ಉಪೇಂದ್ರ ಸರ್ ಹಾಗೂ ಶಿವಣ್ಣ ಈ ಇಬ್ಬರ ಪಾತ್ರಗಳೂ ಕೂಡ ತುಂಬಾ ಅದ್ಭುತವಾಗಿ ಮೂಡಿಬಂದಿವೆ. ಅವ್ರನ್ನ ಆನ್‌ಸ್ಕ್ರೀನ್‌ನಲ್ಲಿ ನೋಡೇದೇ ಒಂದು ಮಜಾ.. ಸಿನಿಮಾ ಕೂಡ ಅಷ್ಟೇ ಅದ್ಭುತವಾಗಿ ಮೂಡಿಬಂದಿದೆ ಅಂತ ಅಂದ್ಕೋತೀನಿ.. ಯಾಕೆ ಅಂದ್ರೆ, ಟ್ರೈಲರ್ ಹೇಳ್ತಿದೆ, ಇದು ಯಾವ ಥರದ ಕಥೆಯನ್ನು ಹೇಳ್ತಿದೆ ಅಂತ..

45 ಸಿನಿಮಾ ಟ್ರೈಲರ್ ನೋಡಿದ ರಿಷಬ್ ಶೆಟ್ಟಿ!

ನಾಳೆ, 15 ಡಿಸೆಂಬರ್ 2025ರಂದು ಬೆಂಗಳೂರಿನ ಶಂಕರ್‌ ನಾಗ್ ಸರ್ಕಲ್ ಬಳಿಯ ಸ್ಟೇಡಿಯಂನಲ್ಲಿ ಅರ್ಜುನ್ ಜನ್ಯಾ (Arjuna Janya) ಮೊಟ್ಟಮೊದಲ ನಿರ್ದೇಶನದ '45' ಸಿನಿಮಾದ ಟ್ರೈಲರ್ ಲಾಂಚ್ ಈವೆಂಟ್ ಇದೆ. ಅದರ ಪ್ರಮೋಶನ್‌ ವಿಡಿಯೋದಲ್ಲಿ ಕನ್ನಡದ ಖ್ಯಾತ ನಟ-ನಿರ್ದೇಶಕ ರಿಷಭ್ ಶೆಟ್ಟಿಯವರು (Rishab Shetty), ಆ ಟ್ರೈಲರ್ ನೋಡಿ ಮೆಚ್ಚಿ ಮಾತನ್ನಾಡಿದ್ದಾರೆ. ಹಾಗಿದ್ದರೆ 'ಕಾಂತಾರ' ನಿರ್ದೇಶಕರು 45 ಸಿನಿಮಾದ ಟ್ರೈಲರ್ ನೋಡಿ ಅದೇನು ಹೇಳಿದ್ದಾರೆ ನೋಡಿ..

ಅರ್ಜುನ್ ಜನ್ಯ ಮಾಡಿರುವ ಮೊದಲ ಸಿನಿಮಾ

'ನನ್ನ ಮೊದಲ ಸಿನಿಮಾದ ಮೊದಲ ಸಂಗೀತ ನಿರ್ದೇಶಕರಾದ ಅರ್ಜುನ್ ಜನ್ಯ ಮಾಡಿರುವ ಮೊದಲ ಸಿನಿಮಾ, ಒಬ್ಬ ನಿರ್ದೇಶಕರಾಗಿ.. ಪ್ರತಿಯೊಬ್ಬ ನಿರ್ದೇಶಕರಿಗೆ ಒಂದು ಸಿನಿಮಾ ಮಾಡಬೇಕಾದ್ರೆ ಹಲವಾರು ಕನ್ಸರ್ನ್ ಇರುತ್ತೆ.. ಯಾವ ಥರದ ಕಥೆಯನ್ನು ಹೇಳ್ಬೇಕು ನಾನು.. ಯಾವ ಥರದ ಜೋನರ್‌ನಲ್ಲಿ ಹೇಳ್ಬೇಕು? ಅದು ಎಷ್ಟು ದೊಡ್ಡ ಸ್ಕೇಲ್‌ನಲ್ಲಿ ಇರುತ್ತೆ..? ಎಲ್ಲಾ ವಿಷಯಗಳ ಬಗ್ಗೆ ಒಂದು ಕನ್ಸರ್ನ್ ಇರುತ್ತೆ..

