ನಟಿ ರಶ್ಮಿಕಾ ಮಂದಣ್ಣ 'ಛಾವಾ' ಯಶಸ್ಸಿನಲ್ಲಿದ್ದಾರೆ. ಅವರೊಂದಿಗೆ ದೀಕ್ಷಿತ್ ಶೆಟ್ಟಿ ನಟಿಸಿರುವ 'ದಿ ಗರ್ಲ್ ಫ್ರೆಂಡ್' ತೆಲುಗು ಚಿತ್ರ ಬಿಡುಗಡೆಯಾಗಲಿದೆ. ಸಂದರ್ಶನದಲ್ಲಿ ದೀಕ್ಷಿತ್, ರಶ್ಮಿಕಾ ಅವರ ಸರಳತೆ, ಕಠಿಣ ಪರಿಶ್ರಮವನ್ನು ಹೊಗಳಿದ್ದಾರೆ. ಚಿತ್ರೀಕರಣದ ಸಮಯದಲ್ಲಿ ರಶ್ಮಿಕಾ ಹಲವು ಚಿತ್ರಗಳಲ್ಲಿ ಬ್ಯುಸಿಯಾಗಿದ್ದರೂ, ಸೆಟ್‌ನಲ್ಲಿ ಲವಲವಿಕೆಯಿಂದ ಕನ್ನಡದಲ್ಲಿ ಮಾತನಾಡುತ್ತಿದ್ದರು. ರಾತ್ರಿ 2 ಗಂಟೆಯವರೆಗೂ ಶೂಟಿಂಗ್ ಮುಗಿಸಿ ವರ್ಕೌಟ್ ಮಾಡುತ್ತಿದ್ದರು ಎಂದು ದೀಕ್ಷಿತ್ ಹೇಳಿದ್ದಾರೆ.
ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣ ಈಗ ಛಾವಾ ಚಿತ್ರದ ಭರ್ಜರಿ ಯಶಸ್ಸಿನ ಖುಷಿಯಲ್ಲಿದ್ದಾರೆ. ಅದೇ ಇನ್ನೊಂದೆಡೆ ಅವರು ನಟ ದೀಕ್ಷಿತ್ ಶೆಟ್ಟಿ ಜೊತೆ ನಟಿಸಿರುವ ದಿ ಗರ್ಲ್ ಫ್ರೆಂಡ್ ತೆಲಗು ಚಿತ್ರ ತೆರೆಯ ಮೇಲೆ ಬರುತ್ತಿದೆ. ಇಂಟರೆಸ್ಟಿಂಗ್ ವಿಷ್ಯ ಎಂದರೆ ಇದರಲ್ಲಿ ನಾಯಕಿ ರಶ್ಮಿಕಾ ಮತ್ತು ನಾಯಕ ದೀಕ್ಷಿತ್ ಇಬ್ಬರೂ ಕನ್ನಡಿಗರು. 'ನಾಗಿಣಿ' ಸೇರಿದಂತೆ ಅನೇಕ ಧಾರಾವಾಹಿಗಳಲ್ಲಿ ಗುರುತಿಸಿಕೊಂಡಿರುವ ಹಾಗೂ ದಿಯಾ ಸಿನಿಮಾದಿಂದ ಎಲ್ಲರ ಮನಗೆದ್ದಿರುವ ದೀಕ್ಷಿತ್ ಶೆಟ್ಟಿ ಇದರ ನಾಯಕರು. ಅದರಲ್ಲೂ 'ದಿಯಾ' ಅನ್ನೋ ಒಂದೇ ಒಂದು ಸಿನಿಮಾದಿಂದ ಹಲವು ಹುಡುಗಿಯರ ಫೇವರೇಟ್ ಎನಿಸಿಕೊಂಡಿದ್ರು ಈ ದೀಕ್ಷಿತ್ ಶೆಟ್ಟಿ. ಇದೀಗ ದೀಕ್ಷಿತ್ ಶೆಟ್ಟಿ ಹೀರೋ ಆಗಿರುವ 'ಕೆಟಿಎಂ' ಚಿತ್ರ ತೆರೆಗೆ ಸಿದ್ಧವಾಗಿದೆ.
