Asianet Suvarna News Asianet Suvarna News

ರವಿ ಬಸ್ರೂರ್ ಹೆಸರಿನ ಹಿಂದಿದೆ ಇಂಟ್ರಸ್ಟಿಂಗ್ ಕಹಾನಿ: ಸಂಗೀತ ನಿರ್ದೇಶಕನ ಮಾತು ಕೇಳಿ ನಾದಬ್ರಹ್ಮ ಫುಲ್ ಶಾಕ್!

ಕೆಜಿಎಫ್, ಸಲಾರ್, ಕಬ್ಜಾ, ಉಗ್ರಂ, ಒಂದಕ್ಕಿಂತ ಒಂದು ಅದ್ಭುತ ಸಿನಿಮಾಗಳು. ಈ ಸಿನಿಮಾಗಳಿಗೆ ಇನ್ನಷ್ಟು ಜೀವತುಂಬುವಂತೆ ಮಾಡಿದ್ದು, ಈ ಸಿನಿಮಾದ ಸಂಗೀತ. ಇದರ ಕಂಪ್ಲಿಟ್ ಕ್ರೆಡಿಟ್ ಸಂಗೀತ ನಿರ್ದೇಶಕ ರವಿ ಬಸ್ರೂರ್ ಅವರಿಗೆ ಸಲ್ಲುತ್ತೆ. 

kgf music director ravi basrur recently talked about his career and real name gvd
Author
First Published Jan 10, 2024, 8:36 PM IST

ಕೆಜಿಎಫ್, ಸಲಾರ್, ಕಬ್ಜಾ, ಉಗ್ರಂ, ಒಂದಕ್ಕಿಂತ ಒಂದು ಅದ್ಭುತ ಸಿನಿಮಾಗಳು. ಈ ಸಿನಿಮಾಗಳಿಗೆ ಇನ್ನಷ್ಟು ಜೀವತುಂಬುವಂತೆ ಮಾಡಿದ್ದು, ಈ ಸಿನಿಮಾದ ಸಂಗೀತ. ಇದರ ಕಂಪ್ಲಿಟ್ ಕ್ರೆಡಿಟ್ ಸಂಗೀತ ನಿರ್ದೇಶಕ ರವಿ ಬಸ್ರೂರ್ ಅವರಿಗೆ ಸಲ್ಲುತ್ತೆ. ಕೆಲವೇ ಕೆಲವು ವರ್ಷಗಳ ಹಿಂದಿನ ಮಾತು ರವಿ ಬಸ್ರೂರ್, ಬಗ್ಗೆ ಯಾರಿಗೂ ಗೊತ್ತಿರಲಿಲ್ಲ. ಸಿನಿ ಇಂಡ್ರಸ್ಟ್ರಿಯಲ್ಲಿ ಇರೋ, ಅದೆಷ್ಟೋ ಕಾಮನ್ ಮ್ಯೂಸಿಕ್ ಡೈರೆಕ್ಟರ್ನಲ್ಲಿ ಇವರು ಒಬ್ಬರೇನೋ ಅಂದ್ಕೊಂಡು ಬಿಟ್ಟಿದ್ರು. ಆದ್ರೆ ಯಾವಾಗ ಕೆಜಿಎಫ್ ಅನ್ನೊ ಸಿನಿಮಾ ಎಲ್ಲೆಲ್ಲೂ ಧೂಳೆಬ್ಬಿಸಿತೋ, ಅಲ್ಲೆಲ್ಲ ರವಿ ಬಸ್ರೂರ್ ಅವರ ಸಂಗೀತ ನಿರ್ದೆಶನದ ಬಗ್ಗೆಯೂ ಮಾತು ಬಂತು. 

ಇನ್ನು ಸಲಾರ್ ಸಿನಿಮಾದ ಮ್ಯೂಸಿಕ್ ರವಿ ಬಸ್ರೂರ್ ಅವರನ್ನ ವಿಶ್ವಮಟ್ಟದಲ್ಲಿ ಶೈನ್ ಆಗೋ ಹಾಗೆ ಮಾಡಿದೆ. ಈಗ ಮ್ಯೂಸಿಕ್ ಡೈರೆಕ್ಟರ್ ರವಿ ಬಸ್ರೂರ್ ಹೆಸರಿಗೆ ಎಲ್ಲರಿಗೂ ಚಿರಪರಿಚಿತ. ಅದರಲ್ಲೂ ಹಂಟಿಂಗ್ ಮ್ಯೂಸಿಕ್ ಅಂದ್ರೆ ರವಿಬಸ್ರೂರ್ಗಿಂತ ಬೇಸ್ಟ್ ಅನ್ನೊ ಮಾತು ಇದೆ. ಆದರೆ ಇದೇ ರವಿ ಬಸ್ರೂರ್ ಹೆಸರಿನ ಹಿಂದಿ ಒಂದು ರಹಸ್ಯವಿದೆ. ಆ ರಹಸ್ಯ ಏನು ಅನ್ನೊದನ್ನ, ಇತ್ತಿಚೆಗೆ ಖುದ್ದು ರವಿ  ಅವರೇ ಕಾರ್ಯಕ್ರಮವೊಂದರಲ್ಲಿ ರಿವೀಲ್ ಮಾಡಿದ್ದಾರೆ. 

