ಆಧಾರ್‌ ನಂಬರ್ ಕೊಡಬೇಡಿ, ಮನೆಯೊಳಗೆ ಬಿಟ್ಟುಕೊಳ್ಳಬೇಡಿ; ನಟ ಶಂಕರ್ ಅಶ್ವಥ್‌ ಎಚ್ಚರಿಕೆ ವಿಡಿಯೋ ವೈರಲ್!

ಸಾರ್ವಜನಿಕರು ವಂಚನೆಗೊಳಗಾಗದಂತೆ ತಡೆದ ನಟ ಶಂಕರ್ ಅಶ್ವಥ್. ಎಚ್ಚರಿಗೆ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್... 

 

 

Colors Kannada Ramachari Shankar Ashwath warns public about nurse survey and Adhar card number vcs

ಕನ್ನಡ ಚಿತ್ರರಂಗದ ಹಿರಿಯ ನಟ ಹಾಗೂ ಕಿರುತೆರೆ ನೆಚ್ಚಿನ ನಾರಾಯಣ ಆಚಾರ್ ಪಾತ್ರದಲ್ಲಿ ಅಭಿನಯಿಸುತ್ತಿರುವ ಶಂಕರ್ ಅಶ್ವತ್ಥ್ ಸೋಷಿಯಲ್ ಮೀಡಿಯಾದಲ್ಲಿ ತುಂಬಾನೇ ಆಕ್ಟಿವ್ ಅಗಿದ್ದಾರೆ. ಸಿನಿಮಾ, ಧಾರಾವಾಹಿ, ಸಮಾಜದ ಹೊಸ ವಿಚಾರಗಳನ್ನು ವಿಡಿಯೋ ಮೂಲಕ ಮಾತನಾಡಿ ಅಭಿಮಾನಿಗಳ ಜೊತೆ ಹಂಚಿಕೊಳ್ಳುತ್ತಾರೆ. ಹೀಗೆ ಅವರ ಮನೆಯಲ್ಲಿ ನಡೆದ ಘಟನೆಯನ್ನು ಹಂಚಿಕೊಂಡಿದ್ದಾರೆ. ಯಾರಿಗೂ ವಂಚನೆ ಆಗಬಾರದು ಯಾರ ಮಾತನ್ನು ನಂಬಿ ಮೋಸವಾಗಬಾರದು ಎಂದು ಹೇಳಿದ್ದಾರೆ. 

