2025ರಲ್ಲಿ ದರ್ಶನ್​​​​ ಪಾಲಿಗೆ ಹೇಗಿತ್ತು? ಸಿಹಿ ಹಾಗೂ ಕಹಿ ಎರಡೂ ಸಿಕ್ಕಿತ್ತು. ರೇಣುಕಾಸ್ವಾಮಿ ಕೊಲೆ ಕೇಸ್​​ನಲ್ಲಿ ಜೈಲು ಸೇರಿದ್ದ ದರ್ಶನ್​​​​​, ಪರಪ್ಪನ ಅಗ್ರಹಾರ ಹಾಗೂ ಬಳ್ಳಾರಿ ಜೈಲುವಾಸದಲ್ಲಿ ಶತಕದಿನವನ್ನು ಪೂರೈಸಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ರು. ಆದ್ರೆ ಮುಂದೇನಾಯ್ತು?

2024 ಟು 2026 ಪರಪ್ಪನ ಅಗ್ರಹಾರ.. ದಾಸ ಇನ್ & ಔಟ್!

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸ್ಯಾಂಡಲ್ ವುಡ್ ನಲ್ಲಿ ಬಿಂದಾಸ್​ಆಗಿ ಮೆರೆಯುತ್ತಿದ್ದ ನಟ ದರ್ಶನ್ (Darshan Thoogudeepa) ಜೈಲು ಸೇರಿ ಸರಿಯಾಗಿ ಎರಡು ವರ್ಷ ಕಳೆದಿದೆ. ಜೂನ್​11, 2024ರಂದು ದಾಸ ರೇಣುಕಾಸ್ವಾಮಿ ಕೊಲೆ ಆರೋಪ ಹೊತ್ತು ಪರಪ್ಪನ ಅಗ್ರಹಾರ ಸೇರಿದ್ರು. ಈ ಎರಡು ವರ್ಷದದಲ್ಲಿ ದಾಸನ ಬದುಕು ಹೇಗಾಗಿದೆ. ಏನೆಲ್ಲಾ ಘಟನೆಗಳು ನಡೆದಿವೆ ಅಂತ ನೋಡೋಣ ಬನ್ನಿ..

ನಟ ದರ್ಶನ್.. ಕನ್ನಡ ಚಿತ್ರರಂಗದ ಸ್ಟಾರ್ ನಟ.. ದೊಡ್ಡ ಅಭಿಮಾನಿ ಬಳಗ ಹೊಂದಿದ್ದ ಹೀರೋ.. ದಾಸನ ಸ್ಟಾರ್​​​ ಡಮ್​​​ ತುಂಬಾನೇ ಪೀಕ್​​ನಲ್ಲಿತ್ತು. ಮತ್ಯಾರಿಗೂ ಸಿಗದಷ್ಟು ಕನ್ನಡಿಗರ ಪ್ರೀತಿ ಆತನಿಗಿತ್ತು. ಆದ್ರೆ ರೇಣುಕಾಸ್ವಾಮಿ ಅನ್ನೋ ವ್ಯಕ್ತಿಯ ಒಂದು ಕೊಲೆ ದಚ್ಚು ಸಾಮ್ರಾಜ್ಯಕ್ಕೆ ಕೊಳ್ಳಿ ಇಟ್ಟಿತ್ತು. ದಾಸನ ರಾಜ್ಯ ಭಾರ ಮುಗಿದು ಬರೋಬ್ಬರು 2 ವರ್ಷ ಆಗಿದೆ. ಅಂದ್ರೆ ದರ್ಶನ್ ಕೊಲೆ ಕೇಸ್ ಆರೋಪದ ಮೇಲೆ ಮೊದಲ ಭಾರಿಗೆ ಜೈಲು ಸೇರಿದ್ದು, ಜೂನ್ 1ಟನೇ ತಾರೀಖು.

ದರ್ಶನ್​ ಜೈಲು ವಾಸ.. ಎರಡು ವರ್ಷದಲ್ಲಿ ಏನೆಲ್ಲಾ ಆಯ್ತು..? ದಾಸನ ಬಿಡುಗಡೆ ಬೇಲ್ ರಿಜೆಕ್ಟ್.. ಎದುರಾಯ್ತು ದೊಡ್ಡ ಶಾಕ್..!

