Asianet Suvarna News Asianet Suvarna News

ಹತ್ತು ಎಕರೆ ಬೇಕಾ, ಜನಕ್ಕೆ ಉಪಯೋಗ ಆಗುತ್ತೆ ಅಂದ್ರೆ ನಾನೇ ಕೊಡ್ತೀನಿ; ರಾಕಿಂಗ್ ಸ್ಟಾರ್ ಯಶ್!

ಒಮ್ಮೆ ಸಾರ್ವಜನಿಕ ವೇದಿಕೆಯಲ್ಲಿ ನಟ ಯಶ್ ಹೀಗೆ ಹೇಳಿದ್ದಾರೆ. 'ಹತ್ತು ಎಕರೆ ಬೇಕಾ? ಜನಕ್ಕೆ ಉಪಯೋಗ ಆಗುತ್ತಾ? ಬಡವರಿಗೆ ಪ್ರಯೋಜನ ಆಗುತ್ತಾ? ನಾನೇ ಕೊಡ್ತೀನಿ. ಸರ್ಕಾರಿ ಶಾಲೆ ಮಾಡ್ತೀರಾ, ಅಥವಾ ಜನರಿಗೆ ಉಪಯೋಗ ಆಗುವಂಥದ್ದು ಏನಾದ್ರೂ ...

KGF actor Rocking Star Yash says he will give land if it uses for help to poor srb
Author
First Published Jun 16, 2024, 5:25 PM IST


ಕನ್ನಡದ ನಟ, ರಾಕಿಂಗ್ ಸ್ಟಾರ್ ಯಶ್ (Rocking Star Yash)ಅವರು ಇಂದು ಜಗತ್ತೇ ತಿರುಗಿ ನೋಡುವ ನಟ ಎಂಬುದು ಬಹತೇಕರಿಗೆ ಗೊತ್ತು. ಕನ್ನಡ ಭಾಷೆ ಮೂಲದ ಈ ನಟ ಯಶ್ ಇಂದು ಪ್ಯಾನ್ ಇಂಡಿಯಾ ಸ್ಟಾರ್. ರಾಕಿಂಗ್ ಸ್ಟಾರ್ ಖ್ಯಾತಿಯ ನಟ ಯಶ್ ಸದ್ಯ ಪ್ಯಾನ್ ವರ್ಲ್ಡ್‌ ಸಿನಿಮಾ ಮಾಡುತ್ತಿದ್ದು, ಶೂಟಿಂಗ್‌ನಲ್ಲಿ ನಿರತರಾಗಿದ್ದಾರೆ. ಮಲಯಾಳಂ ನಿರ್ದೇಶಕಿ ಗೀತೂ ಮೋಹನ್‌ ದಾಸ್ ನಿರ್ದೇಶನದಲ್ಲಿ ಮೂಡಿಬರಲಿರುವ 'ಟಾಕ್ಸಿಕ್' ಸಿನಿಮಾದಲ್ಲಿ ಯಶ್ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. 

ಇಂಥ ಯಶ್ ಸಾಕಷ್ಟು ಸಾಮಾಜಿಕ ಕಳಕಳಿಯ ಕೆಲಸ-ಕಾರ್ಯಗಳನ್ನೂ ಮಾಡುತ್ತಿದ್ದಾರೆ. ಕುಡಿಯುವ ನೀರಿಗೆ ಅಭಾವವಿರುವ ಉತ್ತರ ಕನ್ನಡ ಜಿಲ್ಲೆಗೆ ಭೇಟಿ ನೀಡಿ ಅಲ್ಲಿ ಕೆರೆಗಳ ಹೂಳೆತ್ತುವ ಕೆಲಸ, ಕೆರೆಗಳ ಮರುನಿರ್ಮಾಣದ ಕಾರ್ಯವನ್ನು ಕೈಗೊಂಡಿದ್ದಾರೆ. ಹಲವು ಕಡೆ ಕುಡಿಯುವ ನೀರಿನ ಅಭಾವಕ್ಕೆ ಸ್ಪಂದಿಸಿ ಸಾಕಷ್ಟು ಕೆರೆಗಳ ನಿರ್ಮಾಣವನ್ನೂ ಮಾಡಿಸಿದ್ದಾರೆ. ಬಡವರು ತಮ್ಮ ಮುಂದೆ ನಿಂತರೆ ಹಿಂದೆಮುಂದೆ ನೋಡದೇ ಅಗತ್ಯವಿರುವ ಸಹಾಯ ಮಾಡುತ್ತಾರೆ ನಟ ಯಶ್. 

