Asianet Suvarna News Asianet Suvarna News
breaking news image

ಅದನ್ನ ಮಾಡ್ಬೇಡ ಮನೆಗೋಗು ಅಂದ್ರು ವಿಷ್ಣು ಸರ್; ಆದ್ರೆ ವಾಸು ಸರ್ ಅದೇನೋ ಮಾಡ್ಬಿಟ್ರು: ನಟ ರಾಜೇಶ್

ವಿಷ್ಣು ಸರ್ ಅವ್ರ ಡ್ರೈವರ್ ಬಂದು ವಿಷ್ಣು ಸರ್ ನನ್ ಊಟಕ್ಕೆ ಕರೀತಾ ಇದಾರೆ ಅಂದ್ರು, ಹೋದೆ. ಅಲ್ಲಿ ಅವ್ರ ಮನೆಯಿಂದ ತಂದಿರೋ ಸಾರು ಊಟ ಮಾಡಿದೆ. ಆಗ ಮಾತಾಡ್ತಾ ಇರೋವಾಗ..

Actor rajesh nataranga told about vishnuvardhan and his aptharakshaka movie shooting time experience srb
Author
First Published Jul 1, 2024, 3:56 PM IST

'ನಾನು ವಿಷ್ಣುವರ್ಧನ್ ಸರ್ (Vishnuvardhan) ಜೊತೆ ಬಳ್ಳಾರಿ ನಾಗ' ಸಿನಿಮಾ ಮಾಡಿದ್ದೆ. ಆಗ ಶೂಟಿಂಗ್ ಹೋದಾಗ ನಾನು ಅವರಿಗೆ ನಮಸ್ಕಾರ ಮಾಡೋಕೆ ಹೋದೆ. ಆಗ ವಿಷ್ಣು ಸರ್ 'ನೋ ನೋ, ನಂಗೆ ಹೀಗೆಲ್ಲಾ ನಮಸ್ಕಾರ ಮಾಡ್ಬೇಡಿ, ಕಲಾವಿದರು ನೀವು' ಅಂದ್ರು. ಆಗ ನಮಸ್ಕಾರ ಮಾಡ್ಲಿಲ್ಲ, ಹ್ಯಾಂಡ್‌ಶೇಕ್ ಮಾಡಿದ್ದೆ. ಅದಾದ್ಮೇಲೆ ವಿಷ್ಣು ಸರ್ ಜೊತೆ ಆಪ್ತ ರಕ್ಷಕ ಸಿನಿಮಾ ಮಾಡ್ದೆ..' ಕಲಾವಿದ, ನಟ ರಾಜೇಶ್ ನಟರಂಗ (Rajesh Nataranga) ಮಾತನಾಡಿದ್ದಾರೆ. 

ಆಗ ಮ್ಯಾನೇಜರ್ ಕಾಲ್ ಮಾಡಿ ವಿಷ್ಣುವರ್ಧನ್ ಸರ್ ಅವರ 200ನೇ ಸಿನಿಮಾ ಆಪ್ತರಕ್ಷಕ. ಅದಕ್ಕೆ ನಿಮ್ ಕಾಲಶೀಟ್ ಬೇಕು ಅಂದ್ರು. ತುಂಬಾ ಎಕ್ಸೈಟ್ ಆಗಿಯೇ ಓಕೆ ಅಂದ್ರೆ. ಯಾಕಂದ್ರೆ, ಈಗೆಲ್ಲಾ ನಾವೆಲ್ಲಾ 200 ಸಿನಿಮಾಗಳನ್ನ ಮಾಡೋಕೆ ಆಗುತ್ತಾ ಅಂತ ಯೋಚ್ನೆ ಬಂತು. ವಿಷ್ಣು ಸರ್ ಜತೆ ಅವ್ರ 200ನೇ ಸಿನಿಮಾದಲ್ಲಿ ನಟನೆ ಮಾಡೋದು ಗೋಲ್ಡನ್ ಅವಕಾಶ ಅಂತ ಖುಷಿಯಾಗಿ ಒಪ್ಪಿಗೆ ಕೊಟ್ಟಿದ್ದಾಯ್ತು. ಇನ್ನು, ನಾವೆಲ್ಲಾ ವಿಷ್ಣು ಸರ್‌ ಜೊತೆ ಇದ್ದು, ನೋಡಿ ತುಂಬಾನೇ ಕಲಿತ್ಕೊಂಡಿದೀವಿ.