ಆದ್ರೆ, ಫಸ್ಟ್ ಟೈಂ ಡೈರೆಕ್ಟರ್‌.. ಇಷ್ಟು ಅದ್ಭುತವಾದ ಪ್ಲಾನಿಂಗ್ ಜೊತೆಗೆ, ಇಷ್ಟು ದೊಡ್ಡ ಸ್ಕೇಲನ್ನು ಅಚೀವ್ ಮಾಡೋಕೆ ಹೊರಟಿರೋದೇ ಒಂದು ದೊಡ್ಡ ವಿಚಾರ ಅನ್ಸುತ್ತೆ.. ಜೊತೆಗೆ ಅದನ್ನು ಅಚೀವ್ ಮಾಡಿ, ಇವತ್ತು ಸಿನಿಮಾ ಕಂಪ್ಲೀಟ್ ಆಗಿ, ಈಗ ನಾನು ಟ್ರೈಲರ್ ನೋಡಿದೆ, 45 ಸಿನಿಮಾದ ಟ್ರೈಲರ್ ತುಂಬಾ ಅದ್ಭುತವಾಗಿ ಮೂಡಿಬಂದಿದೆ. ನನ್ನ ಫೇವರೆಟ್‌ಗಳಾದಂತಹ ಶಿವಣ್ಣ (Shivarajkumar) ಹಾಗೂ ಉಪ್ಪಿ ಸರ್ (Upendra) ಅವರಿಬ್ಬರ ಅಭಿನಯದಲ್ಲಿ ಬರ್ತಾ ಇರುವಂತಹ ಒಂದು ಸಿನಿಮಾ.

ಉಪೇಂದ್ರ ಸರ್ ಹಾಗೂ ಶಿವಣ್ಣ ಸಂಗಮ!

ಉಪೇಂದ್ರ ಸರ್ ಹಾಗೂ ಶಿವಣ್ಣ ಈ ಇಬ್ಬರ ಪಾತ್ರಗಳೂ ಕೂಡ ತುಂಬಾ ಅದ್ಭುತವಾಗಿ ಮೂಡಿಬಂದಿವೆ. ಅವ್ರನ್ನ ಆನ್‌ಸ್ಕ್ರೀನ್‌ನಲ್ಲಿ ನೋಡೇದೇ ಒಂದು ಮಜಾ.. ಸಿನಿಮಾ ಕೂಡ ಅಷ್ಟೇ ಅದ್ಭುತವಾಗಿ ಮೂಡಿಬಂದಿದೆ ಅಂತ ಅಂದ್ಕೋತೀನಿ.. ಯಾಕೆ ಅಂದ್ರೆ, ಟ್ರೈಲರ್ ಹೇಳ್ತಿದೆ, ಇದು ಯಾವ ಥರದ ಕಥೆಯನ್ನು ಹೇಳ್ತಿದೆ ಅಂತ.. ತುಂಬಾ ಮಾಸ್‌ ಆಗಿ, ಯುಂಬಾ ಥಾಟ್‌ಪ್ರೊವೋಕಿಂಗ್ ಆಗಿ ಮೂಡಿಬಂದಿದೆ ಅನ್ನೋ ಫೀಲ್ ಆಯ್ತು ನಂಗೆ.. 45 ಸಿನಿಮಾ ನೋಡಿ, ಇಡೀ ತಂಡಕ್ಕೆ ಆಶೀರ್ವದಿಸಿ ಅಂತ ನಾನು ಕೇಳ್ಕೋತೀನಿ..' ಎಂದಿದ್ದಾರೆ ಕನ್ನಡದ ಡಿವೈನ್ ಸ್ಟಾರ್ ಖ್ಯಾತಿಯ ನಟ ರಿಷಬ್ ಶೆಟ್ಟಿ.