ಲಕ್ಷ್ಮೀ ಬಾರಮ್ಮ ಖ್ಯಾತಿಯ ನೇಹಾ ಗೌಡ ಮತ್ತು ಚಂದನ್ ಗೌಡರದ್ದು ಬಾಲ್ಯದ ಪ್ರೇಮಕಥೆ. ಶಾಲೆಯಲ್ಲಿ ಎಲ್.ಕೆ.ಜಿಯಿಂದಲೇ ಚಂದನ್ ಪ್ರೇಮ ನಿವೇದನೆ ಮಾಡುತ್ತಿದ್ದರು. ನಂತರ ನೇಹಾ ಪ್ರಪೋಸ್ ಮಾಡಿದರೂ ಚಂದನ್ ಪ್ರತಿಕ್ರಿಯಿಸಲಿಲ್ಲ. ವರ್ಷಗಳ ನಂತರ, ಚಂದನ್ ತಂದೆಯೇ ಮದುವೆ ಪ್ರಸ್ತಾಪ ತಂದರು. ನೇಹಾ ತಂದೆಯ ಒಪ್ಪಿಗೆ ಪಡೆದು ಇಬ್ಬರೂ ವಿವಾಹವಾದರು. ಪ್ರಸ್ತುತ ದಂಪತಿಗಳಿಗೆ ಹೆಣ್ಣು ಮಗುವಿದೆ.

ಲಕ್ಷ್ಮೀ ಬಾರಮ್ಮ ಖ್ಯಾತಿಯ ನೇಹಾ ಗೌಡ ಮತ್ತು ಉದ್ಯಮಿ, ನಟ ಚಂದನ್​ ಗೌಡ ಮದುವೆಯಾಗಿ ಏಳು ವರ್ಷಗಳು ಕಳೆದಿದ್ದು, ಈಗ ಮುದ್ದಾದ ಹೆಣ್ಣುಮಗುವಿನ ಪಾಲಕರಾಗಿದ್ದಾರೆ. ಇದೀಗ ಯುಕೆಜಿಯಲ್ಲಿಯೇ ಆರಂಭವಾದ ತಮ್ಮ ಇಂಟರೆಸ್ಟಿಂಗ್​ ಲವ್​ಸ್ಟೋರಿ ಬಗ್ಗೆ ನಟಿ ಮಾತನಾಡಿದ್ದಾರೆ. ಸಿನಿಮಾದಲ್ಲಿಯೂ ನಡೆಯದ ಕುತೂಹಲದ ಲವ್​ಸ್ಟೋರಿ ಇವರದ್ದು. ನಾವಿಬ್ರೂ ಒಂದೇ ಶಾಲೆಯಲ್ಲಿ ಇದ್ವಿ. ಅವನು ನನಗೆ ಎಲ್​ಕೆಜಿಯಲ್ಲಿ ಇರುವಾಗಲೇ ಐ ಲವ್​ ಯೂ ಅಂತ ಚೀಟಿ ಬರೆದು ಕೊಡ್ತಿದ್ದ. ನನಗೆ ಲವ್​-ಗಿವ್​ ಏನೂ ಗೊತ್ತಾಗ್ತಾ ಇರಲಿಲ್ಲ. ನಾನು ಸುಮ್ಮನೇ ಇದ್ದೆ. ಅವನಿಗೆ ರಿಪ್ಲೈನೂ ಮಾಡಿರಲಿಲ್ಲ. ಕೊನೆಗೆ ನಾನು 6ನೇ ಕ್ಲಾಸ್​​ಗೆ ಬಂದಾಗ, ಅವನಿಗೆ ಪ್ರಪೋಸ್​ ಮಾಡಿ ಚೀಟಿ ಬರೆದೆ. ಆದರೆ ಸೇಡು ತೀರಿಸಿಕೊಳ್ಳಲು ಅವನು ನನಗೆ ರಿಪ್ಲೈ ಮಾಡಲಿಲ್ಲ ಎಂದು ತಮ್ಮ ಮತ್ತು ಚಂದನ್​ ನಡುವಿನ ಕುತೂಹಲದ ಪ್ರೇಮ ಕಥೆಯನ್ನು ವಿವರಿಸಿದ್ದಾರೆ ನಟಿ.

ರಾಜೇಶ್​ ಗೌಡ ಯೂಟ್ಯೂಬ್ ಚಾನೆಲ್​ನಲ್ಲಿ ಅವರು ಈ ವಿಷಯದ ಬಗ್ಗೆ ಮಾತನಾಡಿದ್ದಾರೆ. ಅವನು ಸಿಕ್ಕಾಪಟ್ಟೆ ಕುಳ್ಳ ಇದ್ದ. ನಮ್ಮ ಲವ್​ ವಿಷ್ಯ ಇಡೀ ಶಾಲೆಗೆ ತಿಳಿದಿತ್ತು. ಎಲ್ಲರೂ ತಮಾಷೆಯಾಗಿ ನೀನು ಏಣಿ ಹತ್ತಿ ತಾಳಿ ಕಟ್ಟಬೇಕು ಎನ್ನುತ್ತಿದ್ದರು. ಅವನು ಆಗಿನಿಂದಲೇ ವಾಲಿಬಾಲ್​ ಪ್ಲೇಯರ್​ ಆಗಿದ್ದ. ಅದರಿಂದಲೋ ಏನೋ ಸಿಕ್ಕಾಪಟ್ಟೆ ಉದ್ದ ಆದ. ಈಗ ನನಗಿಂತಲೂ ಉದ್ದ ಇದ್ದಾನೆ. ಆದರೆ ನನ್ನ ಲವ್​ ಪ್ರಪೋಸ್​ಗೆ ಅವನು ಏನೂ ಹೇಳದೇ ಆಮೇಲೆ ಹಾಸ್ಟೆಲ್​ಗೆ ಓದಲು ಹೋದ ಎಂದು ನಟಿ ಹೇಳಿದ್ದಾರೆ. 