ಕೊಳಕು ಕಾಮೆಂಟ್ಸ್ ಮಾಡೋರ್ನ ಬ್ಲಾಕ್ ಮಾಡ್ಬಿಡಿ, ದರ್ಶನ್ ಸರ್ ನಿರಪರಾಧಿ ಆಗಿ ಹೊರ ಬರ್ಲಿ: ಅದ್ವಿತಿ ಶೆಟ್ಟಿ

ಇಷ್ಟಪಟ್ಟು ನೋಡಿ ಬೆಳೆದಿರೋದು, ಕಲಿತಿದ್ದು ಅವ್ರಿಂದ. ಅದಕ್ಕಾಗಿ ಒಪ್ಪಿದ್ದು ಆಯ್ತು, ಶೂಟಿಂಗ್ ಬಂದು ಆವತ್ತು ಪ್ಯಾಲೇಸ್‌ನಲ್ಲಿ..ನಾನು ಹೋದೆ ಶೂಟಿಂಗ್‌ಗೆ ಅಂತ.. ಇನ್ನೂ ಬ್ರೇಕ್ ಆಗಿರ್ಲಿಲ್ಲ, ವಿಷ್ಣು ಸರ್ ಕೂತಿದ್ರು ಅಲ್ಲಿ, ವಾಸು ಸರ್ ಡೈರೆಕ್ಟ್ ಮಾಡ್ತಾ ಇದ್ರು ಮೇಲೆ.. ಆಮೇಲೆ ನಾನು ಯಾರನ್ನೋ  ಮೀಟ್ ಮಾಡೋಕೆ ಆಂತ ಆಚೆ ಎಲ್ಲೋ ಹೋಗಿದ್ದೆ.. 

ನಟನೆ ಮಾಡು ಅಂದ್ರೆ ಮಾಡ್ಬಿಡ್ತೀನಿ, ಮಾಡ್ಬೇಡ ಅಂದ್ರೆ ತುಂಬಾ ಕಷ್ಟ: ಡಾ ರಾಜ್ ಹೀಗ್ ಹೇಳಿದ್ಯಾಕೆ?

ಬಳಿಕ ವಿಷ್ಣು ಸರ್ ಅವ್ರ ಡ್ರೈವರ್ ಬಂದು ವಿಷ್ಣು ಸರ್ ನನ್ ಊಟಕ್ಕೆ ಕರೀತಾ ಇದಾರೆ ಅಂದ್ರು, ಹೋದೆ. ಅಲ್ಲಿ ಅವ್ರ ಮನೆಯಿಂದ ತಂದಿರೋ ಸಾರು ಊಟ ಮಾಡಿದೆ. ಆಗ ಮಾತಾಡ್ತಾ ಇರೋವಾಗ ಇಲ್ಲಿ ಯಾರನ್ನ ಮೀಟ್ ಮಾಡೋಕೆ ಬಂದಿರೋದು ಅಂತ ಕೇಳಿದ್ರು. ಆಗ ನಾನು 'ಸರ್, ಈ ನಿಮ್ ಸಿನಿಮಾದಲ್ಲಿ ಸೇನಾಧಿಪತಿ ರೋಲ್‌ಗೆ ಬಂದಿರೋದು ಅಂದಾಗ, 'ಓ ಅದಾ, ಸ್ಮಾಲ್ ರೋಲ್, ಅದ್ರಲ್ಲಿ ಏನೂ ಇಲ್ಲ ಮಾಡ್ಬೇಡಿ, ನೀವು ಒಳ್ಳೇ ಕಲಾವಿದರು. ಅಷ್ಟು ಚಿಕ್ಕ ರೋಲ್‌ನ ಮಾಡಿದ್ರೆ ಆಮೇಲೆ ಇಂಡಸ್ಟ್ರಿ ನಿಮ್ಮನ್ನ ಅದೇ ತರದ ಪಾತ್ರಕ್ಕೆ ಬ್ರಾಂಡ್ ಮಾಡ್ಬಿಡುತ್ತೆ.. ಬೇಡ ಮಾಡೋದು, ಮನೆಗೆ ಹೋಗಿ ಅಂದ್ಬಿಟ್ರು.. 

ವಯಸ್ಕರ ಚಿತ್ರದಿಂದ ಹೊರಬಂದಿದ್ದು ಯಾಕೆ, ಲೀಲಾಜಾಲ ಬಿಟ್ಟ ಸೀಕ್ರೆಟ್ ಹೇಳ್ಬಿಟ್ರು ಸನ್ನಿ ಲಿಯೋನ್..!

ಅಷ್ಟರಲ್ಲಿ ವಾಸು ಸರ್ ಅಲ್ಲಿಗೆ ಬಂದು ನಮ್ಮ ಮಾತುಕತೆನೆಲ್ಲಾ ಕೇಳಿಸ್ಕೊಂಡು ಆಗಿತ್ತು. ವಿಷ್ಣು ಸರ್ ಜತೆ ಏನೋ ಮಾತಾಡಿ, ಬಳಿಕ ನನ್ ಹತ್ರ ಬಂದು ನೀವು ಮೇಕಪ್ ಹಾಕಿಸ್ಕೊಳ್ಳಿ, ನಾನು ಆ ಪಾತ್ರ ನಿಮಗೆ ಸೂಟ್ ಆಗೋ ತರನೇ ಮಾಡಿಕೊಡ್ತೀನಿ ಅಂದ್ರು. ಅದೇ ತರಹ ಮಾಡಿದ್ದರು ಕೂಡ. ಅಂದ್ರೆ, ಸೇನಾಧಿಪತಿ ಪಾತ್ರ ಆಪ್ತರಕ್ಷಕ ಚಿತ್ರದಲ್ಲಿ ಗುರುತಿಸುವಂತಹ ಒಂದು ಪಾತ್ರವಾಗಿದ್ದು ವಿಷ್ಣು ಸರ್ ಮಾತಿಂದ. ಅವ್ರು ಹೇಳಿದ್ದಿಲ್ಲ ಅಂದ್ರೆ ವಾಸು ಸರ್ ಮಾಡ್ತಾ ಇರ್ಲಿಲ್ಲ.

