ನಟ ದರ್ಶನ್ 'ಡೆವಿಲ್' ಚಿತ್ರದ ಚಿತ್ರೀಕರಣವನ್ನು ಮೈಸೂರಿನಲ್ಲಿ ಪ್ರಾರಂಭಿಸಲಿದ್ದಾರೆ. ಬೆನ್ನು ಮತ್ತು ಕೈ ನೋವಿಗೆ ಚಿಕಿತ್ಸೆ ಪಡೆದ ನಂತರ, ಅವರು ಆರು ಜನರನ್ನು ದೂರವಿಟ್ಟಿದ್ದಾರೆ. ಅಕ್ಕನ ಮಗ ಚಂದುಗೆ ಅಭಿಮಾನಿಗಳು ತೋರಿಸುತ್ತಿದ್ದ ಪ್ರೀತಿಯನ್ನು ಪ್ರಶ್ನಿಸಿದ್ದಾರೆ. ಸಾಧನೆ ಮಾಡದ ಚಂದುಗೆ ಅಭಿಮಾನಿಯೊಬ್ಬರು ಕಾಲಿಗೆ ಬಿದ್ದಿದ್ದಕ್ಕೆ ಬೇಸರ ವ್ಯಕ್ತಪಡಿಸಿ, ಆತನನ್ನು ಚಿತ್ರದಿಂದ ಹೊರಗಿಟ್ಟಿದ್ದಾರೆ. ಅಭಿಮಾನಿಗಳು ಕಲೆ ಮತ್ತು ಸಾಧನೆಗೆ ಮಾತ್ರ ಬೆಲೆ ಸಿಗಬೇಕು ಎಂದು ದರ್ಶನ್ ಹೇಳಿಕೆಯನ್ನು ಮೆಚ್ಚಿದ್ದಾರೆ.

ಸ್ಯಾಂಡಲ್‌ವುಡ್‌ ನಟ ದರ್ಶನ್ ಕೆಲವು ದಿನಗಳಲ್ಲಿ ಡೆವಿಲ್ ಸಿನಿಮಾ ಶೂಟಿಂಗ್ ಆರಂಭಿಸಲಿದ್ದಾರೆ. ವಿಪರೀತ ಬೆನ್ನು ಮತ್ತು ಕೈ ನೋವು ಇದೆ ಎಂದು ಇಷ್ಟು ದಿನ ಚಿಕಿತ್ಸೆ ಪಡೆದರು. ಹೀಗಾಗಿ ಈ ಸಲ ಶೂಟಿಂಗ್ ಶೆಡ್ಯೂಲ್‌ನ ಮೈಸೂರಿನಲ್ಲಿ ಇಡಲಾಗಿದೆ. ಇದೇ ಸಮಯಕ್ಕೆ ದರ್ಶನ್ ಇಷ್ಟು ದಿನ ಫಾಲೋ ಮಾಡುತ್ತಿದ್ದ 6 ಮಂದಿಯನ್ನು ದೂರ ಇಟ್ಟಿದ್ದಾರೆ. ಅದಕ್ಕಿಂತ ಹೆಚ್ಚಾಗಿ ಅಕ್ಕನ ಮಗನಿಗೆ ಜನರು ಕೊಡುತ್ತಿದ್ದ ಪ್ರೀತಿಯನ್ನು ಪ್ರಶ್ನೆ ಮಾಡಿದ್ದಾರೆ.

