ಸದ್ಯ ಕೋರ್ಟ್​​ನಲ್ಲಿ ಈ ಕೊಲೆ ಪ್ರಕರಣದ ಚಾರ್ಜ್ ಪ್ರೇಮ್ ಮಾಡಲಾಗಿದೆ. ಶೀಘ್ರದಲ್ಲೇ ಟ್ರಯಲ್ ದಿನಾಂಕ ನಿಗದಿ ಮಾಡೋ ಸಾಧ್ಯತೆ ಇದೆ. ಸೋ ಜಾಮೀನು ಸಿಗುವವರೆಗೂ ದರ್ಶನ್ ಗೆ ಜೈಲೇ ಗತಿಯಾಗಲಿದೆ. ಏನೋ ಮಾಡಲು ಹೋಗಿ, ಏನೋ ಆಗೋಯ್ತು ನಟ ದರ್ಶನ್ ಬಾಳಲ್ಲಿ..

ಸುಪ್ರೀಂ ಕೋರ್ಟ್ ನಿಂದ ಬೇಲ್ ರದ್ದಾದ ಬಳಿಕ ನಟ ದರ್ಶನ್ ತೂಗುದೀಪ (Darshan Thoogudeepa) ಜೈಲು ಪಾಲಾಗಿ 101 ದಿನ ಕಳೆದಿವೆ. ಈ ಸಾರಿ ದರ್ಶನ್​ಗೆ ಜೈಲು ಅಕ್ಷರಶಃ ನರಕವಾಗಿ ಪರಿಣಮಿಸಿದೆ. ದಿಂಬು, ಹಾಸಿಗೆಗೆ ದಾಸ ಪರದಾಡೋ ಸ್ಥಿತಿ ಬಂದಿದೆ. ಇತ್ತ ದರ್ಶನ್ ನಟನೆಯ ದಿ ಡೆವಿಲ್ ರಿಲೀಸ್ ಆಗ್ತಾ ಇದ್ರೆ, ಅತ್ತ ದಾಸನ ಜೈಲುವಾಸದ ಶತದಿನೊತ್ಸವ ನಡೀತಾ ಇದೆ.

ದಾಸನ ಜೈಲುವಾಸ.. 101 ದಿನಗಳು ಕಂಪ್ಲೀಟ್..!

ಹೌದು, ರೇಣುಕಾಸ್ವಾಮಿ ಮರ್ಡರ್ ಕೇಸ್​​ನಲ್ಲಿ ಬೇಲ್ ರದ್ದಾದ ಮೇಲೆ ಮತ್ತೆ ಜೈಲು ಸೇರಿದ್ದ ದರ್ಶನ್ ಪರಪ್ಪನ ಅಗ್ರಹಾರದಲ್ಲಿ ನೂರೊಂದು ದಿನ ಕಳೆದಿದ್ದಾರೆ. ಸಿನಿಮಾರಂಗದಲ್ಲಿ ನೂರು ದಿನ ಅಂದ್ರೆ ಅದಕ್ಕೆ ಅದರದ್ದೇ ಸ್ಥಾನ ಇರುತ್ತೆ. ಶತದಿನೋತ್ಸವ ಅಂದ್ರೆ ಫಿಲ್ಮ್ ಮೇಕರ್ಸ್ ಪಾಲಿಗೆ ಸಂಭ್ರಮದ ಆಚರಣೆ ಆಗಿರುತ್ತೆ. ಆದ್ರೆ ದಾಸನ ಪಾಲಿಗೆ ಮಾತ್ರ ಜೈಲಿನಲ್ಲಿ ಶತದಿನೋತ್ಸವ ಆಚರಿಸೋ ಸ್ಥಿತಿ ಬಂದಿದೆ.

ಈ ಬಾರಿ ಜೈಲಿನಲ್ಲಿ ದರ್ಶನ್​ಗೆ ನರಕ ದರ್ಶನ..!

ಹೌದು ಕಳೆದ ಬಾರಿ ದರ್ಶನ್​ಗೆ ಜೈಲಿನಲ್ಲಿ ರಾಜಾತಿಥ್ಯ ಸಿಕ್ಕಿತ್ತು. ಅದು ಸುಪ್ರೀಂ ಕೋರ್ಟ್​​ನಲ್ಲೂ ಸದ್ದು ಮಾಡಿತ್ತು. ಸೋ ಈ ಸಾರಿ ದರ್ಶನ್ ಌಂಡ್ ಗ್ಯಾಂಗ್​ಗೆ ಜೈಲಿನಲ್ಲಿ ಫುಲ್ ಟೈಟ್ ಮಾಡಲಾಗಿದೆ. ಪ್ರತಿಯೊಂದು ವಿಚಾರಕ್ಕು ಕೋರ್ಟ್ ಮೊರೆ ಹೋಗುವಂತ ಸನ್ನಿವೇಶ ನಿರ್ಮಾಣ ಆಗಿದೆ.

