ಗರ್ಭಿಣಿ ಹೆಂಡ್ತಿ, ತಂದೆ-ತಾಯಿ ಬಗ್ಗೆ ಯೋಚಿಸ್ಬೇಕಿತ್ತು, ಅಶ್ಲೀಲ ಮೆಸೇಜ್ ಕಳ್ಸಿದ್ದು ದೊಡ್ಡ ತಪ್ಪು,: ಅಗ್ನಿ ಶ್ರೀಧರ್
'ಅವನಿಗೆ ಸಂಬಂಧಪಟ್ಟ ಹೆಣ್ಣುಮಗಳಿಗೆ ಅಪರಿಚಿತನಿಂದ ಅಶ್ಲೀಲ ಮೆಸೇಜ್ ಮೂಲಕ ತೊಂದರೆ ಆಗುತ್ತಿದ್ದರೆ ಸಹಜವಾಗಿ ಕೋಪ ಯಾರಿಗಾದರೂ ಬರುತ್ತದೆ. ಆದರೆ, ಈ ವಿಷಯದಲ್ಲಿ ನಟ ದರ್ಶನ್ ದುಡುಕಿ ಕೊಲೆ ಆರೋಪಿ ಆಗಬೇಕಾಗಿರಲಿಲ್ಲ...
ಅಗ್ನಿ ಶ್ರೀಧರ್ (Agni Shridhar) ಅವ್ರು ನಟ ದರ್ಶನ್ ಏನ್ ಮಾಡ್ಬೇಕಿತ್ತು ಅಂತ ಹೇಳಿದಾರೆ. ಅಂದ್ರೆ, ನಟ ದರ್ಶನ್ (Actor Darshan) ಅವ್ರು ರೇಣುಕಾಸ್ವಾಮಿಯ ವಿಷಯದಲ್ಲಿ ದುಡುಕಿ ಕ್ರಮ ಕೈಗೊಳ್ಳುವ ಬದಲು ಯಾವ ದಾರಿಯಲ್ಲಿ ಹೋಗಿ ಅದನ್ನು ಹ್ಯಾಂಡಲ್ ಮಾಡುಬಹುದಿತ್ತು ಎಂದು ಸಲಹೆ ನೀಡಿದ್ದಾರೆ. ನಟಿ ಹಾಗು ದರ್ಶನ್ ಗೆಳತಿ ಪವಿತ್ರಾ ಗೌಡ ಅವರಿಗೆ ಚಿತ್ರದುರ್ಗದ ಮದುವೆಯಾಗಿರುವ ವ್ಯಕ್ತಿ ರೇಣುಕಾಸ್ವಾಮಿ ಅಶ್ಲೀಲ ಮೆಸೇಜ್ ಕಳುಹಿಸಿ ಕಾಟ ಕೊಟ್ಟಿದ್ದ.
ಪವಿತ್ರಾ ಗೌಡ ಬ್ಲಾಕ ಮಾಡುತ್ತಿದ್ದರೂ ಬೇರೆ ಬೇರೆ ಫೇಕ್ ಅಕೌಂಟ್‌ಗಳಿಂದ ಮೆಸೇಜ್ ಕಳಿಸಿ ಮಾನಸಿಕ ಕಿರುಕುಳಕ್ಕೆ ಕಾರಣನಾಗಿದ್ದ. ಕೊನೆಗೆ, ದರ್ಶನ್ ಮನೆಗೆಲಸದ ಪವನ್, ರೇಣುಕಾಸ್ವಾಮಿ ವಿಳಾಸ ತಿಳಿದುಕೊಂಡಿದ್ದ. ಪವನ್ ಮೂಲಕ ಈ ವಿಷಯ ನಟ ದರ್ಶನ್ ಗಮನಕ್ಕೆ ಬಂದು ದರ್ಶನ್ ಚಿತ್ರದುರ್ಗದ ರಘು ಎನ್ನುವವರ ಮೂಲಕ ರೇಣುಕಾಸ್ವಾಮಿಯನ್ನು ತಮ್ಮ ಮನೆಯ ಸಮೀಪ ರಾಜರಾಜೇಶ್ವರಿ ನಗರದ ಸಮೀಪದ ಶೆಡ್‌ಗೆ ಕರೆಸಿಕೊಂಡಿದ್ದರು.
