ಕೊಳಕು ಕಾಮೆಂಟ್ಸ್ ಮಾಡೋರ್ನ ಬ್ಲಾಕ್ ಮಾಡ್ಬಿಡಿ, ದರ್ಶನ್ ಸರ್ ನಿರಪರಾಧಿ ಆಗಿ ಹೊರ ಬರ್ಲಿ: ಅದ್ವಿತಿ ಶೆಟ್ಟಿ
ದರ್ಶನ್ ಸರ್ ನಮ್ಮ ಫ್ಯಾಷನ್ ಶೋ ಕಾರ್ಯಕ್ರಮಕ್ಕೆ ಬಂದಿದ್ದರು.. ಆವತ್ತು ಸಿಕ್ಕಾಗ ಚೆನ್ನಾಗಿ ಮಾತನಾಡಿಸಿದ್ದರು. ಮತ್ತೆ ಯಾವತ್ತೂ ಮುಖಾಮುಖಿ ಭೇಟಿ ಆಗಿಲ್ಲ. ಈ ಕೇಸ್‌ನಲ್ಲಿ ನಟ ದರ್ಶನ್ ಸರ್ ನಿರಪರಾಧಿ ಎಂದೆನಿಸಿ ಆಚೆ ಬರಲಿ..
ಕನ್ನಡ ಚಿತ್ರರಂಗದ ಸ್ಟಾರ್ ನಟ, ಕೋಟ್ಯಂತರ ಅಭಿಮಾನಿ ಬಳಗವನ್ನು ಹೊಂದಿರುವ ನಟ ದರ್ಶನ್ ಕೊಲೆ ಕೇಸ್‌ನಲ್ಲಿ ಆರೋಪಿಯಾಗಿ ಜೈಲಿನಲ್ಲಿ ಬಂಧಿಯಾಗಿರುವುದು ಗೊತ್ತೇ ಇದೆ. ನಟ ದರ್ಶನ್ ಸ್ನೇಹಿತೆ ಪವಿತ್ರಾ ಗೌಡ ಅವರಿಗೆ ಅಶ್ಲೀಲ ಮೆಸೆಜ್ ಕಳುಹಿಸಿ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆಯಾಗಿದ್ದಾರೆ. ಈ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ನಟ ದರ್ಶನ್, ನಟಿ ಪವಿತ್ರಾ ಗೌಡ ಸೇರಿದಂತೆ, ಒಟ್ಟೂ ಹದಿನೇಳು ಜನರು ಆರೋಪಿಗಳಾಗಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ವಿಚರಣಾಧೀನ ಖೈದಿಗಳಾಗಿ ಕಭಿ ಹಿಂದೆ ಸೇರಿದ್ದಾರೆ. ನಟ ದರ್ಶನ್, ಅವರಿಗೆ ಬೇಲ್ ಆಗುತ್ತಾ? ಆದರೂ ಯಾವಾಗ ಆಗುತ್ತೆ? ಈ ಬಗ್ಗೆ ಯಾವುದೇ ಮಾಹಿತಿ ಸದ್ಯಕ್ಕೆ ಲಭ್ಯವಿಲ್ಲ.
ಇದೀಗ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ, ಕನ್ನಡ ಚಿತ್ರರಂಗದ ಕಲಾವಿದರು ಇಷ್ಟು ದಿನಗಳ ಮೌನ ಮುರಿದು ಒಬ್ಬೊಬ್ಬರಾಗಿ ಮಾತನಾಡತೊಡಗಿದ್ದಾರೆ. ನಟ ಸುದೀಪ್, ನಟ ಜಗ್ಗೇಶ್, ನಟ ಶಿವರಾಜ್‌ಕುಮಾರ್, ನಟ ವಿನೋದ್ ಪ್ರಭಾಕರ್ ಸೇರಿದಂತೆ ಹಲವು ನಟರು ಮಾತನಾಡಿದ್ದಾರೆ. ನಟಿಯರಾದ ರಚಿತಾರಾಮ್, ಭಾವನಾ ರಾಮಣ್ಣ, ದರ್ಶನ್ ನಟನೆಯ 'ಕಾಟೇರ' ಸಿನಿಮಾ ನಾಯಕಿ ಮಾಲಾಶ್ರೀ ಮಗಳು ಆರಾಧನಾ ರಾಮ್ ಈಗಾಗಲೇ ಮಾತನಾಡಿದ್ದಾರೆ. ಇದೀಗ, ಸ್ಯಾಂಡಲ್‌ವುಡ್ ನಟಿ ಅದ್ವಿತಿ ಶೆಟ್ಟಿ ಈ ಬಗ್ಗೆ ತಮ್ಮ ಅಭಿಪ್ರಾಯ ಹೊರಹಾಕಿದ್ದಾರೆ.