ಹಾಸಿಗೆ, ಬೆಡ್ ಶೀಟ್, ದಿಂಬು, ವಾಕ್ ಮಾಡಲು ಜಾಗ, ಸೂರ್ಯನ ಬೆಳಕು ಕೂಡ ಸಿಕ್ತಿಲ್ಲ ಅಂತ ದರ್ಶನ್ ಕೋರ್ಟ್​ ಮುಂದೆ ಕಣ್ಣೀರಿಟ್ಟಿದ್ರು. ತಣ್ಣನೆ ವಾತಾವರಣದಿಂದ ಫಂಗಸ್ ಆಗಿದೆ ಅಂತಾ ಹೇಳ್ತಾ ವಿಷ ಕೊಟ್ಟು ಬಿಡಿ ಅಂತಾ ಕೋರ್ಟ್ ನಲ್ಲಿ ಮನವಿ ಮಾಡಿದ್ದು ದೊಡ್ಡ ಸುದ್ದಿಯಾಗಿತ್ತು.

ದಿಂಬು, ಬೆಡ್​ಶೀಟ್​ಗಾಗಿ 2 ತಿಂಗಳ ಹೋರಾಟ..!

ಹೌದು ಹಾಸಿಗೆ, ಬೆಡ್ ಶೀಟ್ ಗಾಗಿ ಅರ್ಜಿ ಹಾಕಿ ಕೋರ್ಟ್​​ನಲ್ಲಿ ಸತತ ಎರಡು ತಿಂಗಳು ಕಾನೂನು ಹೋರಾಟ ಮಾಡಬೇಕಾಯ್ತು ದರ್ಶನ್. ಕೊನೆಗೆ ಜೈಲಿನ ಮ್ಯಾನ್ಯುಯಲ್ ಪ್ರಕಾರ ಒದಗಿಸಲು ಕೋರ್ಟ್ ಆದೇಶ ನೀಡಿತು. ಮೊನ್ನೆಯ ವಿಚಾರಣೆಯಲ್ಲೂ ಮನೆಯಿಂದ ತಂದ ಕಂಬಳಿ ಕೊಟ್ಟಿಲ್ಲ ಅಂತ ಗೋಳಾಡಿದೆ ಡಿ ಗ್ಯಾಂಗ್.

ಈ ಹಿಂದೆ ಅರೆಸ್ಟ್ ಆಗಿದ್ದ ವೇಳೆ 131 ದಿನ ಜೈಲಿನಲ್ಲಿದ್ದ ದರ್ಶನ್ ಗೆ ಮಧ್ಯಂತರ ಬೇಲ್ ಸಿಕ್ಕಿತ್ತು. ಇದೀಗ ಮತ್ತೆ ನೂರೊಂದು ದಿನ ಕಳೆದಿದ್ದಾರೆ. ಈ ಸಾರಿಯ ಜೈಲುವಾಸವಂತೂ ಅಕ್ಷರಶಃ ನರಕ ದರ್ಶನ ಮಾಡಿಸಿದೆ.

ಸದ್ಯ ಕೋರ್ಟ್​​ನಲ್ಲಿ ಈ ಕೊಲೆ ಪ್ರಕರಣದ ಚಾರ್ಜ್ ಪ್ರೇಮ್ ಮಾಡಲಾಗಿದೆ. ಶೀಘ್ರದಲ್ಲೇ ಟ್ರಯಲ್ ದಿನಾಂಕ ನಿಗದಿ ಮಾಡೋ ಸಾಧ್ಯತೆ ಇದೆ. ಸೋ ಜಾಮೀನು ಸಿಗುವವರೆಗೂ ದರ್ಶನ್ ಗೆ ಜೈಲೇ ಗತಿಯಾಗಲಿದೆ.

ಡಿಸೆಂಬರ್ 11ಕ್ಕೆ ದಿ ಡೆವಿಲ್ ಚಿತ್ರ ಬಿಡುಗಡೆ; ಆದ್ರೆ ದಾಸನಿಗೆ ಯಾವಾಗ ಜೈಲಿನಿಂದ ಬಿಡುಗಡೆ..?

ಹೌದು ಇದೇ ಡಿಸೆಂಬರ್ 11ಕ್ಕೆ ದರ್ಶನ್ ನಟನೆಯ ದಿ ಡೆವಿಲ್ ಸಿನಿಮಾ ರಿಲೀಸ್ ಆಗ್ತಾ ಇದೆ. ನಾಯಕ ಸೆರೆಮನೆಯಲ್ಲಿರೋವಾಗಲೇ ಆತನ ನಟನೆಯ ಸಿನಿಮಾ ಪ್ರೇಕ್ಷಕರ ಎದುರು ಬರ್ತಾ ಇದೆ.

ಪ್ರೇಕ್ಷಕರಿಗೆ ಬಿಗ್​ಸ್ಕ್ರೀನ್ ಮೇಲೆ ದಾಸನ ದರ್ಶನ ಸಿಗಲಿದೆ. ಆದ್ರೆ ದಾಸನಿಗೆ ಯಾವಾಗ ಹೊರಜಗತ್ತಿನ ದರ್ಶನ ಆಗಲಿದೆ ಗೊತ್ತಿಲ್ಲ. ಸದ್ಯಕ್ಕಂತೂ ದಾಸನ ಜೈಲುವಾಸ ಶತದಿನ ಪೂರೈಸಿ ಮುಂದುವರೆದಿದೆ.

ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ..