Asianet Suvarna News Asianet Suvarna News

ಹೊಸ ವರ್ಷಕ್ಕೆ ರೆಡಿಯಾಗಿದೆ 'ಯುಐ' ಸೂಪರ್ ಸರ್ಪ್ರೈಸ್: 250 ಜನ ಡಾನ್ಸರ್ಸ್ ಜೊತೆ ಉಪ್ಪಿ ಸ್ಟೈಲ್ ಡಾನ್ಸ್!

ರಿಯಲ್ ಸ್ಟಾರ್ ಉಪೇಂದ್ರ ಸಿನಿಮಾ ಯುಐ ಸಿನಿಮಾ ಅನೌನ್ಸ್ ಮಾಡಿ ಆರೇಳು ತಿಂಗಳುಗಳು ಕಳೆದಿವೆ. ಇನ್ನೇನು ಹೊಸ ವರ್ಷ ಬಂದಾಯ್ತು. ಆದ್ರೆ ಉಪ್ಪಿ ಮಾತ್ರ ಯುಐನ ಯಾವ್ ಅಪ್ಡೇಟ್ನೂ ಕೊಡ್ತಿಲ್ಲಲ್ಲಾ ಅಂತ ಫ್ಯಾನ್ಸ್ ಚಿಂತೆ ಮಾಡ್ಬೇಡಿ. 

Upendra Strrer UI is ready for the new year with a super surprise gvd
Author
First Published Dec 20, 2023, 12:12 PM IST

ರಿಯಲ್ ಸ್ಟಾರ್ ಉಪೇಂದ್ರ ಸಿನಿಮಾ ಯುಐ ಸಿನಿಮಾ ಅನೌನ್ಸ್ ಮಾಡಿ ಆರೇಳು ತಿಂಗಳುಗಳು ಕಳೆದಿವೆ. ಇನ್ನೇನು ಹೊಸ ವರ್ಷ ಬಂದಾಯ್ತು. ಆದ್ರೆ ಉಪ್ಪಿ ಮಾತ್ರ ಯುಐನ ಯಾವ್ ಅಪ್ಡೇಟ್ನೂ ಕೊಡ್ತಿಲ್ಲಲ್ಲಾ ಅಂತ ಫ್ಯಾನ್ಸ್ ಚಿಂತೆ ಮಾಡ್ಬೇಡಿ. ಯುಐ ವರ್ಲ್ಡ್ನಿಂದ ಹೊಸ ಸುದ್ದಿಯೊಂದು ಹೊರ ಬಂದಿದೆ. ಅಷ್ಟೆ ಅಲ್ಲ ಹೊಸ ವರ್ಷಕ್ಕೆ ಯುಐ ಬಿಗ್ ಸರ್ಪ್ರೈಸ್ ಒಂದು ಬರ್ತಾ ಇದೆ. ಅದೇನು ಅಂತ ನೋಡೋ ಈ ಎಕ್ಸ್ಕ್ಲ್ಯೂಸೀವ್ ಸ್ಟೋರಿಯಲ್ಲಿ. ರಿಯಲ್ ಸ್ಟಾರ್ ಉಪೇಂದ್ರ ಡೈರೆಕ್ಷನ್ ಕ್ಯಾಪ್ ಹಾಕಿದ್ರೆ ಮುಗೀತು ಡಿಫ್ರೆಂಟ್ಗೆ ಚಾಲೇಂಜ್ ಹಾಕಿ ಡಿಫ್ರೆಂಟ್ ಆಗೇ ಸಿನಿಮಾ ಡೈರೆಕ್ಷನ್ ಮಾಡ್ತಾರೆ. 

ಉಪೇಂದ್ರ ಸಿನಿಮಾದಲ್ಲಿ ನಾನು ಕತೆ ಹೇಳಿದ್ದ ರಿಯಲ್ ಸ್ಟಾರ್ ಉಪ್ಪಿ ಸಿನಿಮಾದಲ್ಲಿ ನೀನು ಆಗಿದ್ರು. ಈಗ ನೀನೂ ನಾನು ಅಂತ ಯುಐ ಸ್ಟೋರಿ ಹೆಣೆದಿದ್ದಾರೆ. ಈ ಯುಐ ವರ್ಲ್ಡ್ನಲ್ಲಿ ಒಂದು ರೋಡ್ ಹೋದ ನಮಗೆ ಉಪ್ಪಿಯ ಸಿನಿಮಾದ ಸಾಂಗ್ ಶೂಟಿಂಗ್ ನಡೆಯುತ್ತಿದೆ ಅಂತ ಮಾಹಿತಿ ಸಿಕ್ಕಿದೆ. ರಿಯಲ್ ಸ್ಟಾರ್ ಉಪೇಂದ್ರ ಯುಐ ಸಿನಿಮಾದ ಶೂಟಿಂಗ್ಗಾಗಿ ಬೆಂಗಳೂರಿನಲ್ಲಿ ಬಹು ಕೋಟಿ ವೆಚ್ಚದಲ್ಲಿ ಯುಐ ವರ್ಲ್ಡ್ ಸೃಷ್ಟಿಸಿದ್ದಾರೆ. ಇಷ್ಟು ದಿನ ಚಿತ್ರೀಕರಣಕ್ಕೆ ಬ್ರೇಕ್ ಪಡೆದಿದ್ದ ಉಪೇಂದ್ರ ಈಗ ಮತ್ತೆ ಯುಐ ಪ್ರಪಂಚದಲ್ಲಿ ಹಾಡಿನ ಚಿತ್ರೀಕರಣ ಶುರುಮಾಡಿದ್ದಾರೆ. ಇಂದಿನಿಂದ ಐದು ದಿನ ಯುಐ ಸಾಂಗ್ ಶೂಟಿಂಗ್ ನಡೆಯುತ್ತೆ. 

