ಮಾಡ್ಬೇಡ ಅಂದ್ರೆ ತುಂಬಾ ಕಷ್ಟ, ನಟನೆ ಮಾಡು ಅಂದ್ರೆ ಮಾಡ್ಬಿಡ್ತೀನಿ: ಅಣ್ಣಾವ್ರಿಗೂ ತುಂಬಾ ಕಷ್ಟ ಆಗಿತ್ತಂತೆ!
ನಟಸಾರ್ವಭೌಮ ಎಂದು ಕರೆಸಿಕೊಳ್ಳುತ್ತಿದ್ದ ಅಣ್ಣಾವ್ರು ಖ್ಯಾತಿಯ ಡಾ ರಾಜ್‌ಕುಮಾರ್ ಅವರಿಗೆ ಕೂಡ ಒಂದು ಪಾತ್ರವನ್ನು ಮಾಡುವುದು ತುಂಬಾ ಕಷ್ಟಕರ ಎನಿಸಿತ್ತು. ಲೆಕ್ಕವಿಲ್ಲದಷ್ಟು ಪ್ರಶಸ್ತಿ, ಮೆಚ್ಚುಗೆ ಗಳಿಸಿದ್ದ ಡಾ ರಾಜ್‌ಕುಮಾರ್..
ಡಾ ರಾಜ್‌ಕುಮಾರ್ (Dr Rajkumar) ಅವರಿಗೆ ಯಾರೋ ಒಬ್ಬರು ಒಂದು ಪ್ರಶ್ನೆ ಕೇಳಿದ್ದಾರೆ. 'ನಿಮಗೆ ತುಂಬಾ ಕಷ್ಟಕರ ಎನಿಸಿದ ಪಾತ್ರ ಯಾವುದು? ಇಲ್ಲಿತನಕ ನೀವು ಅಭಿನಯಿಸಿದ ಪಾತ್ರಗಳಲ್ಲೇ ಅತ್ಯಂತ ಕಷ್ಟಕರವಾದ ಪಾತ್ರ ಯಾವುದು' ಎಂಬುದೇ ಆ ಪ್ರಶ್ನೆ. ಅದಕ್ಕೆ ಡಾ ರಾಜ್ ಕೊಟ್ಟ ಉತ್ತರ ಏನಿತ್ತು ಗೊತ್ತಾ? 'ನಂಗೆ ತುಂಬಾ ಕಷ್ಟವಾಗಿದ್ದು ಆ ಸರ್ವಜ್ಞನ ಪಾತ್ರ' ಅಂತ ಅಂದ್ರಂತೆ. ಅದಕ್ಕೆ ಅಣ್ಣಾವ್ರು ವಿವರಣೆ ಕೂಡ ನೀಡಿದ್ದಾರೆ. ಸರ್ವಜ್ಞ ಮೂರ್ತಿ ಅಂತ ಸಿನಿಮಾ ಬಂದಿತ್ತು, ಹೌದು ಆದ್ರೆ, ಅದೇನೂ ಅಂತ ಹಿಟ್ ಆಗಿರೋ ಸಿನಿಮಾ ಏನೂ ಅಲ್ವಲ್ಲ!
ಅದಕ್ಕೆ ಯಾಕೆ ನಿಮ್ಗೆ ಅಷ್ಟೊಂದು ಕಷ್ಟ ಆಗ್ಬಿಡ್ತು?' ಎಂದಿದ್ದಕ್ಕೆ ಡಾ ರಾಜ್ 'ಡೈರೆಕ್ಟರ್ ಹೇಳ್ಬಿಟ್ರು, ಆ ಸರ್ವಜ್ಞ ಇದಾನಲ್ಲ, ಅವ್ನು ನಿರ್ಲಿಪ್ತ. ನಿರಾಧಾರಿ. ಅದ್ದರಿಂದ ನೀವು ಅಭಿನಯನೇ ಮಾಡ್ಲೇಬಾರ್ದು. ನಿಮ್ಮ ಮುಖದಲ್ಲಿ ಯಾವ ಭಾವನೆಯೂ ಇರಬಾರ್ದು. ಕರುಣೆಯೋ ತಿರಸ್ಕಾರವೋ, ಜಿಗುಪ್ಸೆಯೋ, ಪ್ರೀತಿಯೋ ಅಥವಾ ಇನ್ನೇನೋ, ಯಾವುದೂ ಇರಬಾರ್ದು. ಎಕ್ಸ್‌ಪ್ರೆಶನ್‌ಲೆಸ್ ಆಗ್ಬೇಕು..' ಅಂದಿದ್ರಂತೆ. ಅದಕ್ಕೆ ಡಾ ರಾಜ್ ಕುಮಾರ್ ಅವರು, 'ನಾನು ನಟನೆ ಮಾಡು ಅಂದ್ರೆ ಮಾಡ್ಬಿಡ್ತೀನಿ, ಆದ್ರೆ ಆಕ್ಟಿಂಗ್ ಮಾಡ್ಬೇಡ ಅಂದ್ರೆ ಕಷ್ಟ' ಎಂದಿದ್ದರಂತೆ.
