ಧೂಳ್ ಎಬ್ಬಿಸುತ್ತಿದೆ ಪವರ್ ಸ್ಟಾರ್ ಟೀಸರ್. ಸಂಭ್ರಮದಲ್ಲಿರುವ ಅಭಿಮಾನಿಗಳ ರಿಯಾಕ್ಷನ್ ಇದು.....

ಪುನೀತ್ ರಾಜ್‌ಕುಮಾರ (Puneeth Rajkumar) ಅಭಿನಯದ ಬಹುನಿರೀಕ್ಷಿತ ಜೇಮ್ಸ್ (James) ಚಿತ್ರದ ಟೀಸರ್ ಬಿಡುಗಡೆ ಕಾರ್ಯಕ್ರಮ ಹೊಸಪೇಟೆಯ (Hosapete) ಜಿಲ್ಲಾ ಕ್ರೀಡಾಂಗಣದಲ್ಲಿ ಅದ್ದೂರಿಯಾಗಿ ನಡೆದಿದೆ. ಬೃಹತ್ ಎಲ್‌ಇಡಿ ಪರದೆಯಲ್ಲಿ (LED Screen) ಪುನೀತ್‌ರನ್ನು ಕಣ್ತುಂಬಿಕೊಳ್ಳಲು ನೂರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಿ ಸಂಭ್ರಮಿಸಿದ್ದು ವಿಶೇಷ.

ಹೊಸಪೇಟೆ ಮೂಲದವರೇ ಆದ ಜೇಮ್ಸ್‌ ಚಿತ್ರದ ನಿರ್ಮಾಪಕ ಕಿಶೋರ್ (Kishor) ಪತ್ತಿಕೊಂಡ ಅಭಿಮಾನಿಗಳಿಗಾಗಿಯೇ ಈ ಅದ್ದೂರಿ ಕಾರ್ಯಕ್ರಮ ಆಯೋಜಿಸಿದ್ದರು. ಹೊಸಪೇಟೆಯ ಅಪ್ಪು ಅಭಿಮಾನಿಗಳು ಕನ್ನಡ, ತೆಲಗು, ತಮಿಳು, ಮಲಯಾಳಂ ಭಾಷೆಯಲ್ಲಿ ಟೀಸರ್ ವೀಕ್ಷಿಸಿ ಖುಷಿಪಟ್ಟರು. ನಗರಸಭೆ ಅಧ್ಯಕ್ಷೆ ಸುಂಕಮ್ಮ ಅಪ್ಪು ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ಬಳಿಕ ಟೀಸರ್ ಬಿಡುಗಡೆಗೊಳಿಸಲಾಯಿತು.

Puneeth Rajkumar James: 'ನಾವು ಮೂರು ಜನರನ್ನು ಒಂದೇ ಪ್ರೇಮ್‌ನಲ್ಲಿ ಕಾಣಬಹುದು'

ಪತ್ನಿ ಅಶ್ವಿನಿ ರಿಯಾಕ್ಷನ್?

ಖಾಸಗಿ ವೆಬ್‌ವೊಂದರಲ್ಲಿ ನಿರ್ದೇಶಕ ಚೇತನ್ ಕುಮಾರ್ (Chetan Kumar) ಮಾತನಾಡಿದ್ದಾರೆ. ಈ ವೇಳೆ ಅಶ್ವಿನಿ (Ashwini Puneeth Rajkumar) ಮೇಡಂ ಅವರು ಟೀಸರ್ ನೋಡಿ ಏನ್ ಹೇಳಿದ್ದರು ಎಂದು ಪ್ರಶ್ನೆ ಮಾಡಿದ್ದಾರೆ. 'ಅಶ್ವಿನಿ ಮೇಡಂ ಅವರಿಗೆ ಟೀಸರ್ ತೋರಿಸಿದಾಗ ಸಿಕ್ಕಾಪಟ್ಟೆ ಸ್ಟೈಲಿಶ್ ಆಗಿ ಮೂಡಿ ಬಂದಿದೆ ಎಂದು ಹೇಳಿ ಖುಷಿ ಪಟ್ಟರು' ಎಂದು ಮಾತನಾಡಿದ್ದಾರೆ. ಅಲ್ಲದೆ 'ನನ್ನ ಇಡೀ ತಂಡಕ್ಕೆ ಆ ಕ್ರೆಡಿಟ್ ಹೋಗುತ್ತದೆ. ಶಿವಣ್ಣ ಅವರ ಧ್ವನಿ ಬಹಳ ಚೆನ್ನಾಗಿ ಹೊಂದಿಕೊಂಡಿದೆ ಎನಿಸುತ್ತಿದೆ. ಹಿನ್ನಲೆ ಸಂಗೀತ ಎಲ್ಲವೂ ಬಹಳ ಚೆನ್ನಾಗಿ ಬಂದಿದೆ. ಬೇರೆ ರೀತಿಯ ಸಿನಿಮಾ ಇದಾಗುತ್ತದೆ'ಎಂದಿದ್ದಾರೆ ನಿರ್ದೇಶಕರು.

