆ ನಿಂತಿದ್ದು ಇವರೇ. ಅಂಬಿ ಫ್ಯಾಮಿಲಿಯಲ್ಲಿ ಏನೇ ನಡೆದರೂ ತಪ್ಪದೆ ಹಾಜರ್ ಆಗುವುದು ದರ್ಶನ್. ಇಷ್ಟು ಕ್ಲೋಸ್ ಇರುವವರ ನಡುವೆ ಬೆಂಕಿ ಹಚ್ಚಿದ್ದು ಯಾರು? ಅದಕ್ಕೆ ದರ್ಶನ್ ಯಾಕೆ ಗೇಟ್ ಪಾಸ್ ಕೊಡ್ತಿದ್ದಾರೆ ಅನ್ನೋದು ಜನರ ಪ್ರಶ್ನೆ. 

ಅಪ್ಪನ ಹತ್ರ ದುಡ್ಡು ತಗೋಂಡ್ರು ವಾಪಸ್ ಕೊಡ್ತೀನಿ, ಆರ್ಥಿಕವಾಗಿ ನಂಗೆ ಯಾವ ಕಷ್ಟನೂ ಇಲ್ಲ: ಮಿಲನಾ ನಾಗರಾಜ್

ತಕ್ಕಮಟ್ಟಕ್ಕೆ ಆರೋಗ್ಯದಲ್ಲಿ ಚೇತರಿಸಿಕೊಂಡಿರುವ ದರ್ಶನ್ ಈಗ ಡೆವಿಲ್ ಸಿನಿಮಾ ಚಿತ್ರೀಕರಣವನ್ನು ಮಾರ್ಚ್‌ 12 ರಿಂದ 15 ವರೆಗೂ ಮೈಸೂರಿನಲ್ಲಿ ಶೂಟ್ ಮಾಡಲಿದ್ದಾರೆ. ಚಿತ್ರತಂಡ ಸಂಪೂರ್ಣ ಪ್ಲ್ಯಾನಿಂಗ್ ನಡೆದಿದೆ. ಮಾರ್ಚ್‌ 14ರಂದು ಸರ್ಕಾರಿ ಅಥಿತಿ ಗೃಹದಲ್ಲಿ ಶೂಟಿಂಗ್, ಮಾರ್ಚ್ 15ರಂದು ಲಲಿತಮಹಲ್ ಪ್ಯಾಲೆಸ್‌ನಲ್ಲಿ ಶೂಟ್ ಮಾಡುತ್ತಾರಂತೆ. ಜೈಲಿನಿಂದ ಬಂದ ಮೇಲೆ ದರ್ಶನ್ ಸಿನಿಮಾ ಮಾಡುವುದಿಲ್ಲ, ಮಾಡಿರುವು ಸಿನಿಮಾ ನಿಂತಿದ್ದು ಅದನ್ನು ಸಂಪೂರ್ಣವಾಗಿ ನಿಲ್ಲಿಸುತ್ತಾರೆ, ಸಿನಿಮಾದಿಂದ ದೂರ ಉಳಿಯುತ್ತಾರೆ, ರಾಜಕೀಯಕ್ಕೆ ಬರುತ್ತಾರೆ ಎಂದು ಹೀಗೆ ಸಾಕಷ್ಟು ಗಾಸಿಪ್‌ಗಳು ಎದ್ದಿತ್ತು. ಆದರೆ ಆ ಗಾಸಿಪ್‌ಗಳಿಗಿಂತ ದೊಡ್ಡ ಸುದ್ದಿ ಆಗುತ್ತಿರುವುದು ಅನ್‌ಫಾಲೋ ಮಾಡಿರುವುದು. 

ನನ್ನನ್ನು ನಂಬಿ ಇಂಡಸ್ಟ್ರಿಗೆ ಕರ್ಕೊಂಡು ಬಂದಿದ್ದೇ ಚಿಕ್ಕಣ್ಣ, ಅಪ್ಪು ಸರ್ ಮಾತು ಮರೆತಿಲ್ಲ: ದರ್ಶಿನಿ