'ಸಾರ್ವಜನಿಕರ ಗಮನಕ್ಕೆ ಒಂದು ವಿಚಾರ ತರುತ್ತಿರುವೆ ಇದು ಕೆಲವೇ ಕೆಲವು ನಿಮಿಷಗಳ ಹಿಂದೆ ನಡೆದಿರುವ ಘಟನೆ. ನಮ್ಮ ಹೆಮ್ಮೆಯ ಮೈಸೂರಿನ ಪ್ರತಿಷ್ಠಿತ ನರ್ಸಿಂಗ್ ಸಂಸ್ಥೆಯಿಂದ ಇಬ್ಬರು ಹುಡುಗಿಯರು ಬಂದು ನಮ್ಮ ಬಗ್ಗೆ ಯಾವುದೋ ಮಾಹಿತಿ ಬೇಕು ಎಂದು ಹೇಳಿದರು ಖಂಡಿತವಾಗಿಯೂ ಅದು ಆರೋಗ್ಯಕ್ಕೆ ದೇಹಕ್ಕೆ ಸಂಬಂಧ ಪಟ್ಟಿದ್ದು. ಇದೆಲ್ಲಾ ಆದ್ಮೇಲೆ ನಮ್ಮ ಆಧಾರ್ ಕಾರ್ಡ್ ನಂಬರ್ ಕೇಳುತ್ತಾರೆ..ಯಾಕೆ ನಂಬರ್ ಕೇಳುತ್ತಾರೆ ಅಂದ್ರೆ ಇಂತಹ ವ್ಯಕ್ತಿಗಳನ್ನು ಕಂಡು ನಾವು ಇಷ್ಟು ಮಾಹಿತಿ ಪಡೆದಿದ್ದೀವಿ ಅಂತ ಸಾಭೀತು ಮಾಡಲು ಎಂದು ಆ ನರ್ಸಿಂಗ್ ಮಾಡುತ್ತಿರುವ ಹೆಣ್ಣು ಮಕ್ಕಳು ಹೇಳುತ್ತಾರೆ. ಆ ಹೆಣ್ಣು ಮಕ್ಕಳನ್ನು ನೋಡಿದರೆ ವಂಚರ ರೀತಿ ಕಾಣಲಿಲ್ಲ ಆದರೆ ಈ ಮಾಹಿತಿಯನ್ನು ಯಾಕೆ ನಾನು ಹೇಳುತ್ತಿರುವುದು ಅಂದ್ರೆ ಸಾರ್ವಜನಿಕರಿಗೆ ತಿಳಿದಿರಬೇಕು ಎಂದು ಹಾಗೂ ಆ ವಿದ್ಯಾಸಂಸ್ಥೆ ಗಮನಕ್ಕೂ ತರಬೇಕು ಎಂದುಕೊಂಡಿರುವೆ' ಎಂದು ವಿಡಿಯೋದಲ್ಲಿ ಶಂಕರ್ ಅಶ್ವತ್ಥ್ ಮಾತನಾಡಿದ್ದಾರೆ.

ನಮ್ಮ ಪಿಜಿಯಲ್ಲಿದ್ದ ಹೆಣ್ಮಗಳು ಹೂವಿ; 'ಬೆಟ್ಟದ ಹೂ' ನಟಿಯ ಹಿನ್ನಲೆ ಬಹಿರಂಗ ಪಡಿಸಿದ ಶಂಕರ್ ಅಶ್ವಥ್

'ಮಕ್ಕಳನ್ನು ಈ ಕೆಲಸ ಮೇಲೆ ಕಳುಹಿಸುತ್ತಿರುವೆ ಈ ರೀತಿ ಸಂದರ್ಶನ ಮಾಡಿ ಮಾಹಿತಿ ಪಡೆಯುತ್ತಾರೆ ಎಂದು ಅವರ ಫೋಟೋವನ್ನು ಅಟಿಸ್ಟೇಷನ್ ಮಾಡಿ ಲೆಟರ್ ಮತ್ತು ಐಡಿ ಕಾರ್ಡ್‌ ಕೊಡಬೇಕು. ಸುಮ್ಮನೆ ಯಾವ ಕಾರ್ಡ್‌ ಹಿಡಿದುಕೊಂಡು ಬಂದು ಆಧಾರ ನಂಬರ್ ಕೇಳಿದರೆ ಯಾರೂ ಕೊಡುವುದಿಲ್ಲ ಜನರಿಗೆ ನಂಬಿಕೆ ಬರುವುದಿಲ್ಲ. ಇತ್ತೀಚಿನ ದಿನಗಳಲ್ಲಿ ಆಧಾರ್ ಕಾರ್ಡ್ ಕೊಡಬೇಡಿ ಯುಪಿಐ ನಂಬರ್ ಕೊಡಬೇಡಿ ಓಟಿಪಿ ನಂಬರ್ ಕೊಡಬೇಡಿ ಎಂದು ಕೇಳುತ್ತಿರುತ್ತಾರೆ ಹೀಗಿದ್ದರೂ ಕೇಳಿದರೆ ಯಾರೂ ಕೊಡುವುದಿಲ್ಲ. ಅವರು ನಿಜವಾಗಲೂ ಸತ್ಯವಾಗಲೂ ಧರ್ಮವಾಗಲೂ ಬಂದು ಸಂದರ್ಶನ ಮಾಡುತ್ತಿದ್ದರೂ ಯಾರೂ ಅವರನ್ನು ನಂಬುತ್ತಿರಲಿಲ್ಲ. ದೇವರೇ ಬಂದರೂ ಅನುಮಾನ ಪಡುತ್ತೀವಿ ಹೀಗಿರುವ ಯಾರೇ ಬಂದರೂ ನಂಬಲು ಕಷ್ಟವಾಗುತ್ತದೆ. ಸರಿಯಾದ ಮಾಹಿತಿ ಸಿಗಲಿಲ್ಲ ಅಂದ್ರೆ ಮನೆಗೆ ಸೇರಿಸಿಕೊಳ್ಳಬೇಡಿ' ಎಂದು ಶಂಕರ್ ಅಶ್ವತ್ಥ್ ಹೇಳಿದ್ದಾರೆ. 