ದರ್ಶನ್ ಜೈಲಿನಿಂದ ಹೊರ ಬರಬೇಕು ಅಂತ ಸುಪ್ರೀಂ ಕೋರ್ಟ್​​​ನಲ್ಲಿ ಬೆಲ್​​ ಅರ್ಜಿ ಹಾಕ್ತಾನೆ ಇದ್ದಾರೆ. ಆದ್ರೆ ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದಿವಾಲಾ ಹಾಗೂ ವಿಜಯ್​​ ಬಿಷ್ಣೋಯ್​​​ ಪೀಠ ಬೆಲ್​​​ ಅರ್ಜಿಯನ್ನು ವಜಾ ಮಾಡ್ತೋ ಅಲ್ಲಿಗೆ ದರ್ಶನ್​​ ಪಾಲಿಗಿದ್ದ ಕೊನೆಯ ಬಾಗಿಲು ಮುಚ್ಚಿಕೊಳ್ತು.. ಇದು ದರ್ಶನ್​​ಗೆ ದೊಡ್ಡ ಶಾಕ್ ಕೊಟ್ಟಿದೆ. ಇನ್ನೊಂದೊ ವರ್ಷ ದಚ್ಚು ಜೈಲಲ್ಲೇ ಇರಬೇಕಾದ ಸ್ಥಿತಿ ಇದೆ.

ಇನ್ನು ದಾಸನನ್ನ ಜೈಲು ಸೇರಿಸಿದ ಆ ಕೊಲೆ ಕೇಸ್​​ ಟೈಮ್​​ ಲೈನೂ ಏನು ಅನ್ನೋದನ್ನ ಈ ಸಂದರ್ಭದಲ್ಲಿ ನೋಡಲೇ ಬೇಕು.. ಯಾಕಂದ್ರೆ, ಈ ಟೈಮ್​​​ ಲೈನ್​​​ಗೆ ಇದೀಗ ಎರಡು ವರ್ಷ ಆಗ್ತಿದೆ ನೋಡಿ ಅದಕ್ಕೆ...

ಜೂನ್ 7, 2024 - ರೇಣುಕಾಸ್ವಾಮಿ ಅಪಹರಣ

ಜೂನ್​​​ 9, 2024 - ಸುಮ್ಮನಹಳ್ಳಿ ರಾಜಕಾಲುವೆಯಲ್ಲಿ ಮೃತದೇಹ ಪತ್ತೆ

ಜೂನ್​​​ 10. 2024 - ಕಾಮಾಕ್ಷಿಪಾಳ್ಯ ಪೊಲೀಸ್​​​ ಠಾಣೆಯಲ್ಲಿ

ತಪ್ಪೋಪ್ಪಿಕೊಂದು ನಾಲ್ವರು ಶರಣು

ಜೂನ್​​ 11, 2024 - ತನಿಖೆಯಲ್ಲಿ ದರ್ಶನ್​​​, ಪವಿತ್ರ ಹೆಸರು ಬೆಳಕಿಗೆ

ಮೈಸೂರಲ್ಲಿ ದರ್ಶನ್​​​​, ಬೆಂಗಳೂರಲ್ಲಿ ಪವಿತ್ರಾ ಬಂಧನ

ಈ ಟೈಮ್​ಲೈನ್​​​ನನ್ನು ದರ್ಶನ್​​​ ಅಭಿಮಾನಿಗಳಾಗಲಿ ರಾಜ್ಯದ ಜನ್ರಾಗಲಿ ಯಾವುದೇ ಕಾರಣಕ್ಕೂ ಮರೆಯೋದಕ್ಕೆ ಸಾಧ್ಯವಿಲ್ಲ.. ಯಾಕಂದ್ರೆ, ಇಡೀ ದೇಶಾದ್ಯಂತ ಈ ಕೊಲೆ ಕೇಸ್​​​ ಬಾರೀ ಸದ್ದು ಮಾಡಿತ್ತು.. ಸ್ಯಾಂಡಲ್​​​ವುಡ್​​ನ ಸ್ಟಾರ್​​ ನಟ ಕೊಲೆ ಕೇಸ್​​ನಲ್ಲಿ ಪ್ರಮುಖ ಆರೋಪಿ ಅನ್ನೋ ಕಾರಣಕ್ಕಾಗಿ.. ರಾಜ್ಯದಲ್ಲಂತೂ ಇವತ್ತಿಗೂ ಇದೊಂದು ಸೆನ್ಸೆಷನಲ್​​​ ಕೇಸ್​​..

