ಡಾ.ರಾಜ್‌ಕುಮಾರ್ ಮತ್ತು ಪಾರ್ವತಮ್ಮ ರಾಜ್‌ಕುಮಾರ್ ದಂಪತಿ ಕನ್ನಡ ಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ರಾಜ್‌ಕುಮಾರ್ ಅವರ ನಟನೆ, ಹಾಡುಗಳು ಇಂದಿಗೂ ಜನಮಾನಸದಲ್ಲಿ ಉಳಿದಿವೆ. ಪಾರ್ವತಮ್ಮ ರಾಜ್‌ಕುಮಾರ್ ಚಿತ್ರ ನಿರ್ಮಾಪಕಿಯಾಗಿ ಅನೇಕ ಪ್ರತಿಭೆಗಳನ್ನು ಪರಿಚಯಿಸಿದರು. ರಾಜ್‌ಕುಮಾರ್ ಅವರು ಪಾರ್ವತಮ್ಮನವರನ್ನು ಮೊದಲು ನೋಡಿದ ಬಗ್ಗೆ ತಮಾಷೆಯಾಗಿ ಹೇಳಿದ್ದ ವಿಡಿಯೋ ವೈರಲ್ ಆಗಿದೆ. ಪಾರ್ವತಮ್ಮನವರು ಕನ್ನಡ ಚಿತ್ರರಂಗದ ಶಕ್ತಿದೇವತೆಯಾಗಿದ್ದರು.

ಡಾ.ರಾಜ್​ಕುಮಾರ್ ಮತ್ತು ಪಾರ್ವತಮ್ಮಾ ರಾಜ್​ಕುಮಾರ್​ ಕಣ್ಮರೆಯಾಗಿ ವರ್ಷಗಳೇ ಗತಿಸಿಹೋಗಿವೆ. ಈಗ ಈ ಜೋಡಿ ಏನಿದ್ದರೂ ನೆನಪು ಮಾತ್ರ. ಆದರೆ ಡಾ.ರಾಜ್​ಕುಮಾರ್​ ಅವರ ಬಗ್ಗೆ ಇಂದಿಗೂ ಹಿರಿ-ಕಿರಿಯ ನಟರು ನೆನಪಿಸಿಕೊಳ್ಳುತ್ತಲೇ ಇರುತ್ತಾರೆ. ಸಿನಿಮಾ, ನಟನೆ ಎಂದು ಯಾರ ಬಾಯಲ್ಲಿ ಬಂದರೂ ಅಲ್ಲಿ ಮೊದಲ ಹೆಸರು ಡಾ.ರಾಜ್​ ಅವರದ್ದೇ ಆಗಿರುತ್ತದೆ. ಕನ್ನಡ ಸಿನಿಮಾ ಲೋಕಕ್ಕೆ ಹೊಸ ದಿಕ್ಕನ್ನು ತೋರಿಸಿದವರಲ್ಲಿ ಇವರು ಪ್ರಮುಖರು. ಇಂದಿನ ಬಹುತೇಕ ಚಿತ್ರಗಳು ಜನರ ಮನಸ್ಸಿನಲ್ಲಿ ನಾಲ್ಕೈದು ವರ್ಷ ನೆಲೆಯೂರಿದ್ದರೆ ಅದುವೇ ದೊಡ್ಡದು ಎನ್ನಿಸುವಂತೆ ಆಗಿದೆ. ಆದರೆ ಡಾ.ರಾಜ್​ಕುಮಾರ್​ ಅವರ ಅಭಿನಯದ ಬ್ಲ್ಯಾಕ್​ ಆ್ಯಂಡ್ ವೈಟ್​ ಯುಗದಿಂದ ಹಿಡಿದು ಅವರ ಕೊನೆಯ ಚಿತ್ರಗಳು ಇಂದಿಗೂ ಜನಮಾನಸದಲ್ಲಿ ಅಚ್ಚಳಿಯದೇ ಉಳಿದಿವೆ. ಅವರ ಡೈಲಾಗ್​, ಹಾಡುಗಳು ಅಬ್ಬಾ ಒಂದೇ... ಎರಡೇ... ಅಂಥ ಅಪರೂಪದ ಕಲಾವಿದ ಡಾ.ರಾಜ್​.