ತಂದೆ ನೆನದು ಭಾವುಕ:

'ಟಿವಿಯಲ್ಲಿ 'ಕರ್ಣ' ಸಿನಿಮಾ ನೋಡಿದಾಗ ನನ್ನ ಜೀವನದ ಘಟನೆ ನೆನಪಿಸಿಕೊಂಡೆ. ನನ್ನ ಮನದ ಭಾವನೆಗಳನ್ನು ನಿಮ್ಮೊಂದಿಗೆ ಶೇರ್ ಮಾಡಿಕೊಳ್ಳಬೇಕೆಂಬ ಕಾರಣದಿಂದ ಹೇಳುತ್ತಿದ್ದೇನೆ. ಈ ವಿಷಯ ನಾನು ಹೇಳಿ ಕೊಳ್ಳಲು ಕಾರಣ ಯಾರಿಂದಲೂ ಲೈಕ್ಸ್ ಗಿಟ್ಟಿಸಕ್ಕಾಗಲಿ, ಪ್ರಚಾರಕ್ಕಾಗಲಿ ಅಲ್ಲ. ಮನುಷ್ಯನಲ್ಲಿ ಏನೇ ಯೋಗ್ಯತೆ ಇದ್ದರೂ, ಅವನೆಷ್ಟೇ ಬುದ್ಧೀವಂತನಾದರೂ ವಿಧಿ ಲಿಖಿತ ಏನಾಗಿರುತ್ತೋ ಅದೇ ನಿಶ್ಚಿತ. ಇದನ್ನು ಕೆಲವರು ಒಪ್ಪದೇ, ಅತೀ ಬುದ್ಧಿವಂತಿಕೆಯಿಂದ ಯಾವುದರಲ್ಲಿ ಬೇಕಾದರೂ ತಪ್ಪನ್ನು ಹುಡುಕುತ್ತಾರೆ. ಅದೇ ಬುದ್ದಿವಂತರನ್ನು ಇಂದು ಕೊರೋನಾ ಬಗ್ಗೆ ಪ್ರಶ್ನಿಸಿದರೆ? ನೇರವಾದ ಉತ್ತರ ಸಿಗೋಲ್ಲ. ಎಲ್ಲವೂ ಭಗವಂತನ ಇಚ್ಛೆ,' ಎಂದು ಪ್ರಾರಂಭಿಸುತ್ತಾ ತಮ್ಮ ಜೀವದಲ್ಲಿ ಎಷ್ಟೇ ಪ್ರಯತ್ನ ಪಟ್ಟರೂ ತಂದೆಯನ್ನು ಸರಿಯಾಗಿ ನೋಡಿಕೊಳ್ಳಲು ಸಾಧ್ಯವಾಗಲಿಲ್ಲ,' ಎಂದು ಹೇಳುತ್ತಾ ಭಾವುಕರಾಗಿದ್ದಾರೆ.

ಹಿರಿಯ ನಟನ ಮನೆಗೆ ಭೇಟಿ ನೀಡಿ ಆಸೆ ಈಡೇರಿಸಿದ ಯುವರತ್ನ!

