ಕಾರಲ್ಲಿ ಸದಾ ಜೊತೆಯಾಗಿ ಯಾರಿರ್ಬೇಕು ಕೇಳಿದ್ರೆ ಅಂಬರೀಷ್‌ ಹೀಗೆ ಹೇಳೋದಾ? ಹಳೆ ವಿಡಿಯೋ ವೈರಲ್‌

ಅಂಬರೀಷ್‌ ಅವರ ಹಳೆಯ ವಿಡಿಯೋ ವೈರಲ್‌ ಆಗಿದ್ದು, ಅದರಲ್ಲಿ ಅವರು, ತಮ್ಮ ಇಷ್ಟದ ನಟಿ, ಕಾರಲ್ಲಿ ಸಂಗಾತಿ ಇತ್ಯಾದಿ ಕುರಿತು ತಿಳಿಸಿದ್ದಾರೆ.
 

An old video of Ambareesh has gone viral in which he talks about his favorite actress car partner suc

ರೆಬೆಲ್ ಸ್ಟಾರ್ ಎಂದೇ ಫೇಮಸ್‌ ಆಗಿದ್ದ ಮಳವಳ್ಳಿ ಹುಚ್ಚೇಗೌಡ ಅಮರನಾಥ್ ಅರ್ಥಾತ್‌ ಅಂಬರೀಶ್‌ ಅವರು ಎಲ್ಲರನ್ನೂ ಅಗಲಿ ಆರು ವರ್ಷಗಳೇ ಕಳೆದು ಹೋಗಿವೆ. ಆದರೆ ಅವರ ಅಭಿಮಾನಿಗಳಿಗೆ ಮಾತ್ರ ಮಂಡ್ಯದ ಗಂಡು ನೆನಪು ಹಚ್ಚ ಹಸಿರು.  ನಟ ಹಾಗೂ ರಾಜಕಾರಣಿ ಆಗಿದ್ದ ಅಂಬರೀಷ್‌ ಸುಮಾರು 220ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದವರು. ನಾಗರಹಾವು ಚಿತ್ರದಿಂದ ಹಿಡಿದು ರಂಗನಾಯಕಿ ಸಿನಿಮಾದವರೆಗೂ ಪೋಷಕ, ವಿಲನ್‌, ಸಹ ನಟ, ಸಹೋದರ, ನಾಯಕ ಹೀಗೆ  ಎಲ್ಲ ರೀತಿಯ ಪಾತ್ರಗಳಲ್ಲಿ ಸೈ ಎನ್ನಿಸಿಕೊಂಡವರು.   ಎಸ್.ವಿ.ರಾಜೇಂದ್ರ ಸಿಂಗ್ ಬಾಬು ಅವರ ‘ಅಂತ‘ ಸಿನಿಮಾದಲ್ಲಿ ಅಂಬರೀಶ್  ಪೂರ್ಣ ಪ್ರಮಾಣದ ನಾಯಕರಾದರು. ಅಲ್ಲಿಂದ ನೂರಾರು ಚಿತ್ರಗಳಲ್ಲಿ ನಾಯಕನಾಗಿ ಮಿಂಚಿದರು.

ಇದೀಗ ಅವರ ಹಳೆಯ ವಿಡಿಯೋ ಒಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗ್ತಿದೆ. ಇದರಲ್ಲಿ ಕೆಲವು ವಾಹಿನಿಗಳ ಆಂಕರ್ಸ್ ನಟನಿಗೆ ಕೆಲವೊಂದು ಪ್ರಶ್ನೆಗಳನ್ನು ಕೇಳಿದ್ದಾರೆ. ಒಂದೇ ಒಂದು ಶಬ್ದದಲ್ಲಿ ಉತ್ತರಿಸಬೇಕು ಎಂದು ಕೇಳಿದ್ದಾರೆ. ಅದರಲ್ಲಿ ಕೆಲವು ತಮಾಷೆಯ ವಿಷಯಗಳನ್ನು ಅಂಬರೀಷ್‌ ಹಂಚಿಕೊಂಡಿದ್ದಾರೆ. ಅಂಬರೀಷ್‌ ಅವರು ಸಿನಿಮಾದಿಂದ ಗಳಿಸಿದ್ದು ಹೆಚ್ಚೋ, ಕಳೆದುಕೊಂಡದ್ದು ಹೆಚ್ಚೋ ಎನ್ನುವ ಪ್ರಶ್ನೆಗೆ ಗಳಿಸಿದ್ದೇ ಹೆಚ್ಚು ಎಂದಿದ್ದಾರೆ. ತುಂಬಾ ಇಷ್ಟದ ಹೀರೋಯಿನ್‌ ಯಾರು ಎಂದು ಪ್ರಶ್ನಿಸಿದಾಗ, ಸಹಜವಾಗಿ ಎಲ್ಲರೂ ಸುಮಲತಾ ಎನ್ನುತ್ತಾರೆ ಎಂದಕೊಂಡಿದ್ದರು. ಆದರೆ ಅಂಬರೀಷ್‌ ಅವರು ಲಕ್ಷ್ಮಿ ಹೆಸರು ತೆಗೆದುಕೊಂಡಿದ್ದಾರೆ. ನೆಚ್ಚಿನ ನಿರ್ದೇಶಕ ಯಾರು ಎಂದು ಪ್ರಶ್ನಿಸಿದಾಗ,  ಪುಟ್ಟಣ್ಣ ಕಣಗಾಲ ಎಂದಿದ್ದಾರೆ. ಅಷ್ಟಕ್ಕೂ ಅವರ ನಿರ್ದೇಶನದ ನಾಗರಹಾವು ಅಂಬರೀಷ್‌ ಅವರಿಗೆ ಬ್ರೇಕ್‌ ತಂದುಕೊಟ್ಟಿತು. ಈ ಚಿತ್ರದ ಜಲೀಲನ ಪಾತ್ರಕ್ಕಾಗಿ ಒಳ್ಳೆಯ ಮುಖದ ಹುಡುಕಾಟದಲ್ಲಿದ್ದರು ಪುಟ್ಟಣ್ಣ. ಸ್ನೇಹಿತರೊಬ್ಬರು ಬಲವಂತ ಮಾಡಿದ್ದರಿಂದ ಅಂಬರೀಶ್ ಪುಟ್ಟಣ್ಣ ಕಣಗಾಲ್‌ ಕಣ್ಣೆದುರು ಕಾಣಿಸಿಕೊಂಡರು. ಒಂದೇ ಸಲಕ್ಕೆ ಪುಟ್ಟಣ್ಣ ಓಕೆ ಎಂದುಬಿಟ್ಟರು. ಸೆಲೆಕ್ಟ್‌ ಕೂಡ ಆದರು. ಇದೇ ಚಿತ್ರ ಅವರ ಕುಚುಕು ಗೆಳೆಯ ವಿಷ್ಣುವರ್ಧನ್‌ ಅವರನ್ನು ಜೊತೆಯಾಗಿ ಮಾಡಿತ್ತು.  ಇವರಿಬ್ಬರ ಸ್ನೇಹ ಯಾವ ಪರಿ ಇತ್ತು ಎನ್ನುವುದು ಎಲ್ಲರಿಗೂ ತಿಳಿದಿರುವ ವಿಷಯವೇ.