ಕೊಳಕು ಕಾಮೆಂಟ್ಸ್ ಮಾಡೋರ್ನ ಬ್ಲಾಕ್ ಮಾಡ್ಬಿಡಿ, ದರ್ಶನ್ ಸರ್ ನಿರಪರಾಧಿ ಆಗಿ ಹೊರ ಬರ್ಲಿ: ಅದ್ವಿತಿ ಶೆಟ್ಟಿ
ಬಳಿಕ ಅಲ್ಲಿ ರೇಣುಕಾಸ್ವಾಮಿಯ ಮೇಲೆ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಒಟ್ಟೂ 17 ಜನರು ಹಲ್ಲೆ ಮಾಡಿ ಅವನ ಸಾವಿಗೆ ಕಾರಣರಾಗಿದ್ದಾರೆ. ಇದು ನಡೆದ ಘಟನೆ ಎನ್ನಲಾಗಿದ್ದು, ಈ ಸಾವಿನ ಹಿನ್ನೆಲೆಯಲ್ಲಿ ನಟ ದರ್ಶನ್, ಸ್ನೇಹಿತೆ ಪವಿತ್ರಾ ಗೌಡ ಸೇರಿದಂತೆ ಉಳಿದ 15 ಜನರ ಟೀಮ್ ಅನ್ನು ಬಂಧಿಸಿ ಸದ್ಯ ನ್ಯಾಯಾಂಗ ಬಂಧನದಲ್ಲಿ ಇಡಲಾಗಿದೆ.
ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೊಲೆ ಕೇಸ್‌ನಲ್ಲಿ ಆರೋಪಿಯಾಗಿರುವ ನಟ ದರ್ಶನ್ ಅವರ ಬಗ್ಗೆ ಹಿರಿಯ ಬರಹಗಾರ ಅಗ್ನಿ ಶ್ರೀಧರ್ ಅವರು ಮಾತನಾಡಿದ್ದಾರೆ. 'ನಟ ದರ್ಶನ್ ನನಗೆ ಗೊತ್ತಿರುವ ಹುಡುಗ. ತುಂಬಾ ಕಷ್ಟಪಟ್ಟು ಅವನ ತಂದೆ ತೂಗುದೀಪ ಶ್ರೀನಿವಾಸ್ ಮಗ ದರ್ಶನ್‌ನನ್ನು ಬೆಳೆಸಿದ್ದಾರೆ. ಜತೆಗೆ, ದರ್ಶನ್ ಕೂಡ ಹಾಲು ಮಾರಿ, ನಟನೆ ಕಲಿತುಕೊಂಡು ಕಷ್ಟಪಟ್ಟು ಈ ಎತ್ತರಕ್ಕೆ ಏರಿರುವ ಹುಡುಗ. ಅವನನ್ನು ಬಹಳಷ್ಟು ಬಾರಿಯೇನೂ ನಾನು ಭೇಟಿಯಾಗಿಲ್ಲ.
ಆದರೆ, ಮೊದಲು ಚೆನ್ನಾಗಿಯೇ ಇದ್ದ ಹುಡುಗ ಇತ್ತೀಚೆಗೆ ಮಿತಿಮೀರಿದ ಕುಡಿತ ಹಾಗೂ ಸಹವಾಸ ದೋಷದಿಂದ ಹಾಳಾಗಿದ್ದು ನನ್ನ ಗಮನಕ್ಕೂ ಬಂದಿದೆ. ಆದರೆ, ಸದ್ಯ ದರ್ಶನ್ ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ಆರೋಪಿಯಾಗಿದ್ದು ತನಿಖೆ ನಡೆಯುತ್ತಿದೆ. ಒಮ್ಮೆ ದರ್ಶನ್ ಈ ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪ ಕಾನೂನಿನ ಪ್ರಕಾರ ಸಾಬೀತಾದರೆ, ದರ್ಶನ್‌ಗೆ ರೂಲ್ಸ್ ಪ್ರಕಾರ ಶಿಕ್ಷೆಯಾಗುತ್ತದೆ.