ಇದರ ನಡುವೆಯೇ ರಶ್ಮಿಕಾ ಮಂದಣ್ಣ ಜೊತೆಗಿನ ತಮ್ಮ ಪಯಣದ ಬಗ್ಗೆ ದೀಕ್ಷಿತ್ ಅವರು ರಾಜೇಶ್ ಗೌಡ ಯೂಟ್ಯೂಬ್ ಚಾನೆಲ್ ಜೊತೆ ಮಾತನಾಡಿದ್ದಾರೆ. ರಶ್ಮಿಕಾ ಮಂದಣ್ಣ ಅವರನ್ನು ಹಾಡಿ ಹೊಗಳಿದ್ದಾರೆ ದೀಕ್ಷಿತ್. ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ತಾರೆಯೊಬ್ಬರು ಈ ಪರಿಯಲ್ಲಿ ಯಾವುದೇ ಹೆಡ್ವೇಟ್ ಇಲ್ಲದೇ, ಸಹನಟರ ಜೊತೆ ಇಷ್ಟೊಂದು ಖುಷಿಯಿಂದ ಮಾತನಾಡುವುದನ್ನು ಕಂಡು ಅಚ್ಚರಿಯಾಗುತ್ತದೆ ಎಂದಿದ್ದಾರೆ ದೀಕ್ಷಿತ್. ರಶ್ಮಿಕಾ ಮಂದಣ್ಣ ಸಿಕ್ಕಾಪಟ್ಟೆ ಹಾರ್ಡ್ವರ್ಕರ್. ಬಹುಶಃ ಅವರಂಥ ಹಾರ್ಡ್ವರ್ಕಿಂಗ್ ನಟಿಯನ್ನು ನಾನು ನೋಡಿಲ್ಲ. ದಿನದ 24 ಗಂಟೆಗಳೂ ಬಿಜಿಯಾಗಿರುತ್ತಾರೆ. ಇಷ್ಟಾದರೂ ಅವರ ಮುಖದಲ್ಲಿ ಯಾವುದೇ ಸುಸ್ತು ಕಾಣುವುದಿಲ್ಲ. ಖುಷಿಯಿಂದಲೇ ಎಲ್ಲರ ಜೊತೆ ಬೆರೆಯುತ್ತಾರೆ ಎನ್ನುತ್ತಲೇ ರಶ್ಮಿಕಾ ಅವರು ಶೂಟಿಂಗ್ ಸೆಟ್‌ನಲ್ಲಿ ನಡೆದುಕೊಳ್ಳುವ ಕೆಲವು ವಿಷಯಗಳ ಬಗ್ಗೆ ಮಾತನಾಡಿದ್ದಾರೆ ದೀಕ್ಷಿತ್.
ಸತ್ಯದ ದರ್ಶನ ಮಾಡಿಸಿದ್ರಾ ರಶ್ಮಿಕಾ ಮಂದಣ್ಣ? ಅಭಿಮಾನಿಗಳಿಂದ ಹರಿದುಬಂತು ಶ್ಲಾಘನೆಗಳ ಮಹಾಪೂರ
'ಗರ್ಲ್ಫ್ರೆಂಡ್ ಶೂಟಿಂಗ್ ಸಮಯದಲ್ಲಿ ಆಕೆ ಪುಷ್ಪಾ-2 ಮಾಡುತ್ತಿದ್ದರು. ಮಾತ್ರವಲ್ಲದೇ 3-4 ಬಾಲಿವುಡ್ ಸಿನಿಮಾ ಶೂಟಿಂಗ್ಗಳಲ್ಲಿಯೂ ಬಿಜಿಯಾಗಿದ್ದರು. ಅಷ್ಟೊಂದು ಶೂಟಿಂಗ್ ಮುಗಿಸಿ ನಮ್ಮ ಚಿತ್ರದ ಶೂಟಿಂಗ್ಗೆ ಬರುವಾಗ ಎಷ್ಟು ಸುಸ್ತಾಗಿರಬಹುದು ಅವರು, ಆ್ಯಕ್ಷನ್ ಎಲ್ಲಾ ಮಾಡ್ತಾರಾ ಎಂದು ನಾನು ಮನಸ್ಸಿನಲ್ಲಿಯೇ ಅಂದುಕೊಂಡಿದ್ದೆ. ಆದರೆ ಆಕೆಯ ಮುಖದಲ್ಲಿ ಸ್ವಲ್ಪವೂ ಸುಸ್ತು ಕಾಣಿಸಲಿಲ್ಲ. ಈಗತಾನೇ ಬಂದವರ ರೀತಿ ಲವಲವಿಕೆ ಇತ್ತು. ನಿಜಕ್ಕೂ ಆಕೆ ಗ್ರೇಟ್' ಎಂದಿದ್ದಾರೆ ದೀಕ್ಷಿತ್. ನನ್ನ ಜೊತೆ ಅವರು ಕನ್ನಡದಲ್ಲಿಯೇ ಮಾತಾಡುತ್ತಿದ್ದರು. ಪ್ರತಿಸಲ ಶೂಟಿಂಗ್ ಮಾಡುವಾಗಲೂ ಈ ಸೀನ್ ಓಕೆನಾ ಕೇಳುತ್ತಿದ್ದರು. ಕೆಲವು ದೃಶ್ಯಗಳಲ್ಲಿಯೂ ಹೆಚ್ಚಾಗಿ ನಾಯಕರು ನಾಯಕಿಗೆ ನೀವು ಕಮ್ಫರ್ಟಾ ಕೇಳುತ್ತಾರೆ, ಆದರೆ ಇಲ್ಲಿ ರಶ್ಮಿಕಾನೇ ನನಗೆ ಕೇಳುತ್ತಿದ್ದರು ಎಂದು ದೀಕ್ಷಿತ್ ಶೆಟ್ಟಿ ನೆನಪಿಸಿಕೊಂಡಿದ್ದಾರೆ. ಒಮ್ಮೆ ಲಿಫ್ಟ್ನಲ್ಲಿ ಮಾಸ್ಕ್ ಹಾಕಿಕೊಂಡು ಬಂದಿದ್ದರು. ನನಗೆ ಅವರ ಗುರುತು ಸಿಗಲಿಲ್ಲ. ಆಕೆಯೇ ನನ್ನ ತಲೆಯ ಮೇಲೆ ಹೊಡೆದು ಮಾತನಾಡಿಸಿದರು. ಅಷ್ಟು ಸಿಂಪಲ್ ಅವರು ಎಂದಿದ್ದಾರೆ.
ಅದೂ ಅಲ್ಲದೇ ಒಂದು ಅಚ್ಚರಿಯ ಸಂಗತಿಯನ್ನೂ ಅವರು ಹೇಳಿದ್ದಾರೆ. ಅದೇನೆಂದರೆ, ನಮ್ಮ ಶೂಟಿಂಗ್ ಬೆಳಿಗ್ಗೆ 6 ಗಂಟೆಯಿಂದ ಮಧ್ಯರಾತ್ರಿ 2 ಗಂಟೆವರೆಗೆ ಇರುತ್ತಿತ್ತು. ಮಧ್ಯರಾತ್ರಿ ಎರಡು ಗಂಟೆಗೆ ಆಕೆ ವರ್ಕ್ಔಟ್ಗೆ ಅಂತ ಹೋಗುತ್ತಿದ್ದರು. ನನಗೆ ಇದನ್ನು ಕೇಳಿ ಅಬ್ಬಾ ಎನ್ನಿಸಿತು. ಆಕೆ ತಮ್ಮ ಕ್ಯಾರವಾನ್ನಲ್ಲಿ (ಶೂಟಿಂಗ್ ಸಮಯದಲ್ಲಿ ನಟರಿಗಾಗಿ ಇರುವ ಬಸ್) ಥ್ರೆಡ್ ಮಿಲ್ ಇಟ್ಟುಕೊಂಡಿದ್ದಾರೆ. ಮಧ್ಯರಾತ್ರಿ ಶೂಟಿಂಗ್ ಮುಗಿದರೂ ಅವರು ಅಲ್ಲಿಗೆ ಹೋಗಿ ವರ್ಕ್ಔಟ್ ಮಾಡುವುದನ್ನು ನೋಡಿದೆ ಎಂದು ನಟಿಯ ಕಮಿಟ್ಮೆಂಟ್ ಬಗ್ಗೆ ಮಾತನಾಡಿದ್ದಾರೆ ದೀಕ್ಷಿತ್ ಶೆಟ್ಟಿ.
ಪುಷ್ಪ-3 ಹಿಂಟ್ ಕೊಡುತ್ತಲೇ ಭಾವುಕರಾಗಿ ಪತ್ರ ಬರೆದ ನಟಿ ರಶ್ಮಿಕಾ ಮಂದಣ್ಣ: ಏನಿದೆ ಇದರಲ್ಲಿ?