ನಾಲ್ವರು ಗಂಡ ಬಂದ್ರೂ ನಾನು ಬಿಡಲಿಲ್ಲ... ಪಾರ್ವತಮ್ಮ ಮನೆಗೆ ಕರೆದ್ರು- ಲಕ್ಷ್ಮೀ ಬಾರಮ್ಮಾ ನೇಹಾ ಮಾತು ಕೇಳಿ

 ಲವ್​ ಆಸೆ ಬಿಟ್ಟುಬಿಟ್ಟೆ. ಯಾಕೋ ವರ್ಕ್​ಔಟ್​ ಆಗ್ತಿಲ್ಲ ಅಂದುಕೊಂಡೆ. ಆದರೂ ಅವನ ಮೇಲೆ ಕ್ರೇಜ್​ ಇತ್ತು. ಕೊನೆಗೆ 10ನೇ ಕ್ಲಾಸ್​​ನಲ್ಲಿ ಓಕೆ ಅಂದುಬಿಟ್ಟ. ಅಂದಮಾತ್ರಕ್ಕೆ ಲವರ್ಸ್​ ಥರ ನಾವು ಇರಲಿಲ್ಲ, ಡೇಟಿಂಗ್​ ಗೀಟಿಂಗ್​ ಏನೂ ಇರಲಿಲ್ಲ. ಅವನಿಗೆ ಉದ್ಯಮಿ ಹಾಗೂ ನಟನೆಯಲ್ಲಿ ಸಿಕ್ಕಾಪಟ್ಟೆ ಆಸಕ್ತಿ ಇತ್ತು. ಅದನ್ನೇ ಗುರಿಯಾಗಿಸಿಕೊಂಡಿದ್ದ. ಕೊನೆಗೆ ಇವೆರಡನ್ನೂ ಈಡೇರಿಸಿಕೊಂಡ. ನಾನು ಆಗಲೇ ನಟಿಯಾಗಿ ಗುರುತಿಸಿಕೊಂಡೆ. ಆದ್ರೆ ಬಾಲ್ಯದಲ್ಲಿಯೇ ಸೀದಾ ಅವನ ಅಪ್ಪನ ಬಳಿ ಹೋಗಿ ದೊಡ್ಡವಳಾದ ಮೇಲೆ ನಿಮ್ಮ ಮಗನನ್ನೇ ಮದ್ವೆಯಾಗೋದು ಅಂದಿದ್ದೆ. ಅವರು ಆಶ್ಚರ್ಯದಿಂದ ಆಯ್ತಮ್ಮಾ ಆಮೇಲೆ ನೋಡೋಣ ಎಂದಿದ್ದರು ಎಂದಿದ್ದಾರೆ ನೇಹಾ ಗೌಡ. 

25 ವರ್ಷ ಆದ್ಮೇಲೆ ಅವರ ಅಪ್ಪನೇ ನನಗೆ ಫೋನ್​ ಮಾಡಿ 25 ವರ್ಷ ಆಯ್ತಲ್ಲಮ್ಮಾ, ಚಂದನ್​ನ ಮದ್ವೆ ಆಗ್ತಿಯಾ ಕೇಳಿಬಿಟ್ಟರು. ನಾನು ಒಂದು ಕ್ಷಣ ಹೌಹಾರಿ ಹೋದೆ. ಹೀಗೆ ಅಚಾನಕ್​ ಆಗಿ ಕೇಳಿಬಿಟ್ರಲ್ಲಾ ಎಂದು. ಆದರೆ ಮದುವೆಯ ಬಗ್ಗೆ ನನ್ನ ಅಪ್ಪನ ಡಿಸೀಷನ್ನೇ ಕೊನೆಯದ್ದಾಗಿತ್ತು. ಆಗ ಅವರಿಗೆ ನನ್ನ ಬಾಲ್ಯದ ಲವ್​ಸ್ಟೋರಿ ಹೇಳಿದೆ.ನೀವು ಒಪ್ಪಿದರೆ ಮಾತ್ರ ಮದ್ವೆಯಾಗ್ತೇನೆ ಅಂದೆ. ನನಗೆ ಗೊತ್ತಿತ್ತು, ಅವರು ಒಪ್ಪಿಯೇ ಒಪ್ತಾರೆ ಎಂದು. ಕೊನೆಗೆ ಹಾಗೆಯೇ ಆಯಿತು. ಇಬ್ಬರೂ ಮನೆಯವರು ಒಪ್ಪಿಗೆ ತಗೊಂಡು ಮದ್ವೆಯಾದ್ವಿ ಎಂದು ಹೇಳಿದ್ದಾರೆ. 

ವಾಚ್​ ಕೊಡುವುದಾಗಿ ಕರೆದು ಬಾಗಿಲು ಹಾಕಿದ... ಬಾಲ್ಯದ ಮೈನಡುಗುವ ಕರಾಳ ಘಟನೆ ನೆನೆದ ನೇಹಾ ಗೌಡ

YouTube video player