ನಟನೆ ಮಾಡು ಅಂದ್ರೆ ಮಾಡ್ಬಿಡ್ತೀನಿ, ಮಾಡ್ಬೇಡ ಅಂದ್ರೆ ತುಂಬಾ ಕಷ್ಟ: ಡಾ ರಾಜ್ ಹೀಗ್ ಹೇಳಿದ್ಯಾಕೆ?
ಹಾಗಿದ್ದರೆ, ನಟಿ ಅದ್ವಿತಿ ಶೆಟ್ಟಿ ಈ ಬಗ್ಗೆ ಏನೆಂದು ಹೇಳಿದ್ದಾರೆ ಗೊತ್ತಾ? 'ಈ ಘಟನೆ ನನಗೆ ಬೇಸರ ತಂದಿದೆ. ಯಾರೂ ಕೂಡ ಯಾರಿಗೂ ಕೆಟ್ಟ ಕಾಮೆಂಟ್ ಮಾಡಬೇಡಿ..ಕೆಟ್ಟ ಕಾಮೆಂಟ್ ಮಾಡೋರನ್ನ ಬ್ಲಾಕ್ ಮಾಡಿಬಿಡಿ.. ಮೃತ ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಬೇಕು ಅಷ್ಟೇ. ದರ್ಶನ್ ಸರ್ ನಮ್ಮ ಫ್ಯಾಷನ್ ಶೋ ಕಾರ್ಯಕ್ರಮಕ್ಕೆ ಬಂದಿದ್ದರು.. ಆವತ್ತು ಸಿಕ್ಕಾಗ ಚೆನ್ನಾಗಿ ಮಾತನಾಡಿಸಿದ್ದರು. ಮತ್ತೆ ಯಾವತ್ತೂ ಮುಖಾಮುಖಿ ಭೇಟಿ ಆಗಿಲ್ಲ. ಈ ಕೇಸ್‌ನಲ್ಲಿ ನಟ ದರ್ಶನ್ ಸರ್ ನಿರಪರಾಧಿ ಎಂದೆನಿಸಿ ಆಚೆ ಬರಲಿ ಎಂದು ಕೇಳಿಕೊಳ್ಳುತ್ತೇನೆ' ಎಂದಿದ್ದಾರೆ ಅದ್ವಿತಿ ಶೆಟ್ಟಿ.
ವಯಸ್ಕರ ಚಿತ್ರದಿಂದ ಹೊರಬಂದಿದ್ದು ಯಾಕೆ, ಲೀಲಾಜಾಲ ಬಿಟ್ಟ ಸೀಕ್ರೆಟ್ ಹೇಳ್ಬಿಟ್ರು ಸನ್ನಿ ಲಿಯೋನ್..!
ಕನ್ನಡ ಚಿತ್ರರಂಗಕ್ಕೆ ಈ ಘಟನೆಯಿಂದ ಅಪಾರ ನಷ್ಟವಾಗಲಿದೆ ಎಂದು ಕೆಲವರು, ಏನೂ ವ್ಯತ್ಯಾಸ ಆಗುವುದಿಲ್ಲ ಎಂದು ಕೆಲವರು ಹೇಳುವ ಮೂಲಕ ಚರ್ಚೆ ಜೋರಾಗಿದೆ. ಆದರೆ, ಆಗಿರುವ ಘಟನೆಯಿಂದ ಹೋಗಿರುವ ಜೀವವಾಗಲೀ ಕಳೆದುಕೊಂಡಿರುವ ಮಾನವಾಗಲೀ ವಾಪಸ್ ಬರುವುದಿಲ್ಲ ಎಂಬುದು ಹಲವರ ಅನಿಸಿಕೆ. ನಟ ದರ್ಶನ್ ಹಾಗೂ ಟೀಮ್ ಅಪರಾಧಿಗಳೋ ಅಥವಾ ನಿರಪರಾಧಿಗಳೋ ಎಂಬುದನ್ನು ಕೋರ್ಟ್ ಕಾನೂನಿನ ಪ್ರಕಾರ ತೀರ್ಮಾನ ಮಾಡುತ್ತದೆ. ಸದ್ಯಕ್ಕೆ ಅವರು ಕೊಲೆ ಆರೋಪಿಗಳು, ಅಪರಾಧಿಗಳಲ್ಲ ಎಂಬುದನ್ನು ಎಲ್ಲರೂ ನೆನಪಿಟ್ಟುಕೊಳ್ಳಬೇಕು ಎನ್ನಲಾಗುತ್ತಿದೆ.
ಅದಿಲ್ಲ ಅಂದ್ರೆ ಮನುಷ್ಯ ಸತ್ತೋಗ್ಬಿಡ್ಬೇಕು, ಅದೂ ಒಂದ್ ಲೈಫಾ; ಯಶ್ ಪ್ರಶ್ನೆಗೆ ಉತ್ರ ಕೊಟ್ರಾ ಅನುಶ್ರೀ..?