ಅದನ್ನ ಮಾಡ್ಬೇಡ ಮನೆಗೋಗು ಅಂದ್ರು ವಿಷ್ಣು ಸರ್; ಆದ್ರೆ ವಾಸು ಸರ್ ಅದೇನೋ ಮಾಡ್ಬಿಟ್ರು: ನಟ ರಾಜೇಶ್
ಆದರೆ, ಈ ವಿಷಯದಲ್ಲಿ ನಟ ದರ್ಶನ್ ಆರೋಪಿ ಕೂಡ ಆಗಬೇಕಾಗಿರಲಿಲ್ಲ. ಏಕೆಂದರೆ, ಬಹಳ ಕಷ್ಟ ಪಟ್ಟು ಈ ಸ್ಥಾನವನ್ನು ಸಂಪಾದಿಸಿಕೊಂಡಿರುವ ಹುಡುಗ ದರ್ಶನ್, ಈ ಆರೋಪದಿಂದ ತನ್ನ ಸ್ಥಾನಕ್ಕೇ ಮಸಿ ಬಳಿದುಕೊಂಡಂತಾಗಿದೆ. ಅದೇನೇ ಆಗಿದ್ದರೂ ಅವನಿಗೆ ಸಂಬಂಧಿಸಿದ ಹೆಣ್ಣುಮಗಳೊಬ್ಬಳು ಯಾವನೋ ಅಪರಿಚಿತನಿಂದ ಅಶ್ಲೀಲ ಮೆಸೇಜ್ ಶೋಷಣೆಗೆ ಒಳಗಾಗಿದ್ದರೆ ಅದಕ್ಕೆ ದರ್ಶನ್ ಹೀಗೆ ಪರಿಹಾರ ಕಂಡುಕೊಳ್ಳಬೇಕಿತ್ತು ಎಂದಿದ್ದಾರೆ.
ಹಾಗಿದ್ದರೆ ಅಗ್ನಿ ಶ್ರೀಧರ್ ಏನು ಹೇಳಿದ್ದಾರೆ? 'ಅವನಿಗೆ ಸಂಬಂಧಪಟ್ಟ ಹೆಣ್ಣುಮಗಳಿಗೆ ಅಪರಿಚಿತನಿಂದ ಅಶ್ಲೀಲ ಮೆಸೇಜ್ ಮೂಲಕ ತೊಂದರೆ ಆಗುತ್ತಿದ್ದರೆ ಸಹಜವಾಗಿ ಕೋಪ ಯಾರಿಗಾದರೂ ಬರುತ್ತದೆ. ಆದರೆ, ದರ್ಶನ್ ತಮ್ಮ ಮೇಲೆ ಹಿಡಿತ ಕಳೆದುಕೊಳ್ಳಬಾರದಿತ್ತು. ಇದು ಸಾಕಷ್ಟು ಹೆಣ್ಣುಮಕ್ಕಳಿಗೆ ಆಗುತ್ತದೆ, ಅದೇ ರೀತಿ ಈ ಹೆಣ್ಣುಮಗಳಿಗೂ ಆಗಿದೆ. ನಮ್ಮ ದೇಶದಲ್ಲಿ ಈ ಅಪರಾಧದ ಬಗ್ಗೆ ಕಠಿಣ ಕಾನೂನು ಇಲ್ಲ.
ಅದಕ್ಕೆ, ಅಲ್ಲಿ ಚಿತ್ರದುರ್ಗದಲ್ಲಿರುವ ತನ್ನ ಪರಿಚಯದ ಹುಡುಗನಿಗೆ ಸ್ವತಃ ದರ್ಶನ್ ಕಾಲಿ ಮಾಡಿ 'ಆ ರೇಣುಕಾಸ್ವಾಮಿನ ಕರೆದು ಕುಳ್ಳಿರಿಸಿಕೊಂಡು, ಎರಡು ಕಪಾಳಕ್ಕೆ ಬಿಗಿದು ಬುದ್ದಿ ಹೇಳು ಅಂತ ಹೇಳಿದ್ದರೆ ಸಾಕಿತ್ತು. ಅಥವಾ ಸ್ವತಃ ದರ್ಶನ್ ಅವನಿಗೆ ಪರಿಚಯದ ಹುಡುಗನ ಮೂಲಕ ಕಾಲ್ ಮಾಡಿ 'ಇನ್ನು ಯಾವ ಹೆಣ್ಣುಮಕ್ಕಳಿಗೆ ಹೀಗೆ ಮಾಡ್ಬೇಡ' ಎಂದು ವಾರ್ನ್ ಮಾಡಿದ್ದರೆ ಸಾಕಿತ್ತು' ಎಂದಿದ್ದಾರೆ.