ಐದು ವರ್ಷಕ್ಕೇ ಇವ್ಳ ಮೇಲೆ ಕಣ್ಣು ಹಾಕಿದೀಯಲ್ಲ ನೀನು; ಅಂಬಿ ಡೈಲಾಗ್‌ಗೆ ಅಪ್ಪು ಬೆಪ್ಪು!
 
ಇನ್ನು, ಡ್ರೈವಿಂಗ್‌ ಸೀಟಿನಲ್ಲಿ ಬೇರೆ ಯಾರು ಕೂತರೂ ನನಗೆ ಆಗಲ್ಲ. ನಾನೇ ಡ್ರೈವ್‌ ಮಾಡಬೇಕು. ಸ್ಲೋ ಹೋಗು, ಫಾಸ್ಟ್‌ ಹೋಗು ಅಂತೆಲ್ಲಾ ಹೇಳುತ್ತಾ ಹೋಗುವುದು ನನಗೆ ಇಷ್ಟವಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅಂಬರೀಷ್‌ ಅವರು, ಡ್ರೈವಿಂಗ್‌ ಸಮಯದಲ್ಲಿ ಬೆಸ್ಟ್‌ ಸಂಗಾತಿ ಯಾರು, ನಿಮ್ಮ ಜೊತೆ ಯಾರಿರಬೇಕು ಎಂದು ಬಯಸುವಿರಿ ಎಂದಾಗ ಅಂಬರೀಷ್‌ ಹೇಳಿದ್ದು ಏನು ಗೊತ್ತಾ? ಸಿಗರೆಟ್‌! ಸಿಗರೆಟ್‌ ಅನ್ನು ಅಂಬರೀಷ್‌ ಎಷ್ಟು ಪ್ರೀತಿಸುತ್ತಿದ್ದರು ಎನ್ನುವುದು ಅವರ ಅಭಿಮಾನಿಗಳಿಗೆ ಗೊತ್ತು. ಅದನ್ನು ಬಿಟ್ಟು ಇರುತ್ತಿರಲಿಲ್ಲ ಅವರು. 

ಪತ್ನಿ ಸುಮಲತಾಗೆ ನೀವು ಕೊಟ್ಟ ಅಮೂಲ್ಯ ಗಿಫ್ಟ್‌ ಏನು ಎಂದು ಪ್ರಶ್ನಿಸಿದಾಗ, ನನಗಿಂತ ಬೇರೆ ಗಿಫ್ಟ್‌ ಬೇಕಾ? ನಾನು ಕೊಯಿನೂರು ವಜ್ರ ಎಂದಿದ್ದಾರೆ. ಅವರು ನಿಮಗೆ ಕೊಟ್ಟ ಗಿಫ್ಟ್‌ ಕೇಳಿದಾಗ ಮಗು ಎಂದಿದ್ದಾರೆ. ಬೇರೆ ಭಾಷೆಯ ಚಿತ್ರಗಳಿಗೆ ಹೋಗಲು ನನ್ನ ಬಳಿ ಟೈಮೇ ಇರಲಿಲ್ಲ. ದಿನಪೂರ್ತಿ ದುಡಿಯುತ್ತಿದ್ದೆ ಐದಾರು ಶಿಫ್ಟ್‌ ಕೆಲಸ ಮಾಡುತ್ತಿದ್ದೆ ಎಂದು ಇನ್ನೊಂದು ಪ್ರಶ್ನೆಗೆ ಉತ್ತರಿಸಿದ್ದಾರೆ. ಇದೇ ಸಂದರ್ಶನದಲ್ಲಿ ಡಾ.ರಾಜ್‌ಕುಮಾರ್‌ ಅವರು ಗುಣಗಳ ಬಗ್ಗೆ ತಿಳಿಸಿರುವ ಅಂಬರೀಷ್‌ ಅವರಂಥ ಸ್ವಭಾವ ಯಾರಿಗೂ ಬರಲು ಸಾಧ್ಯವಿಲ್ಲ ಎಂದಿದ್ದಾರೆ.
 

Latest Videos
Follow Us:
Download App:
  • android
  • ios