ಒಟ್ಟಿನಲ್ಲಿ, ರೇಣುಕಾಸ್ವಾಮಿ ಕೊಲೆ ಪ್ರಕರಣ ಸದ್ಯಕ್ಕೆ ಎಲ್ಲರ ಗಮನ ಸೆಳೆಯುತ್ತಿರುವುದಂತೂ ಸುಳ್ಳಲ್ಲ. ಈ ದುರ್ಘಟನೆಯಿಂದ ಸಮಾಜದಲ್ಲಿರುವ ಹಲವರು ಪಾಠ ಕಲಿತುಕೊಳ್ಳಬೇಕಾಗಿದೆ ಎಂಬುದಂತೂ ಸತ್ಯ. ಎಲ್ಲೋ ಕುಳಿತು ತಮಗೆ ಪರಿಚಯವೇ ಇಲ್ಲದ ವ್ಯಕ್ತಿಗಳಿಗೆ ಮೆಸೇಜ್ ಮಾಡುವ, ಅಶ್ಲೀಲ ಫೋಟೋ ಕಳಿಸುವ ಕೆಟ್ಟ ಹವ್ಯಾಸವನ್ನು ಯಾರೂ ಬೆಳೆಸಿಕೊಳ್ಳಬಾರದು. ಅಂತಹ ಅಪರಾಧ ಮಾಡುವ ಮೂಲಕ ಅದು ಹಲವರ ಡಿಪ್ರೆಶನ್‌ಗೆ, ನೋವಿಗೆ ಹಾಗೂ ಹಲವರ ಬಾಳಿಗೆ ಮುಳ್ಳಾಗಬಹುದು. ಅಥವಾ ಅದೇ ಕಾರಣಕ್ಕೆ ಕೆಲವರ ಕೈಗೆ ಸಿಕ್ಕು ಕೊಲೆಯೇ ಆಗಲೂಬಹುದು.
ದರ್ಶನ್ ಪ್ರಾಣಕ್ಕೇ ಕಂಟಕವಿತ್ತು, ಅದು ತಪ್ಪಿಹೋಗಿ ಜೈಲಿನಲ್ಲಿ ಸೇಫ್ ಆಗಿದ್ದಾರೆ; ಹೀಗೊಂದು ಸುದ್ದಿ ವೈರಲ್!
ಆದ್ದರಿಂದ ಸಮಾಜದಲ್ಲಿ ಪ್ರತಿಯೊಬ್ಬರೂ ಕೆಟ್ಟ ಕಾಮೆಂಟ್ ಮಾಡುವ ಮೊದಲು ಸಾಕಷ್ಟು ಯೋಚಿಸಬೇಕು. ಅದರಿಂದ ಇನ್ಯಾರದೋ ಲೈಫ್ ಅಥವಾ ತಮ್ಮದೇ ಲೈಪ್ ಹಾಳಾಗಬಹುದು ಎಂಬ ಎಚ್ಚರಿಕೆ ಇರಬೇಕಾಗಿದೆ. ಜೀವನ ಹಾಳಾಗುವುದು ಹಾಗಿರಲಿ, ಜೀವವೇ ಹಾರಿ ಹೋದರೆ..?! ಆದ್ದರಿಂದ ನಮ್ಮ ಸಮಾಜದಲ್ಲಿ ಇನ್ನಾದರೂ ಕೆಟ್ಟ ಕಾಮೆಂಟ್ ಮಾಡುವ ಪರಿಪಾಠ ನಿಲ್ಲಲಿ. ಹಾಗೇ, ಕಾನೂನನ್ನು ಕೈಗೆತ್ತಿಕೊಂಡು ಕೊಲೆಯಂಥ ಘೋರ ಕೃತ್ಯ ಎಸಗುವುದು ಕೂಡ ಖಂಡನೀಯ, ಅದೂ ಕೂಡ ಇನ್ಮುಂದೆ ಆಗದಿರಲಿ ಎಂಬುದು ಹಲವರ ಅಭಿಪ್ರಾಯವಾಗಿ ಸೋಷಿಯಲ್ ಮೀಡಿಯಾಗಳಲ್ಲಿ ಕಂಡುಬರುತ್ತಿದೆ.
ದೇವಿ ಭಕ್ತೆಯೊಬ್ಬರ ಮೂಲಕ ಭವಿಷ್ಯ ನುಡಿಸಿದ್ದರೂ, ಗೊತ್ತಿದ್ದೂ ನಟ ದರ್ಶನ್ ಕೇರ್‌ಲೆಸ್ ಮಾಡಿದ್ದೇಕೆ..?