ನಟಿ ಸಾನ್ಯಾ ಅಯ್ಯರ್ ದುಬೈನಲ್ಲಿ ಬಾಲಿವುಡ್ ನಟಿ ಜೀನತ್ ಅಮಾನ್ ಅವರನ್ನು ಭೇಟಿಯಾಗಿ ಅಭಿಮಾನ ಮೆರೆದಿದ್ದಾರೆ. 70ರ ದಶಕದ ಜನಪ್ರಿಯ ನಟಿಯಾಗಿದ್ದ ಜೀನತ್ ಅಮಾನ್ ಅವರ ನಟನೆಯನ್ನು ಸಾನ್ಯಾ ಕೊಂಡಾಡಿದ್ದಾರೆ. ವಯಸ್ಸಿಗೆ ತಕ್ಕ ಪಾತ್ರಗಳು ಸಿಕ್ಕರೆ ನಟಿಸುವುದಾಗಿ ಜೀನತ್ ಹೇಳಿದ್ದಾರೆ. ಸದ್ಯಕ್ಕೆ ಸಾನ್ಯಾ ಮುಂದಿನ ಪ್ರಾಜೆಕ್ಟ್ ಬಗ್ಗೆ ಮಾಹಿತಿ ನೀಡಿಲ್ಲ.
ಬಾಲಿವುಡ್ ನಟ-ನಟಿಯರನ್ನು ಯಾರೇ ಭೇಟಿ ಮಾಡಿದ್ದರೂ ಸಖತ್ ಖುಷಿಯಾಗಿರುತ್ತಾರೆ. ಸಿನಿಮಾರಂಗದಲ್ಲಿ ಹೆಸರು ಮಾಡಿದ್ದೀನಿ, ಸಾಧನೆ ಮಾಡಿದ್ದೀನಿ ಅಂದ್ರೆ ಬಿ-ಟೌನ್‌ಗೆ ಕಾಲಿಡುವುದು. ಜನರಲ್ಲಿ ಈಗಲೂ ಈ ಭಾವನೆ ಇದೆ. ತಮ್ಮ ಇಂಡಸ್ಟ್ರಿಯವರನ್ನು ಭೇಟಿ ಮಾಡಿದಾಗ ಆಗುವ ಖುಷಿಗಿಂತ ಡಬಲ್ ಖುಷಿ ಆಗುವುದು ಹಿಂದಿ ಚಿತ್ರರಂಗದವರನ್ನು ಭೇಟಿ ಮಾಡಿದಾಗ. ಅವರೇ ಸೆಲೆಬ್ರಿಟಿ ಆಗಿರುತ್ತಾರೆ ಅದನ್ನು ಮರೆತು ಅಭಿಮಾನಿಯಂತೆ ಅವರೊಟ್ಟಿಗೆ ಫೋಟೋ ಕ್ಲಿಕ್ ಮಾಡಿಕೊಳ್ಳುತ್ತಾರೆ. ಏಕೆಂದು ಇದು ಕಲೆಗೆ ಕೊಡುವ ಬೆಲೆ. ನಮ್ಮ ಕನ್ನಡ ಚಿತ್ರರಂಗದಲ್ಲಿ ಇರುವ ಪ್ರತಿಯೊಬ್ಬ ಕಲಾವಿದರು ಕೂಡ ಮತ್ತೊಂದು ಭಾಷೆ ಕಲಾವಿದರಿಗೆ ಕೊಡುವ ಬೆಲೆ ಅಪಾರ. ಆ ಗೌರವದಿಂದಲೇ ಸಾನ್ಯಾ ಈ ಫೋಟೋ ಕ್ಲಿಕ್ ಮಾಡಿಕೊಂಡಿರುವು.
ಹೌದು! ಬಾಲಿವುಡ್ ನಟಿ ಜೀನತ್ ಅಮಾನ್ ಅವರನ್ನು ಪುಟ್ಟ ಗೌರಿ ಮದುವೆ ಹಾಗೂ ಬಿಗ್ ಬಾಸ್ ಖ್ಯಾತಿಯ ಸಾನ್ಯಾ ಅಯ್ಯರ್ ಭೇಟಿ ಮಾಡಿದ್ದಾರೆ. ದುಬೈ ಕ್ರೀಕ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಇಬ್ಬರು ಭೇಟಿ ಮಾಡಿದ್ದಾರೆ. ಫ್ಲೋರಲ್ ಬಣ್ಣದ ಮ್ಯಾಕಿಯಲ್ಲಿ ಸಾನ್ಯಾ ನಿಂತುಕೊಂಡು ನಗುತ್ತಿದ್ದಾರೆ. ಸಿಲ್ವರ್ ಬಣ್ಣದ ಸೆಲ್ವಾರ್‌ನಲ್ಲಿ ಜೀನತ್ ಅಮಾನ್ ರಾಣಿ ರೀತಿ ಕುಳಿತಿದ್ದಾರೆ. 'ಈಕಾನಿಕ್..ದಿ ಜೀತನ್ ಅಮಾನ್. ಒಂದು ನಿಮಿಷ ಮಿಂಚಿನಂತೆ ಕಾಣಿಸಿಕೊಳ್ಳುತ್ತಾರೆ. ಅವರ ಸಮತೋಲನವೇ ಅವಳ ಶಕ್ತಿಆದರೂ ಅವರ ಹೃದಯದ ವಿರುದ್ಧ ಯಾವುದೇ ಕಾವಲು ಇಲ್ಲ. ಇಂಡಸ್ಟ್ರಿಯಲ್ಲಿ ಅವರ ಜರ್ನಿಯನ್ನು ಹತ್ತಿರದಿಂದ ನೋಡಿದಾಗ ಖಂಡಿತ ನೀವು ಹತ್ತಿರವಾಗುತ್ತೀರಿ. AI ಶೀಫ್‌ನಲ್ಲಿ ದಿ ಲೆಜೆಂಡ್‌ನ ಭೇಟಿ ಮಾಡಿದ್ದು ನಿಜಕ್ಕೂ ನನ್ನ ಜೀವನದ ಅದ್ಭುತ ರಾತ್ರಿ. ಇದು ಫ್ಯಾನ್ ಗರ್ಲ್ ಕ್ಷಣ' ಎಂದು ಸಾನ್ಯಾ ಬರೆದುಕೊಂಡಿದ್ದಾರೆ.