ಒಮ್ಮೆ ಸಾರ್ವಜನಿಕ ವೇದಿಕೆಯಲ್ಲಿ ನಟ ಯಶ್ ಹೀಗೆ ಹೇಳಿದ್ದಾರೆ. 'ಹತ್ತು ಎಕರೆ ಬೇಕಾ? ಜನಕ್ಕೆ ಉಪಯೋಗ ಆಗುತ್ತಾ? ಬಡವರಿಗೆ ಪ್ರಯೋಜನ ಆಗುತ್ತಾ? ನಾನೇ ಕೊಡ್ತೀನಿ. ಸರ್ಕಾರಿ ಶಾಲೆ ಮಾಡ್ತೀರಾ, ಅಥವಾ ಜನರಿಗೆ ಉಪಯೋಗ ಆಗುವಂಥದ್ದು ಏನಾದ್ರೂ ಮಾಡ್ತೀರಾ, ನಾನೇ ಕೊಡ್ತೀನಿ.. ' ಯಶ್ ಮಾತು ಕೇಳಿ ಅಲ್ಲಿದ್ದ ಜನರು ತಲೆದೂಗಿದ್ದಾರೆ, ಚಪ್ಪಾಳೆ ತಟ್ಟಿದ್ದಾರೆ. ಚಿಕ್ಕ ವಯಸ್ಸಿನಲ್ಲೇ ದೊಡ್ಡ ಸಾಧನೆ ಮಾಡಿರುವ ನಟ ಯಶ್ ಬಗ್ಗ ಕರುನಾಡಿಗೆ ಹೆಮ್ಮೆಯಿದೆ. 

ಅಂದಹಾಗೆ, ನಟ ಯಶ್ ಅವರು ಸದ್ಯ ಬಾಲಿವುಡ್‌ನ ರಾಮಾಯಣ ಸಿನಿಮಾದಲ್ಲಿ ನಟಿಸುತ್ತಿದ್ದಾರೆ, ಜತೆಗೆ, ಈ ಸಿನಿಮಾದ ನಿರ್ಮಾಣದಲ್ಲಿ ಯಶ್ ಪಾಲುದಾರಿಕೆ ಹೊಂದಿದ್ದಾರೆ. ಅಷ್ಟೇ ಅಲ್ಲ, ಮತ್ತೊಂದು ಪ್ಯಾನ್ ವರ್ಲ್ಡ್‌ ಸಿನಿಮಾ 'ಟಾಕ್ಸಿಕ್‌'ನಲ್ಲೂ ನಟ ಯಶ್ ನಟಿಸುತ್ತಿದ್ದಾರೆ. ಗೀತೂ ಮೋಹನ್‌ ದಾಸ್ ನಿರ್ದೇಶನದ ಟಾಕ್ಸಿಕ್ ಚಿತ್ರದಲ್ಲಿ ಯಶ್ ಎದುರು ನಾಯಕಿಯಾಗಿ ಸಾಯಿ ಪಲ್ಲವಿ ಹೆಸರು ಕೇಳಿ ಬರುತ್ತಿದೆ. ಆದರೆ, ರಾಮಾಯಣ ಚಿತ್ರದಲ್ಲಿ, ರಾಮನಾಗಿ ನಟಿಸುತ್ತಿರುವ ಬಾಲಿವುಡ್ ಸ್ಟಾರ್ ರಣಬೀರ್ ಕಪೂರ್ ಅವರಿಗೆ ಸೀತೆಯಾಗಿ ಸಾಯಿ ಪಲ್ಲವಿ ನಟಿಸುತ್ತಿದ್ದಾರೆ. 

Latest Videos
Follow Us:
Download App:
  • android
  • ios