'ನಾನೂ ಜೀವನದಲ್ಲಿ ಏನೇನೋ ಮಾಡಿದೆ. ಆದರೆ, ಯಾವುದರಲ್ಲಿಯೂ ಉದ್ಧಾರ ಆಗಲಿಲ್ಲ, ಡಿ. ಫಾರ್ಮವನ್ನು ಫಸ್ಟ್ ಕ್ಲಾಸ್‌ನಲ್ಲಿ ಪಾಸ್ ಮಾಡಿದರೂ ಏನು ಪ್ರಯೋಜನ ಆಗಲಿಲ್ಲ, ಮೆಡಿಕಲ್ ಶಾಪ್ ಇಟ್ಟು ಕೊಂಡರೂ ಅಲ್ಲೂ ಸೋಲು. ಕೌನ್ ಬನೇಗಾ ಕರೋಡ್ ಪತಿಗೆ ಸೆಲೆಕ್ಟ್ ಆಗಿ, ಇಪ್ಪತ್ತು ವರ್ಷದ ಹಿಂದೆಯೇ ನನ್ನ ತಂದೆ ಜೊತೆ ಹೋಗಿದ್ದೆ. ಅಲ್ಲೂ ಟುಸ್, ಸೀರಿಯಲ್ ಬಹಳ ಇಷ್ಟಪಟ್ಟು, ತಂದೆಯನ್ನು ಒಪ್ಪಿಸಿ ಕಷ್ಟಪಟ್ಟು ಮಾಡಿದೆ. ಅಲ್ಲೂ ಸೋತೆ. ಯಾವುದಕ್ಕೂ ಜಗ್ಗದೇ ಹಾಗೇ ಜೀವನದಲ್ಲಿ ಮುಂದುವರೆದೆ. ಕೊನೆಗೂ ನಾನು ಅಂದುಕೊಂಡಂತೆ ನನ್ನ ತಂದೆಯನ್ನು ಸುಖವಾಗಿ ನೋಡಿಕೊಳ್ಳಲು ಆಗಲಿಲ್ಲ. ಆದರೆ ಬರೀ ವಿಧಿಯನ್ನೇ ನಿಂಧಿಸುತ್ತಾ ಸುಮ್ಮನೆ ಕೂರಲಿಲ್ಲ. ಕೈಯ್ಯಲ್ಲಾದದ್ದನ್ನು ಮಾಡುತ್ತಲೇ, ಇಲ್ಲಿಯವರೆಗೂ ಬಂದೆ. ಮತ್ತೆ ಈಗಿನ ಸಂಧರ್ಭ ಅರವತ್ತು ವಯಸ್ಸಾದವರ ಸಂಕಷ್ಟ, ಎಲ್ಲವನ್ನೂ ಮೆಲಕು ಹಾಕುತ್ತಿದ್ದೆ. ಅದಿರಲಿ ಇದನ್ನು ಪ್ರಸ್ತಾಪ ಮಾಡುವುದಕ್ಕೆ ಕಾರಣ ಕರ್ಣ ಚಿತ್ರದಲ್ಲಿ ನಾಯಕ, ತನ್ನ ತಂದೆಗೆ ಸಹಾಯ ಮಾಡಲು ವ್ಯಥೆ ಪಡುವುದು, ಹಾಗೂ ತಂದೆಗೆ ಅರವತ್ತು ವಯಸ್ಸಾದ್ದರಿಂದ ಕಿಡ್ನಿ ಸ್ವೀಕರಿಸಲು ನಿರಾಕರಿಸುವುದು, ನೋಡಿ ಬರೆಯಬೇಕನ್ನಿಸಿತು, ಬರೆದೆ,' ಎಂದು ಸಾಮಾಜಿ ಜಾಲತಾಣದಲ್ಲಿ ಸಕ್ರಿಯವಾಗಿರುವ ಶಂಕರ್ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ. 

 

Latest Videos
Follow Us:
Download App:
  • android
  • ios