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಸರಿಗಮಪ ಸಂಗೀತ ರಿಯಾಲಿಟಿ ಶೋನಲ್ಲಿ, ರವಿ ಬಸ್ರೂರ್ ಅವರು ಸ್ಪೆಷಲ್ ಗೇಸ್ಟ್ ಆಗಿ ಬಂದಿದ್ದರು. ಈ ಸಂದರ್ಭದಲ್ಲಿ ಅವರು ತಮ್ಮ ಹೆಸರು ರವಿ ಅಲ್ಲವೇ ಅಲ್ಲ ಅಂತ ಹೇಳಿದ್ರು. ಆಗ ಕಾರ್ಯಕ್ರಮದಲ್ಲಿದ್ದ ನಾದ ಬ್ರಹ್ಮ ಹಂಸಲೇಖ, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಹಾಗೂ ಗಾಯಕರಾರ ವಿಜಯ್ ಪ್ರಕಾಶ್, ಜೊತೆಗೆ ಅಲ್ಲಿದ್ದವರೆಲ್ಲರೂ ದಂಗಾಗಿ ಹೋಗಿದ್ದರು. ರವಿ ಬಸ್ರೂರ್ ಅವರ ಅಸಲಿ ಹೆಸರು ರವಿಯೇ ಅಲ್ವಂತೆ. ಅವರ ಅಸಲಿ ಹೆಸರು ಕಿರಣ್ ಅಂತೆ. ಕಷ್ಟಕಾಲದಲ್ಲಿ ದೇವರಂತೆ ಬಂದ ರವಿ ಕಾಮತ್ ಅವರ ಹೆಸರನ್ನೇ, ಇವರು ತಮ್ಮ ಹೆಸರನ್ನಾಗಿಟ್ಟುಕೊಂಡಿದ್ದಾರೆ. 

AI ಯುಗದಲ್ಲಿ 'UI' ಪ್ರಪಂಚ ತೆರೆದಿಟ್ಟ ರಿಯಲ್ ಸ್ಟಾರ್: ಉಪೇಂದ್ರ ಪ್ರಕಾರ ಯುಐ ಅಂದ್ರೆ ಏನು ಗೊತ್ತಾ?

ಅವರು ಮಾಡಿದ್ದ ಸಹಾಯಕ್ಕೆ, ತನ್ನ ಕೈಯಿಂದ ಮಾಡಲು ಸಾಧ್ಯವಾಗುವಂತ ಅಲ್ಪ ಕಾಣಿಕೆ ಎಂದು ಅವರು ಹೇಳಿದ್ದಾರೆ. ಒಂದು ಹೊತ್ತಿನ ಊಟಕ್ಕೂ ರವಿ ಬಸ್ರೂರ್ ಪರದಾಡಿದ ದಿನಗಳಿವೆ. ಬಡತನದ ಬೇಗೆಯಲ್ಲಿ ಬೇಯುತ್ತಿದ್ದ ಆ ದಿನಗಳಲ್ಲಿ ಕುಲುವೆ ಕೆಲಸ ಮಾಡಿ ಹೊಟ್ಟೆ ತುಂಬಿಸಿಕೊಂಡಿದ್ದು ಇದೆ. ಇಂದು ರವಿ ಅವರ ಬಳಿ ಎಲ್ಲವೂ ಇದೆ. ಅಸಲಿ ಹೆಸರೊಂದನ್ನ ಹೊರತು ಪಡೆಸಿ. ಅದರಲ್ಲೂ ಇವರಿಗೂ ಖುಷಿಯೂ ಇದೆ. ಇವತ್ತು ಇಡೀ ಜಗತ್ತೇ ರವಿ ಅವರನ್ನ ಗುರುತಿಸ್ತಿದೆ. ಅವರು ಮಾಡಿರೋ ಸಹಾಯದ ಮುಂದೆ ಇದೇನೂ ಅಲ್ಲವೇ ಅಲ್ಲ ಎಂದು ರವಿ ಹೃದಯಾಂತರಾಳದಿಂದ ಹೇಳ್ತಾರೆ.  

Follow Us:
Download App:
  • android
  • ios