Asianet Suvarna News Asianet Suvarna News

ನಡುರಸ್ತೆಯಲ್ಲೇ ನಟ ದುನಿಯಾ ವಿಜಯ್ ಅರೆಸ್ಟ್: ಭೀಮ ಚಿತ್ರದ ಕತೆಯೇನು?

ಸ್ಯಾಂಡಲ್‌ವುಡ್‌ನ ಬ್ಲ್ಯಾಕ್‌ ಕೋಬ್ರಾ ದುನಿಯಾ ವಿಜಯ್ ಅರೆಸ್ಟ್ ಆಗಿದ್ದಾರೆ. ಬೆಂಗಳೂರಿನ ವಿನೋವಾ ನಗರದಲ್ಲಿ ನಡುರಸ್ತೆಯಲ್ಲೇ ಪೊಲೀಸರು ದುನಿಯಾ ವಿಜಯ್ ಕೈಗೆ ಬೇಡಿ ತೋಡಿಸಿಕೊಂಡು ಕರೆದುಕೊಂಡು ಹೋಗಿದ್ದಾರೆ. 

Bheema Film Starrer Duniya Vijay Arrested On The Street gvd
Author
First Published Dec 21, 2023, 8:43 AM IST

ಸ್ಯಾಂಡಲ್‌ವುಡ್‌ನ ಬ್ಲ್ಯಾಕ್‌ ಕೋಬ್ರಾ ದುನಿಯಾ ವಿಜಯ್ ಅರೆಸ್ಟ್ ಆಗಿದ್ದಾರೆ. ಬೆಂಗಳೂರಿನ ವಿನೋವಾ ನಗರದಲ್ಲಿ ನಡುರಸ್ತೆಯಲ್ಲೇ ಪೊಲೀಸರು ದುನಿಯಾ ವಿಜಯ್ ಕೈಗೆ ಬೇಡಿ ತೋಡಿಸಿಕೊಂಡು ಕರೆದುಕೊಂಡು ಹೋಗಿದ್ದಾರೆ. ಬೆಂಗಳೂರಿನ ವಿನೋವಾ ರಸ್ತೆಯಲ್ಲಿ ವಿಜಯ್ ಕಂಡು ಬಹುತೇಕರು ಗಾಬರಿಗೊಂಡಿದ್ದರು. ವಿಜಯ್ ಮೈ ತುಂಬಾ ರಕ್ತ ಬೇರೆ ಹರಿದಿದ್ದರಿಂದ ಏನಾಯಿತು ಎಂದೆಲ್ಲ ವಿಚಾರಿಸಿದ್ದರು. ಆಮೇಲೆ ಅದು ಶೂಟಿಂಗ್ ಸನ್ನಿವೇಶ ಎಂದು ಗೊತ್ತಾಗಿ ನಿಟ್ಟುಸಿರಿಟ್ಟರು.

ಹೌದು, ದುನಿಯಾ ವಿಜಯ್ ನಟಿಸಿ, ನಿರ್ದೇಶನ ಮಾಡುತ್ತಿರುವ ಭೀಮ ಸಿನಿಮಾದ ಕೊನೆಯ ಹಂತದ ಚಿತ್ರೀಕರಣ ನಡೆಯುತ್ತಿದೆ. ಅದರಲ್ಲೂ ಕ್ಲೈಮ್ಯಾಕ್ಸ್ ದೃಶ್ಯವನ್ನು ವಿಜಯ್ ಶೂಟ್ ಮಾಡುತ್ತಿದ್ದಾರೆ. ನಡು ರಸ್ತೆಯಲ್ಲಿ ವಿಜಯ್ ಅವರನ್ನು ಅರೆಸ್ಟ್ ಮಾಡಿಕೊಂಡು ಹೋಗುವ ದೃಶ್ಯ ಅದಾಗಿದೆ. ಈ ಮೂಲಕ ಭೀಮ ಸಿನಿಮಾದ ಕ್ಲೈಮ್ಯಾಕ್ಸ್ ಏನಾಗಿರಲಿದೆ ಎನ್ನುವ ಸಣ್ಣದೊಂದು ಸುಳಿವೂ ಸಿಕ್ಕಿದೆ.