ಸ್ವಂತ ದುಡಿಮೆಯಲ್ಲಿ ಚಿನ್ನದ ನೆಕ್‌ಲೆಸ್ ಖರೀದಿಸಿದ ಧನುಶ್ರೀ; ರಸ್ತೆ ಬದಿಯಲ್ಲಿ ಕಣ್ಣೀರಿಟ್ಟ ಅಮ್ಮ-ಮಗಳು
70ರ ದಶಕದಲ್ಲಿ ಹಿಂದಿ ಚಿತ್ರರಂಗದ ಟಾಪ್ ನಟಿ ಜೀನತ್ ಅಮಾನ್. ನೂರಾನು ಸಿನಿಮಾಗಳಲ್ಲಿ ಮಿಂಚಿ ಸಾವಿರಾರು ಪ್ರಶಸ್ತಿಗಳನ್ನು ತಮ್ಮ ಮಡಿಲಿಗೆ ಏರಿಸಿಕೊಂಡಿದ್ದಾರೆ. ವೈಯಕ್ತಿಕ ಜೀವನಕ್ಕೆ ಸಾಕಷ್ಟು ಏರು ಪೇರು ಕಂಡರೂ ಕೂಡ ಜೀನತ್ ಅಮಾನ್ ಅದನ್ನು ಸಿನಿಮಾ ಮೇಲೆ ತೋರಿಸಲಿಲ್ಲ. 73 ವರ್ಷದ ಜೀತನ್ ಅಮಾನ್ ಎಲ್ಲೇ ಕಾಣಿಸಿಕೊಂಡು ಅದೇ ಸ್ಟೈಲ್ ಅದೇ ಲುಕ್. 2020ರಲ್ಲಿ ಕಮ್ ಬ್ಯಾಕ್ ಮಾಡುವುದಾಗಿ ಜೀತನ್ ಅನೌನ್ಸ್ ಮಾಡಿದ್ದರು ಆದರೆ ಅಲ್ಲೊಂದು ಇಲ್ಲೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. 'ನನ್ನ ವಯಸ್ಸಿಗೆ ತಕ್ಕ ಪಾತ್ರಗಳು ತುಂಬಾ ಕಡಿಮೆ ಇದೆ ಅದರಲ್ಲೂ ಹಿಂದಿ ಚಿತ್ರರಂಗದಲ್ಲಿ ತುಂಬಾ ದೂರ. ಅದ್ಭುತ ಪಾತ್ರಗಳು ಬಂದ್ರೆ ಖಂಡಿತ ನಟಿಸುತ್ತೀನಿ' ಎಂದಿದ್ದರು. ಸದ್ಯ ಗೌರಿ ಸಿನಿಮಾ ಅದ್ಮೇಲೆ ಸಾನ್ಯಾ ಅಯ್ಯರ್ ಮುಂದಿನ ಪ್ರಾಜೆಕ್ಟ್ ರಿವೀಲ್ ಮಾಡಿಲ್ಲ. ಆದರೆ ಸೋಷಿಯಲ್ ಮೀಡಿಯಾ ಮೂಲಕ ಜನರೊಟ್ಟಿಗೆ ಸಂಪರ್ಕದಲ್ಲಿ ಇದ್ದಾರೆ ಹಾಗೂ ಫೋಟೋಗಳನ್ನು ಅಪ್ಲೋಡ್ ಮಾಡುತ್ತಿರುತ್ತಾರೆ.
ಶ್ರೀಮಂತ ಗಂಡ ಎಂದು ಕೊಂಕು ಮಾಡುತ್ತಿದ್ದವರಿಗೆ ಖಡಕ್ ಉತ್ತರ ಕೊಟ್ಟ ಕಾವ್ಯಾ ಗೌಡ!