ವಯಸ್ಕರ ಚಿತ್ರದಿಂದ ಹೊರಬಂದಿದ್ದು ಯಾಕೆ, ಲೀಲಾಜಾಲ ಬಿಟ್ಟ ಸೀಕ್ರೆಟ್ ಹೇಳ್ಬಿಟ್ರು ಸನ್ನಿ ಲಿಯೋನ್..!
ಹೌದು, ಒಬ್ಬ ನಟನಿಗೆ ನಟನೆ ಮಾಡು ಅಂದರೆ ಅದು ಲೀಲಾಜಾಲ. ಅವನ ಕೆಲಸವೇ ಅದು, ಅದನ್ನೇ ಅವನು ಮಾಡಬೇಕಾಗಿರುವುದು. ಆದರೆ, ಯಾವುದೇ ನಟನಿಗೆ ನಟನೆಯನ್ನೇ ಮಾಡಬೇಡ, ಸುಮ್ಮನೇ ಕ್ಯಾಮೆರಾ ಮುಂದೆ ಯಾವುದೇ ಭಾವನೆಯನ್ನೂ ತೋರಿಸದೇ ನಾನು ಹೇಳಿದ್ದನ್ನಷ್ಟೇ ಹೇಳು ಅಂದಾಗ ಅದು ಕಷ್ಟವಾಗುವುದು ಸಹಜ. ಆದರೆ ಡಾ ರಾಜ್‌ಕುಮಾರ್ ಅವರು ಅದನ್ನೂ ಒಂದು ಸವಾಲನ್ನಾಗಿ ಸ್ವೀಕರಿಸಿ ನಟನೆ ಮಾಡದೇ ಸಿನಿಮಾ ಮಾಡಿ ಮುಗಿಸಿದ್ದರಂತೆ. ಆದರೆ, ಆ ಚಿತ್ರ ಅಂದುಕೊಂಡಷ್ಟು ಯಶಸ್ವಿಯಾಗಲಿಲ್ಲ ಎಂಬುದು ಬೇರೆ ಮಾತು.
ಅದಿಲ್ಲ ಅಂದ್ರೆ ಮನುಷ್ಯ ಸತ್ತೋಗ್ಬಿಡ್ಬೇಕು, ಅದೂ ಒಂದ್ ಲೈಫಾ; ಯಶ್ ಪ್ರಶ್ನೆಗೆ ಉತ್ರ ಕೊಟ್ರಾ ಅನುಶ್ರೀ..?
ಒಟ್ಟಿನಲ್ಲಿ, ನಟಸಾರ್ವಭೌಮ ಎಂದು ಕರೆಸಿಕೊಳ್ಳುತ್ತಿದ್ದ ಅಣ್ಣಾವ್ರು ಖ್ಯಾತಿಯ ಡಾ ರಾಜ್‌ಕುಮಾರ್ ಅವರಿಗೆ ಕೂಡ ಒಂದು ಪಾತ್ರವನ್ನು ಮಾಡುವುದು ತುಂಬಾ ಕಷ್ಟಕರ ಎನಿಸಿತ್ತು. ಲೆಕ್ಕವಿಲ್ಲದಷ್ಟು ಪ್ರಶಸ್ತಿ, ಮೆಚ್ಚುಗೆ ಗಳಿಸಿದ್ದ ಡಾ ರಾಜ್‌ಕುಮಾರ್ ಅವರು ಕೂಡ ಸರ್ವಜ್ಷನ ಪಾತ್ರ ಮಾಡೋದಕ್ಕೆ ತುಂಬಾ ಕಷ್ಟ ಅನುಭವಿಸಿದ್ದಾರೆ ಎಂಬುದು ತುಂಬಾ ಆಸಕ್ತಿಕರ ಹಾಗೂ ಅಚ್ಚರಿಯ ಸಂಗತಿ. ಅದೇನೇ ಇರಲಿ, ಇಂದು ಡಾ ರಾಜ್‌ಕುಮಾರ್ ಅವರು ನಮ್ಮೊಂದಿಗೆ ಎಲ್ಲ. ಆದರೆ, ಅವರು ಮಾಡಿರುವ ಪಾತ್ರಗಳು ಹಾಗೂ ಆಡಿರುವ ಮಾತುಗಳು ಎಂದೆಂದಿಗೂ ಎಲ್ಲರಿಗೂ ಸ್ಪೂರ್ತಿ ಕೊಡುತ್ತಲೇ ಇರುತ್ತವೆ.
ದರ್ಶನ್ ಪ್ರಾಣಕ್ಕೇ ಕಂಟಕವಿತ್ತು, ಅದು ತಪ್ಪಿಹೋಗಿ ಜೈಲಿನಲ್ಲಿ ಸೇಫ್ ಆಗಿದ್ದಾರೆ; ಹೀಗೊಂದು ಸುದ್ದಿ ವೈರಲ್!