ಜೈಲಿನಲ್ಲಿದ್ದೇ ಫ್ಯಾನ್ಸ್ ಡೆವಿಲ್ ಸಿನಿಮಾ ತೋರಿಸಿದ್ದ ದರ್ಶನ್..!

ದಾಸ ಜೈಲು ಸೇರಿ ಎರಡು ವರ್ಷ ಆಗೋಗಿದೆ.. ಜೈಲಲ್ಲಿದ್ರೂ ದರ್ಶನ್​​​​ ಈ ವರ್ಷವನ್ನ ಸಿನಿಮಾ ರಿಲೀಸ್​​ನೊಂದಿಗೆ ಆರಂಭಿಸಿದ್ರು. ಡೆವಿಲ್​​ ಸಿನಿಮಾವನ್ನು ಜೈಲಿನಿಂದಲೇ ಅಭಿಮಾನಿಗಳಿಗೆ ಅರ್ಪಿಸಿ, ಪತ್ನಿ ವಿಜಯಲಕ್ಷ್ಮಿ ಮೂಲಕ ಸಂದೇಶವನ್ನು ಕಳುಹಿಸಿದ್ರು..

ಜೈಲಿನಲ್ಲೇ ಆಯ್ತು ಹುಟ್ಟುಹಬ್ಬ, ವೆಡ್ಡಿಂಗ್ ಆನಿವರ್ಸರಿ..!

ಇದೇ ಸಂದರ್ಭದಲ್ಲಿ ಈ ವರ್ಷದ ಎರಡು ಇಂಪಾರ್ಟೆಂಟ್​​ ಇವೆಂಟ್​​ಗಳನ್ನು ದಾಸ ಮಿಸ್​​ ಮಾಡ್ಕೊಳ್ಳಬೇಕಾಯ್ತು.. ಮೊದಲನೆಯದು ತನ್ನದೇ ಬರ್ತ್​​​ ಡೇ.. ಹೌದು, ಫೆಬ್ರವರಿ 16 ರಂದು ದಾಸ ಹುಟ್ಟಿದ ದಿನ.. ಆ ದಿನವನ್ನ ಅಭಿಮಾನಿಗಳೊಂದಿಗೆ ಅದ್ದೂರಿಯಾಗಿ ಆಚರಣೆ ಮಾಡಿಕೊಳ್ಳೊದು ವಾಡಿಕೆ. ಆದ್ರೆ, ಈ ಸಲ ಆ ಅವಕಾಶವೇ ಸಿಗಲಿಲ್ಲ. ಜೈಲಲ್ಲಿದ್ದ ದಾಸನನ್ನ ನೋಡಲಿಕ್ಕೆ ಪತ್ನಿ ಹಾಗೂ ಮಗನಿಗೆ ಜೈಲಾಧಿಕಾರಿಗಳು ಅವಕಾಶವನ್ನ ಮಾಡಿಕೊಡಲಿಲ್ಲ.. ಹೀಗಾಗಿ ದಾಸ ಜೈಲಲ್ಲಿಯೇ ಏಕಾಂತವಾಗಿ ಕಾಲ ಕಳೆಯ ಬೇಕಾಯ್ತು..

ಮತ್ತೊಂದು ದಾಸ ಈ ವರ್ಷ ಮಿಸ್​​ ಮಾಡ್ಕೊಂಡ ಮತ್ತೊಂದು ಇಂಪಾರ್ಟೆಂಟ್​​ ಇವೆಂಟ್​​ ಅಂದ್ರೆ, ತನ್ನ ಮದುವೆ ವಾರ್ಷಿಕೋತ್ಸವ. 2003 ಮೇ 19ರಂದ ವಿಜಯ್​​​ ಲಕ್ಷ್ಮಿಯನ್ನು ದಾಸ ಧರ್ಮಸ್ಥಳದಲ್ಲಿ ಸರಳವಾಗಿ ಕೈ ಹಿಡಿದಿದ್ರು. ಆ 23ನೇ ವಾರ್ಷಿಕೋತ್ಸವವನ್ನ ದಾಸ ಜೈಲಲ್ಲಿಯೇ ಆಚರಿಸಕೊಳ್ಳಬೇಕಾಯ್ತು. ಬರ್ತ್​​ಡೇಗೆ ಮಿಸ್​​​ ಮಾಡ್ಕೊಂಡಿದ್ದ ವಿಜಯ್​​ ಲಕ್ಷ್ಮಿ , ಆ್ಯನಿವರ್ಸರಿಗೆ ದರ್ಶನ್​​ ಭೇಟಿಯನ್ನು ಮಿಸ್​​ ಮಾಡಿಕೊಳ್ಳಲಿಲ್ಲ.. ಜೈಲಲ್ಲಿ ಇಬ್ಬರಿಗೂ 30 ನಿಮಿಷಗಳ ಕಾಲ ದಾಸನನ್ನ ಭೇಟಿಗೂ ಅವಕಾಶ ಸಿಕ್ಕಿತ್ತು..

