ಟೀಂ ಇಂಡಿಯಾದ ಮಾಜಿ ಆಲ್ ರೌಂಡರ್, ಕ್ರಿಕೆಟ್ ಲೆಜೆಂಡ್ ಕಪಿಲ್ ದೇವ್ (Kapil Dev), ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ಗೆ (Sudeep) ಬಿಗ್ ಸರ್ಪ್ರೈಸ್ ನೀಡಿದ್ದಾರೆ. ಕಪಿಲ್ ದೇವ್ ಸರ್ಪ್ರೈಸ್ ನೋಡಿ ಕಿಚ್ಚ ಫುಲ್ ಖಷ್ ಆಗಿದ್ದಾರೆ. ಎಂಥ ಭಾನುವಾರ ಇದು ಅಂತ ಸುದೀಪ್ ಸಾಮಾಜಿಕ ಜಾಲತಾಣದಲ್ಲಿ ಸಂತಸ ಹಂಚಿಕೊಂಡಿದ್ದಾರೆ. 

ಟೀಂ ಇಂಡಿಯಾದ ಮಾಜಿ ಆಲ್ ರೌಂಡರ್, ಕ್ರಿಕೆಟ್ ಲೆಜೆಂಡ್ ಕಪಿಲ್ ದೇವ್ (Kapil Dev), ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ಗೆ (Sudeep) ಬಿಗ್ ಸರ್ಪ್ರೈಸ್ ನೀಡಿದ್ದಾರೆ. ಕಪಿಲ್ ದೇವ್ ಸರ್ಪ್ರೈಸ್ ನೋಡಿ ಕಿಚ್ಚ ಫುಲ್ ಖಷ್ ಆಗಿದ್ದಾರೆ. ಎಂಥ ಭಾನುವಾರ ಇದು ಅಂತ ಸುದೀಪ್ ಸಾಮಾಜಿಕ ಜಾಲತಾಣದಲ್ಲಿ ಸಂತಸ ಹಂಚಿಕೊಂಡಿದ್ದಾರೆ. ಇತ್ತೀಚಿಗಷ್ಟೆ ಕಿಚ್ಚನಿಗೆ ಇಂಗ್ಲೆಂಡ್ ಕ್ರಿಕೆಟ್ (England Cricket) ತಂಡದ ಸ್ಪೋಟಕ ಬ್ಯಾಟ್ಸ್ ಮನ್ ಜೋಸ್ ಬಟ್ಲರ್ (Jos Buttler) ಬ್ಯಾಡ್ ಉಡುಗೊರೆಯಾಗಿ ನೀಡಿದ್ದರು. ಇದರ ಬೆನ್ನಲ್ಲೇ ಕಪಿಲ್ ಸಹ ಗಿಫ್ಟ್ ನೀಡಿರುವುದು ದೊಡ್ಡ ಖುಷಿ ನೀಡಿದೆ. ಈ ಬಗ್ಗೆ ಸುದೀಪ್ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ. 

ವಾವ್ ಎಂಥ ಭಾನುವಾರ..ಧನ್ಯವಾದಗಳು ಕಪಿಲ್ ದೇವ್ ಸರ್. ಇದು ನಿಜನಾ ಎಂದು ಎಚ್ಚೆತ್ತುಕೊಳ್ಳುತ್ತಿದ್ದೇನೆ. ನಾನು ಇದನ್ನು ನಿರೀಕ್ಷಿಸಿರಲಿಲ್ಲ. ಇದು ಕ್ಲಾಸಿಕ್ ಪೀಸ್ ಮತ್ತು ನಾನು ಇದೀಗ ಪ್ರಪಂಚದ ಅತ್ಯುನ್ನತ ತುದಿಯಲ್ಲಿದ್ದೀನಿ ಎಂದು ಫೀಲ್ ಆಗುತ್ತಿದೆ , ಧನ್ಯವಾದಗಳು' ಎಂದು ಬರೆದುಕೊಡಿದ್ದಾರೆ. ಅಂದಹಾಗೆ ಕಪಿಲ್ ದೇವ್ ಉಡುಗೊರೆಯಾಗಿ ನೀಡಿರುವ ಬ್ಯಾಟ್‌ನಲ್ಲಿ ಅನೇಕ ಕ್ರಿಕೆಟ್ ಲೆಜೆಂಡ್‌ಗಳ ಆಟೋಗ್ರಾಫ್ ಇದೆ. 

ಜೋಸ್ ಬಟ್ಲರ್ 2022ರ ಐಪಿಎಲ್‌ನಲ್ಲಿ ತಾವು ಆಡಿದ್ದ ಬ್ಯಾಟ್ ಅನ್ನು ಸುದೀಪ್ ಗೆ (Kicha Sudeepa)ಉಡುಗೊರೆಯಾಗಿ ನೀಡಿದ್ದರು. ಅವರ ಸಹಿ ಕೂಡ ಅದರಲ್ಲಿದೆ. ಕಿಚ್ಚ ಸುದೀಪ್ ಈ ಕುರಿತಾಗಿ ಟ್ವಿಟರ್ ನಲ್ಲಿ ವಿಡಿಯೋ ಪೋಸ್ಟ್ ಮಾಡುವ ಮೂಲಕ ಸಂಭ್ರಮ ಹಂಚಿಕೊಂಡಿದ್ದರು.