ಡಾ.ರಾಜ್​ಕುಮಾರ್​ ನಟನೆ ಮಾತ್ರವಲ್ಲದೇ ನೋಟದಲ್ಲಿಯೂ ಎಲ್ಲರನ್ನೂ ಮೋಡಿ ಮಾಡಿದಂಥವರು. ಅವರ ಸ್ಫುರದ್ರೂಪ ಎಂಥವರನ್ನೂ ಸೂಜಿಗಲ್ಲಿನಂತೆ ಸೆಳೆಯುತ್ತಿತ್ತು. ಕೇವಲ ನಾಲ್ಕನೆಯ ತರಗತಿ ಕಲಿತಿದ್ದರೂ, ಅವರ ಅಭಿನಯ, ನಿರರ್ಗಳ ಮಾತು, ಅವರ ಕಂಠ... ಇವೆಲ್ಲವುಗಳಿಂದ ಅವರು ಮನೆಮಾತಾದವರು. ತಮ್ಮೆಲ್ಲ ಪಾತ್ರಗಳಿಗೆ ಪರಕಾಯ ಪ್ರವೇಶ ಮಾಡಿದಂತೆ ನಟಿಸುತ್ತಲೇ ಚಿತ್ರಪ್ರಿಯರ ಕಣ್ಮಣಿಯಾಗಿದ್ದವರು. 2006ರ ಏಪ್ರಿಲ್​ 12 ರಂದು ಡಾ.ರಾಜ್​ ಎಲ್ಲರನ್ನೂ ಬಿಟ್ಟು ಹೋದರೆ, 2017ರ ಮೇ 31ರಂದು ಪಾರ್ವತಮ್ಮ ರಾಜ್​ಕುಮಾರ್​ ಅಗಲಿದರು. 1953ರ ಜೂನ್ 25ರಂದು ಪಾರ್ವತಮ್ಮ ಅವರೊಂದಿಗೆ ರಾಜ್‌ಕುಮಾರ್ ಅವರ ಮದುವೆ ನೆರವೇರಿತ್ತು. ಮದುವೆ ಹಾಗೂ ಪಾರ್ವತಮ್ಮ ರಾಜ್​ಕುಮಾರ್​ ಅವರಿಗೆ ಮೊದಲು ನೋಡಿದ ಸಂದರ್ಭದಲ್ಲಿ ಅನ್ನಿಸಿದ್ದನ್ನು ಡಾ.ರಾಜ್​ ಅವರು ತಮಾಷೆಯ ರೂಪದಲ್ಲಿ ಹೇಳಿದ್ದ ವಿಡಿಯೋ ಒಂದು ಸೋಷಿಯಲ್​ ಮೀಡಿಯಾದಕ್ಕೆ ಮತ್ತೆ ಸದ್ದು ಮಾಡುತ್ತಿದೆ. 

ಯುಕೆಜಿಯಲ್ಲೇ ಪ್ರಪೋಸ್​ ಮಾಡಿದ್ದ... ಏಣಿ ಹತ್ತಿ ತಾಳಿ ಕಟ್ಟೋ ಹಾಗಿದ್ದ... ನಟಿ ನೇಹಾ ಗೌಡ ಲವ್​ ಸ್ಟೋರಿ ಕೇಳಿ..

