ಶ್ರೀಮಂತ ಗಂಡ ಎಂದು ಕೊಂಕು ಮಾಡುತ್ತಿದ್ದವರಿಗೆ ಖಡಕ್ ಉತ್ತರ ಕೊಟ್ಟ ಕಾವ್ಯಾ ಗೌಡ!
ಪದೇ ಪದೇ ಪತಿಯ ಹೆಸರು ಹೇಳಿಕೊಂಡು ಕಾಲೆಳೆಯುತ್ತಿದ್ದ ಜನರಿಗೆ ಖಡಕ್ ಉತ್ತರ ಕೊಟ್ಟ ಕಾವ್ಯಾ ಗೌಡ. ಸ್ವಂತ ದುಡಿಮೆ ಪ್ರಶ್ನೆ ಮಾಡಿದ ನೆಟ್ಟಿಗರು...

ಹಳ್ಳಿ ಹುಡುಗಿ ಪ್ಯಾಟೆ ಲೈಫ್ ರಿಯಾಲಿಟಿ ಶೋ ಮೂಲಕ ಕನ್ನಡ ಕಿರುತೆರೆಗೆ ಕಾಲಿಟ್ಟ ಕಾವ್ಯಾ ಗೌಡ ಈಗ ಬಣ್ಣದ ಪ್ರಪಂಚದಿಂದ ಸಂಪೂರ್ಣವಾಗಿ ದೂರ ಉಳಿದುಬಿಟ್ಟಿದ್ದಾರೆ.
ಮದುವೆ ಸೆಟ್ ಆಗುತ್ತಿದ್ದಂತೆ ಸೀರಿಯಲ್ ಮತ್ತು ಜಾಹೀರಾತುಗಳಿಂದ ಹೊರ ಬಂದ ಕಾವ್ಯಾ ಗೌಡ ಪಕ್ಕಾ ಫ್ಯಾಮಿಲಿ ವುಮೆನ್ ಆಗಿ ಬ್ಯುಸಿಯಾಗಿಬಿಟ್ಟರು.
ಉದ್ಯಮಿ ಸೋಮಶೇಖರ್‌ರನ್ನು ಮದುವೆ ಮಾಡಿಕೊಂಡ ನಂತರ ಆಭರಣ ಡಿಸೈನಿಂಗ್ ಕೋರ್ಸ್‌ಗೆ ಸೇರಿಕೊಂಡರು. ಕೋರ್ಸ್ ಮುಗಿಸಿ ಪ್ರತಿಷ್ಠಿತ ಆಭರಣದ ಅಂಗಡಿಯಲ್ಲಿ ಡಿಸೈನರ್ ಆಗಿ ಕೆಲಸ ಮಾಡಿದ್ದರು.
ಪ್ರೆಗ್ನೆಂಟ್ ಎಂದು ಅನೌನ್ಸ್ ಮಾಡುತ್ತಿದ್ದಂತೆ ಆರೋಗ್ಯದ ಮೇಲೆ ಹೆಚ್ಚಿಗೆ ಗಮನ ಕೊಟ್ಟು ಕೇವಲ ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿ ಉಳಿದುಕೊಂಡರು.
ಈ ನಡುವೆ ಸಾಕಷ್ಟು ಫಾರಿನ್ ಟ್ರಿಪ್, ಸಿಕ್ಕಾಪಟ್ಟೆ ದುಬಾರಿ ಬಟ್ಟೆಗಳು, ಬ್ಯಾಗ್‌ಗಳು ಮತ್ತು ಚಪ್ಪಲಿಗಳನ್ನು ಧರಿಸುವ ಕಾವ್ಯಾ ಗೌಡ ಪದೇ ಪದೇ ನೆಗೆಟಿವ್ ಕಾಮೆಂಟ್ ಎದುರಿಸುತ್ತಾರೆ.
ಸಿರಿವಂತ ಮನೆಗೆ ಸೊಸೆಯಾಗಿ ಹೋಗಿರುವ ಕಾರಣ ಅವರ ಹಣವನ್ನು ವೇಸ್ಟ್ ಮಾಡುತ್ತಿರುವೆ. ದುಡ್ಡಿನ ಬೆಲೆ ಗೊತ್ತಾ? ಗಂಡನ ದುಡ್ಡಿನಲ್ಲಿ ಶೋಕಿ ಮಾಡುತ್ತಿರುವೆ ಎಂದು ಸಿಕ್ಕಾಪಟ್ಟೆ ನೆಗೆಟಿವ್ ಕಾಮೆಂಟ್‌ಗಳು ಮಾಡುತ್ತಿದ್ದರು.
ನಾನು ವಿದ್ಯಾವಂತಿ ನಾನು ಇಂಡಿಪೆಂಡೆಂಟ್ ಮಹಿಳೆ ನನ್ನ ಕೆಲಸಗಳು ನನಗೆ ಗೊತ್ತಿದೆ. ನೆಗೆಟಿವ್ ಕಾಮೆಂಟ್ ಮಾಡುವವರಿಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ನಿಮಗೆ ಒಳ್ಳೆಯದಾಗಲಿ ಒಳ್ಳೆಯ ಜೀವನ ಕಟ್ಟಿಕೊಳ್ಳಿ ಎಂದು ಕಾವ್ಯಾ ಉತ್ತರಿಸಿದ್ದರು.