UI ಅದ್ಭುತ ದೃಶ್ಯಕಾವ್ಯ, ಭರ್ಜರಿ ಆ್ಯಕ್ಷನ್ ಜೊತೆ ತಲೆ ಗಿರ್ ಎನಿಸಿದ UI ಟೀಸರ್ ಅನ್ನ ನೀವೆಲ್ಲಾ ನೋಡಿದ್ದೀರಾ. ಈಗ ಯುಐ ಹಾಡಿನ ಚಿತ್ರೀಕರಣ ನಡೆಯುತ್ತಿದೆ. ಉಪ್ಪಿ ಸ್ಟೈಲ್ ಈ ಹಾಡಿನ ಮೈನ್ ಅಟ್ರಾಕ್ಷನ್ ಅಂತೆ ಯಾವ್ ಸೀನ್ ಚಿತ್ರೀಕರಣ ಮಾಡಿದ್ರು ರಿಯಲಿಸ್ಟಿಕ್ ಆಗಿ ತೋರಿಸೋ ಉಪೇಂದ್ರ ಯುಐ ಹಾಡಿನಲ್ಲಿ 250 ಜನ ಬಾಂಬೇ ಡಾನ್ಸರ್ಸ್ ಜೊತೆ ರಿಯಲಿಸ್ಟಿಕ್ ಹಾಗು ನ್ಯಾಚ್ಯೂರಲ್ ಆಗೇ ಶೂಟಿಂಗ್ ಮಾಡ್ತಿದ್ದಾರಂತೆ. ಕಿನಿ ಮಾಸ್ಟರ್ ಸಾರಥ್ಯದಲ್ಲಿ ಹಾಡಿನ ಚಿತ್ರೀಕರಣ ಮಾಡಲಾಗ್ತಿದೆ.

'ಸಲಾರ್' ಟ್ರೇಲರ್ ಪಂಚ್‌ಗೆ ಅಭಿಮಾನಿಗಳು ಫುಲ್ ಫಿದಾ: ಪ್ರಭಾಸ್‌ ಸಕ್ಸಸ್‌ಗೆ ಬ್ರೇಕ್ ಹಾಕಲಿದೆಯಾ ಶಾರುಖ್ 'ಡಂಕಿ'

ಯುಐ ಲಹರಿ ಫಿಲ್ಮ್ಸ್ ನ G Manoharan ಹಾಗು ಕೆ.ಪಿ ಶ್ರೀಕಾಂತ್ ನಿರ್ಮಾಣದಲ್ಲಿ ಸಿದ್ಧವಾಗ್ತಿರೋ ಸಿನಿಮಾ. ಇದೀಗ ಹೊಸ ವರ್ಷಕ್ಕೆ ಹೊಸ ಅಲೆ ಎಬ್ಬಿಸೋಕೆ ರಿಯಲ್ ಸ್ಟಾರ್ ರಾಯಲ್ ಆಗಿ ರೆಡಿಯಾಗಿದ್ದಾರೆ. ಹೊಸ ವರ್ಷಕ್ಕೆ ಸಿಗ್ತಿರೋ ಯುಐ ಸೂಪರ್ ಸರ್ಪ್ರೈಸ್ ಏನ್ ಗೊತ್ತಾ.? ಅದುವೇ ಯುಐ ಸ್ಪೆಷಲ್ ಟೀಸರ್. ಯೆಸ್, ಯುಐ ಟೀಸರ್ ರಿಲೀಸ್ 2024 ಜನವರಿಯಲ್ಲಿ ರಿಲೀಸ್ ಆಗ್ತಿದೆ. ಸಧ್ಯ ಐದು ದಿನ ನಡೆಯೋ ಹಾಡಿನ ಶೂಟಿಂಗ್ ಆದ್ರೆ ಯುಐನ 90ರಷ್ಟು ಚಿತ್ರೀಕರಣ ಮುಗಿದ ಹಾಗೆ. ಆ ನಂತರ ಹೊಸ ವರ್ಷದಲ್ಲಿ ಹೊಸ ಟೀಸರ್ನೊಂದಿಗೆ ಉಪ್ಪಿ ಯುಐ ಪ್ರಮೋಷನ್ ಶುರು ಮಾಡ್ತಾರೆ.

Follow Us:
Download App:
  • android
  • ios