ದೀಪಿಕಾ 8 ಗಂಟೆ ಕೆಲಸದ ಷರತ್ತು ಹಾಕ್ತಾರೆ. ದುಬಾರಿ ಸಂಭಾವನೆ ಕೇಳ್ತಾರೆ ಅನ್ನೋ ಆರೋಪಗಳಿವೆ. ಇವುಗಳನ್ನ ದೀಪಿಕಾ ಸಮರ್ಥನೆ ಮಾಡಿಕೊಂಡಿದ್ರು. ಆದ್ರೆ ಪ್ಯಾನ್ ಇಂಡಿಯಾ ಪ್ರಾಜೆಕ್ಟ್ಗಳಿಂದ ಹೊರಬಿದ್ದಿದ್ದು ಹಾಗೂ ಬಿಸಿನೆಸ್‌ನಲ್ಲಿ ಲಾಸ್ ಆಗಿದ್ದು ದೀಪಿಕಾ ಕಂಗಾಲಾಗುವಂತೆ ಮಾಡಿವೆ.
ದೀಪಿಕಾ ಬೆನ್ನುಬಿದ್ದ ದುರಾದೃಷ್ಟ?
ಬಾಲಿವುಡ್ ಬೆಡಗಿ, ನಟಿ ದೀಪಿಕಾ ಪಡುಕೋಣೆಗೆ (Deepika Padukone) ಅದ್ಯಾಕೋ ಅದೃಷ್ಟವೇ ನೆಟ್ಟಗಿಲ್ಲ. ಇತ್ತೀಚಿಗಷ್ಟೇ ಎರಡು ಬಿಗ್ ಪ್ಯಾನ್ ಇಂಡಿಯಾ ಸಿನಿಮಾಗಳಿಂದ ದೀಪಿಕಾ ಹೊರಬಿದ್ದಿದ್ರು. ಈಗ ನೋಡಿದ್ರೆ ದೀಪಿಕಾ ಒಡೆತನದ ಸ್ಕಿನ್ ಕೇರ್ ಕಂಪನಿ ಕೋಟಿ ಕೋಟಿ ನಷ್ಟದಲ್ಲಿ ಸಿಲುಕಿದೆ. ಸಾಲು ಹೊಡೆತಗಳಿಂದ ದೀಪಿಕಾ ಕಂಗಾಲಾಗಿದ್ದಾರೆ.
ದೀಪಿಕಾ ಪಡುಕೋಣೆ ಬೆನ್ನುಬಿದ್ದ ದುರಾದೃಷ್ಟ..!
ಕನ್ನಡತಿ, ದಶಕಗಳ ಕಾಲ ಇಂಡಿಯನ್ ಸಿನಿ ಇಂಡಸ್ಟ್ರಿ ಆಳಿದ ನಟಿ ದೀಪಿಕಾಗೆ ಅದ್ಯಾಕೋ ಈಗ ಅದೃಷ್ಟ ನೆಟ್ಟಗಿಲ್ಲ. ಅಸಲಿಗೆ ಕನ್ನಡದಲ್ಲಿ ಐಶ್ಚರ್ಯ ಅನ್ನೋ ಸಿನಿಮಾ ಮಾಡಿ ಆ ಬಳಿಕ ಬಾಲಿವುಡ್ಗೆ ಹಾರಿ, ನೋಡ್ ನೋಡ್ತಾನೇ ಬಾಲಿವುಡ್ ಕ್ವೀನ್ ಆದವರು ದೀಪಿಕಾ ಪಡುಕೋಣೆ.
ಬಾಲಿವುಡ್ನಿಂದ ಹಾಲಿವುಡ್ಗೂ ಹಾರಿದ್ದ ದೀಪಿಕಾ, ತನ್ನದೇ ಸಾಮ್ರಾಜ್ಯ ಕಟ್ಟಿಕೊಂಡಿದ್ರು. ದೀಪಿಕಾ ನಟಿಸಿದ ಪಠಾಣ್, ಜವಾನ್ ಮತ್ತು ಕಲ್ಕಿ ಸಿನಿಮಾಗಳು ಸಾವಿರ ಪ್ಲಸ್ ಕೋಟಿ ಗಳಿಸಿದ್ವು. ಹೀಗೆ 3-3 ಸಾವಿರ ಕೋಟಿ ಕ್ಲಬ್ ಸಿನಿಮಾ ಮಾಡಿರೋ ಏಕೈಕ ನಟಿ ದೀಪಿಕಾ ಪಡುಕೋಣೆ.
ಲಕ್ಕಿ ಲೇಡಿ ದೀಪಿಕಾಗೆ ಲಾಸ್ ಮೇಲೆ ಲಾಸ್..!
ಹೌದು ಲಕ್ಕಿ ಲೇಡಿ ಅಂತ ಕರೆಸಿಕೊಂಡಿದ್ದ ದೀಪಿಕಾಗೆ ಈಗ ಅದೃಷ್ಟ ಕೈ ಕೊಟ್ಟಿದೆ. ದೀಪಿಕಾ ಕೈ ಇಟ್ಟಲ್ಲೆಲ್ಲಾ ಬರೀ ಲುಕ್ಸಾನೇ ಆಗ್ತಾ ಇದೆ. ದೀಪಿಕಾ ಒಡೆತನದ ಸ್ಕಿನ್ ಕೇರ್ ಉದ್ಯಮ ಕಳೆದೆರಡು ವರ್ಷಗಳಿಂದಲೂ ಕೋಟಿ ಕೋಟಿ ಲಾಸ್ ಅನುಭವಿಸಿದೆ.
ಕೋಟಿ ಕೋಟಿ ನಷ್ಟದಲ್ಲಿ ದೀಪಿಕಾ ಉದ್ಯಮ..!