ರಾಕಿಂಗ್ ಸ್ಟಾರ್‌ಗೆ ತುಂಬಾ ಹಠ: ಯಶ್ ಜೊತೆಗಿನ ಮುನಿಸಿನ ಬಗ್ಗೆ ಉತ್ತರ ಕೊಟ್ಟ ಪ್ರಶಾಂತ್ ನೀಲ್!

ಚಿತ್ರೀಕರಣ ಮುಕ್ತಾಯ: ದುನಿಯಾ ವಿಜಯ್ ನಿರ್ದೇಶಿಸಿ, ನಟಿಸುತ್ತಿರುವ ‘ಭೀಮ’ ಚಿತ್ರದ ಚಿತ್ರೀಕರಣ ‌ಮುಕ್ತಾಯವಾಗಿದೆ. ಬೆಂಗಳೂರಿನ ವಿನೋಬನಗರದ ಗಲ್ಲಿಗಳಲ್ಲಿ ಕೊನೆಯ ದೃಶ್ಯದ ಶೂಟಿಂಗ್‌ ನಡೆಯಿತು. ನಾಯಕ ವಿಜಯ್‌ ಸೇರಿದಂತೆ ಇಡೀ ಚಿತ್ರತಂಡ ಈ ವೇಳೆ ಹಾಜರಿತ್ತು. ‘ಇಡೀ ಸಿನಿಮಾವನ್ನು ರಿಯಲಿಸ್ಟಿಕ್ ಆಗಿ ಚಿತ್ರೀಕರಿಸಲಾಗಿದೆ’ ಎಂದು ವಿಜಯ್ ತಿಳಿಸಿದರು. ರಂಗಭೂಮಿ ಪ್ರತಿಭೆ ಅಶ್ವಿನಿ ಈ ಸಿನಿಮಾದ ನಾಯಕಿ. ಅಚ್ಯುತ ಕುಮಾರ್‌, ರಂಗಾಯಣ ರಘು, ಕಾಕ್ರೋಚ್‌ ಸುಧಿ, ಕಲ್ಯಾಣಿ, ಪ್ರಿಯಾ ಷಟಮರ್ಶಣ ಮುಖ್ಯಪಾತ್ರಗಳಲ್ಲಿದ್ದಾರೆ. ಕೃಷ್ಣ ಸಾರ್ಥಕ್ ಹಾಗೂ ಜಗದೀಶ್‌ ಗೌಡ ನಿರ್ಮಾಪಕರು.

