ಹಿರಿಯ ನಟನ ಮನೆಗೆ ಭೇಟಿ ನೀಡಿ ಆಸೆ ಈಡೇರಿಸಿದ ಯುವರತ್ನ!
ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಯುವರತ್ನ ಚಿತ್ರದ ಶೂಟಿಂಗ್‌ಗೆಂದು ಮೈಸೂರಿನಲ್ಲಿದ್ದು ಇದೇ ವೇಳೆ ಹಿರಿಯ ನಟ ಶಂಕರ್ ಅಶ್ವಥ್ ಮನೆಗೆ ಭೇಟಿ ನೀಡಿದ್ದಾರೆ.
ದಿವಂಗತ ಅಶ್ವಥ್ ಅವರ ಪುತ್ರ ಶಂಕರ್ ಅಶ್ವಥ್ ಪವರ್ ಸ್ಟಾರ್ ಒಮ್ಮೆ ಮನೆಗೆ ಬರಬೇಕೆಂದು ಮನವಿ ಮಾಡಿಕೊಂಡಿದರು. 'ಯುವರತ್ನ' ಶೂಟಿಂಗ್‌ಗೆಂದು ಮೈಸೂರಿನಲ್ಲಿ ಹಲವಾರು ದಿನಗಳಿಂದ ವಾಸವಿರುವ ಪುನೀತ್, ಅವರ ಮನೆಗೆ ತೆರಳಿ ಅಶ್ವಥ್ ಪತ್ನಿ ಶಾರದಮ್ಮ ಅವರ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದರು. ಉಪ್ಪಿಟ್ಟು, ಕೇಸರಿಬಾತ್ ಸವಿದು ಅರ್ಧ ಗಂಟೆಗಳ ಕಾಲ ಮನೆಯವರೊಂದಿಗೆ ಸಮಯ ಕಳೆದಿದ್ದಾರೆ.
ಔಟ್‌ಡೋರ್ ಜಿಮ್ ಉದ್ಘಾಟಿಸಿದ ಪವರ್ ಸ್ಟಾರ್!
ಹಿರಿಯ ನಟ ಅಶ್ವಥ್ ಅವರು ಬದುಕಿದ್ದಾಗ ಡಾ. ರಾಜ್‌ಕುಮಾರ್ ಮೈಸೂರಿಗೆ ತೆರಳಿದಾಗಲೆಲ್ಲಾ ತಪ್ಪದೆ ಇವರ ಮನೆಗೆ ಭೇಟಿ ನೀಡುತ್ತಿದ್ದರಂತೆ. ಈ ಅಮೂಲ್ಯ ಕ್ಷಣಗಳ ಫೋಟೋಗಳನ್ನು ಶಂಕರ್ ಅಶ್ವಥ್ ತಮ್ಮ ಫೇಸ್‌ಬುಕ್ ಖಾತೆಯಲ್ಲಿ 'ನಾನು ಕಂಡ ಸತ್ಯ, ತಂದೆ ಮಹಾರಾಜ ಮಗ ರಾಜಕುಮಾರ ಎಂದು' ಬರೆದು ಶೇರ್ ಮಾಡಿಕೊಂಡಿದ್ದಾರೆ.