Scroll to load tweet…


ಕಿಚ್ಚ ಸುದೀಪ್ ಗೆ ಬ್ಯಾಟ್ ಗಿಫ್ಟ್ ನೀಡಿದ ಜೋಸ್ ಬಟ್ಲರ್!

'ನಿಜಕ್ಕೂ ನನಗೆ ಬಹಳ ಅಚ್ಚರಿಯಾಯಿತು. ನಾನು ನಿಜಕ್ಕೂ ಇದನ್ನು ನಿರೀಕ್ಷೆ ಮಾಡಿರಲಿಲ್ಲ. ಮೊದಲಿಗೆ ನಾನು ರಾಜಸ್ಥಾನ ರಾಯಲ್ಸ್ ಗೆ ಥ್ಯಾಂಕ್ಸ್ ಹೇಳಲು ಇಷ್ಟಪಡುತ್ತೇನೆ. ಇದನ್ನು ಸಾಧ್ಯವಾಗಿಸಿದ ನನ್ನ ಸ್ನೇಹಿತ ಕೆಸಿ ಕಾರ್ಯಪ್ಪಗೂ ಥ್ಯಾಂಕ್ಸ್ ಹೇಳುತ್ತೇನೆ. ಆದರೆ, ಈ ವಿಡಿಯೋ ವಿಶೇಷವಾಗಿ ಜೋಸ್ ಬಟ್ಲರ್ ಸಲುವಾಗಿ. ವೈಯಕ್ತಿಕವಾಗಿ ನೀವು ಸಹಿ ಮಾಡಿದಂಥ ಬ್ಯಾಟ್ ಅನ್ನು ನನಗೆ ನೀಡಿದ್ದಕ್ಕೆ ಬಹಳ ಥ್ಯಾಂಕ್ಸ್. ಇದನ್ನು ನಾನು ಇಂದು ಸ್ವೀಕರಿಸಿದ್ದೇನೆ. ನನಗೆ ಬಹಳ ಸಂತೋಷವಾಗಿದೆ' ಎಂದು ಸುದೀಪ್ ಕೃತಜ್ಞತ ವಿಡಿಯೋದಲ್ಲಿ ಹೇಳಿದ್ದಾರೆ.

ಸುದೀಪ್‌ಗೆ ಕ್ರಿಕೆಟ್ ಎಂದರೆ ತುಂಬಾ ಇಷ್ಟ. ಆಗಾಗ ಬ್ಯಾಗ್ ಹಿಡಿದು ಫೀಲ್ಡ್‌ಗೆ ಇಳಿಯುತ್ತಾರೆ. ಅನೇಕ ಕ್ರಿಕೆಟ್ ಆಟಗಾರರ ಜೊತೆ ಸುದೀಪ್ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಆಗಾಗ ಕ್ರಿಕೆಟ್ ಆಟಗಾರರ ಜೊತೆ ಕಾಣಿಸಿಕೊಳ್ಳುತ್ತಾರೆ. ಇದೀಗ ಗಿಫ್ಟ್ ಸ್ವೀಕರಿಸಿ ಮತ್ತಷ್ಟು ಸಂತಸ ಪಟ್ಟಿದ್ದಾರೆ.

Vikrant Rona; ಕಿಚ್ಚ, ಅನೂಪ್ ಸೃಷ್ಟಿಯ ಹೊಸ ಪ್ರಂಪಚದ ದರ್ಶನ ಪಡೆದ ಫ್ಯಾನ್ಸ್ ಫಿದಾ

ಅಂದಹಾಗೆ ಸುದೀಪ್ ಸದ್ಯ ವಿಕ್ರಾಂತ್ ರೋಣ ಸಿನಿಮಾದ ಬಿಡುಗಡೆ ತಯಾರಿಯಲ್ಲಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗುತ್ತಿದೆ. ಈಗಾಗಲೇ ಟ್ರೈಲರ್ ರಿಲೀಸ್ ಆಗಿದ್ದು ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಸಿನಿಮಾದಲ್ಲಿ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ನಟಿಸಿದ್ದು ಈಗಾಗಲೇ ಒಂದು ಹಾಡು ಸಿಕ್ಕಾಪಟ್ಟೆ ವೈರಲ್ ಆಗಿದೆ. ಈಗಾಗಲೇ ಕಿಚ್ಚ ಅಂಡ್ ಟೀಂ ಪ್ರಮೋಷನ್‌ನಲ್ಲಿ ಬ್ಯುಸಿಯಾಗಿದ್ದು ಭಾರತದಾದ್ಯಂತ ಸಂಚರಿಸುತ್ತಿದ್ದಾರೆ. ಬಹುನಿರೀಕ್ಷೆಯ ಸಿನಿಮಾ ಜುಲೈ 28ಕ್ಕೆ ತೆರೆಗೆ ಬರುತ್ತಿದೆ.