ಮಗಳನ್ನ ಚಿತ್ರರಂಗಕ್ಕೆ ತರೋ ಕನಸಿನಲ್ಲಿ ವಿಜಯ್: ಲೈಫ್ನಲ್ಲಿ ಸಕ್ಸಸ್ ಬೇಕಾ.? ಸೋಲು ಭಯ ಬಿಟ್ ಬಿಡಿ. ಬಂದ ಅಗ್ನಿ ಪರೀಕ್ಷೆಯನ್ನ ಗಟ್ಟಿಯಾಗಿ ಎದುರಿಸಿ. ಆಗ ಸಕ್ಸಸ್  ಶಿಕರದಲ್ಲಿ ನೀವು ಪ್ರತಿಷ್ಠಾಪನೆ ಆಗ್ತೀರಾ.? ಇಂತಹ ಸಾಹಸದ ಲೈಫ್ ಜರ್ನಿ ನಟ ದುನಿಯಾ ವಿಜಯ್ರದ್ದು. ಇದೀಗ ಇದೇ ವಿಜಯ್ ಸುಪುತ್ರಿ ಮೋನಿಕಾ ಬಣ್ಣದ ಜಗತ್ತಿಗೆ ಎಂಟ್ರಿ ಕೊಡೋಕೆ ಸಜ್ಜಾಗಿದ್ದಾರೆ. ಮೋನಿಕಾಗೆ ಹೀರೋಯಿನ್ ಆಗಿ ಅಂತ ಹತ್ತಾರು ಆಫರ್ಗಳು ಬಂದಿವೆ. ಆದ್ರೆ ಅವನ್ನೆಲ್ಲಾ ಅಳೆದು ತೂಗಿ ಒಂದ್ ಸಿನಿಮಾವನ್ನ ಸೆಲೆಕ್ಟ್ ಮಾಡಿದ್ದಾರಂತೆ ಮೋನಿಕಾ.  ರಂಗ SSLC, ಜೋಗಿ, ರಿಷಿ, ಡೆಡ್ಲಿ ಸೋಮ, ಇವು ನಟ ವಿಜಯ್ ಬಿಗ್ಸ್ಕ್ರೀನ್ನಲ್ಲಿ ಪುಟ್ಟ ಪುಟ್ಟ ಹೆಜ್ಜೆ ಇಟ್ಟ ಸಿನಿಮಾಗಳು. ಆ ಸಿನಿಮಾಗಳಲ್ಲೆಲ್ಲಾ ಕೇವಲ 200 ರೂಪಾಯಿಗೆ ಸ್ಟಂಟ್ ಮಾಡ್ತಿದ್ದ ವಿಜಯ್ ಇಂದು ಸ್ಟಾರ್ ಹೀರೋ ಕಮ್ ಡೈರೆಕ್ಟರ್. ವಿಜಯ್ ಲೈಫ್ಗೆ ಟರ್ನಿಂಗ್ ಕೊಟ್ಟಿದ್ದು ದುನಿಯಾ ಸಿನಿಮಾ.

ಅಪ್ಪನ ಹೆಸರುಳಿಸಲು ಬಣ್ಣದ ಜಗತ್ತಿಗೆ ಮಗಳ ಎಂಟ್ರಿ: ಬಬ್ಬ ಸ್ಟಂಟ್ ಮಾಡೋ ಹುಡುಗ ಹೀರೋ ಆಗಿ ಡೈರೆಕ್ಟರ್ ಆಗಿ ಸಕ್ಸಸ್ ಆಗಿದ್ದು ವಿಜಯ್ ಕೀರ್ತಿ ಪತಾಕೆಗೆ ಸಾಕ್ಷಿ. ಇದೀಗ ಅಪ್ಪನ ಹಾಗೆ ಬಣ್ಣದ ಜಗತ್ತಿನಲ್ಲಿ ಶೈನ್ ಆಗೋಕೆ ಮಗಳು ಸಜ್ಜಾಗಿದ್ದಾರೆ. ಸ್ಯಾಂಡಲ್ವುಡ್ನಲ್ಲಿ ಸ್ಟಾರ್ಸ್ ಡಾಟರ್ಸ್ ಶೈನ್ ಆಗ್ತಿದ್ದಾರೆ. ಕನಸಿನ ರಾಣಿ ಮಾಲಾಶ್ರೀ ಮುದ್ದಿನ ಮಗಳು ಆರಾಧನಾ ರಾಮ್ ರಂಗು ಶುರುವಾಗಿದೆ. ನೆನಪಿರಲಿ ಪ್ರೇಮ್ ಮಗಳು ಅಭಿನಯಲ್ಲಿ 100 ಮಾರ್ಕ್ಸ್ ಪಡೆದಿದ್ದಾರೆ. ಈಗ ನಟ ದುನಿಯಾ ವಿಜಯ್ ಮಗಳು ಮೋನಿಕಾ ಟೈಂ ಸ್ಟಾರ್ಟ್ ಅಗಿದೆ. ನಟ ವಿಜಯ್ ತನ್ನ ಮೊದಲ ಪುತ್ರಿ ಮೋನಿಕಾಗೆ ಸಿನಿಮಾ ದುನಿಯಾ ತೋರಿಸುತ್ತಿದ್ದಾರೆ. ಈಗ ದುನಿಯಾ ವಿಜಯ್ ಮುದ್ದಿನ ಮಗಳು  ಮೋನಿಕಾ ಸ್ಯಾಂಡಲ್ವುಡ್ಗೆ ಡೆಬ್ಯೂ ಆಗ್ತಿದ್ದಾರೆ. ಪಕ್ಕಾ ಹೀರೋಯಿನ್ ಪೇಸ್ ಮೋನಿಕಾರದ್ದು. ಹೀಗಾಗಿ ಮಗಳನ್ನ ನಾಯಕಿ ಮಾಡಿ ಸಿನಿಮಾ ದುನಿಯಾ ತೋರಿಸೋ ಜವಾಬ್ಧಾರಿ ವಿಜಯ್ ಮೇಲಿದೆ.