'ಎಲ್ಲಾ ನನ್ನ ಸೆಲೆಬ್ರಿಟಿಸ್‌ಗಳಿಗೆ ಈ ಮೂಲಕ ತಿಳಿಸುವುದು ಏನೆಂದರೆ ನೀವು ನನ್ನ ಮತ್ತು ನನ್ನ ಕುಟುಂಬದ ಮೇಲೆ ಇಟ್ಟಿರುವ ಪ್ರೀತಿ ಅಭಿಮಾನಕ್ಕೆ ನಾವು ಸದಾ ಚಿರಋಣಿ. ಆದರೆ ಈ ವಿಡಿಯೋದಲ್ಲಿ ನಮ್ಮ ಮೇಲಿರುವ ಅಭಿಮಾನದಿಂದ ಇನ್ನೂ ಏನೂ ಸಾಧನೆ ಮಾಡದಿರುವ ನನ್ನ ಅಕ್ಕನ ಮಗನಾದ ಚಂದುಗೆ ಅಭಿಮಾನಿಯೊಬ್ಬರು ಕಾಲಿಗೆ ಬೀಳುವುದುನ್ನು ನೋಡಿ ನನ್ನ ಮನಸಿಗೆ ತುಂಬಾಗಿದೆ ಆದರಿಂದ ಡೆವಿಲ್ ಚಿತ್ರದಿಂದ ಹೊರಗಿಡಲಾಗಿದೆ' ಎಂದು ದರ್ಶನ್ ಬರೆದುಕೊಂಡಿದ್ದಾರೆ.

ಮಮ್ಮಿ ಸುಮಲತಾ ಮಾತ್ರವಲ್ಲ ಪುತ್ರ ವಿನೀಶ್‌ನೂ ಅನ್‌ಫಾಲೋ ಮಾಡಿದ ದರ್ಶನ್; ಯಾಕೆ ಈ ಗೇಟ್‌ಪಾಸ್‌?

'ಚಂದು ಅಥವಾ ನನ್ನ ಮಗ ವಿನೀಶ್‌ಗೆ ನೀವು ಅಭಿಮಾನದಿಂದಲೋ ಅಥವಾ ಅವರೊಂದಿಗೆ ಚೆನ್ನಾಗಿ ಗುರುತಿಸಿಕೊಂಡರೆ ನನಗೆ ಹತ್ತಿರವಾಗಬಹುದು ಎಂದು ನೀವು ಭಾವಿಸಿದರೆ ಅದನ್ನು ನಿಮ್ಮ ಮನಸ್ಸಿನಿಂದ ತೆಗೆದು ಹಾಕಿ. ನೀವು ಹೀಗೆ ಮಾಡುವುದು ನನಗೆ ಸ್ವಲ್ಪವೂ ಇಷ್ಟವಾಗುವುದಿಲ್ಲ' ಎಂದು ದರ್ಶನ್ ಬೇಸರ ವ್ಯಕ್ತ ಪಡಿಸಿದ್ದಾರೆ. 'ನಾನು ಬೆಳೀಬೇಕು ನನ್ ಮಕ್ಳು ಮಾತ್ರ ಬೆಳೀಬೇಕು ಅಂದ್ಕೊಳೋ ಜನಗಳ ಮದ್ಯೆ ಇಲ್ಲೊಬ್ಬ ಈತರ ಹೇಳಿದನಂತೆ 'ಕಲೆಗೆ ಮಾತ್ರ ಬೆಲೆ ಸಿಗಬೇಕು ಸಾಧನೆಗೆ ಮಾತ್ರ ಅಭಿಮಾನ ಸಿಗಬೇಕು ಕಷ್ಟ ಪಡದೆ ಯಾವುದು ಸುಲಭವಾಗಿ ಸಿಗಬಾರದು ಅದು ನನ್ನ ಸ್ವಂತ ಮಗನೆ ಆದ್ರೂ ಸಹ' ಅಂತ ಹೇಳಿದನಂತೆ, ಮೆಚ್ಚಿದೆ ಕಣಯ್ಯಾ ನಿನ್ನ, ಹೆಮ್ಮೆ ಇಂದ ಹೇಳ್ಕೋತೀನಿ ನಾನು ನಿಮ್ಮ ಅಭಿಮಾನಿ. ಟ್ರೊಲ್ ಮಾಡೋ ಬೆರೆಕೆ ಮಂದಿ ಮಾಡ್ಕೊಳಿ' ಎಂದು ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ. 

ನನ್ನನ್ನು ನಂಬಿ ಇಂಡಸ್ಟ್ರಿಗೆ ಕರ್ಕೊಂಡು ಬಂದಿದ್ದೇ ಚಿಕ್ಕಣ್ಣ, ಅಪ್ಪು ಸರ್ ಮಾತು ಮರೆತಿಲ್ಲ: ದರ್ಶಿನಿ

View post on Instagram