ಇದೇ ಸಂದರ್ಭದಲ್ಲಿ ಇನ್ನೊಂದು ವಿಷ್ಯವನ್ನ ನೆನಪು ಮಾಡಿಕೊಳ್ಳಲೇಬೇಕು.. ಯಾಕಂದ್ರೆ, ದಾಸ ಜೈಲು ವಾಸ ಶುರುವಾಗಿದ್ದೇ ಈ ಆನಿವರ್ಸರಿ ವೃತ್ತಾಂತದಿಂದ ಅಂದ್ರೆ ತಪ್ಪಾಗಲ್ಲ. 2024ರ 21ನೇ ವಿವಾಹ ವಾರ್ಷಿಕೋತ್ಸವವನ್ನು ದರ್ಶನ್​​ ಹಾಗೂ ವಿಜಯ್​​ ಲಕ್ಷ್ಮಿ ದುಬೈನಲ್ಲಿ ಆಚರಿಸಿಕೊಂಡಿದ್ರು. ಅಂದ್ರೆ, ರೇಣುಕಾಸ್ವಾಮಿ ಕೊಲೆಯಾಗುವುಕ್ಕೂ ಒಂದು ತಿಂಗಳು ಮುಂಚಿತವಾಗಿ.. ಅವತ್ತು ದರ್ಶನ್​​​ ಪತ್ನಿಗಾಗಿ ಹಾಡನ್ನ ಕೂಡ ಹಾಡಿದ್ರು.. ಇಬ್ಬರು ಜೊತೆ ಜೊತೆಯಲ್ಲಿ ಸ್ಟೆಪ್​​ ಹಾಕಿದ್ರು..

ಈ ಖುಷಿಯನ್ನ ವಿಜಯ್​​ ಲಕ್ಷ್ಮಿ ಸೋಶಿಯಲ್​ಮೀಡಿಯಾದಲ್ಲಿ ಪೋಸ್ಟ್​​ ಕೂಡ ಮಾಡಿಕೊಂಡ್ರು.. ಅಲ್ಲಿಗೆ, ದರ್ಶನ್​​ ಪಾಲಿನ ಸಂಭ್ರಮದ ದಿನಗಳು ಮುಗಿದು ಕರಾಳ ಅಧ್ಯಾಯವೇ ಆರಂಭವಾಗಿ ಹೋಯ್ತು.. ವಿಜಯ್​​ ಲಕ್ಷ್ಮಿ ಪೊಸ್ಟ್​​ಗೆ ಟಾಂಟ್​​ ನೀಡುವಂತೆ ಪವಿತ್ರಾ ಪೋಸ್ಟ್​​ ಮಾಡಿದ್ರು.. ಇಬ್ಬರ ಈ ವಾರ್​​ನಿಂದ ದರ್ಶನ್​​ ತಲೆ ಬಿಸಿಯಾಗಿತ್ತು.. ಆ ಬಳಿಕ ಪವಿತ್ರಾಳನ್ನ ಓಲೈಕೆ ಮಾಡೋದಕ್ಕೆ ಅಂತ ಹೋಗಿಯೇ ಈ ಎಲ್ಲಾ ಅವಾಂತರಗಳು ಘಟಿಸಿದ್ವು ಅಂತ ಹೇಳಲಾಗ್ತಿದೆ.

ಅಭಿಮಾನಿಗಳಿಗಾಗಿ ಹಲವು ಸಿನಿಮಾ ರೀ ರಿಲೀಸ್..!