ಡಾ.ರಾಜ್​ ಅವರ ಮಾತಿನಲ್ಲಿಯೇ ಹೇಳುವುದಾದರೆ, ' ನನ್ನ ಅಪ್ಪಾಜಿ ವಂಶದವಳು ಈ ಪಾರ್ವತಿ. ಅವಳು ಹುಟ್ಟುವಾಗ್ಲೇ ನಮ್ಮ ಅಪ್ಪಾಜಿ ನಾಮಕರಣಕ್ಕೆ ಹೋಗಿ ಹೇಳಿಬಿಟ್ಟಿದ್ರು, ಇವಳು ನಮ್ಮ ಮುತ್ತುರಾಜು ಹೆಂಡ್ತಿ ಎಂದು. ಇವಳಿಗೆ ಏಳು ವರ್ಷ ಆಗಿತ್ತು. ಬೀದಿ ಬೀದಿಯಲ್ಲಿ ಧೂಳಿನ ಜೊತೆ ಹೊರಳಾಡ್ತಾ ಇದ್ಲು. ಆಗ ನನ್ನನ್ನು ನನ್ನ ಅಪ್ಪಾಜಿ, ಹೋಗಿ ಅವಳನ್ನು ಕರ್ಕೊಂಡು ಬಾ ಕಂದ ಎಂದರು. ಆಗ ನನಗೆ ಸೈಕಲ್​ ಸವಾರಿ ಎಂದರೆ ಬಹಳ ಶೋಕಿ, ಬಹಳ ಹುಚ್ಚು ನನಗೆ. ನಾನು ಸೈಕಲ್​ ತಗೊಂಡು ಯಡಿಯೂರಿಗೆ ಹೋದೆ. ಹೋದ ತಕ್ಷಣ ಇವಳೇ ಸಿಕ್ಕಳು, ಬೀದಿಯಲ್ಲಿ ಒದ್ದಾಡ್ತಾ ಇದ್ಲು. ಇವಳನ್ನು ನೋಡಿದ ತಕ್ಷಣ ನಾನು, ಅಯ್ಯೋ ನನ್ನ ಅಪ್ಪಾಜಿ ಇವಳ ಮೇಲೆ ನನಗೆ ದೃಷ್ಟಿ ಇಟ್ಕೊಂಡಿದ್ದಾನೆ, ಒಳ್ಳೆ ಹೆಗ್ಗಣ ಇದ್ದಂಗೆ ಇದ್ದಾಳೆ, ಅವಳು ಬಣ್ಣ ನೋಡಿದ್ರೆ ಅಯ್ಯೋ ಪಜೀತಿ ಆಗೋಯ್ತಲ್ಲಪ್ಪಾ ಎಂದುಕೊಂಡೆ' ಎಂದು ಜೋರಾಗಿ ನಕ್ಕಿದ್ದಾರೆ. 

ಹೀಗೆ ಹೇಳಿದರೂ ಪಕ್ಕದಲ್ಲಿಯೇ ಇದ್ದ ಪಾರ್ವತಮ್ಮನವರು ಸ್ವಲ್ಪವೂ ಕೋಪಮಾಡಿಕೊಳ್ಳದೇ ಅದನ್ನೂ ತಮಾಷೆಯಾಗಿಯೇ ತೆಗೆದುಕೊಂಡಿದ್ದರು. ಇನ್ನು ಪಾರ್ವತಮ್ಮನವರ ಕುರಿತು ಹೇಳುವುದಾದರೆ, ಕನ್ನಡ ಚಿತ್ರರಂಗದ ಶಕ್ತಿದೇವತೆಯೆಂದೇ ಪರಿಗಣಿಸಲ್ಪಡುತ್ತಿದ್ದರು ಇವರು. ಚಿತ್ರ ನಿರ್ಮಾಪಕಿ ಮತ್ತು ವಿತರಕಿಯೂ ಆಗಿದ್ದ ಪಾರ್ವತಮ್ಮ ಅವರು, ಡಾ.ರಾಜ್‌ಕುಮಾರ್ ಹಿಂದಿನ ಅಭೂತಪೂರ್ವ ಶಕ್ತಿಯಾಗಿ ನೆಲೆನಿಂತವರು. `ಪೂರ್ಣಿಮಾ ಎಂಟರ್ಪ್ರೈಸ್' ಸಂಸ್ಥೆಯನ್ನು ಹುಟ್ಟು ಹಾಕಿ, ಹಲವಾರು ಕನ್ನಡ ಚಿತ್ರಗಳನ್ನು ನಿರ್ಮಿಸಿ ಕನ್ನಡಕ್ಕೆ ಅನೇಕ ನಟಿಯರನ್ನು ಪರಿಚಯ ಮಾಡಿರುವ ಕೀರ್ತಿ ಇವರಿಗೆ ಸಲ್ಲುತ್ತದೆ. 

ಮಧ್ಯರಾತ್ರಿ 2 ಗಂಟೆಗೆ ರಶ್ಮಿಕಾ ಮಂದಣ್ಣ... ಶೂಟಿಂಗ್​ ಸೆಟ್​ನ ಬಹುದೊಡ್ಡ ರಹಸ್ಯ ಬಿಚ್ಚಿಟ್ಟ ನಟ ದೀಕ್ಷಿತ್​ ಶೆಟ್ಟಿ

old memories dr rajkumar #kannada #kannadiga #india #motivational