ನಟನೆ ಮಾಡು ಅಂದ್ರೆ ಮಾಡ್ಬಿಡ್ತೀನಿ, ಮಾಡ್ಬೇಡ ಅಂದ್ರೆ ತುಂಬಾ ಕಷ್ಟ: ಡಾ ರಾಜ್ ಹೀಗ್ ಹೇಳಿದ್ಯಾಕೆ?
ಆ ರೇಣುಕಾ ಸ್ವಾಮಿ ಕೂಡ ಕಂತ್ರಿ, ಕಜ್ಜಿ ನಾಯಿ ತರಹದವನೇ. ಯಾಕಂದ್ರೆ, ಪರಿಚಯನೇ ಇಲ್ಲದೇ ಇರೋ ಹೆಣ್ಣುಮಗಳಿಗೆ ಫೇಕ್ ಅಕೌಂಟ್ ಮೂಲಕ ಕೆಟ್ಟ ಕೊಳಕ ಅಸಭ್ಯ ಮೆಸೇಜ್ ಯಾಕೆ ಕಳಿಸಬೇಕು? ಬ್ಲಾಕ್ ಮಾಡಿದರೂ ಬಿಡದೇ ಮತ್ತೆ ಮತ್ತೆ ಫೇಕ್ ಅಕೌಂಟ್ ಕ್ರಿಯೇಟ್ ಮಾಡಿ ತೊಂದರೆ ಕೊಡುವುದು ಸರಿಯೇ? ಅವ್ನು ತನ್ನ ಗರ್ಭಿಣಿ ಹೆಂಡತಿ ಬಗ್ಗೆ, ವಯಸ್ಸಾದ ತಂದೆ-ತಾಯಿ ಬಗ್ಗೆ ಯೋಚಿಸಬೇಕಿತ್ತು.
ಅದನ್ನು ಬಿಟ್ಟು, ಯಾರೋ ಕಂಡಕಂಡವರಿಗೆಲ್ಲಾ ಯಾಕೆ ಮೆಸೇಜ್ ಮಾಡುವ ಕೆಟ್ಟ ಚಟ ಬೆಳೆಸಿಕಕೊಂಡಿದ್ದು? ಅದೂ ಕೂಡ ಘೋರ ಅಪರಾಧವೇ ಆಗಿದೆ. ಆದರೆ, ಅದಕ್ಕೆ ಇವರು ಕೊಟ್ಟ ಶಿಕ್ಷೆಯೂ ಕೂಡ ಇನ್ನೊಂದು ಅಪರಾಧ. ಒಟ್ಟಿನಲ್ಲಿ ಆ ಹುಡುಗ ಶುರು ಮಾಡಿದ ಕೆಟ್ಟ ಕೃತ್ಯ ಅವನ ಸಾವಿನಲ್ಲಿ ಅಂತ್ಯವಾಗಿದೆ, ಇವರಿಗೆ ಜೈಲು ವಾಸ ಶುರುವಾಗಿದೆ. ಇದು ಸಂಕಟ ಕೊಡುತ್ತಿರುವ ಸಂಗತಿ' ಎಂದಿದ್ದಾರೆ.
ನಟನೆ ಮಾಡು ಅಂದ್ರೆ ಮಾಡ್ಬಿಡ್ತೀನಿ, ಮಾಡ್ಬೇಡ ಅಂದ್ರೆ ತುಂಬಾ ಕಷ್ಟ: ಡಾ ರಾಜ್ ಹೀಗ್ ಹೇಳಿದ್ಯಾಕೆ?