ದರ್ಶನ್ ಜೈಲು ಸೇರಿದ್ಮೇಲೆ ಆತನ ಸಿನಿಮಾಗಳನ್ನು ರೀ ರಿಲಿಸ್​​ ಮಾಡುವ ಮೂಲ್ಕ ಪ್ರಡ್ಯೂಸರ್​​ಗಳು ಒಂದಿಷ್ಟು ಕಾಸು ಮಾಡಿಕೊಳ್ತಿದ್ದಾರೆ.. ಅಭಿಮಾನಿಗಳು ದರ್ಶನ್​​​​ ಸಿನಿಮಾಗಳನ್ನ ಥಿಯೇಟರ್​​ಗೆ ಬಂದು ನೋಡ್ತಾರೆ ಅನ್ನೋ ಕಾರಣಕ್ಕೆ ದರ್ಶನ್​​ ಅಭಿನಯದ ಕಲಾಸಿಪಾಳ್ಯ, ಸುಂಟರಗಾಳಿ, ಸಾರಥಿ, ಮೆಜೆಸ್ಟಿಕ್ ಸೇರಿದಂತೆ ಹಕಲವು ಸಿನಿಮಾಗಳು ರೀ ರಿಲೀಸ್ ಆಗಿವೆ.

ಈ ಮಧ್ಯೆ ದರ್ಶನ್ ಕಳೆದ 2025ರಲ್ಲಿ ದರ್ಶನ್​​​​ ಪಾಲಿಗೆ ಹೇಗಿತ್ತು ಅನ್ನೋದನ್ನ ನೋಡಿದ್ರೆ, ಸಿಹಿ ಹಾಗೂ ಕಹಿ ಎರಡೂ ಸಿಕ್ಕಿತ್ತು. ಯಾಕಂದ್ರೆ, ರೇಣುಕಾಸ್ವಾಮಿ ಕೊಲೆ ಕೇಸ್​​ನಲ್ಲಿ ಜೈಲು ಸೇರಿದ್ದ ದರ್ಶನ್​​​​​, ಪರಪ್ಪನ ಅಗ್ರಹಾರ ಹಾಗೂ ಬಳ್ಳಾರಿ ಜೈಲುವಾಸದಲ್ಲಿ ಶತಕದಿನವನ್ನು ಪೂರೈಸಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ರು. ಆ ವರ್ಷ ಪತ್ನಿ, ಮಗ ವಿನೀಶ್​​ ಜೊತೆಯಲ್ಲಿ ಹೊಸ ವರ್ಷ, ಸಂಕ್ರಾಂತಿ ಹಬ್ಬ ಮಾಡಿದ್ರು. ಅಷ್ಟೆ ಅಲ್ಲ ಡೆವಿಲ್ ಸಿನಿಮಾದ ಶೂಟಿಂಗ್ ಅಂತ ಥೈಲ್ಯಾಂಡ್​ಗೆ ಹೋಗಿದ್ರು. ದೇವಸ್ಥಾನಗಳಿಗೆ ಸುತ್ತಿದ್ರು.

2025 ರಲ್ಲಿ ಮತ್ತೆ ಜೈಲು ಸೇರಿದ ನಟ ದರ್ಶನ್..!

ಡೆವಿಲ್​ಸಿನಿಮಾ ಕೆಲಸ ಮುಗಿಸಿದ್ದ ನಟ ದರ್ಶನ್ ಸಿನಿಮಾ ಹಾಡಿನ ರಿಲೀಸ್​​ ಡೇಟ್​​​ ಅನೌನ್ಸ್​​ ಮಾಡ್ಕೊಂಡು ಕಾಯ್ತಿದ್ರೆ, ಅತ್ತ ಸುಪ್ರೀಂ ಕೋರ್ಟ್​ಶಾಕ್ ನೀಡ್ತು.. ಆಗಸ್ಟ್​​ 14ನೇ ತಾರೀಕು ಹೈಕೋರ್ಟ್​​​ ನೀಡಿದ್ದ ಜಾಮೀನನ್ನು ಸುಪ್ರೀಂ ರದ್ದು ಮಾಡ್ತು.. ಮತ್ತೆ ಮತ್ತೆ ದಾಸ ಪರಪ್ಪನ ಅಗ್ರಹಾರ ಜೈಲು ಸೇರಿದ್ರು. ಅಲ್ಲಿನಿಂದ ಇಲ್ಲಿ ತನಕ ದಚ್ಚು ಜೈಲಿನಲ್ಲೇ ಇದ್ದಾರೆ.

ಹೆಚ್ಚಿನ ಮಾಹಿತಿಗೆ ಸಿನಿಮಾ ಹಂಗಾಮ ನೋಡಿ..