ಅದಿಲ್ಲ ಅಂದ್ರೆ ಮನುಷ್ಯ ಸತ್ತೋಗ್ಬಿಡ್ಬೇಕು, ಅದೂ ಒಂದ್ ಲೈಫಾ; ಯಶ್ ಪ್ರಶ್ನೆಗೆ ಉತ್ರ ಕೊಟ್ರಾ ಅನುಶ್ರೀ..?

ಪಾತ್ರ ಅಷ್ಟೇ ಚಿಕ್ಕದಾಗಿ ಇದ್ದಿದ್ರೆ ವಿಷ್ಣು ಸರ್ ಮಾಡೋಕೆ ಬಿಡ್ತಿರ್ಲಿಲ್ಲ. ಆದ್ರೆ, ನನ್ನ ಅದೃಷ್ಟ, ಎಲ್ಲವೂ ಸರಿ ಹೋಗಿ ನಾನು ವಿಷ್ಣು ಸರ್ ಅವ್ರ 200ನೇ ಸಿನಿಮಾದಲ್ಲಿ ನಟಿಸಿದೆ. ಆದ್ರೆ ಅದೇ ಸಿನಿಮಾ ಅವರ ಲಾಸ್ಟ್ ಸಿನಿಮಾ ಕೂಡ ಆಯ್ತು. ಬಳ್ಳಾರಿ ನಾಗ ಸಿನಿಮಾದಲ್ಲಿ ಆದ ಪರಿಚಯ, ಒಡನಾಟ ಆಪ್ತರಕ್ಷಕ ಸಿನಿಮಾ ಕೂಡ ಮಾಡುವಂತೆ ಮಾಡಿತು. ಜೊತೆಗೆ, ಅಂತಹ ಮೇರು ಕಲಾವಿದರ ಜೊತೆ ನಟಿಸಿದ, ತೆರೆ ಹಂಚಿಕೊಂಡ ಭಾಗ್ಯ ನನ್ನದಾಯ್ತು.

ದರ್ಶನ್‌ ಪ್ರಾಣಕ್ಕೇ ಕಂಟಕವಿತ್ತು, ಅದು ತಪ್ಪಿಹೋಗಿ ಜೈಲಿನಲ್ಲಿ ಸೇಫ್ ಆಗಿದ್ದಾರೆ; ಹೀಗೊಂದು ಸುದ್ದಿ ವೈರಲ್!

ನಾನೊಬ್ಬ ಒಳ್ಳೆಯ ಕಲಾವಿದ ಅಂದಿದ್ರು. ಇವತ್ತಿಗೂ ಕೂಡ ಆ ಬಗ್ಗೆ ನನಗೆ ಖುಷಿ ಹಾಗೂ ಹೆಮ್ಮೆ ಇದೆ. ಬಳ್ಳಾರಿ ನಾಗ ಚಿತ್ರದ ಶೂಟಿಂಗ್ ಸಮಯದಲ್ಲಿ ನಾನು ಅವ್ರ ಮನೆ ಸಾರು ಚೆನ್ನಾಗಿದೆ ಎಂದಿದ್ದು ನೆನಪಿಟ್ಟುಕೊಂಡು ಆಪ್ತರಕ್ಷಕ ಶೂಟಿಂಗ್‌ ಟೈಮ್‌ನಲ್ಲಿ ಕರೆದು ಮನೆ ಊಟ ಕೊಟ್ಟಿದ್ದರು. ಅವ್ರ ಮನೆ ಅನ್ನ ತಿಂದಿರೋ ಭಾಗ್ಯ ಹಾಗೂ ಋಣ ಎರಡೂ ನನಗಿದೆ. ಅವೆಲ್ಲಾ ಸವಿನೆನಪುಗಳು ಲೈಫ್‌ನಲ್ಲಿ ಅಂದಿದಾರೆ ನಟ ಮನೆತನ ರಾಜೇಶ್.  

ದೇವಿ ಭಕ್ತೆಯೊಬ್ಬರ ಮೂಲಕ ಭವಿಷ್ಯ ನುಡಿಸಿದ್ದರೂ, ಗೊತ್ತಿದ್ದೂ ನಟ ದರ್ಶನ್ ಕೇರ್‌ಲೆಸ್ ಮಾಡಿದ್ದೇಕೆ..?

Latest Videos
Follow Us:
Download App:
  • android
  • ios