ನಗರಸಭೆ ಉಪಾಧ್ಯಕ್ಷ ಎಲ್.ಎಸ್. ಆನಂದ್, ಯುವ ಮುಖಂಡ ಸಿದ್ದಾರ್ಥ ಸಿಂಗ್, ನಗರಸಭೆ ಸದಸ್ಯರು, ಅಪ್ಪು ಅಭಿಮಾನಿಗಳಾದ ಜೋಗಿ ತಾಯಪ್ಪ, ಕಿಚಡಿ ವಿಶ್ವ, ಬೆಳಗೋಡ ಮಂಜುನಾಥ ಸೇರಿದಂತೆ ನೂರಾರು ಅಪ್ಪು ಅಭಿಮಾನಿಗಳು ಪಾಲ್ಗೊಂಡಿದ್ದರು. ಚೇತನ್ ಕುಮಾರ್ ನಿರ್ದೇಶನದ ಜೇಮ್‌ಸ್ ಮಾರ್ಚ್ 17ರಂದು ಬಿಡುಗಡೆಯಾಗಲಿದೆ.

James Trailer Released: ತಮ್ಮನನ್ನು ನೋಡಿ ರಾಘವೇಂದ್ರ ರಾಜ್‌ಕುಮಾರ್ ಕಣ್ಣೀರು

ಎದೆ ಕೊಯುದುಕೊಂಡ ಅಪ್ಪು ಅಭಿಮಾನಿ: ಜೇಮ್ಸ್‌ ಚಿತ್ರದ ಟೀಸರ್ ನೋಡಿದ ಬಳಿಕ ಮನೆಗೆ ತೆರಳಿದ ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿಯ ಕನಕ ಎಂಬ ಹೆಸರಿನ ಅಪ್ಪು ಅಭಿಮಾನಿ ಎದೆ ಮೇಲೆ ಅಪ್ಪು ಎಂದು ಬರೆದುಕೊಂಡಿದ್ದಾರೆ.

ಟೀಸರ್‌ಗೆ ಒಂದೇ ದಿನದಲ್ಲಿ 50 ಲಕ್ಷ ವೀಕ್ಷಣೆ: ಪುನೀತ್ ನಟನೆಯ ಜೇಮ್‌ಸ್ ಚಿತ್ರದ ಟೀಸರ್ ಗೆ ಅದ್ದೂರಿ ಸ್ವಾಗತ ಸಿಕ್ಕಿದೆ. ಟೀಸರ್ ಒಂದೇ ದಿನದಲ್ಲಿ ಸುಮಾರು 50 ಲಕ್ಷ ವೀಕ್ಷಣೆ ಕಂಡಿದೆ. ಅಪ್ಪು ಅಭಿಮಾನಿ ಈ ಟೀಸರ್ ಅನ್ನು ಪುನೀತ್ ಹಬ್ಬದಂತೆ ಸಂಭ್ರಮಿಸುತ್ತಿದ್ದಾರೆ. ಪುನೀತ್‌ಗೆ ಶಿವಣ್ಣ ದನಿ ಕೊಟ್ಟಿರುವುದು ಸಿನಿಮಾದ ವಿಶೇಷತೆ.

"