ಹೊಸ ವರ್ಷಕ್ಕೆ ರೆಡಿಯಾಗಿದೆ 'ಯುಐ' ಸೂಪರ್ ಸರ್ಪ್ರೈಸ್: 250 ಜನ ಡಾನ್ಸರ್ಸ್ ಜೊತೆ ಉಪ್ಪಿ ಸ್ಟೈಲ್ ಡಾನ್ಸ್!

ಜಡೇಶ್ ಚಿತ್ರದಲ್ಲಿ ಮಗಳು ಮೋನಿಕಾ ಜೊತೆ ವಿಜಯ್: ನಟ ದುನಿಯಾ ವಿಜಯ್ ನಿರ್ದೇಶಕ ಜಡೇಶ್ ಹಂಪಿ ಡೈರೆಕ್ಷನ್ನಲ್ಲಿ ಸಿನಿಮಾ ಮಾಡುತ್ತಿದ್ದಾರೆ. ವಿಜಯ್ರ ಭೀಮ ಸಿನಿಮಾ ಬಿಡುಗಡೆ ಆದ ನಂತರ ಜಡೇಶ್ ಹಂಪಿ ಸಿನಿಮಾ ಶುರುವಾಗುತ್ತೆ. ಈ ಚಿತ್ರದಲ್ಲಿ ದುನಿಯಾ ವಿಜಯ್ ಮಗಳು ಮೋನಿಕಾ ನಟಿಸುತ್ತಾರಂತೆ. ವಿಶೇಷ ಅಂದ್ರೆ ಮೋನಿಕಾ ತಂದೆ ಪಾತ್ರದಲ್ಲೇ ವಿಜಯ್ ನಟಿಸುತ್ತಾರಂತೆ. ಮೋನಿಕಾ ವಿಜಯ್ ಸ್ಯಾಂಡಲ್ವುಡ್ ಡೆಬ್ಯೂ ಬಗ್ಗೆ ನಾವೇ ನಿಮ್ಗೆ ಎಕ್ಸ್ಕ್ಲ್ಯೂಸೀವ್ ಆಗಿ ಹೇಳಿದ್ವಿ. ಇದೀಗಾ ಆ ಸುದ್ದಿ ನಿಜವಾಗ್ತಿದೆ. ಸಧ್ಯ ಮೋನಿಕಾ ನಟಿಸೋ ಸಿನಿಮಾದ ಡೈರೆಕ್ಟರ್ ಮಾತ್ರ ಫೈನಲ್ ಆಗಿದ್ದಾರೆ. ಈ ಸಿನಿಮಾ ನಿರ್ಮಾಣ ಜವಾಬ್ಧಾರಿ ಯಾರದ್ದು, ಇನ್ನುಳಿದ ಪಾತ್ರವರ್ಗದಲ್ಲಿ ಯಾರೆಲ್ಲಾ ಇರ್ತಾರೆ.? ಸಿನಿಮಾ ಟೈಟಲ್ ಏನು ಅನ್ನೋದು ಹೊಸ ವರ್ಷಕ್ಕೆ ಅನೌನ್ಸ್ ಆಗುತ್ತೆ. 

Follow Us:
Download App:
  • android
  • ios