Asianet Suvarna News Asianet Suvarna News

4 ಕೋಟಿ ರೂ ಬಂಗಲೆ, ದುಬಾರಿ ಕಾರು; ರಾಕಿಂಗ್ ಸ್ಟಾರ್ ಯಶ್ ಒಟ್ಟು ಆಸ್ತಿ ಎಷ್ಟು?

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಟಾಕ್ಸಿಕ್ ಚಿತ್ರಕ್ಕಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಇದರ ನಡುವೆ ಯಶ್ ಮನೆ, ಕಾರು, ವಾರ್ಷಿಕ ಆದಾಯ, ಒಟ್ಟು ಆಸ್ತಿ ಕುರಿತು ಭಾರಿ ಚರ್ಚೆಗಳು ನಡೆಯುತ್ತಿದೆ. ರಾಕಿ ಬಾಯ್ ಬಳಿ ದುಬಾರಿ ಕಾರು, ಒಟ್ಟು ಆಸ್ತಿ ವಿವರ ಇಲ್ಲಿದೆ.
 

Bengaluru Duplex house to Luxury cars Rocking Star yash Annual Income and Net worth ckm
Author
First Published Jun 17, 2024, 4:13 PM IST

ಬೆಂಗಳೂರು(ಜೂ.17) ಕೆಜಿಎಫ್ ಸಿನಿಮಾ ಬಳಿಕ ರಾಕಿಂಗ್ ಸ್ಟಾರ್ ಯಶ್ ತೆರೆ ಮೇಲೆ ನೋಡಲು ಅಭಿಮಾನಗಳು ಕಾತರರಾಗಿದ್ದಾರೆ.ಯಶ್ ಮುಂದಿನ ಚಿತ್ರ ಟಾಕ್ಸಿಕ್ ಚಿತ್ರ ಆರಂಭಿಕ ಹಂತದಲ್ಲಿದೆ. ಹೀಗಾಗಿ ಸದ್ಯಕ್ಕೆ ಚಿತ್ರ ತೆರೆಗೆ ಬರುವ ಸಾಧ್ಯತೆಗಳಿಲ್ಲ. ಕೆಜಿಎಫ್ ಸೂಪರ್ ಹಿಟ್ ಚಿತ್ರದದ ಬಳಿಕ ಯಶ್ ಸುದೀರ್ಘ ದಿನಗಳಿಂದ ಬೇರೆ ಯಾವುದೇ ಚಿತ್ರ ಒಪ್ಪಿಕೊಂಡಿಲ್ಲ, ಯಾವುದೇ ಚಿತ್ರ ತೆರೆಗೆ ಬಂದಿಲ್ಲ. ಹೀಗಾಗಿ ಯಶ್ ಆದಾಯ, ದುಬಾರಿ ಮನೆ, ಕಾರುಗಳ ಕುರಿತು ಅಭಿಮಾನಿಗಳು ಸರ್ಚ್ ಮಾಡುತ್ತಿದ್ದಾರೆ. 

2000ನೇ ಇಸವಿಯಲ್ಲಿ ಟಿವಿ ಆರ್ಟಿಸ್ಟ್ ಆಗಿ ಸ್ಕ್ರೀನ್ ಮೇಲೆ ಕಾಣಿಸಿಕೊಂಡ ಯಶ್ ಬಳಿ ಮುಟ್ಟಿದೆಲ್ಲಾ ಚಿನ್ನ. ಸತತ ಪರಿಶ್ರಮದ ಮೂಲಕ ಕನ್ನಡ ಸಿನಿಮಾದ ಸ್ಟಾರ್ ಆಗಿ ಬೆಳೆದ ಯಶ್, ಅಭಿನಯ, ಡ್ಯಾನ್ಸ್, ಡೈಲಾಗ್ ಮೂಲಕ ಜನರ ಮನಸ್ಸು ಗೆದ್ದಿದ್ದಾರೆ. ತೆರೆಯಿಂದಾಚೆಗೂ ಯಶ್ ಹಲವು ಸಾಮಾಜಿಕ ಕಾರ್ಯಗಳ ಮೂಲಕ ಜನರ ಪ್ರೀತಿಪಾತ್ರರಾಗಿದ್ದಾರೆ. ಸ್ಟಾಕ್ ಗೋ ವರದಿ ಪ್ರಕಾರ ಯಶ್ 500 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಆಸ್ತಿ ಹೊಂದಿದ್ದಾರೆ ಎಂದು ವರದಿ ಮಾಡಿದೆ.  ರಿಲಲ್ ಎಸ್ಟೇಟ್, ಹಲವು ಕಂಪನಿಗಳಲ್ಲಿ ಯಶ್ ಹೂಡಿಕೆ ಮಾಡಿದ್ದಾರೆ.