ದೀಪಿಕಾ ಪಡುಕೋಣೆ ‘82°E’ ಹೆಸರಿನ ಸೌಂದರ್ಯ ಬ್ರ್ಯಾಂಡ್ ಹೊಂದಿದ್ದಾರೆ. ಸ್ಕಿನ್ ಕೇರ್, ಮೇಕಪ್ ಪ್ರಾಡೆಕ್ಟ್ಗಳನ್ನ ಇದು ಮಾರಾಟ ಮಾಡುತ್ತೆ. 2024ರಲ್ಲಿ ಕಂಪನಿ 21.2 ಕೋಟಿ ರೂಪಾಯಿ ಬಿಸ್ನೆಸ್ ಮಾಡಿತ್ತು. ಅದು ಈಗ 14.7 ಕೋಟಿ ರೂಪಾಯಿಗೆ ಇಳಿಕೆ ಆಗಿದೆ. ಜೊತೆಗೆ 2024ರಲ್ಲಿ 23 ಕೋಟಿ ನಷ್ಟ ಆದರೆ ಈ ವರ್ಷ 12.3 ಕೊಟಿ ರೂಪಾಯಿ ನಷ್ಟ ಅನುಭವಿಸಿದೆ.
ತನ್ನ ವೃತ್ತಿ ಜೀವನದ ಉತ್ತುಂಗದಲ್ಲಿದ್ದಾಗ ದೀಪಿಕಾ ಸಖತ್ ಐಡಿಯಾ ಮಾಡಿದ್ರು. ಬೇರೆ ಸೌಂದರ್ಯವರ್ಧಕ ಕಂಪನಿಗಳ ಜಾಹೀರಾತಿನಲ್ಲಿ ನಟಿಸೋ ಬದಲು ತನ್ನದೇ ಸೌಂದರ್ಯ ವರ್ಧಕ ಕಂಪನಿ ಆರಂಭಿಸಿದ್ರೆ ದೊಡ್ಡ ಲಾಭ ಮಾಡಬಹುದು ಅಂತ ಡಿಪ್ಪಿ ಈ ‘82°E’ ಕಂಪನಿ ಹುಟ್ಟಿಹಾಕಿದ್ರು.
ಈ ಕಂಪನಿಗೆ ದೀಪಿಕಾ ನಾಮಬಲ ಇದ್ದರೂ, ಇದರ ಪ್ರಾಡೆಕ್ಟ್ಸ್ ಬಲು ದುಬಾರಿಯಾಗಿದ್ದು ಜನ ಇವುಗಳ ಕಡೆಗೆ ತಿರುಗಿ ನೋಡ್ತಾ ಇಲ್ಲ. ಸೋ ಅದೇನೇ ಗಿಮಿಕ್ ಮಾಡಿದ್ರೂ ವರ್ಷ ವರ್ಷ ಡಿಪ್ಪಿ ಕಂಪನಿಗೆ ಕೋಟಿ ಕೋಟಿ ನಷ್ಟವಾಗ್ತಾ ಇದೆ.
ಕಲ್ಕಿ, ಸ್ಪಿರಿಟ್ ಚಿತ್ರಗಳಿಂದ ಹೊರಬಿದ್ದ ನಟಿ..!
ಹೌದು ಒಂದು ಕಡೆ ಬಿಜಿನೆಸ್ ಲಾಸ್ ಆಗ್ತಿದ್ರೆ, ಇನ್ನೊಂದೆಡೆ ದೀಪಿಕಾ ಕೈಲಿದ್ದ ಎರಡು ಬಿಗ್ ಸಿನಿಮಾಗಳು ಇತ್ತೀಚಿಗಷ್ಟೇ ಕೈ ತಪ್ಪಿವೆ. ಮೊದಲು ದೀಪಿಕಾಳ ಕಂಡೀಷನ್ಸ್ ಅತಿಯಾಯ್ತು ಅಂತ ಸ್ಪಿರಿಟ್ ಚಿತ್ರದಿಂದ ನಟಿಯನ್ನ ಹೊರಹಾಕಲಾಗಿತ್ತು. ಆ ಬಳಿಕ ಕಲ್ಕಿ ಮೂವಿ ಸಿಕ್ವೆಲ್ನಿಂದಲೂ ದೀಪಿಕಾ ಹೊರಬಿದ್ದಿದ್ರು.
ದೀಪಿಕಾ 8 ಗಂಟೆ ಕೆಲಸದ ಷರತ್ತು ಹಾಕ್ತಾರೆ. ದುಬಾರಿ ಸಂಭಾವನೆ ಕೇಳ್ತಾರೆ ಅನ್ನೋ ಆರೋಪಗಳಿವೆ. ಇವುಗಳನ್ನ ದೀಪಿಕಾ ಸಮರ್ಥನೆ ಮಾಡಿಕೊಂಡಿದ್ರು. ಆದ್ರೆ ಇಷ್ಟು ದೊಡ್ಡ ಪ್ಯಾನ್ ಇಂಡಿಯಾ ಪ್ರಾಜೆಕ್ಟ್ಗಳಿಂದ ಹೊರಬಿದ್ದಿದ್ದು ದೀಪಿಕಾ ಕರೀಯರ್ಗೆ ದೊಡ್ಡ ಲಾಸ್ ಆಗಿತ್ತು. ಜೊತೆಗೆ ಬಿಜಿನೆಸ್ ಬೇರೆ ಲಾಸ್ನಲ್ಲಿ ಮುಳುಗಿದ್ದು ದೀಪಿಕಾನ ಕಂಗಾಲಾಗುವಂತೆ ಮಾಡಿವೆ.
ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ..