ಹತ್ತು ಎಕರೆ ಬೇಕಾ, ಜನಕ್ಕೆ ಉಪಯೋಗ ಆಗುತ್ತೆ ಅಂದ್ರೆ ನಾನೇ ಕೊಡ್ತೀನಿ; ರಾಕಿಂಗ್ ಸ್ಟಾರ್ ಯಶ್!

ಹಲವು ಉತ್ಪನ್ನಗಳ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದಾರೆ. ಜಾಹೀರಾತು, ಪ್ರಾಯೋಜಕತ್ವಕ್ಕೆ ಯಶ್ 60 ರಿಂದ 80 ಲಕ್ಷ ರೂಪಾಯಿ ಚಾರ್ಜ್ ಮಾಡುತ್ತಾರೆ. ಇತರ ಹೂಡಿಕಗಳ ಮೂಲಕ ಯಶ್ ವಾರ್ಷಿಕ ಆದಾಯ 6 ರಿಂದ 8 ಕೋಟಿ ರೂಪಾಯಿ ಎಂದು ಸಿಎನಾಲೇಜ್.ಕಾಂ ಹೇಳುತ್ತಿದೆ. ಬೆಂಗಳೂರಿನಲ್ಲಿ 4 ಕೋಟಿ ರೂಪಾಯಿ ಮೌಲ್ಯದ ಡೂಪ್ಲೆಕ್ಸ್ ಮನೆ ಹೊಂದಿದ್ದಾರೆ. ಇನ್ನು 6 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಜಮೀನು ಸೇರಿದಂತೆ ಇತರ ಸ್ಥಿರಾಸ್ಥಿ ಹೊಂದಿದ್ದಾರೆ ಎಂದು ವರದಿ ಮಾಡಿದೆ.

ಯಶ್ ಹಲವು ದುಬಾರಿ ಕಾರುಗಳ ಮಾಲೀಕರಾಗಿದ್ದಾರೆ. ಕಳೆದ ವರ್ಷ ಬರೋಬ್ಬರಿ 5 ಕೋಟಿ ರೂಪಾಯಿ ಮೌಲ್ಯದ ರೇಂಜ್ ರೋವರ್ ಕಾರು ಖರೀದಿಸಿದ್ದರು. ಇದರ ಜೊತೆಗೆ 85 ಲಕ್ಷ ರೂಪಾಯಿ ಮೌಲ್ಯದ ಮರ್ಸಿಡಿಸ್ ಬೆಂಜ್  DLS 350D, ಇನ್ನು 78 ಲಕ್ಷ ರೂಪಾಯಿ ಮೌಲ್ಯದ ಮರ್ಸಿಡಿಸ್ ಬೆಂಜ್ GLC 250D ಕಾರು, 80 ಲಕ್ಷ ರೂಪಾಯಿ ಮೌಲ್ಯದ ಆಡಿ ಕ್ಯೂ7, ಇನ್ನು 70 ಲಕ್ಷ ರೂಪಾಯಿ ಮೌಲ್ಯದ BMW 520D ಕಾರು, 70 ಲಕ್ಷ ರೂಪಾಯಿ ಬೆಲೆಯ ರೇಂಜ್ ರೋವರ್ ಇವೋಕ್, 35 ಲಕ್ಷ ರೂಪಾಯಿ ಮೌಲ್ಯದ ಪಜೆರೋ ಸ್ಪೋರ್ಟ್ಸ್ ಕಾರು ಹೊಂದಿದ್ದಾರೆ.

Nayanthara: ಯಶ್ ಸಿನಿಮಾ ಬಗ್ಗೆ ಸಿಕ್ತು ಬಿಗ್ ಅಪ್‌ಡೇಟ್..! ಟಾಕ್ಸಿಕ್ ಟೀಂ ಸೇರಿದ ಲೇಡಿ ಸೂಪರ್ ಸ್ಟಾರ್!

ಕೆಜಿಎಫ್ ಚಿತ್ರದ ಮೂಲಕ ಯಶ್ ಭಾರತೀಯ ಚಿತ್ರರಂಗ ಸೂಪರ್ ಸ್ಟಾರ್ ಆಗಿ ಹೊರಹೊಮ್ಮಿದ್ದಾರೆ. ಇದೀಗ ಯಶ್ ಚಿತ್ರದ ಮೇಲೆ ಕೇವಲ ಸ್ಯಾಂಡಲ್‌ವುಡ್ ಮಾತ್ರವಲ್ಲ, ಭಾರತದ ಎಲ್ಲಾ ಚಿತ್ರರಂಗ ಕಣ್ಣಿಟ್ಟಿದೆ. 
 

Latest Videos
Follow Us:
Download App:
  • android
  • ios